Andolana originals

ದಸರಾ ಮುಗಿದರೂ ತಗ್ಗದ ಪ್ರವಾಸಿಗರ ಪ್ರವಾಹ

ಕೆ.ಬಿ.ರಮೇಶನಾಯಕ

ಸಾಲು ಸಾಲು ವಾಹನಗಳ ಭರಾಟೆ; ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ಅರಮನೆ, ಮತ್ತಿತರ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಹಸ್ರಾರು ಪ್ರವಾಸಿಗರ ದಂಡು ನಗರಕ್ಕೆ ಲಗ್ಗೆ ಇಟ್ಟಿದೆ.

ಸೆ.೨೨ರಂದು ನವರಾತ್ರಿ ಶುರುವಾದ ದಿನದಿಂದ ದಸರಾ ಜಂಬೂಸವಾರಿ ದಿನದವರೆಗೆ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಭೇಟಿ ನೀಡಿ ಸಂಭ್ರಮಿಸಿದ್ದಾರೆ. ದೇಶ-ವಿದೇಶಗಳ ಬಹಳಷ್ಟು ಜನರು ದಸರಾ ಜಂಬೂಸವಾರಿಯನ್ನು ವೀಕ್ಷಣೆ ಮಾಡಿದ್ದರೂ ನಗರ ವಾಸ್ತವ್ಯವನ್ನು ಮುಂದುವರಿಸಿದ್ದಾರೆ.

ಒಂದು ವಾರದಿಂದ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದ್ದ ಪ್ರವಾಸಿಗರು, ಶನಿವಾರ ಅನೇಕ ಸ್ಥಳಗಳನ್ನು ವೀಕ್ಷಿಸಲು ಮುಂದಾಗಿದ್ದುದು ಕಂಡುಬಂದಿತು. ಕಾಡಾ ಕಚೇರಿ, ದೊಡ್ಡಕೆರೆ ಮೈದಾನ, ಕೋಟೆ ಮಾರಮ್ಮನ ದೇವಸ್ಥಾನ, ಪಾರ್ಕಿಂಗ್ ಪ್ಲಾಜಾ ಬಳಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದ ಜನರು ನೇರವಾಗಿ ಅರಮನೆಗೆ ತೆರಳುತ್ತಿದ್ದರು. ಅರಮನೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ಜನರು ಅದರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅರಮನೆ ವಸ್ತು ಸಂಗ್ರಹಾಲಯವನ್ನು ನೋಡಲು ಪ್ರವೇಶ ಟಿಕೆಟ್ ಪಡೆದು ಒಳ ನುಗ್ಗುತ್ತಿದ್ದ ಜನರು ಪ್ರತಿಯೊಂದು ವಸ್ತುಗಳನ್ನೂ ಕುತೂಹಲದಿಂದ ವೀಕ್ಷಿಸಿದರು.

ಇದನ್ನೂ ಓದಿ:-ಬೀದಿನಾಯಿಗಳು, ಕೋತಿಗಳ ಹಾವಳಿಯಿಂದ ಕಂಗೆಟ್ಟ ಜನತೆ

ಮೃಗಾಲಯದಲ್ಲಿ ನೂಕು ನುಗ್ಗಲು: ಅರಮನೆಗಿಂತ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಟಿಕೆಟ್ ಕೌಂಟರ್ ಬಳಿ ಟಿಕೆಟ್ ಪಡೆಯಲು ಸಾವಿರಾರು ಜನರು ತೆರಳುತ್ತಿದ್ದರಿಂದ ನೂಕುನುಗ್ಗಲು ಕಾಣಿಸಿತು. ಇಟ್ಟಿಗೆಗೂಡು, ಎಂ.ಜಿ.ರಸ್ತೆ, ವಸ್ತು ಪ್ರದರ್ಶನ ಪಾರ್ಕಿಂಗ್, ಲಲಿತಮಹಲ್ ರಸ್ತೆ ಮೊದಲಾದ ಕಡೆ ವಾಹನಗಳನ್ನು ನಿಲ್ಲಿಸಿ ಬರುತ್ತಿದ್ದ ಜನರು ನೇರವಾಗಿ ತಂಡೋಪತಂಡವಾಗಿ ಟಿಕೆಟ್ ಪಡೆದು ಮೃಗಾಲಯಕ್ಕೆ ತೆರಳುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯತನಕ ಬಿಡುವಿಲ್ಲದಂತೆ ವೀಕ್ಷಣೆ ಮಾಡಿದ್ದು, ಮೃಗಾಲಯದಲ್ಲಿ ಇರುವ ಹುಲಿ, ಸಿಂಹ, ಚಿರತೆ, ಹೆಬ್ಬಾವು, ಮೊಸಳೆ, ಆನೆ, ಒಂಟೆ ಮೊದಲಾದ ಪ್ರಾಣಿಗಳನ್ನು ನೋಡಿ ಖುಷಿಪಟ್ಟರು.

ಬೆಟ್ಟವೂ ಫುಲ್ ರಷ್: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಫುಲ್ ರಷ್ ಇತ್ತು. ಜಂಬೂಸವಾರಿ ವೀಕ್ಷಿಸಿ ಸಂಬಂಧಿಕರ ಮನೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದ ಹೊರ ರಾಜ್ಯದವರು ಮುಂಜಾನೆ ಎದ್ದು ಬಸ್, ಟೆಂಪೋ, ಮ್ಯಾಕ್ಸಿ ಕ್ಯಾಬ್ ಮೊದಲಾದ ವಾಹನಗಳಲ್ಲಿ ಭೇಟಿ ನೀಡಿದ್ದರು. ಸಾಲು ಸಾಲು ವಾಹನಗಳಿಂದ ಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು. ವಸ್ತು ಪ್ರದರ್ಶನಕ್ಕೆ ಲಗ್ಗೆ: ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ವೀಕ್ಷಿಸಿದ ಜನರು ಸಂಜೆ ನಂತರ ದಸರಾ ವಸ್ತು ಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದರು. ಬೆಳಿಗ್ಗೆಯಿಂದ ಸಂಜೆ ಸಾಧಾರಣವಾಗಿ ಪ್ರವೇಶ ಮಾಡಿದರೂ, ಐದು ಗಂಟೆಯ ಮೇಲೆ ದುಪ್ಪಟ್ಟು ಪ್ರವಾಸಿಗರು ವೀಕ್ಷಿಸಿದರು. ಪ್ರದರ್ಶನದ ಒಳಗೆ ಇರುವ ಚಾಟ್ಸ್ ಸೆಂಟರ್‌ಗಳಲ್ಲಿ ಬಗೆಬಗೆಯ ತಿನಿಸುಗಳನ್ನು ತಿಂದರೆ, ಜಿಲ್ಲಾವಾರು ತೆರೆದಿರುವ ಮಳಿಗೆಗಳನ್ನು ನೋಡಿಕೊಂಡು ಇಷ್ಟವಾದ ತಿಂಡಿಗಳನ್ನು ಸವಿದರು. ಮತ್ತೊಂದೆಡೆ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳ ಸಂಭ್ರಮ ಮುಗಿಲುಮುಟ್ಟಿತ್ತು.

ಟ್ರಾಫಿಕ್ ಜಾಮ್: ಅರಮನೆಯ ಸುತ್ತಮುತ್ತಲ ಮಾರ್ಗದಲ್ಲಿ ನೂರಾರು ವಾಹನಗಳು ಸಂಚಾರವಿದ್ದರಿಂದ ಆಗಿಂದಾಗ್ಗೆ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರದಾಡುವಂತಾಯಿತು. ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ವಸ್ತು ಪ್ರದರ್ಶನದ ಬಳಿ ಸಾಲು ಸಾಲು ವಾಹನಗಳು ಒಂದೇ ಸಮನೆ ಬರುತ್ತಿದ್ದುದರಿಂದ ಜಾಮ್ ಆಗುತ್ತಿತ್ತು. ಕೆಲವು ಕಡೆ ಬಹು ಹೊತ್ತಿನ ತನಕ ಕಾದು ವಾಹನಗಳು ಮುಂದೆ ಸಾಗಬೇಕಾಯಿತು.

ಬೃಂದಾವನಕ್ಕೂ ಪ್ರವಾಸಿಗರ ಭೇಟಿ: ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಜನರು ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿ ಚಿಮ್ಮುವ ಕಾರಂಜಿ ನೋಡಿದರು. ದಾಸಪ್ಪ ಸರ್ಕಲ್ ಮಾರ್ಗವಾಗಿ ತೆರಳುತ್ತಿದ್ದ ಬಹುತೇಕ ವಾಹನಗಳು ಕೆಆರ್‌ಎಸ್‌ಗೆ ತಲುಪಿ ಬಣ್ಣಬಣ್ಣದ ದೀಪಾಲಂಕಾರ, ನವಿಲಿನಂತೆ ಗರಿಬಿಚ್ಚಿ ಕುಣಿಯುವ ನೀರಿನ ಕಾರಂಜಿ ಸೇರಿದಂತೆ ಇನ್ನಿತರ ಅಲಂಕೃತ ಉದ್ಯಾನವನ ನೋಡಿ ಖುಷಿಯಿಂದಲೇ ಹಿಂದಿರುಗಿದರು.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

7 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

7 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

8 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

9 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

10 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

11 hours ago