Andolana originals

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ

* ಜಿ.ತಂಗಂ ಗೋಪಿನಾಥಂ

ಮೈಸೂರು: ಮರಕ್ಕೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ ಅಭಿಮನ್ಯು.. ಮಾವುತನ ಕಡೆ ಮುಖ ಮಾಡಿ ಘೀಳಿಡುತ್ತಿದ್ದ ಭೀಮ.. ಪಕ್ಕದಲ್ಲೇ ಹಾದು ಹೋಗುತ್ತಿದ್ದ ರೈಲನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಗೋಪಿ ಮತ್ತು ರೋಹಿತ್.. ದಣಿವಾರಿಸಿ ಕೊಳ್ಳುತ್ತಿದ್ದ ಧನಂಜಯ.. ಫೋಟೊಗೆ ಪೋಸ್ ಕೊಡುತ್ತಿದ್ದ ಕಂಜನ್.. ಎಲ್ಲವನ್ನೂ ಗಮನಿಸುತ್ತಿದ್ದ ಏಕಲವ್ಯ..! ಇದು ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಮೊದಲ ತಂಡದ ಗಜಪಡೆ ಗುರುವಾರ ಅರಣ್ಯ ಭವನದ ಆವರಣದಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ಸುಂದರ ದೃಶ್ಯಗಳು.

ಬುಧವಾರವಷ್ಟೇ ಹುಣಸೂರು ತಾಲ್ಲೂಕಿನ ನಾಗರ ಹೊಳೆರಾಷ್ಟ್ರೀಯ ಉದ್ಯಾನವನದವೀರನಹೊಸಹಳ್ಳಿಯಿಂದ ಗಜಪಯಣ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಲಾರಿಯಲ್ಲಿ ಬಂದ 9 ಆನೆಗಳು ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ಠಿಕಾಣಿ ಹೂಡಿದ್ದು, ಬಹುದೂರದಿಂದ ಪ್ರಯಾಣ ಮಾಡಿದ್ದ ಆನೆಗಳು ಬೆಳಗಿನ ಸ್ನಾನ ಮುಗಿಸಿ ಹಸಿ ಹುಲ್ಲು, ಕಾಯಿ ಬೆಲ್ಲ ಮೆಲ್ಲುತ್ತಾ ಸೊಂಡಿಲು ಬೀಸಿ ರಿಲ್ಯಾಕ್ಸ್ ಮೂಡ್‌ ಗೆ ಜಾರಿದ್ದವು.

ಮಾವುತ, ಕಾವಾಡಿಗರು ತಮ್ಮ ತಮ್ಮ ಆನೆಗಳಿಗೆ ನೀರು ಕುಡಿಸಿ, ಹುಲ್ಲು ಹಾಕುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 9 ಆನೆಗಳ ಮಾವುತ, ಕಾವಾಡಿಗರು, ಪ್ರತಿ ಆನೆ ಯೊಂದಿಗೆ ಬಂದಿರುವ ಸಹಾಯಕರು ಅರಣ್ಯ ಇಲಾಖೆ ನೀಡಿ ರುವ ನಿವೇಶನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗಾಗ ಎದ್ದು ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದರ

ನಿದ್ದೆಗೆ ಜಾರಿದ್ದ ‘ಅಭಿಮನ್ಯು’!: ಗಜಪಡೆಗಳ ನಾಯಕನೆಂದೇ ಗುರುತಿಸಿಕೊಂಡಿರುವ ಅಂಬಾರಿ ಆನೆ ಅಭಿಮನ್ಯು ಆನೆಯನ್ನು ಅರಣ್ಯ ಭವನ ಆವರಣದ ಮೂಲೆಯಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ ಹೆಣ್ಣಾನೆಗಳಾದ ವರಲಕ್ಷ್ಮೀ ಹಾಗೂ ಲಕ್ಷ್ಮೀ ಆನೆಗಳನ್ನು ಒಂದೊಂದು ಕಡೆ ಕಟ್ಟಲಾಗಿತ್ತು. ಅಭಿಮನ್ಯು ಮರಗಳಿಗೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ್ದ. ಇನ್ನು ಎರಡನೇ ಬಾರಿ ದಸರಾದಲ್ಲಿ ಭಾಗಿಯಾಗಲು ಬಂದಿರುವ ದುಬಾರೆ ಶಿಬಿರದ ‘ಕಂಜನ್’ ಆನೆ ಶಾಂತ ಸ್ವರೂಪಿಯಾಗಿ ತನ್ನನ್ನು ನೋಡಲು ಬಂದವರೊಂದಿಗೆ ಫೋಟೋಗೆ ಪೋಸ್ ಕೊಡುತ್ತಿದ್ದನು.

ಜನರ ನಡೆ ಗಜಪಡೆಯ ಕಡೆ…: ಅರಣ್ಯ ಭವನದೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತಾದರೂ ಅರಣ್ಯ ಭವನದ ಆವರಣ ಶನಿವಾರ ಮೃಗಾಲಯವಾಗಿ ಮಾರ್ಪಟಿತ್ತು. ಗಜಪಡೆಯನ್ನು ಕಣ್ಣುಂಬಿಕೊಳ್ಳಲು ಜನರು ಅನ್ಯ ಮಾರ್ಗದಿಂದ ಒಳ ಬಂದು ಅಂಬಾರಿ ಆನೆ ಅಭಿಮನ್ಯು, ಹೊಸ ಆನೆ ಏಕಲವ್ಯ, ಭೀಮ, ರೋಹಿತ್, ಗೋಪಿ, ಕಂಜನ್, ಧನಂಜಯ, ಲಕ್ಷ್ಮೀ, ವರಲಕ್ಷ್ಮೀ ಆನೆಗಳನ್ನು ಹತ್ತಿರದಿಂದ ವೀಕ್ಷಿಸಿ ಖುಷಿಪಟ್ಟರು.

ಎಲ್ಲರ ಚಿತ್ತ ‘ಏಕಲವ್ಯ’ನತ್ತ…: ಮೊದಲ ಬಾರಿ ದಸರೆಯಲ್ಲಿ ಭಾಗವಹಿಸುತ್ತಿರುವ ಮತ್ತಿಗೋಡು ಶಿಬಿರದ 39 ವರ್ಷದ ಆನೆ ಏಕಲವ್ಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆನೆಗಳನ್ನು ನೋಡಲು ಬಂದವರು ‘ಏಕಲವ್ಯ’ ಆನೆ ಯಾವುದು ಎಂದು ಮಾವುತ, ಕಾವಾಡಿಗರಲ್ಲಿ ವಿಚಾರಿಸುತ್ತಿದ್ದರು. ಏಕಲವ್ಯ ಶಾಂತ ಸ್ವರೂಪಿಯಾಗಿ ಹುಲ್ಲು ಮೇಯುತ್ತಾ ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದ.

ಕೋಟ್ಸ್‌))

ಬೆಳಿಗ್ಗೆ ಆನೆಗಳಿಗೆ ಹಸಿ ಹುಲ್ಲು, ಒಣ ಹುಲ್ಲು, ಆಲದ ಸೊಪ್ಪು ನೀಡ ಲಾಗಿದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ವಾತಾವರಣಕ್ಕೆ ಒಗ್ಗಿ ಕೊಳ್ಳುತ್ತಿವೆ ಆ.23ರಂದು ದಸರಾ ಆನೆಗಳು ಅರಮನೆ ಪ್ರವೇಶ ಮಾಡಲಿವೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್.

ಆಂದೋಲನ ಡೆಸ್ಕ್

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

27 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

33 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

42 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago