Andolana originals

ನಾಳೆಯಿಂದ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಜ.೩ರಿಂದ ೫ ದಿನಗಳ ಕಾಲ ನಡೆಯಲಿದೆ.

ಉಚ್ಚ ನ್ಯಾಯಾಲಯ (ಹೈಕೋರ್ಟ್) ಆದೇಶದಲ್ಲಿನ ನಿಷೇಧಿತ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜ.೮ರ ಮಧ್ಯರಾತ್ರಿಯವರೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ತಕ್ಷಣ ಆದೇಶಗಳನ್ನು ಹೊರಡಿಸುವ ಸಲುವಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಹಾಗೂ ತಹಸಿಲ್ದಾರರೊಂದಿಗೆ ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಆಫೀಸರ್‌ಗಳನ್ನಾಗಿ ಚಿಕ್ಕಲ್ಲೂರಿನ ವಿವಿಧ ವ್ಯಾಪ್ತಿಯ  ಪ್ರದೇಶ, ಸ್ಥಳಗಳಿಗೆ ನೇಮಕ ಮಾಡಿ ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಲ್ಲೂರು ಹೊಸಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಿ.ಎಸ್.ರಾಜು -ಮೊ. ಸಂ.೮೬೬೦೯೯೯೩೫೪, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ಎ.ಎಂ.ಕೇಶವ ಮೂರ್ತಿ-ಮೊ.ಸಂ. ೮೩೧೦೬೭೨೧೨೭, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆ.೮ ಗಂಟೆ ಕುಮಾರ್- ಮೊ.ಸಂ.೯೯೮೦೧೩೭೭೭೯, ಚಿಕ್ಕಲ್ಲೂರು ಹಳೆಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ಕೆ.ಚಿನ್ನಸ್ವಾಮಿ -ಮೊ.ಸಂ. ೮೮೮೪೦೯೮೭೭೨, ೨ನೇ ಪಾಳಿಯಲ್ಲಿ ಮ.೨ ರಿಂದ ರಾತ್ರಿ ೧೦ರವರೆಗೆ ನಂದೀಶ್ -ಮೊ.ಸಂ. ೮೭೨೨೦೦೦೧೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆಳಿಗ್ಗೆ ೮ರವರೆಗೆ ಸುಧನ್ವ ನಾಗ್ -ಮೊ.ಸಂ.೯೫೯೦೯೬೧೯೬೧, ಚಿಕ್ಕಲ್ಲೂರು ಸಿದ್ದಾಪ್ಪಾಜಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ರಾಮಕೃಷ್ಣ -ಮೊ.ಸಂ.೭೮೨೯೨೯೭೬೮೨೫, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ರವರೆಗೆ ಪ್ರಕಾಶ್ -ಮೊ.ಸಂ. ೯೯೬೪೮೧೫೫೮೩, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆ.೮ರವರೆಗೆ ರಂಗಸ್ವಾಮಿ -ಮೊ.ಸಂ. ೮೨೭೭೯೩೦೭೮೩, ಕೊತ್ತನೂರು, ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಅಮೃತೇಶ್ವರ- ಮೊ.ಸಂ ೮೨೭೭೯೩೦೭೬೨, ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ೨ನೇ ಪಾಳಿಯಲ್ಲಿ ರಾಜೇಶ್ -ಮೊ. ಸಂ.೮೭೨೨೫೨೬೪೧೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಸಿದ್ದರಾಜು -ಮೊ.ಸಂ ೯೮೪೫೯೦೭೬೬೧, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆಯವರೆಗೆ ವಿನೋದ್ ಕುಮಾರ್ – ಮೊ. ಸಂ.೯೧೧೦೬೫೫೨೧೩, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ನಟರಾಜು -ಮೊ.ಸಂ. ೭೦೨೨೪೪೦೩೯೦, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪಿ.ಸಿನ್ನಣ್ಣನ್ -ಮೊ.ಸಂ.೮೨೭೭೩೧೩೯೫೪, ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಟಿ.ಎಂ. ಜಯಶೀಲ- ಮೊ.ಸಂ. ೯೭೪೧೮೪೩೨೧೮, ೨ನೇ ಪಾಳಿಯಲ್ಲಿ ಮಧ್ಯಾಹ್ನ ೨ರಿಂದ ರಾತ್ರಿ ೧೦ ಗಂಟೆವರೆಗೆ ಚಿಕ್ಕಲಿಂಗಯ್ಯ -ಮೊ.ಸಂ. ೯೧೦೮೨೫೨೫೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪುರುಷೋತ್ತಮ -ಮೊ.ಸಂ. ೯೭೩೧೪೪೩೨೮೫ ಅವರನ್ನು ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಏಕಮುಖ ವಾಹನ ಸಂಚಾರಕ್ಕೆ ಆದೇಶ:  ಜಾತ್ರೆಗೆ ಆಗಮಿಸುವ ಭಕ್ತಾಧಿಗಳು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜ.೩ ರಿಂದ ೮ರವರೆಗೆ (ತಾತ್ಕಾಲಿಕವಾಗಿ) ಏಕಮುಖ ಮಾರ್ಗದಲ್ಲಿ ಮಾತ್ರ ವಾಹನಗಳು ಸಂಚರಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾರ್ಗ-೧ : ಚಿಕ್ಕಲ್ಲೂರು ಗ್ರಾಮಕ್ಕೆ ಒಳ ಬರಲು ಕೊತ್ತನೂರು ಗ್ರಾಮ- ಬಾಣೂರು ಕ್ರಾಸ್ ಬಾಣೂರು-ಸುಂಡ್ರಳ್ಳಿ ಮಾರ್ಗ ಹಾಗೂ ಮಾರ್ಗ-೨: ಚಿಕ್ಕಲ್ಲೂರು ಗ್ರಾಮದಿಂದ ಹೊರ ಹೋಗಲು ಚಿಕ್ಕಲ್ಲೂರು-ಬಾಣೂರು ಕ್ರಾಸ್-ಕೊತ್ತನೂರು ಮಾರ್ಗದಲ್ಲಿ ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ

ಆಂದೋಲನ ಡೆಸ್ಕ್

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

12 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

12 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

12 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

13 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

15 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

16 hours ago