ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗವಾದ ಮಳಲವಾಡಿ-ಜಯನಗರದಲ್ಲಿರುವ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ವೃಕ್ಟೋದ್ಯಾನದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯತ್ನಿಸಿರುವ ಘಟನೆ ನಡೆದಿದೆ.
ಮಳಲವಾಡಿಯ ಸ.ನಂ.31ರ 33 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಸಾಲುಮರದತಿಮಕವೃಕ್ಟೋದ್ಯಾನವನ್ನು ನಿರ್ಮಿಸಿದ್ದು, ಇಲ್ಲಿ ಸುಮಾರು 1,800 ಸಾಲು ಮರಗಳನ್ನು ನೆಟ್ಟು ಪೋಷಿಸುವ ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವಾಕಿಂಗ್ ಪಾತ್, ಮಕ್ಕಳಿಗೆ ಆಟೋಟ ಪರಿಕರಗಳು ಹಾಗೂ ಜಿಮ್ ಪರಿಕರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ. ಈ ಉದ್ಯಾನದ ಮೇಲೆ ಇದೀಗ ಭೂಗಳ್ಳರ ದೃಷ್ಟಿ ಬಿದ್ದಿದ್ದು, ಆತಂಕ ಸೃಷ್ಟಿಯಾಗಿದೆ.
ಸರ್ಕಾರಿ ರಜಾ ದಿನವಾದ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ವೃದ್ಯಾನದ ಹಿಂಭಾಗದಿಂದ ಜೆಸಿಬಿ ನುಗ್ಗಿಸಿ ಕಾಂಪೌಂಡ್ ಒಡೆದುಹಾಕಿತಾತ್ಕಾಲಿಕವಾಗಿ ಬೇಲಿ ಹಾಕಲು ಮುಂದಾಗಿದ್ದಾರೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆಯನ್ನು ತಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ವದ್ಯಾನದ ಭೂಮಿ ಕಬಳಿಸಲು ಯತ್ನಿಸಿರುವ ವಿಷಯ ತಿಳಿದ ಸ್ಥಳೀಯರು ಭಾನುವಾರ ಸಾಲುಮರ ತಿಮ್ಮಕ್ಕ ವೃಕ್ಲೋದ್ಯಾನ ಅಭಿವೃದ್ಧಿ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, ಭೂ ಕಬಳಿಕೆ ತಡೆಯುವಂತೆ ಒತ್ತಾಯಿಸಿದ್ದಾರೆ. ಮೈಸೂರು ಮಹಾ ನಗರಪಾಲಿಕೆ ಮಾಜಿ ಉಪ ಮಹಾಪೌರ ವಿ.ಶೈಲೇಂದ್ರ, ಮಂಜೇಶ್, ಮಂಜು ನಾಥ್ ಸೇರಿದಂತೆ ಹತ್ತಾರು ಜನರು ಗಾಯಕ್ವಾಡ್, ರಮೇಶ್, ಲಲಿತಾಕ್ಷಿ, ತೇಜರಾಜ್, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಆಸ್ತಿಯನ್ನು ಉಳಿಸಲು ಒತ್ತಾಯ: ಸಾಲುಮರದ ತಿಮ್ಮಕ್ಕ ವೃಕ್ಟೋದ್ಯಾನ ಅಭಿವೃದ್ಧಿ ಹಾಗೂ ಹೋರಾಟ ಸಮಿತಿಯು ಇಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಸ್ವ ಇಚ್ಚೆಯಿಂದ ಈ ನೈಸರ್ಗಿಕ ಉದ್ಯಾನವನ್ನು ಕಾಪಾಡಿಕೊಂಡು ಬಂದಿದ್ದೇವೆ. ಇದೀಗ ಕೆಲವು ಭೂಮಾಫಿಯಾ ಕಳ್ಳರು ಉದ್ಯಾನದ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಸುಮಾರು 20 ಕೋಟಿ ರೂ. ಬೆಲೆಬಾಳುವ ಜಾಗವನ್ನು ಕಬಳಿಸಲು ಯತ್ನಿಸಿದ್ದಾರೆ. ಅರಣ್ಯ ಇಲಾಖೆ ಇದಕ್ಕೆ ಅವಕಾಶ ನೀಡದೆ ಸಾರ್ವಜನಿಕ ಆಸ್ತಿಯನ್ನು ಉಳಿಸಬೇಕು ಎಂದು ಮಾಜಿ ಉಪ ಮಹಾಪೌರ ವಿ.ಶೈಲೇಂದ್ರ ಆಗ್ರಹಿಸಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರು ಈ ಸರ್ವೇ ನಂಬರ್‌ನಲ್ಲಿ ನಮಗೆ 1963ರಲ್ಲಿ 2 ಎಕರೆ 1 ಗುಂಟೆ ಜಾಗ ಮಂಜೂರಾಗಿದೆ ಎಂದು ಹೈಕೋರ್ಟ್ ಆದೇಶ ತಮ್ಮ ಪರ ಇದೆ ಎಂದು ಏಕಾಏಕಿ ಜೆಸಿಬಿ ನುಗ್ಗಿಸಿ ಕಾಂಪೌಂಡ್ ಒಡೆದಿದ್ದಾರೆ. 1970ರಲ್ಲಿ ರಾಜ್ಯ ಸರ್ಕಾರ ಮಳಲವವಾಡಿ ಸ.ನಂ.31ರ ಜಾಗವನ್ನು ರಕ್ಷಿತಾರಣ್ಯ ಎಂದು ಅಧಿಸೂಚನೆ ಹೊರಡಿಸಿದೆ. ಅಂದಿನಿಂದ ಈ ಜಾಗ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ ಎಂದು ಹೇಳಿ ತಡೆದಿದ್ದೇವೆ. ಜೊತೆಗೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
-ಧನ್ಯಶ್ರೀ, ವಲಯ ಅರಣ್ಯಾಧಿಕಾರಿ
ಬೆಂಗಳೂರು: ಹಿರಿಯ ಪತ್ರಕರ್ತ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ…
ಮಡಿಕೇರಿ: ಮಾರ್ಚ್‌ನಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲಲಿ ನಡೆದಿದ್ದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ…
ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ…
ಕೊಚ್ಚಿ: ಖ್ಯಾತ ಮಲಯಾಳಂ ನಟ ಹಾಗೂ ನಿರ್ದೇಶಕ ಶ್ರೀನಿವಾಸ್ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಿವಿಧ…
ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…
ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…