Andolana originals

ಹೆಸರು ಬದಲಾದರೆ ಸಾಲದು; ಜನಸ್ನೇಹಿ ಆಗಬೇಕು

ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ತಜ್ಞರ ಅಭಿಮತ

ಎಚ್. ಎಸ್. ದಿನೇಶ್‌ಕುಮಾರ್

ಮೈಸೂರು: ಪಾರಂಪರಿಕ ನಗರ ಮೈಸೂರು ಇನ್ನಷ್ಟು ಸುಂದರವಾಗಿ ರೂಪುಗೊಳ್ಳಬೇಕು. ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಉತ್ತಮ ರೀತಿಯಲ್ಲಿ ಒದಗಿಸಬೇಕು. ನಿವೇ ಶನ, ಮನೆಗಳನ್ನು ಸರಾಗವಾಗಿ ಒದಗಿಸುವ ಮಹತ್ವಾ ಕಾಂಕ್ಷೆಯಿಂದ ರಾಜ್ಯ ಸರ್ಕಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ರಚನೆ ಮಾಡಿದೆ. ಆ ಮೂಲಕ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಈಗ ಎಂಡಿಎ ಆಗಿದೆ.

ಆದರೆ, ಎಂಡಿಎ ಅಧಿಕಾರ ವ್ಯಾಪ್ತಿ, ನಿಯ ಮಾವಳಿಗಳ ಬಗ್ಗೆ ಸಾರ್ವಜನಿಕರಿಗೆ ಇನ್ನೂ ಸ್ಪಷ್ಟತೆ ಇಲ್ಲ. ಹಾಗಾಗಿ ಸ್ವಲ್ಪ ಗೊಂದಲವಾಗಿದೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮೈಸೂರು ನಗರದ ಅಭಿವೃದ್ಧಿ, ಬಡಾವಣೆಗಳ ರಚನೆ, ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ತಜ್ಞರು, ಡೆವಲಪರ್‌ಗಳು, ಮುಡಾ ನಿವೃತ್ತ ಅಧಿಕಾರಿಗಳು ಭಿನ್ನ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮುಡಾ ಹೆಸರು ಬದಲಾದರೆ ಸಾಕಾಗುವುದಿಲ್ಲ. ಎಂಡಿಎ ಜನಸ್ನೇಹಿಯಾಗಿ ರೂಪುಗೊಳ್ಳ ಬೇಕು. ಮುಡಾದಲ್ಲಿ ಇದ್ದಂತೆ ಸಾರ್ವಜನಿಕರ ಕೆಲಸಗಳಿಗೆ ವಿನಾಕಾರಣ ಅಡಚಣೆ ಉಂಟು ಮಾಡಬಾರದು. ಹೊಸದಾಗಿ ಬಡಾವಣೆಗಳನ್ನು ರಚಿಸುವುದಕ್ಕೆ ಕಾಲಮಿತಿ ಇರಬೇಕು. ವಸತಿ, ನಿವೇಶನ ಹಂಚಿಕೆ ಸಂದರ್ಭಗಳು ಜನರಲ್ಲಿ ವಿಶ್ವಾಸಾರ್ಹತೆ ಉಂಟು ಮಾಡುವಂತಿರಬೇಕು.

ಮುಖ್ಯವಾಗಿ ನೂತನ ಪ್ರಾಧಿಕಾರಕ್ಕೆ ಅನುಭವ ಉಳ್ಳ ಅಧಿಕಾರಿಗಳನ್ನು ನೇಮಕ ಮಾಡಬೇಕು. ಶಾಸಕರ ಅಧಿಕಾರ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಖಚಿತ ಉತ್ತರ ದೊರೆ ಯಬೇಕು. ರಾಜ್ಯ ಸರ್ಕಾರ ವಸತಿ ಗ್ಯಾರಂಟಿ ಯೋಜನೆ ಜಾರಿಗೊಳಿಸಬೇಕು. ಒಟ್ಟಾರೆ ಪ್ರಾಧಿಕಾರ ಮೈಸೂರು ಅಭಿವೃದ್ಧಿಗೆ ಅಕ್ಷರಶಃ ಬದ್ಧವಾಗಿರಬೇಕು ಎಂಬುದು ಕೆಲ ತಜ್ಞರ ಅಭಿಪ್ರಾಯವಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಎಂದು ಬದ ಲಾವಣೆ ಮಾಡುತ್ತಿರುವುದು ಒಳ್ಳೆಯದು. ಆದರೆ ವ್ಯವಸ್ಥೆಯನ್ನು ಬದಲಾಯಿಸದೆ ಹೆಸರು ಬದಲಾಯಿಸಿದಲ್ಲಿ ಯಾವುದೇ ಪ್ರಯೋಜ ನವಿಲ್ಲ. ಅಲ್ಲಿ ಕೆಲಸ ಮಾಡುವವರಿಗೆ ಸಮಾಜದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇರಬೇಕು ಎಂಬುದು ಸಿಐಟಿಬಿ ಮಾಜಿ ಅಧ್ಯಕ್ಷ ಡಿ. ಮಾದೇ ಗೌಡರ ಆಶಯವಾಗಿದೆ.

ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ) ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ರಾಜರ ಕಾಲದಲ್ಲಿಯೇ ಆರಂಭಿಸಲಾಯಿತು. ವಿಶ್ವಸ್ಥ ಎಂಬ ಪದದ ಅರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸುವವರ ಅಗತ್ಯ ವಿದೆ ಎನ್ನುತ್ತಾರೆ ಅವರು.

ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಸ್ವಾಗತಾರ್ಹ. ಆದರೆ, ಇದರಿಂದ ಮುಡಾದಲ್ಲಿನ ವ್ಯವಸ್ಥೆ ಬದಲಾಗುವುದೇ ಎಂಬುದು ಮುಖ್ಯ ಪ್ರಶ್ನೆ. ಇಷ್ಟು ದಿನ ಅಲ್ಲಿ ಯಾವುದೇ ಕೆಲಸಗಳು ಬೇಗನೆ ಆಗುತ್ತಿರಲಿಲ್ಲ. ಕಡತಗಳಿಗೆ ಮುಕ್ತಿ ಸಿಗುವುದು ಅಸಾಧ್ಯ ಎಂಬಂತಾಗಿತ್ತು. ಬಂಡವಾಳ ಹೂಡಿ ಜಮೀನು ಖರೀದಿಸಿದ ಡೆವ ಲಪರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾದ ಸಂದರ್ಭಗಳೂ ಇದ್ದವು ಎನ್ನುತ್ತಾರೆ ಸೇಫ್ ವೀಲ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಬಿ. ಎಸ್. ಪ್ರಶಾಂತ್ ಅವರು.

ಮುಡಾದಲ್ಲಿ ಹಾಲಿ ಕರ್ತವ್ಯ ನಿರ್ವಹಿಸು ತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಮುಡಾ ಬೇರೆಯಲ್ಲ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಬೇರೆ ಅಲ್ಲ ಎಂಬಂತಾಗುತ್ತದೆ. ಅಲ್ಲಿ ಬೇರೆ ಇಲಾಖೆಗಳಿಂದ ನಿಯೋಜನೆ ಆಧಾರದಲ್ಲಿ ಸಾಕಷ್ಟು ಮಂದಿ ಕೆಲಸ ನಿರ್ವಹಿ ಸುತ್ತಿದ್ದಾರೆ. ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು ಎಂಬುದು ನಗರದ ಎಪಿಎಸ್ ಪ್ರಾಪ ರ್ಟೀಸ್ ಮಾಲೀಕ ಎ. ಪಿ. ನಾಗೇಶ್ ಆಗ್ರಹವಾಗಿದೆ.

ಜನರಿಗೆ ಸೂರು ನೀಡುವ ಉದ್ದೇಶದಿಂದ ವಿಶ್ವಸ್ಥ ಮಂಡಳಿ ಎಂದು ಹೆಸರು ಇಡಲಾಗಿತ್ತು. ಹೆಸರಿನ ಮಹತ್ವವನ್ನು ಅರಿತು ಮೈಸೂರು ನಗರದ ಸಮಗ್ರ ಬೆಳವಣಿಗೆ ಬಗ್ಗೆ ಕಾಳಜಿ ಹೊಂದಿರುವವರನ್ನು ಎಂಡಿಎಗೆ ನೇಮಕ ಮಾಡಬೇಕು ಎಂಬುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಹೆಚ್ಚಿನ ಜನಪ್ರತಿನಿಧಿಗಳ ಕೈವಾಡ ಇರುವುದಿಲ್ಲ. ಹೀಗಾಗಿ ಭ್ರಷ್ಟಾಚಾರ ಹಾಗೂ ಹಗರಣಗಳಿಗೆ ಕಡಿವಾಣ ಬೀಳಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳೇ ಇರು ವುದರಿಂದ ತಪ್ಪು ಮಾಡಿದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವ ಅವಕಾಶಗಳಿರುತ್ತವೆ ಎಂಬುದು ಮುಡಾ ನಗರ ಯೋಜನಾ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕ ಪಿ. ಎಸ್. ನಟರಾಜ್ ಅವರ ಸಮರ್ಥನೆ.

ಹೊಸ ಕಾಯ್ದೆಯಲ್ಲಿ ಸ್ಥಳೀಯ ಅಭಿವೃದ್ಧಿ ವಲಯ ಎಂದು ಗುರುತಿಸಲಾಗುತ್ತಿದೆ. ಈ ಕಾಯ್ದೆ ಗ್ರಾಮೀಣ ಪ್ರದೇಶದಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಬೇಕು ಎಂಬುದಾಗಿ ಅವರೂ ಹೇಳುತ್ತಾರೆ.

ಕಚೇರಿಗೆ ಬರುವ ಜನರನ್ನು ಅಲೆಸದೆ ಅವರ ಕೆಲಸಗಳನ್ನು ತಕ್ಷಣವೇ ಮಾಡಿ ಕೊಡಬಲ್ಲ ಮನ ಸ್ಥಿತಿಯ ವರನ್ನು ನೇಮಕ ಮಾಡ ಬೇಕು. ಮೈಸೂರು ಅಭಿವೃದ್ಧಿಗೆ ಸಂಬಂಽಸಿದಂತೆ ಬದಲಾ ವಣೆ ಮಾಡಲು ಹೊರಟಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿ ಸ್ವಾಗತಾರ್ಹ.

-ಎ. ಪಿ. ನಾಗೇಶ್, ಎಪಿಎಸ್ ಪ್ರಾಪರ್ಟೀಸ್, ಮೈಸೂರು

ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳು ನಡೆಸುವ ರಸ್ತೆ, ಚರಂಡಿ ಇನ್ನಿತರ ಕಾಮಗಾರಿಯಲ್ಲಿ ಎಂಡಿಎ ಹಸ್ತಕ್ಷೇಪ ವಿರಬಾರದು. ಈಗ ಇರುವ ಭ್ರಷ್ಟ ಹಾಗೂ ಬದ್ಧತೆ ಇಲ್ಲದ ಅಧಿಕಾರಿಗಳನ್ನು ಬೇರೆಡೆಗೆ ಕಳುಹಿಸಬೇಕು. ಹೀಗಾದಾಗ ಮಾತ್ರ ಸರ್ಕಾರದ ಆಶಯಗಳು ಈಡೇರಲು ಸಾಧ್ಯ.

-ಪಿ. ಎಸ್. ನಟರಾಜ್, ನಿವೃತ್ತ ಸಹಾಯಕ ನಿರ್ದೇಶಕರು, ನಗರ ಯೋಜನಾ ವಿಭಾಗ ಮುಡಾ

ರಾಜ್ಯ ಸರ್ಕಾರ ವಸತಿ ಗ್ಯಾರಂಟಿ ಯೊಂದನ್ನು ಜಾರಿ ಗೊಳಿಸಿದರೆ ಜನರು ಸ್ವಾಭಿ ಮಾನದಿಂದ ಬದುಕುತ್ತಿದ್ದರು. ನಗರದ ಅಭಿ ವೃದ್ಧಿಗೆ ಸಂಬಂಽಸಿದಂತೆ ಬದಲಾವಣೆ ಮಾಡಲು ಹೊರಟಿರುವುದು ಸ್ವಾಗ ತಾರ್ಹ. ಆದರೆ, ಅದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ನೇಮಕ ಮಾಡುವುದು ಅಗತ್ಯ.

-ಡಿ. ಮಾದೇಗೌಡ, ಸಿಐಟಿಬಿ ಮಾಜಿ ಅಧ್ಯಕ್ಷರು, ಮೈಸೂರು

ಹೊಸ ವ್ಯವಸ್ಥೆ ಆರಂಭವಾದಲ್ಲಿ ಮೊದಲು ಈಗಿ ರುವ ಸಿಬ್ಬಂದಿ ಹಾಗೂ ಅಧಿಕಾರಿ ಗಳನ್ನು ಬದಲಾಯಿಸಬೇಕು. ಏಕ ಗವಾಕ್ಷಿ ಅಡಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಮುಖ್ಯವಾಗಿ ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬಲ್ಲ ಅಧಿಕಾರಿಗಳನ್ನು ನೇಮಕ ಮಾಡಬೇಕು. ಬದಲಾವಣೆ ಎಂಬುದು ಸಮಗ್ರವಾಗಿ ಆಗಬೇಕು.

-ಬಿ. ಎಸ್. ಪ್ರಶಾಂತ್, ಸೇಫ್ ವೀಲ್ಸ್ ಗ್ರೂಪ್ ಆಫ್ ಕಂಪೆನೀಸ್, ಮೈಸೂರು

ಆಂದೋಲನ ಡೆಸ್ಕ್

Recent Posts

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…

1 hour ago

ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…

1 hour ago

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ಆಕಾಂಕ್ಷಿಗಳ ಕಸರತ್ತು

ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …

2 hours ago

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

12 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

12 hours ago