ಕಾಂಗೀರ ಬೋಪಣ್ಣ
ಸರ್ಕಾರಿ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ
ಸರ್ವೆ ನಕಾಶೆಯಲ್ಲಿ ೧೧ ಉಪರಸ್ತೆಗಳು ಪತ್ತೆ
ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯ ಆರಂಭ
ವಿರಾಜಪೇಟೆ: ಪಟ್ಟಣದ ಉಪರಸ್ತೆಗಳ ಒತ್ತುವರಿಯಿಂದ ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಸಂಚಾರ ಸಮಸ್ಯೆ ಉಂಟಾಗಿತ್ತು. ಇದೀಗ ಪಟ್ಟಣದ ೧೧ ಕಡೆಗಳಲ್ಲಿ ಇರುವ ಉಪರಸ್ತೆಗಳ ಒತ್ತುವರಿ ಪತ್ತೆಗೆ ಸರ್ವೆ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಒತ್ತುವರಿ ತೆರವುಗೊಳಿಸಿದಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ.
ವಿರಾಜಪೇಟೆ ಪಟ್ಟಣ ಎಂದರೆ ಅಭಿವೃದ್ಧಿ ವಂಚಿತ ಪಟ್ಟಣವೆಂದೇ ಗುರತಿಸಲ್ಪಟ್ಟಿದೆ. ಇದಕ್ಕೆ ಆಡಳಿತಾರೂಢ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯ ಜೊತೆಗೆ ಕೆಲವು ಸ್ವಾರ್ಥಪರರ ಅಡ್ಡಿಯೂ ಕಾರಣವಾಗಿದೆ. ಹೀಗಾಗಿ ಪಟ್ಟಣದಲ್ಲಿ ವಾಹನಗಳ ಒತ್ತಡ ತೀವ್ರವಾಗಿ ಹೆಚ್ಚಿದ್ದರೂ ರಸ್ತೆ ಅಗಲೀಕರಣ ಕಾರ್ಯ ವಿಳಂಬವಾಗುತ್ತಿದೆ.
ಈ ನಡುವೆ ಮುಖ್ಯರಸ್ತೆಯ ಒತ್ತಡವನ್ನು ತಗ್ಗಿಸಲು ಸಹಕಾರಿಯಾಗುವ ಉದ್ದೇಶದಿಂದ ಸರ್ವೆ ನಕಾಶೆಯಲ್ಲಿ ೧೧ ಉಪ ರಸ್ತೆಗಳು ಕಂಡುಬಂದಿದ್ದು, ಸಾರ್ವಜನಿಕರು ನೀಡಿದ ದೂರಿನಂತೆ ಸರ್ವೆ ಇಲಾಖೆ ಇದರ ಸರ್ವೆ ಕಾರ್ಯವನ್ನು ಆರಂಭಿಸಿದೆ.
ವಿರಾಜಪೇಟೆ ಪಟ್ಟಣದಲ್ಲಿ ಇರುವ ಮುಖ್ಯ ರಸ್ತೆಗಳು ರಾಜ್ಯ ಮತ್ತು ಅಂತಾರಾಜ್ಯ ಹೆದ್ದಾರಿಯಾಗಿವೆ.ಸುಣ್ಣದ ಬೀದಿ ರಸ್ತೆಯೊಂದನ್ನು ಬಿಟ್ಟರೆ ಪಟ್ಟಣದಲ್ಲಿ ಉಪ ರಸ್ತೆಗಳೇ ಮಂಗಮಾಯವಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಮುಖ್ಯರಸ್ತೆಯಲ್ಲಿ ಹೆಚ್ಚಾಗಿರುವ ವಾಹನಗಳ ಒತ್ತಡದ ಬಗ್ಗೆ ಜನರೇ ಅವಲೋಕನ ನಡೆಸಿದ ನಂತರ ಅಽಕೃತ ಉಪರಸ್ತೆಗಳು ಒತ್ತುವರಿಯಾಗಿರುವುದು ಬೆಳಕಿಗೆ ಬಂದಿವೆ.
ಗಡಿಯಾರ ಕಂಬದಿಂದ ದೊಡ್ಡಟ್ಟಿ ಚೌಕಿರೆಗೆ ೧೧ ಉಪ ರಸ್ತೆಗಳು ಸರ್ವೆ ನಕಾಶೆಯಲ್ಲಿ ಸ್ವಷ್ಟವಾಗಿ ಕಂಡುಬರುತ್ತಿವೆ. ಈ ಉಪರಸ್ತೆಗಳು ಸರ್ಕಾರಿ ಸ್ವತ್ತುಗಳಾಗಿವೆ. ಆದರೂ ಕೆಲವರು ಇದನ್ನು ಅತಿಕ್ರಮಿಸಿಕೊಂಡು ಮನೆ ಕಟ್ಟಿಕೊಂಡು ವಾಸವಿದ್ದಾರೆ. ಕ್ರಮ ಕೈಗೊಳ್ಳಬೇಕಾದವರು ಸ್ವಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ. ಈ ರಸ್ತೆ ಪುರಸಭೆಗೆ ಲಭ್ಯವಾದರೆ ನಿಯಮಾನು ಸಾರ ೮ ಅಡಿಗಳ ರಸ್ತೆಯನ್ನು ನಿರ್ಮಾಣ ಮಾಡಬಹುದು. ಇದರಿಂದ ಆಟೋ, ಬೈಕ್ ಮತ್ತಿತರ ವಾಹನಗಳ ಸಂಚಾರಕ್ಕೆ ಮುಖ್ಯ ರಸ್ತೆಯ ಅವಲಂಬನೆ ತಪ್ಪಲಿದೆ. ಈ ನಡುವೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪುರಸಭೆ ದೂರನ್ನು ಸರ್ವೆ ಇಲಾಖೆಗೆ ಕಳುಹಿಸಿದೆ. ಇಲಾಖೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದೆ.
ಏನೇ ಆದರೂ ಪುರಸಭೆ ಹಾಗೂ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿ ಸ್ಥಳವನ್ನು ತೆರವುಗೊಳಿಸಿ ಪಟ್ಟಣದಲ್ಲಿನ ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆ ನಿರ್ಮಿಸಿದರೆ ಬೆಳವಣಿಗೆ ಹೊಂದುತ್ತಿರುವ ಪಟ್ಟಣದಲ್ಲಿ ವಾಹನ ದಟ್ಟಣೆ ತಗ್ಗಿಸಲು ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪುರಸಭೆ ಆಡಳಿತ ಹಾಗೂ ಶಾಸಕರು ಈ ವಿಚಾರದಲ್ಲಿ ಇಚ್ಚಾಶಕ್ತಿ ತೋರ ಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
” ಅನೇಕ ಕಡೆ ಪುರಸಭೆಯ ಸ್ವತ್ತುಗಳು ಒತ್ತುವರಿಯಾಗಿವೆ. ಇದರಿಂದ ಅಭಿವೃದ್ಧಿಗೆ ಅಗತ್ಯ ಜಾಗ ದೊರಕುತ್ತಿಲ್ಲ. ಅದೇ ರೀತಿ ಪಟ್ಟಣದಲ್ಲಿ ಅಗತ್ಯ ಉಪ ರಸ್ತೆಗಳೂ ಇಲ್ಲ. ಇರುವ ಉಪರಸ್ತೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿದಲ್ಲಿ ವಾಹನದಟ್ಟಣೆ ಸಮಸ್ಯೆ ನಿವಾರಿಸಬಹುದಾಗಿದೆ. ಇನ್ನಾದರೂ ಸಂಬಂಧಪಟ್ಟವರು ಕ್ರಮ ವಹಿಸಿ ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಲಿ.”
ಮದನ್, ಸಾಮಾಜಿಕ ಕಾರ್ಯಕರ್ತ, ವಿರಾಜಪೇಟೆ
” ವಿರಾಜಪೇಟೆ ಪಟ್ಟಣದಲ್ಲಿರುವ ಉಪರಸ್ತೆಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಸರ್ವೆ ಅಽಕಾರಿಗಳು ದಿನಾಂಕ ನೀಡಿದಾಗ ಸಿಬ್ಬಂದಿಯನ್ನು ಕಳುಹಿಸಿ ಸಹಕಾರ ನೀಡಲಾಗುತ್ತಿದೆ. ಪಟ್ಟಣದಲ್ಲಿ ಉಪರಸ್ತೆಗಳು ಇರುವುದು ಗಮನಕ್ಕೆ ಬಂದಿದೆ. ವರದಿ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.”
ನಾಚಪ್ಪ, ಮುಖ್ಯಾಧಿಕಾರಿ, ವಿರಾಜಪೇಟೆ ಪುರಸಭೆ.
ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…
ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್…
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್ ಶಾಕ್ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.…
ಕೊಡಗು: ಶನಿವಾರಸಂತೆಯಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನಾಳೆ ಕೊಡಗಿನ ಕೆಲ ಪ್ರದೇಶಗಳಲ್ಲಿ…
ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…