Andolana originals

ಒಣಗಿದ ಮರ; ʻದೂರು ಬಂದರೆ ತೆರವಿಗೆ ಕ್ರಮ’

‘ಆಂದೋಲನ’ ಸಂದರ್ಶನದಲ್ಲಿ ಡಿಸಿಎ- ಡಾ. ಕೆ. ಎನ್. ಬಸವರಾಜು ಅಭಯ

ಸಾಲೋಮನ್
ಮೈಸೂರು: ‘ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡೋಕ್ಕೆ ಹೋದ ಹಾಗೆ. . . ’ ಇತ್ತೀಚೆಗೆ ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಬೃಹತ್ ಮರವೊಂದು ಆಟೋಗಳ ಮೇಲೆ ಬಿದ್ದು, ವಾಹನಗಳು ಜಖಂ ಆದವು,

ಈ ಘಟನೆ ಸಂಭವಿಸುತ್ತಿದ್ದಂತೆ ಸಾರ್ವಜನಿಕರು, ‘ಅಯ್ಯೋ ರಸ್ತೆ ಬದಿಯಲ್ಲಿ ಇಂಥ ಹಲವಾರು ಮರಗಳು ಒಣಗಿ ನಿಂತು ಟೊಳ್ಳಾಗಿವೆ. ಅವು ಕೂಡ ಹೀಗೆ ಯಾರ ಮೇಲಾದರೂ ಬಿದ್ದರೆ ಏನು ಗತಿ? ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆಯವರು ಏಕೆ ತೆರವು ಮಾಡುತ್ತಿಲ್ಲ? ’ ಎಂಬ ಪ್ರಶ್ನೆ ಕೇಳಿಬರುತ್ತಿರುವ ಹಿನ್ನೆಲೆ ಯಲ್ಲಿ ಡಿಸಿಎ- ಡಾ. ಕೆ. ಎನ್. ಬಸವರಾಜು ಮೇಲಿನ ಒಂದು ನಾಣ್ಣುಡಿಯನ್ನು ಹೇಳಿದರು.

ಒಣಗಿದ ಮರಗಳ ಫೋಟೊ ಕಳುಹಿಸಲು ‘ಒಣ ಮರ ಜನ ಹೈರಾಣ’ ಶೀರ್ಷಿಕೆಯಡಿ ‘ಆಂದೋಲನ’ ನೀಡಿದ ಕರೆಗೆ ಸಾರ್ವಜನಿಕರ ಸ್ಪಂದನೆ ಹಿನ್ನೆಲೆಯಲ್ಲಿ, ಪತ್ರಿಕೆಯು ಅಪಾಯಕಾರಿ ಹಾಗೂ ಒಣಮರಗಳ ತೆರವಿನ ಬಗ್ಗೆ ಡಿಸಿಎ- ಬಸವರಾಜು ಅವರನ್ನು ಸಂದರ್ಶನ ಮಾಡಿದ್ದು, ಅದರ ಮುಖ್ಯಾಂಶಗಳು ಹೀಗಿದೆ.

ಆಂದೋಲನ: ಅಪಾಯಕಾರಿ ಮರಗಳಿದ್ದರೆ ಅವುಗಳ ತೆರವಿಗೆ ತೆಗೆದುಕೊಳ್ಳುವ ಕ್ರಮಗಳೇನು?
ಬಸವರಾಜು: ಒಂದು ಮರದಿಂದ ತಮಗೆ ಅಪಾಯವಿದೆ ಎನ್ನುವವರು, ಅದರ ಬಗ್ಗೆ ಮೊದಲು ಪಾಲಿಕೆಗೆ ದೂರು ನೀಡಬೇಕು. ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ಅವರು ಅರಣ್ಯ ಇಲಾಖೆಗೆ ಮರ ತೆರವು ಮಾಡಲು ಅನುಮತಿ ಕೋರುತ್ತಾರೆ. ಅನುಮತಿ ನೀಡುವ ಮುನ್ನ ಆ ಮರಕ್ಕೆ ಬೆಲೆ ನಿಗದಿ ಮಾಡಿ ಇಂತಿಷ್ಟು ಬೆಲೆಗೆ ಹರಾಜು ಮಾಡಿ ತೆರವು ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ನೀಡುತ್ತೇವೆ. ಆನಂತರ ಪಾಲಿಕೆ ಅದನ್ನು ತೆರವು ಮಾಡುತ್ತದೆ.

ಆಂದೋಲನ: ಹರಾಜಿನ ಬೆಲೆ ದುಬಾರಿ ಆಗಿದ್ದು, ಜನರು ಖರೀದಿಸಲು ಮುಂದೆ ಬರುತ್ತಿಲ್ಲ ಎಂಬ ಆರೋಪ ಇದೆಯೆಲ್ಲಾ?

ಬಸವರಾಜು: ಹರಾಜಿಗೆ ಬೆಲೆ ನಿಗದಿಪಡಿಸಲು ನನಗೆ ಅಧಿಕಾರವಿಲ್ಲ. ಪ್ರತಿಯೊಂದು ಮರಕ್ಕೂ ಸರ್ಕಾರ ಇಂತಿಷ್ಟು ಬೆಲೆ ಎಂದು ಮೊದಲೇ ನಿರ್ಧರಿಸಿ ಸೂಚನೆ ನೀಡಿರುತ್ತದೆ. ಅದರ ಆಧಾರದ ಮೇಲೆ ನಾವೂ ಸೂಚಿಸುತ್ತೇವೆ. ಸಾರ್ವಜನಿಕರಿಂದ ದೂರು ಬಂದ ನಂತರವೇ ಈವೆಲ್ಲಾ ನಡೆಯುವುದು. ಇಂಥದ್ದೇ ಮರ ಎಂದು ದೂರು ನೀಡಿದರೆ ಆ ಬಗ್ಗೆ ನಿರ್ದಿಷ್ಟವಾದ ಕ್ರಮ ತೆಗೆದುಕೊಳ್ಳಬಹುದು. ಒಂದೊಂದು ಕಡೆ ಬೇರೆ ಬೇರೆ ಕಾರಣಕ್ಕಾಗಿ ಮರ ತೆರವು ಮಾಡಿಸುತ್ತಾರೆ. ದೂರು ಕೊಟ್ಟರೆ ಖಂಡಿತ ತೆರವಿಗೆ ಅನುಮತಿ ಕೊಡುತ್ತೇವೆ. ಕೆಲವೊಮ್ಮೆ ಹರಾಜಿಗೆ ಜನ ಬರುವುದಿಲ್ಲ, ಕೆಲವು ವೇಳೆ ಹರಾಜು ಆಗಿದ್ದರೂ ತೆರವು ಆಗಿರುವುದಿಲ್ಲ.

ಆಂದೋಲನ: ಟೊಳ್ಳಾದ, ಒಣಗಿರುವ ಮರಗಳು ಅನೇಕ ಇವೆ, ತೆರವು ವಿಳಂಬವೇಕೆ?
ಬಸವರಾಜು: ಯಾವುದೇ ಮರ ಆಗಿದ್ದರೂ ತೆರವು ಮಾಡಲು ಅರಣ್ಯ ಇಲಾಖೆಯ ಅನುಮತಿ ಬೇಕೇ ಬೇಕು. ತೆರವಿಗೆ ಮೊದಲು ದೂರು ದಾಖಲಾಗಬೇಕು. ಆಗ ಮಾತ್ರ ಸಾಧ್ಯ. ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನಗಳಲ್ಲಿ, ರಸ್ತೆ ಬದಿಯಲ್ಲಿ ಇದ್ದರೆ ಪಾಲಿಕೆಯವರು ದೂರು ನೀಡಬಹುದು. ಆಗ ಖಂಡಿತ ತೆರವು ಮಾಡಲು ಅನುಮತಿ ನೀಡುತ್ತೇವೆ.

ಆಂದೋಲನ: ಮರ ತೆರವು ಮಾಡಲು ಪಾಲಿಕೆಯಲ್ಲಿ ಸುಮಾರು ೬೦ಕ್ಕಿಂತ ಹೆಚ್ಚು ದೂರುಗಳು ದಾಖಲಾಗಿವೆ. ಅವುಗಳನ್ನು ಅರಣ್ಯ ಇಲಾಖೆಗೂ ಕಳುಹಿಸಿಕೊಡಲಾಗಿದೆ? ಆದರೆ ತೆರವು ಮಾಡಲು ಹರಾಜಿನಲ್ಲಿ ದುಬಾರಿ ಬೆಲೆ ಗೊತ್ತು ಮಾಡಿರುವುದರಿಂದ ಹರಾಜಿನಲ್ಲಿ ಯಾರೂ ಭಾಗವಹಿಸದೆ ಅಪಾಯಕಾರಿ ಮರಗಳ ತೆರವು ಸಾಧ್ಯವಾಗಿಲ್ಲ, ಮುಂದಿನ ಕ್ರಮವೇನು?
ಬಸವರಾಜು: ಇಂತಿಂಥ ಮರಕ್ಕೆ ಇಂತಿಷ್ಟೇ ಹರಾಜು ಹಣ ಎಂದು ಸರ್ಕಾರ ನಿಗದಿ ಮಾಡಿರುತ್ತದೆ ಎಂದು ಮೊದಲೇ ಹೇಳಿದ್ದೇನೆ. ಪಾಲಿಕೆಯವರು ಇಂಥದ್ದೇ ಮರ ಅಪಾಯಕಾರಿ ಎಂದು ಹೇಳಿದರೆ. ಯಾವ ರೀತಿ ಕ್ರಮ ಜರುಗಿಸಬಹುದು ಎಂದು ತೀರ್ಮಾನಿಸಿ ಕ್ರಮ ಕೈಗೊಳ್ಳಬಹುದು.

 

‘ಮರ ತೆರವಿಗೆ ಅನುಮತಿ ನೀಡಲು ಮಾತ್ರ ಅಧಿಕಾರ’
ಆಂದೋಲನ: ಮರ ಬಿದ್ದು ನಷ್ಟ ಅನುಭವಿಸುವವರು ಹಾಗೂ ಜೀವ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರವಿದೆಯೇ? ಯಾರು ಕೊಡುತ್ತಾರೆ?
ಬಸವರಾಜು: ಮರ ತೆರವು ಮಾಡುವುದಕ್ಕೆ, ಅನುಮತಿ ಕೊಡುವುದಕ್ಕೆ ಮಾತ್ರ ನನಗೆ ಅಽಕಾರ ಇರುವುದು. ಪರಿಹಾರ ಕೊಡುವುದಕ್ಕೆ ಇಲ್ಲ. ಅವರು ಕ್ಲೈಮ್ ಮಾಡಬಹುದು. ಸರ್ಕಾರ ನಿರ್ಧಾರ ಮಾಡುತ್ತದೆ. ಪಾಲಿಕೆ ಏನು ಮಾಡುತ್ತದೋ ನನಗೆ ಗೊತ್ತಿಲ್ಲ. ಅದೇನೇ ಇರಲಿ ದೂರು ಹಾಗೂ ಮನವಿ ಸಲ್ಲಿಸಿದಾಗ ಮಾತ್ರ ಆ ಬಗ್ಗೆ ನಮ್ಮಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ ಪಿಎಸ್‌ಎಲ್‌ವಿ ರಾಕೆಟ್‌

ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್‌ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.…

34 mins ago

ವಾಯುಭಾರ ಕುಸಿತ: ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

1 hour ago

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ಆತಂಕ

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಗುರುಪುರ ಸಮೀಪದ ಹೊಸೂರು ಗೇಟ್ ಬಳಿ ಹುಲಿ ದಾಳಿ…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ‘ಅರಸು, ಸಿದ್ದರಾಮಯ್ಯ ಎದುರಿಸಿದ ಸವಾಲುಗಳು ವಿಭಿನ್ನ’

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…

5 hours ago

ಕೇರಳ ಸರ್ಕಾರ ಭಾಷಾ ಸೌಹಾರ್ದತೆ ಕಾಪಾಡಲಿ

ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…

5 hours ago

ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆಯಲು ಹಿಂದೇಟು

ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ  ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…

5 hours ago