ಅರ್ಥಪೂರ್ಣವಾಗಿ ನಡೆದ ಮಿನಿ ದಸರಾ, ಗಮನ ಸೆಳೆದ ಪೊಲೀಸರ ಬನ್ನಿ ಪೂಜೆ
ಮಂಜು ಕೋಟೆ
ಎಚ್.ಡಿ.ಕೋಟೆ: ಪಟ್ಟಣದಲ್ಲಿ ಶನಿವಾರ ಶ್ರೀ ವರದರಾಜ ಸ್ವಾಮಿ, ಶ್ರೀದೇವಿ, ಭೂದೇವಿ ಮತ್ತು ಚಾಮುಂಡೇಶ್ವರಿ ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಮಿನಿ ದಸರಾ ಮತ್ತು ನವರಾತ್ರಿ ಉತ್ಸವ ಅರ್ಥಪೂರ್ಣವಾಗಿ ನೆರವೇರಿತು.
ಹೌಸಿಂಗ್ ಬೋರ್ಡ್‌ನಲ್ಲಿರುವ ಚಾಮುಂಡೇ ಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದೇವಿಗೆ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 3.30ರ ಸಂದರ್ಭದಲ್ಲಿ ಬೆಳ್ಳಿ ರಥದಲ್ಲಿ ಕೂರಿಸಿದ ಚಾಮುಂಡೇಶ್ವರಿ ಉತ್ಸವಮೂರ್ತಿಯೊಂದಿಗೆ ವಾದ್ಯಗೋಷ್ಠಿ, ಕಲಾತಂಡಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಮೊದಲನೇ ಮುಖ್ಯರಸ್ತೆಯಲ್ಲಿರುವ ಚೋಳರ ಕಾಲದ ವರದರಾಜಸ್ವಾಮಿ ದೇವಸ್ಥಾನದಲ್ಲಿ ಶ್ರೀ ವರದರಾಜಸ್ವಾಮಿ ಮತ್ತು ಭೂದೇವಿ, ಶ್ರೀದೇವಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಗೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಸಮಿತಿಯವರು ಚಾಲನೆ ನೀಡಿದರು.
ಇದಕ್ಕೂ ಮುನ್ನ ಸರ್ಕಲ್ ಇನ್‌ಸ್ಪೆಕ್ಟರ್ ಶಬೀರ್ ಹುಸೇನ್ ಸಬ್ ಇನ್ ಸೆಕ ಪ್ರಕಾಶ್ ಮತ್ತಿತರರು ಪೊಲೀಸ್ ಪರೇಡ್ ನೆರವೇರಿಸಿ, ಉತ್ಸವಮೂರ್ತಿ ಗಳಿಗೆ ಗೌರವ ಸಲ್ಲಿಸಿದರು. ಅನೇಕ ಕಲಾತಂಡಗಳು, ವಾದ್ಯಗೋಷ್ಠಿಗಳು, ಸ್ತಬ್ಧಚಿತ್ರಗಳೊಡನೆ ಚಾಮುಂಡೇಶ್ವರಿ ಮತ್ತು ವರದರಾಜಸ್ವಾಮಿ ಉತ್ಸವಮೂರ್ತಿಗಳ ಮೆರವಣಿಗೆ ಮೊದಲನೇ ಮುಖ್ಯ ರಸ್ತೆಯಿಂದ ಚಾಮುಂಡೇಶ್ವರಿ ದೇವಸ್ಥಾನದ ಬನ್ನಿಮರದವರೆಗೆ ನಡೆಯಿತು. ನಂತರ ಅಲ್ಲಿರುವ ಬನ್ನಿಮರಕ್ಕೆ ಪೊಲೀಸ್ ಇಲಾಖೆಯವರು ಪೊಲೀಸ್ ಪೂಜೆ ನೆರವೇರಿಸಿದರು. ಈ ಮೂಲಕ 9 ದಿನಗಳಿಂದ ವರದರಾಜಸ್ವಾಮಿ ಮತ್ತು ಚಾಮುಂಡೇಶ್ವರಿ, ಬೀರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ನವರಾತ್ರಿ ಮತ್ತು ವಿಜಯದಶಮಿಯ ದಸರಾಕ್ಕೆ ತೆರೆ ಬಿದ್ದಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಗಳ ಮುಖ್ಯಸ್ಥರಾದ ಬಿ.ಎಸ್.ರಂಗ ಅಯ್ಯಂಗಾರ್, ನಟರಾಜ್, ಡೇರಿ ಶ್ರೀಕಾಂತ್, ತಿರುಮಲಾಚಾರ್, ಡಿಶ್ ದೇವರಾಜ್, ಪೂರ್ಣೇಶ್, ಸತೀಶ್ ಆರಾಧ್ಯ, ಸೋಮಶೇಖರ್, ವಿನಯ್ ಭಜರಂಗಿ, ಶ್ರೀನಿವಾಸ್, ಪ್ರಮೋದ್, ನಾಗರಾಜ್ ಶೆಟ್ಟಿ, ಬ್ಯಾಂಕ್ ವೀರಪ್ಪ, ನಾಗಣ್ಣ, ರಮೇಶ್, ಕುಲುಮೆ ಜೈಶಂಕರ್, ದಿವಾಕರ, ಶಿವರಾಜ್, ಅಯ್ಯಂಗಾರ್ ಪ್ರಸಾದಿ, ಹೈರಿಗೆ ಮಾದೇಗೌಡ, ಆರಾಧ್ಯ, ಚಂದ್ರ ಮೌಳಿ, ಸತೀಶ, ನಾಗರಾಜು, ಗಣೇಶಾಚಾರ್, ಮೀನು ರಾಜಣ್ಣ, ಶಶಿ, ಮಂಜು ಕೋಟೆ, ಶ್ರೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಳೆಯಲ್ಲೂ ಜನರಿಂದ ವೀಕ್ಷಣೆ:
ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಸುರಿದ ವಿಪರೀತ ಮಳೆಯ ನಡುವೆಯೂ ಜನಸಾಮಾನ್ಯರು ವಿಜಯದಶಮಿ ಉತ್ಸವ, ಮಿನಿ ದಸರಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…
ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…
ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…
ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…
ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…
ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…