ಕೆ.ಬಿ.ರಮೇಶನಾಯಕ
ಜಿಲ್ಲೆಯಲ್ಲಿ ಸದ್ದಿಲ್ಲದೇ ಅಭಿವೃದ್ಧಿ ಕಾಣುತ್ತಿರುವ ಮೀನು ಕೃಷಿ
ಕಾವೇರಿ, ಕಬಿನಿ, ನುಗು, ತಾರಕ ಜಲಾಶಯ ಹೊಂದಿರುವ ಮೈಸೂರು ಜಿಲ್ಲೆ
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮೀನು ಸಾಕಾಣಿಕೆದಾರರ ಸಂಖ್ಯೆ
ಸುಮಾರು ೧೧,೩೧೪ ಕುಟುಂಬಗಳು ಮೀನು ಕೃಷಿಯಲ್ಲಿ ನಿರತ
೨೫,೯೮೮ ಮಂದಿ ಪೂರ್ಣಾವಧಿ ಮೀನುಗಾರರು
೧೯,೨೬೮ ಮಂದಿ ಅರೆಕಾಲಿಕ ಮೀನುಗಾರರು
ಮೈಸೂರು: ಹೃದಯ ಸಂಬಂಧಿ ಸಮಸ್ಯೆಯುಳ್ಳವರು, ಬುದ್ಧಿವಂತಿಕೆಗೆ ಸಹಕಾರಿಯಾಗುವ ಹಾಗೂ ಆರೋಗ್ಯಕ್ಕೆ ಹಿತಕರವಾದ ಪೌಷ್ಟಿಕಾಂಶವುಳ್ಳ ಮೀನು ಸವಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಸದ್ದಿಲ್ಲದೇ ನೀಲಿ ಕ್ರಾಂತಿ ನಡೆಯುತ್ತಿದ್ದು, ಮೀನುಗಾರಿಕೆಯಲ್ಲಿ ಮೈಸೂರು ರಾಜ್ಯದಲ್ಲೇ ೧೧ನೇ ಸ್ಥಾನದಲ್ಲಿದೆ.
ಕರಾವಳಿ ಭಾಗದಿಂದ ಬರುವ ಸಮುದ್ರದ ಮೀನು ಮಾರಾಟದ ಜತೆಗೆ ಸ್ಥಳೀಯವಾಗಿ ದೊರೆಯುವ ಮೀನುಗಳ ಮಾರಾಟ ಜಾಸ್ತಿ ಇರುವುದರಿಂದ ಮೀನು ಸಾಕಾಣಿಕೆದಾರರ ಪ್ರಮಾಣವೂ ಹೆಚ್ಚಾಗಿದೆ. ಇದ ರಿಂದಾಗಿ ಮೀನು ಮಾರುಕಟ್ಟೆ ಮಳಿಗೆಗಳನ್ನು ತೆರೆಯಲು ಅನೇಕರು ಪ್ರಸ್ತಾವನೆ ಸಲ್ಲಿಸಿ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.
ಮೈಸೂರು ಮಿಶ್ರ ಕೃಷಿಯ ಜಿಲ್ಲೆ. ಇಲ್ಲಿನ ನೀರಾವರಿ, ಮಳೆಯಾಶ್ರಿತ ಪ್ರದೇಶ ಸೇರಿದಂತೆ ಎಲ್ಲ ಮಾದರಿಯ ಕೃಷಿ ಚಟುವಟಿಕೆಗಳೂ ಇವೆ. ಇದರ ಜತೆಯಲ್ಲೇ ಇತ್ತೀಚಿನ ವರ್ಷಗಳಲ್ಲಿ ಮೀನು ಸಾಕಣೆಯತ್ತ ಗ್ರಾಮೀಣ ಭಾಗದ ಜನರು ವಿಶೇಷ ಆಸಕ್ತಿ ವಹಿಸುತ್ತಿದ್ದು, ಜಿಲ್ಲೆಯಲ್ಲಿ ಮೀನುಗಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಸುಮಾರು ೧೧,೩೧೪ ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಈ ಪೈಕಿ ೨೫,೯೮೮ ಮಂದಿ ಪೂರ್ಣಾವಧಿ ಮೀನುಗಾರರಾದರೆ, ೧೯,೨೬೮ ಮಂದಿ ಅರೆಕಾಲಿಕವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ೪೫,೨೫೬ ಜನರು ಮೀನು ಕೃಷಿಯಮೂಲಕ ಜೀವನ ರೂಪಿಸಿಕೊಂಡಿದ್ದಾರೆ. ಸಹಕಾರ ಸಂಘಗಳಿಗೆ ನೆರವು: ಜಿಲ್ಲೆಯಲ್ಲಿ ಮೀನುಗಾರರ ಸಹಕಾರ ಸಂಘಗಳೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಜಿಲ್ಲಾದ್ಯಂತ ೪೫ ಸಹಕಾರ ಸಂಘಗಳ ಅಡಿಯಲ್ಲಿ ೩,೮೮೮ ಸದಸ್ಯರು ಇದ್ದಾರೆ. ವೃತ್ತಿಪರ ಮೀನುಗಾರರ ಸಹಕಾರ ಸಂಘಗಳು ಖರೀದಿಸುವ ಮೀನು ಮರಿಗಳಿಗೆ ಶೇ.೫೦ರಷ್ಟು ಸಹಾಯಧನವೂ ಸಿಗುತ್ತಿದೆ. ರಾಜ್ಯ ಸರ್ಕಾರ ೨೫ ಸಹಕಾರ ಸಂಘಗಳಿಗೆ ಸೌಲಭ್ಯ ತಲುಪಿಸುವ ಗುರಿ ನಿಗದಿ ಮಾಡಿತ್ತು. ಮೈಸೂರಿನಲ್ಲಿ ೩೧ ಸಹಕಾರ ಸಂಘಗಳಿಗೆ ಸಹಾಯಧನ ನೀಡುವ ಮೂಲಕ ಶೇ.೧೨೪ರಷ್ಟು ಗುರಿ ಸಾಧನೆ ಮಾಡಲಾಗಿದೆ.
ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ ಅಕ್ಟೋಬರ್ ಅಂತ್ಯಕ್ಕೆ ೩೬.೨೪ ಲಕ್ಷ ರೂ. ಬಿಡುಗಡೆಯಾಗಿದ್ದು, ೩೩.೧೪ ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಕೆರೆಗಳಲ್ಲಿ ಹೆಚ್ಚಿನ ಮೀನು ಕೃಷಿ: ಮೈಸೂರು ಜಿಲ್ಲೆಯ ಕಾವೇರಿ ಮತ್ತು ಕಪಿಲಾ ನದಿಗಳು ಹರಿಯುವ ಮತ್ತು ಸಂಗಮವಾಗುವ ಸಮೃದ್ಧ ಜಿಲ್ಲೆ. ೨೧೫ ಕಿಲೋ ಮೀಟರ್ ಜಲ ವಿಸ್ತೀರ್ಣವಿದೆ. ಇಲ್ಲಿನ ೧೨ ನದಿ ಭಾಗಗಳ ವಿಸ್ತೀರ್ಣದಲ್ಲಿ ಮೀನುಗಾರಿಕೆಗಾಗಿ ೧೦೫ ಲೈಸೆನ್ಸ್‌ಗಳನ್ನು ನೀಡಲಾಗಿದೆ. ವಿಶೇಷವೆಂದರೆ ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಜನರು ಆಸಕ್ತಿ ತೋರುತ್ತಿದ್ದು, ಭಾರಿ ಪೈಪೋಟಿಯೇ ಇದೆ. ಜಿಲ್ಲಾದ್ಯಂತ ೯೯ ಕೆರೆಗಳನ್ನು ಮೀನುಗಾರಿಕೆಗೆ ಪ್ರಾಶಸ್ತ್ಯ ಎಂದು ಗುರುತಿಸಲಾಗಿದ್ದು, ಈಗಾಗಲೇ ೮೮ ಕೆರೆಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ಮೀನುಗಾರಿಕೆ ಇಲಾಖೆಗೆ ೭೩ ಲಕ್ಷ ರೂ.ಗಳಷ್ಟು ಆದಾಯವೂ ಹರಿದುಬಂದಿದೆ.
275 ಮಂದಿಗೆ ಮತ್ಸ್ಯಾಶ್ರಯ ಯೋಜನೆ ಮಂಜೂರು: ರಾಜ್ಯ ಸರ್ಕಾರದ ‘ಮತ್ಸ್ಯಾಶ್ರಯ ಯೋಜನೆ’ಯಡಿ ೨೦೨೨-೨೩ನೇ ಸಾಲಿನಲ್ಲಿ ೧೪೮ ಮಂದಿಗೆ ಹಾಗೂ ೨೦೨೪-೨೫ನೇ ಅವಽಯಲ್ಲಿ ೨೭೫ ಮಂದಿಗೆ ಯೋಜನೆ ಮಂಜೂರಾಗಿದೆ. ‘ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆಗೂ ಬೇಡಿಕೆ ಬಂದಿದ್ದು, ಮತ್ಸ್ಯ ಸಂಪದ ಯೋಜನೆಯಡಿ ನೀಡುವ ಸಬ್ಸಿಡಿ ಹೆಚ್ಚಾಗಿದೆ. ಇದಕ್ಕೆ ಕಡಿಮೆ ಬಂಡವಾಳ ಹಾಕಬೇಕಿದೆ. ಹಾಗಾಗಿ, ಈ ಯೋಜನೆಗೆ ಭಾರೀ ಬೇಡಿಕೆ ಉಂಟಾಗಿದೆ ಎಂದು ಹೇಳಲಾಗಿದೆ.
ನಂದಿನಿ-ಮೀನು ಬೂತ್‌ಗಳ ಸ್ಥಾಪನೆಗೆ ಪೈಪೋಟಿ:
ಸರ್ಕಾರಿ ಜಾಗಗಳಲ್ಲಿ ನಂದಿನಿ ಮಳಿಗೆ ಹಾಗೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಪೈಪೋಟಿ ಎದುರಾಗಿದೆ. ಖಾಸಗಿ ಜಾಗಕ್ಕಿಂತ ಸರ್ಕಾರಿ ಜಾಗಗಳಲ್ಲಿ ಸ್ಥಾಪಿಸಿದರೆ ಬಾಡಿಗೆ ಉಳಿತಾಯವಾಗಲಿದೆ. ಹೀಗಾಗಿ, ಪ್ರಮುಖ ಸರ್ಕಲ್, ಬಡಾವಣೆಗಳು, ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಜಾಗಗಳಲ್ಲಿ ಅವಕಾಶ ಮಾಡಿಕೊಡುವಂತೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ.
” ವರ್ಷದಿಂದ ವರ್ಷಕ್ಕೆ ಮೀನಿನ ಖಾದ್ಯ ಸೇವಿಸುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ಉತ್ಪಾದನೆಯೂ ಜಾಸ್ತಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೊಳ ನಿರ್ಮಾಣ ಮಾಡಿ ಮೀನು ಮರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಮತ್ಸ್ಯ ಸಂಪದ ಯೋಜನೆಗೂ ಜಿಲ್ಲೆಯಲ್ಲಿ ಭಾರೀ ಬೇಡಿಕೆ ಉಂಟಾಗಿದೆ.”
-ಮಂಜುನಾಥ್, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…