ಮಹೇಂದ್ರ ಹಸಗೂಲಿ
ವಸತಿನಿಲಯ ಆವರಣದ ಮರಗಳನ್ನು ಕಡಿಯುವುದಕ್ಕೆ ಪರಿಸರ ಪ್ರೇಮಿಗಳ ವಿರೋಧ
ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ವೀರನಪುರ ಕ್ರಾಸ್ ಬಳಿ ಇರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ನಿಲಯ ಆವರಣದಲ್ಲಿರುವ ೯ ಆಲದ ಮರಗಳ ಕಟಾವಿಗೆ ಅರಣ್ಯ ಇಲಾಖೆ ಬಹಿರಂಗ ಹರಾಜು ಕರೆದಿದ್ದು, ಇದಕ್ಕೆ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ಶಾಲೆಯ ಮುಂದೆ ವಿಶಾಲವಾದ ಖಾಲಿ ಜಾಗವಿದ್ದು, ಅಲ್ಲಿ ಕಟ್ಟಡ ನಿರ್ಮಿಸದೆ ಮರಗಳನ್ನು ಕಟಾವು ಮಾಡಿ ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತ ಸವಾಗಿದೆ. ಅರಣ್ಯ ಇಲಾಖೆ ಒಂದುಕಡೆ ಮರಗಳನ್ನು ಬೆಳೆಸಿ, ಪರಿಸರ ಉಳಿಸಿ ಎಂದು ಸಂದೇಶ ಸಾರಿದರೆ, ಇನ್ನೊಂದು ಕಡೆ ತಾನೇ ಮರಗಳ ಕಟಾವಿಗೆ ಹರಾಜಿಗೆ ಮುಂದಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮರಗಳನ್ನು ಕಟಾವು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಮರಗಳ ಕಟಾವು ಮಾಡಬಾರದು ಎಂದು ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಅಬ್ದುಲ್ ಮಲಿಕ್, ಪದಾಧಿಕಾರಿಗಳಾದ ರಾಮೇಗೌಡ, ಸಾದಿಕ್ ಪಾಷ, ಅಬ್ದುಲ್ ಜಬ್ಬಾರ್, ಮಿಮಿಕ್ರಿ ರಾಜು, ಅಯೂಬ್ ಖಾನ್ ಮತ್ತಿತರರು ವಸತಿ ಶಾಲೆಯ ವಾರ್ಡನ್‌ರವರಿಗೆ ಮನವಿ ಸಲ್ಲಿಸಿದರು.
” ಕೋವಿಡ್ ಸಮಯದಲ್ಲಿ ಅನೇಕರು ಶುದ್ಧ ಗಾಳಿ ಸಿಗದೆ ಮೃತಪಟ್ಟರು. ಇದೇ ಅಬ್ದುಲ್ ಕಲಾಂ ವಸತಿ ನಿಲಯದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿತ್ತು. ಶಿಕ್ಷಣ ಸಂಸ್ಥೆಗಳು, ಅರಣ್ಯ ಇಲಾಖೆ ಮರ ಉಳಿಸುವ ಸಂದೇಶ ಸಾರಬೇಕೇ ಹೊರತು, ಮರಗಳ ನಾಶಕ್ಕೆ ಕೈ ಹಾಕಬಾರದು. ಮರ ಕಡಿದು ಕಟ್ಟಡ ನಿರ್ಮಿಸುವುದು ಸರಿಯಲ್ಲ.”
-ಮಣಿ ಮಡಹಳ್ಳಿ, ಪರಿಸರ ಪ್ರೇಮಿ.
” ಉತ್ತಮ ವಾತಾವರಣವಿರುವ ವಸತಿ ಶಾಲೆಯಲ್ಲಿ ಮರಗಳನ್ನು ಕಡಿದು ಕಾಂಕ್ರೀಟ್‌ಮಯ ಮಾಡಲು ಮುಂದಾಗಿರುವುದು ಸರಿಯಲ್ಲ. ಮರಗಳನ್ನು ಕಡಿದು ಕಟ್ಟಡ ನಿರ್ಮಿಸಬಾರದು. ಮರಗಳ ಕಟಾವಿಗೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.”
-ಅಬ್ದುಲ್ ಮಲಿಕ್, ಕರ್ನಾಟಕ ಕಾವಲುಪಡೆ ತಾಲ್ಲೂಕು ಅಧ್ಯಕ್ಷ
” ಡಾ.ಅಬ್ದುಲ್ ಕಲಾಂ ವಸತಿ ಶಾಲೆಯ ಆವರಣದಲ್ಲಿದ್ದ ೯ ಆಲದ ಮರಗಳ ಕಟಾವಿಗೆ ೫-೬ ತಿಂಗಳ ಹಿಂದೆಯೇ ನಮಗೆ ಪತ್ರ ಬರೆಯಲಾಗಿತ್ತು. ಮರಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಕಾಲಾವಕಾಶ ನೀಡಲಾಗಿತ್ತು. ಇಂಜಿನಿಯರ್ ಬೇರೆ ಜಾಗದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಇಲ್ಲಿಯೇ ಕಟ್ಟಡ ನಿರ್ಮಿಸಬೇಕು ಎಂಬ ಉತ್ತರ ನೀಡಿದ್ದರಿಂದ ಮರಗಳ ಕಟಾವಿಗೆ ಹರಾಜು ಕರೆಯಲಾಗಿದೆ.”
-ಶಿವಕುಮಾರ್, ವಲಯ ಸಂರಕ್ಷಣಾಧಿಕಾರಿ ಬಫರ್ ಜೋನ್, ಗುಂಡ್ಲುಪೇಟೆ
ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…
ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…
ಬೆಳಗಾವಿ : ಶೀಘ್ರದಲ್ಲೇ 3600 ಸಿಬ್ಬಂದಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್‌ಗೆ ತಿಳಿಸಿದ್ದಾರೆ. ಸದಸ್ಯ ಜಗದೇವ್…
ಶಿವಮೊಗ್ಗ : ಬಿಜೆಪಿ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಎಎಸ್‌ಐ ಕುತ್ತಿಗೆಯಲ್ಲಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು…
ಮಂಡ್ಯ : ಜಿಲ್ಲೆಯ ಸರ್ಕಾರಿ ನೌಕರರು ಜಿಲ್ಲೆಗೆ ಉತ್ತಮ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ…
ಮೈಸೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ಯಾವುದೇ ದೌರ್ಜನ್ಯ ಕಂಡುಬಂದರೆ ಕೂಡಲೇ ಎಫ್.ಐ.ಆರ್ ದಾಖಲಿಸಿ ಸೂಕ್ತ…