Andolana originals

ಕುಪ್ಪಣ್ಣ ಪಾರ್ಕ್‌ನಲ್ಲಿ ಕಣ್ಮನ ಸೆಳೆವ ಪುಷ್ಪಲೋಕ

ಗಾಜಿನ ಮನೆಯಲ್ಲಿ ಗುಲಾಬಿ ಹೂವುಗಳಿಂದ ಸಿದ್ಧವಾದ ಸಂಸತ್ ಭವನ, ಅಂಬೇಡ್ಕರ್ ಪುತ್ತಳಿ; ಮಕ್ಕಳನ್ನು ಆಕರ್ಷಿಸುವ ಕೆಂಪು ಪಾರಿವಾಳ, ಹೂವಿನಿಂದ ಅಲಂಕೃತಗೊಂಡ ನವದುರ್ಗೆಯರ ಪ್ರತಿಕೃತಿಗಳು; ಬಣ್ಣ ಬಣ್ಣದ ಗುಲಾಬಿ ಹೂಗಳಿಂದ ಜೀವತಳೆದ ಕಲಾಕೃತಿಗಳು

ಕೆ.ಬಿ.ರಮೇಶ ನಾಯಕ

ಮೈಸೂರು: ದಸರಾ ಎಂದರೆ ಒಂದು ವಿಶೇಷ ಹಬ್ಬ, ಈ ವಿಶೇಷ ಹಬ್ಬದಲ್ಲಿ ಫಲಪುಷ್ಪ ಪ್ರದರ್ಶನ ಮತ್ತೊಂದು ವಿಶೇಷವಾಗಿದೆ. ಪ್ರತಿವರ್ಷವೂ ವಿಭಿನ್ನ ಮಾದರಿಗಳು ಫಲ ಪುಷ್ಪಗಳಿಂದ ನಿರ್ಮಾಣವಾಗುತ್ತವೆ. ಅಂತೆಯೇ ಈ ಬಾರಿಯೂ ಪುಷ್ಪಗಳಿಂದ ನಿರ್ಮಾಣ ವಾಗಿರುವ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಅರಮನೆ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪಲೋಕ ಅರಳಿ ನಿಂತಿದೆ.

ಗ್ಲಾಸ್‌ ಹೌಸ್‌ನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿಗಳು ಹಾಗೂ ಮಂಟಪಗಳನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಗುಲಾಬಿ ಹೂವುಗಳೊಂದಿಗೆ ಸಿದ್ಧಪಡಿಸಿರುವುದು ಸಂಸತ್ ಭವನ ಮತ್ತು ಮೊದಲ ಪ್ರಮುಖ ಸಂಸತ್ ಸದಸ್ಯರುಗಳ ಪುತ್ತಳಿಗಳ ಮಾದರಿ ನೋಡುಗರನ್ನು ಆಕರ್ಷಿಸುತ್ತಿದೆ.

ಗಾಜಿನ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ವಿದೇಶಿ ಹೂವುಗಳನ್ನು ಬಳಸಿ ಅನುಭವ ಮಂಟಪ, ಸಮಾನತೆಯನ್ನು ಸಾರುವ ಬುದ್ಧನ ಪ್ರಜಾಪ್ರತಿನಿಧಿ ಸಭೆಯ ಸಂದರ್ಭ, ಅನುಭವ ಮಂಟಪ ಮುಂತಾದವುಗಳು ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡಿದ್ದರೆ, ಸಾವಿತ್ರಿ ಬಾಯಿ ಫುಲೆಯವರ ಪ್ರತಿಕೃತಿ ಯುವ ಸಮೂಹವನ್ನು ಹುರಿದುಂಬಿಸುತ್ತಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಹೂವಿನಿಂದ ಅಲಂಕರಿಸಿ ಪ್ರಚಾರ ಮಾಡ ಲಾಗುತ್ತಿದೆ. ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಹೂವಿನ ಕಲಾಕೃತಿ ನೋಡುಗರಲ್ಲಿ ಬೆರಗು ಮೂಡಿಸುತ್ತಿದೆ.

ಕೆಂಪು ಮೆಣಸಿನ ಕಾಯಿ ಹಾಗೂ ಅತ್ಯಾಕರ್ಷಕ ಹೂವುಗಳಿಂದ ಪಾರಿವಾಳವನ್ನು ಜೋಡಣೆ ಮಾಡಿರುವುದು ಗಮನ ಸೆಳೆಯುತ್ತಿದೆ. ನವದುರ್ಗೆಯರ ಪ್ರತಿಕೃತಿ, ವರ್ಲ್ಡ್ ಕಪ್, ವೀಣೆ, ಗಾಜಿನ ಮನೆ ಮುಂಭಾಗ ರಕ್ಷಣಾ ವಾಹನವನ್ನು ಹೂವಿನಲ್ಲಿ ನಿರ್ಮಿಸಿರುವುದ ರಿಂದ ಪುಷ್ಪ ಪ್ರಿಯರು ವೀಕ್ಷಿಸಿ ಸೆಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ರಾಜರ ಕೊಡುಗೆಗಳ ಅನಾವರಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪನೆಯಾದಂತಹ ಭದ್ರಾವತಿ ಕಾರ್ಖಾನೆ, ಶಿವನಸಮುದ್ರದ ವಿದ್ಯುತ್ ಉತ್ಪಾದನೆ ಘಟಕ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಆಕಾಶವಾಣಿ ಸೇರಿದಂತೆ ಅಭಿವೃದ್ಧಿ ಸಾಧನೆಗಳ ಕುರಿತ ಮಾಹಿತಿ ಪ್ರದರ್ಶನ ನೋಡುಗರನ್ನು ಆಕರ್ಷಿಸುತ್ತಿದೆ.

ಕರ್ನಾಟಕ ಸಂಭ್ರಮ-50: ಮುಖ್ಯ ದ್ವಾರದಲ್ಲಿ ಇತ್ತೀಚೆಗೆ ಆಚರಣೆಗೊಂಡ ಕನ್ನಡಿಗರ ಹೆಮ್ಮೆಯ ಕರ್ನಾಟಕ ಸಂಭ್ರಮ: 50ರ ಕುರಿತು ಹಳದಿ ಮತ್ತು ಕೆಂಪುಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ-ಬಲದಲ್ಲಿ ಆನೆಯ ಮಾದರಿ ಅಲ್ಲದೆ, ಹೂವಿನಿಂದ ಅರಳಿದ ಟೀಮ್ ಇಂಡಿಯಾ ವಿಶ್ವಕಪ್ ಮಾದರಿಯು ಕ್ರೀಡಾಪ್ರಿಯರನ್ನು ಸೆಳೆಯುತ್ತದೆ.

ಹೂವುಗಳಲ್ಲಿ ಅರಳಿದ ದೇಗುಲಗಳು:
ಹುಲಿಯನ್ನೇರಿದ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಮೆಯ ಪ್ರತಿಕೃತಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಗೋಪುರ ಹಾಗೂ ಶ್ರೀಚಾಮುಂಡೇ ಶ್ವರಿ ದೇವಾಲಯದ ಗೋಪುರವನ್ನು ವಿವಿಧ ಬಣ್ಣದ ಹೂವುಗಳಿಂದ ಸಿದ್ಧಗೊಳಿಸಿರುವುದು ಜನಾಕರ್ಷಣೆಯಾಗಿದೆ.

ಪುಷ್ಪ ಪ್ರದರ್ಶನದಲ್ಲಿ ವಿಶೇಷ ಹೂವುಗಳು:

ಪುಷ್ಪ ಪ್ರದರ್ಶನದಲ್ಲಿ ಆಫ್ರಿಕನ್ ಮಾರಿಗೋಲ್ಡ್, ಹಳದಿ, ಆರ್ಕಿಡ್‌ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೋರಿಯಂ, ಗರ್ಬೆರಾ, ರೋಸಸ್, ಕಾಸ್ಟೋಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ ಹೀಗೆ ನಾನಾ ಬಗೆಯ ಹೂವುಗಳನ್ನು ಹೇರಳವಾಗಿ ಬಳಸಲಾಗಿದೆ.

• 60 ಅಡಿ ಸುತ್ತಳತೆ, 18 ಅಡಿ ಎತ್ತರವಿರುವ ಸಂಸತ್ ಭವನ
• 18 ಅಡಿ ಅಗಲ, 18 ಅಡಿ ಎತ್ತರ, 18 ಅಡಿ ಉದ್ದವಿರುವ ಬುದ್ಧ ಪ್ರತಿಕೃತಿ
• ನಾಲ್ಕು ಟನ್ ಹೂವು, 100ಕ್ಕೂ ಹೆಚ್ಚು ಕಾರ್ಮಿಕರ ಬಳಕೆ
• ಊಟಿ, ಚಿಕ್ಕಬಳ್ಳಾಪುರ, ಬೆಂಗಳೂರಿನಿಂದ ಹೂಗಳ ಖರೀದಿ
• ಕೆಂಪು ಮೆಣಸಿನ ಕಾಯಿಯಿಂದ ನಿರ್ಮಿಸಿರುವ ಕೆಂಪು ಪಾರಿವಾಳ
• ಹೂವಿನಿಂದ ಅಲಂಕರಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು

ಆಂದೋಲನ ಡೆಸ್ಕ್

Recent Posts

ರೈಲು ಪ್ರಯಾಣ ದರ ಹೆಚ್ಚಳ | ರಾಜ್ಯ ಬಿಜೆಪಿ ನಾಯಕರ ಮೌನವೇಕೆ : ಸಿ.ಎಂ ಪ್ರಶ್ನೆ

ದಾವಣಗೆರೆ : ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ…

34 seconds ago

ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ | ಕ್ರೂರಿ ತಂದೆಯನ್ನು ಶೂಟ್‌ ಮಾಡಿ ; ಪ್ರಮೋದ್‌ ಮುತಾಲಿಕ್‌ ಆಗ್ರಹ

ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿ ಗರ್ಭಿಣಿ ಪುತ್ರಿ ಮಾನ್ಯಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ಈ ಮರ್ಯಾದೆ…

14 mins ago

ಸ್ಥಳೀಯವಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಾಣಿಕೆ ಕಷ್ಟ : ಎಚ್‌ಡಿಡಿ

ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ…

23 mins ago

ಸಿಲಿಂಡರ್ ಸ್ಪೋಟ ಪ್ರಕರಣ | ಮೃತ ಸಲೀಂ ಜೊತೆ ಬಂದವರು ನಾಪತ್ತೆ‌ ; ಲಾಡ್ಜ್‌ ಶೋಧ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…

49 mins ago

ದೇಶದದ್ಯಾಂತ ಇಂದಿನಿಂದ ರೈಲು ಪ್ರಯಾಣ ದರ ಏರಿಕೆ

ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…

59 mins ago

ಚಿತ್ರದುರ್ಗ ಬಸ್‌ ದುರಂತ | ಬಸ್‌ ಚಾಲಕ ಮೊಹಮ್ಮದ್‌ ರಫೀಕ್‌ ಸಾವು ; ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚಿತ್ರದುರ್ಗಾ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ…

1 hour ago