ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಗೆ ಅ. ೯ರಂದು ತೆರೆ ಬೀಳಲಿದ್ದು, ಬಹು ಜನಾಕರ್ಷಣೆಯ ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ, ದಸರಾ ಕಿಶೋರಿ ಮತ್ತು ದಸರಾ ಕಿಶೋರ ಪ್ರಶಸ್ತಿಗಳಿಗೆ ಪೈಲ್ವಾನರು ಸೆಣಸಲಿದ್ದಾರೆ. ದಸರಾ ಕುಮಾರ ವಿಭಾಗದಲ್ಲಿ ಮೈಸೂರಿನ ನಿತಿನ್ ಮತ್ತು ಗಿರೀಶ್ ಸೆಣಸಲಿದ್ದಾರೆ.
ದಸರಾ ಕಂಠೀರವ ವಿಭಾಗದಲ್ಲಿ ಮುಧೋಳ್‌ನ ಬಾಪು ಸಾಹೇಬ್ ಸಿಂಧೆ ಮತ್ತು ಬಾಗಲಕೋಟೆಯ ಶಿವಯ್ಯ ಪೂಜಾರಿ, ದಸರಾ ಕೇಸರಿ ವಿಭಾಗದಲ್ಲಿ ದಾವಣಗೆರೆಯ ಬಸವರಾಜ್ ಪಟೇಲ್ ಮತ್ತು ಮುಧೋಳಿನ ಸದಾಶಿವ ನಲ್ವಡೆ ಅಖಾಡಕ್ಕಿಳಿಯ ಲಿದ್ದಾರೆ. ಮೈಸೂರು ದಸರಾ ಕಿಶೋರ ವಿಭಾಗದಲ್ಲಿ ದಾವಣಗೆರೆಯ ಮಹೇಶ್ ಪಿ. ಗೌಡ ಮತ್ತು ಕೊರವರ ಸಂಜೀವ, ದಸರಾ ಕಿಶೋರಿ ವಿಭಾಗದಲ್ಲಿ ಶಾಲಿನಿ ಸಿದ್ದಿ ವರ್ಸ್‌ಸ್ ಗಾಯತ್ರಿ ಸೂತ್ತಾರ್ ಗುದ್ದಾಡಲಿದ್ದಾರೆ. ೨೦ ನಿಮಿಷದಲ್ಲಿ ಪಂದ್ಯಗಳು ನಡೆಯಲಿವೆ.
ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿಯಲ್ಲಿ ‘ಮೈಸೂರು ದಸರಾ ಕುಮಾರ’ ( ೭೪ ಕೆ. ಜಿ. ಮೇಲ್ಪಟ್ಟು) ಪ್ರಶಸ್ತಿ ನೀಡಲಾಗುತ್ತದೆ. ವಿಶೇಷವಾಗಿ ರಾಜ್ಯಮಟ್ಟದಲ್ಲಿ ‘ದಸರಾ ಕಿಶೋರ’(೫೭ ರಿಂದ೬೫ ಕೆ. ಜಿ. ) ಮತ್ತು ‘ದಸರಾ ಕಿಶೋರಿ’(೫೭ ರಿಂದ ೬೨ ಕೆ. ಜಿ) ಪ್ರಶಸ್ತಿಗಳಿಗಾಗಿ ಕುಸ್ತಿ ಆಡಿಸಲಾಗುತ್ತಿದೆ. ಉಳಿದಂತೆ, ‘ದಸರಾ ಕಂಠೀರವ’ (೮೬ ಕೆ. ಜಿ. ಮೇಲ್ಪಟ್ಟು), ‘ದಸರಾ ಕೇಸರಿ’ (೭೪ ರಿಂದ ೮೬ ಕೆ. ಜಿ. ವರೆಗೆ) ರಾಜ್ಯಮಟ್ಟದ ಕುಸ್ತಿಗಳು ನಡೆಯುತ್ತಿವೆ. ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ, ದಸರಾ ಕಿಶೋರಿ ಮತ್ತು ದಸರಾ ಕಿಶೋರ ಪ್ರಶಸ್ತಿಗಳಿಗೆ ಕ್ರಮವಾಗಿ ೧. ೨೫ ಕೆ.ಜಿ, ೧ ಕೆ. ಜಿ. , ೦. ೭೫ ಕೆ. ಜಿ. , ೦. ೫೦ ಕೆ. ಜಿ. ಮತ್ತು ೦. ೫೦ ಕೆ. ಜಿ. ತೂಕದ ಬೆಳ್ಳಿ ಗದೆಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಅಂದು ನಾಡಕುಸ್ತಿ ಪಂದ್ಯಾವಳಿಯ ಉತ್ತಮ ಕುಸ್ತಿಪಟುಗಳಿಗೆ ‘ಸಾಹುಕಾರ್ ಚೆನ್ನಯ್ಯ ಕಪ್’, ‘ಮೈಸೂರು ಮಹಾರಾಜ ಒಡೆಯರ್ ಕಪ್’, ‘ಮೈಸೂರು ಮೇಯರ್ ಕಪ್’ ಮತ್ತು ‘ಕಿತ್ತೂರು ರಾಣಿ ಚನ್ನಮ್ಮ ಕಪ್’ ನೀಡಲಾಗುತ್ತದೆ. -ಲಿತಾಂಶ: ಮೊಹಮ್ಮದ್ ಸಾದಿಕ್ ವಿರುದ್ಧ ಪ್ರ-ಲ್ ಗೌಡ, ಶ್ರೀನಿವಾಸ್ ವಿರುದ್ಧ ವಿಶ್ವಾಸ್ ನಾಯಕ್, ಎಲ್. ಜಯಂತ್ ವಿರುದ್ಧ ಕೆ. ರವೀಂದ್ರ, ಎಸ್. ಚಿನ್ನು ವಿರುದ್ಧ ಚಿನ್ಮಯ್ ಗೆಲುವು ಸಾಽಸಿದರು. ೮೦ ಕೆ. ಜಿ. ತೂಕ ಮೀಸೆಯಲ್ಲಿ ಎತ್ತಿದ ವೃದ್ಧ ಕುಸ್ತಿ ಪಂದ್ಯವಳಿಗೂ ಮುನ್ನ ನಡೆದ ಸಾಹಸ ಪ್ರದರ್ಶನದಲ್ಲಿ ಬಾಗಲಕೋಟೆ ೭೫ ವರ್ಷದ ವೀರಭದ್ರಪ್ಪ ಕೊಳಮಾಲಿ ತಮ್ಮ ಮೀಸೆಯಲ್ಲಿ ೮೦ ಕೆ. ಜಿ. ತೂಕ ಕಬ್ಬಿಣವನ್ನು ಎತ್ತಿ ಬಲ ಪ್ರದರ್ಶನ ಮಾಡಿದರು. ಇವರೊಂದಿಗೆ ಗಂಗಾಪ್ಪ ಸೂರರ ೨೫೦ ಕೆ. ಜಿ. ಯ ಮರಳಮೂಟೆಯನ್ನು ಎತ್ತಿಸಿ ಸಾಹಸ ಮೆರೆದರು. ದಾನಪ್ಪ ಪಾಟೀಲ ಸಿಂದಿಗಿಯ ೧೨೦ ಕೆ. ಜಿ. ತೂಕವನ್ನು ಕೈಗಳಿಗೆ ಹಗ್ಗ ಕಟ್ಟಿಕೊಂಡು ಭಜದ ಮೇಲೆರಿಸಿ ಎತ್ತಿದರು.
ಒಂದೇ ನಿಮಿಷದಲ್ಲಿ ಚಿತ್
ಮಂಗಳವಾರ ಸುಮಾರು ೨೫ಕ್ಕೂ ಹೆಚ್ಚು ಪಂದ್ಯಗಳು ನಡೆದವು. ಇದರಲ್ಲಿ ಪೈಲ್ವಾನರಾದ ಪುನೀತ್ ಮತ್ತು ನವೀನ್ ನಡುವೆ ನಡೆದ ಕುಸ್ತಿ ಪಂದ್ಯವಳಿ ಅತ್ಯಂತ ರೋಚಕವಾಗಿತ್ತು. ಕುಸ್ತಿ ಬಿಟ್ಟ ಕ್ಷಣದಲ್ಲಿ ಅಕ್ರಮಣಕಾರಿಯಾಗಿ ಸವಾರಿ ಮಾಡಿದ ಪುನೀತ್ ಕೇವಲ ಒಂದು ನಿಮಿಷದಲ್ಲಿ ನವೀನ್ ಅವರನ್ನು ಚಿತ್ ಮಾಡಿ ಮೆಟ್ಟಿಯ ಮೇಲೆ ಮೆರೆದಾಡಿದರು. ಇದರ ಜೊತೆಗೆ ಬಿ. ಎಂ. ಪುಷ್ಪಕ್ ಗೌಡ ಅವರು ತನಯ್ ಅಜಯ್ ಶಾಸೀ ಅವರನ್ನು ೩೦ ಸೆಕೆಂಡಿನಲ್ಲಿ ಕೆಳಗಿ ಬೀಳಿಸಿ ಬಿಡಿಸಿಕೊಳ್ಳಲಾದ ಡಾವ್ ಹೊಡೆದು ಚಿತ್ ಮಾಡಿ ಕುಸ್ತಿ ಜಯಿಸಿದರು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…