Andolana originals

MCDCC results; ಎಂಸಿಡಿಸಿಸಿ ಫಲಿತಾಂಶ ; ಅಧಿಕಾರ ಅತಂತ್ರ

  • ಬ್ಯಾಂಕ್‌ನ 16 ಕ್ಷೇತ್ರಗಳಿಗೆ ಚುನಾವಣೆ
  • ಮೂರು ಕ್ಷೇತ್ರಗಳಿಗೆ ನಡೆಯದ ಚುನಾವಣೆ

ಮೈಸೂರು: ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ನವರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಸದ್ಯಕ್ಕೆ ಆಡಳಿತ ಅತಂತ್ರವಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿಯ 16 ಕ್ಷೇತ್ರ ಗಳಿದ್ದು, ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ. ಉಳಿದ 13 ಕ್ಷೇತ್ರಗಳಲ್ಲಿ ಯಳಂದೂರು ಕ್ಷೇತ್ರ ದಿಂದ ಜಯರಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 5, ಜಾ. ದಳ-ಬಿಜೆಪಿ ಬೆಂಬಲಿತರು 3, ಕೊಳ್ಳೇಗಾಲ- ಹನೂರು ಕ್ಷೇತ್ರದ ಅಭ್ಯರ್ಥಿಗಳು ತಲಾ 9 ಮತಗಳನ್ನು ಪಡೆದರೆ, ಎಚ್. ಡಿ. ಕೋಟೆಯಲ್ಲೂ ತಲಾ ಎಂಟು ಮತಗಳನ್ನು ಪಡೆದಿದ್ದು, ಈ ಕ್ಷೇತ್ರಗಳ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಫಲಿತಾಂಶ ಪ್ರಕಟವಾಗಿಲ್ಲ. ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಅತ್ಯಧಿಕ ಮತಗಳನ್ನು ಪಡೆದು ಗೆದ್ದರೂ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಫಲಿತಾಂಶ ಘೋಷಣೆ ಯಾಗದ ಹಿನ್ನೆಲೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ವಿಜಯದ ಸಂಭ್ರಮಕ್ಕೆ ಅಡ್ಡಿಯಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅವಧಿ ಪೂರ್ಣ ಗೊಂಡಿದ್ದರೂ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಕ ಮಾಡಿ ಹಿಂಬಾಗಿಲ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸಿತ್ತು.

ವಿಶೇಷವಾಗಿ ಈ ಬಾರಿ ಮೂವರು ಶಾಸಕರು, ಒಬ್ಬ ಮಾಜಿ ಶಾಸಕ, ಶಾಸಕರೊಬ್ಬರ ತಂದೆ, ಇಬ್ಬರು ಮಾಜಿ ಅಧ್ಯಕ್ಷರೇ ಕಣಕ್ಕಿಳಿದಿದ್ದರಿಂದಾಗಿ ಕಾಂಗ್ರೆಸ್ ಸುಲಭ ವಾಗಿ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂಬ ನಿರೀಕ್ಷೆ ಇತ್ತು.

ಆದರೆ, ಫಲಿತಾಂಶ ಹೊರಬಂದ ಬಳಿಕ ಸೂಕ್ಷ್ಮವಾಗಿ ನೋಡಿದರೆ ಕಾಂಗ್ರೆಸ್ ಪರವಾಗಿದ್ದ ಡೆಲಿಗೇಟ್ಸ್ ಆಂತರಿಕವಾಗಿ ಕೈಕೊಟ್ಟಿರುವುದರಿಂದ ಲೆಕ್ಕಾಚಾರ ತಲೆಕೆಳಗಾಗಿದೆ.

ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್ಸಿಗರು, ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿರುವ ಎಂಸಿಡಿಸಿಸಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಶಾಸಕ ಜಿ. ಡಿ. ಹರೀಶ್ ಗೌಡ ಅವರನ್ನು ಮಣಿಸಲು ತಂತ್ರಗಾರಿಕೆ ನಡೆಸಿದ್ದರು. ಆದರೆ, ಕಾಂಗ್ರೆಸ್ಸಿಗರು ನಡೆಸಿದ ಪ್ರಯತ್ನಗಳು ವಿಫಲವಾಗುವ ಮೂಲಕ ಚುನಾವಣೆಯ ಫಲಿತಾಂಶ ಅತಂತ್ರವಾಗಿದೆ.

ಗೆದ್ದು ಬೀಗಿದ ಪ್ರಮುಖರು
ಹುಣಸೂರು ಕ್ಷೇತ್ರ : ಶಾಸಕ ಜಿ.ಡಿ.ಹರೀಶ್ ಗೌಡ
ಗುಂಡ್ಲುಪೇಟೆ ಕ್ಷೇತ್ರ : ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
ಚಾಮರಾಜನಗರ ಕ್ಷೇತ್ರ : ಶಾಸಕ ಸಿ.ಪುಟ್ಟರಂಗಶೆಟ್ಟಿ
ಪಿರಿಯಾಪಟ್ಟಣ ಕ್ಷೇತ್ರ : ಲೋಕೇಶ್
ಕೆ.ಆರ್.ನಗರ ಕ್ಷೇತ್ರ : ದೊಡ್ಡ ಸ್ವಾಮೇಗೌಡ
ತಿ.ನರಸೀಪುರ ಕ್ಷೇತ್ರ : ರಾಮೇಗೌಡ
ನಂಜನಗೂಡು ಕ್ಷೇತ್ರ : ಸದಾನಂದ
ಮೈಸೂರು ಕ್ಷೇತ್ರ : ಎಂ.  ಕೆಂಚಪ್ಪ
ಯಳಂದೂರು ಕ್ಷೇತ್ರ : ಜಯರಾಮ್ (ಅವಿರೋಧ)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸದೆ ಸಹಕಾರಿ ನಿಯಮಗಳನ್ನೇ ಗಾಳಿಗೆ ತೂರಿ, ಜನತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಕೈ ತಂತ್ರ ನಡೆಸಿ, ಬ್ಯಾಂಕ್‌ನ ಚುಕ್ಕಾಣಿ ಹಿಡಿಯಲು ಮುಂದಾಗಿರುವುದು ದುರ್ದೈವದ ಸಂಗತಿಯಾಗಿದೆ. ಇದಕ್ಕೆ ಸಹಕಾರಿಗಳು ಈ ಚುನಾವಣೆಯ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ.
-ಜಿ. ಡಿ. ಹರೀಶ್ ಗೌಡ, ಮಾಜಿ ಅಧ್ಯಕ್ಷರು, ಎಂಸಿಡಿಸಿಸಿ ಬ್ಯಾಂಕ್

ಅಧಿಕ ಮತಗಳಿಂದ ಗೆಲ್ಲುವ ನಿರೀಕ್ಷೆ ಹೊಂದಿದ್ದೆ. ಸಮಬಲ ಆಗುವ ನಿರೀಕ್ಷೆ ಇರಲಿಲ್ಲ. ಜಾತಿ ವ್ಯವಸ್ಥೆ ಮತ್ತಿತರ ಕಾರಣಗಳಿಂದ ನಮಗೆ ಅಂದುಕೊಂಡಷ್ಟು ಮತಗಳು ಬಂದಿಲ್ಲ ಎನಿಸುತ್ತದೆ. ಒಂದು ಮತ ನಮ್ಮ ಪರವಾಗಿ ಬೀಳುವ ನಿರೀಕ್ಷೆ ಇರುವುದರಿಂದ ಗೆಲ್ಲುವ ವಿಶ್ವಾಸವಿದೆ.
-ಅನಿಲ್ ಚಿಕ್ಕಮಾದು, ಶಾಸಕರು

ನಾನೊಬ್ಬ ಮಾಜಿ ಸಚಿವ ಹಾಗೂ ಹಾಲಿ ಶಾಸಕನಾಗಿದ್ದರೂ ಕ್ಷೇತ್ರದಲ್ಲಿ ಒಂದು ಮತದ ಅಂತರದಿಂದ ಗೆದ್ದಿರುವುದು ನನ್ನ ಗೆಲುವಲ್ಲ.
-ಸಿ. ಪುಟ್ಟರಂಗಶೆಟ್ಟಿ, ಶಾಸಕ

ಸೋಲುಂಡ ಪ್ರಮುಖರು
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಎಂಎಲ್‌ಸಿ ಎಚ್. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ, ಕಾಂಗ್ರೆಸ್ ಮುಖಂಡ ಎಚ್. ವಿ. ರಾಜೀವ್

ಸಮಬಲದ ಕಾದಾಟ
ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆ ಜಿದ್ದಾಜಿದ್ದಿನ ಕದನವಾಗಿತ್ತು. ಇದಕ್ಕೆ ಪೂರಕವೆಂಬಂತೆ ಎಚ್. ಡಿ. ಕೋಟೆ ಹಾಗೂ ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಸಮಬಲದ ಫಲಿತಾಂಶ ಬಂದಿದೆ.

ಆಂದೋಲನ ಡೆಸ್ಕ್

Recent Posts

ದುರಂದರ್ ದರ್ಬಾರ್….. ಮರಳಿ ಟ್ರ್ಯಾಕ್ ಗೆ ಬಂತು ಬಾಲಿವುಡ್.?

ಮುಂಬೈ : ಸಾಲು ಸಾಲು ಸೋಲುಗಳಿಂದ ನೆಲಕಚ್ಚಿದ್ದ ಬಾಲಿವುಡ್ ಇಂಡಸ್ಟ್ರಿಯ ಭವಿಷ್ಯವನ್ನೇ ದುರಂದರ ಸಿನಿಮಾ ಬದಲಿಸಿದೆ. ರಣವೀರ್ ಸಿಂಗ್ ನಟನೆಯ…

6 mins ago

ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ

ಗುಂಡ್ಲುಪೇಟೆ : ತಾಲ್ಲೂಕಿನ ಬಂಡೀಪುರ ಅರಣ್ಯ ಇಲಾಖೆಯ ಮರಳಳ್ಳ ಕ್ಯಾಂಪ್ ಬಳಿ ಕರ್ತವ್ಯ ನಿರ್ವಹಿಸುತಿದ್ದ ಸಣ್ಣಹೈದ( ೫೫) ಹುಲಿ ದಾಳಿಗೆ…

26 mins ago

ಕಾರವಾರದ ಕದಂಬ ನೌಕನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

ಬೆಂಗಳೂರು‌ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್…

60 mins ago

ಲೋಕ್ ಅದಾಲತ್‌ನಲ್ಲಿ 14,850 ಪ್ರಕರಣ ಇತ್ಯರ್ಥ : ಒಂದಾದ ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದ 6 ದಂಪತಿಗಳು

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 14,850 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,…

1 hour ago

ಜ.5ರಿಂದ ಉದ್ಯೋಗ ಖಾತ್ರಿ ಯೋಜನೆ ಬಚಾವ್‌ ಆಂದೋಲನ : ಸಿಎಂ

ಹೊಸದಿಲ್ಲಿ : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ_ ಜಿ ರಾಮ್ _ ಜಿ ಎಂದು…

2 hours ago

ಇನ್ಮುಂದೆ ಭೀಮನ ಹತ್ತಿರ ಹೋಗಿ ವೀಡಿಯೋ, ಫೋಟೋ ತೆಗೆದರೆ ಬೀಳುತ್ತೆ ಕೇಸ್‌

ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು…

3 hours ago