Andolana originals

ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಸೆರೆಗೆ ಡ್ರೋನ್ ಕಾರ್ಯಾಚರಣೆ

ಕೆ.ಬಿ.ರಮೇಶನಾಯಕ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾರಾಟ, ಸೇವನೆಯನ್ನು ಬುಡಸಮೇತ ಕಿತ್ತು ಹಾಕುವುದರ ಜತೆಗೆ, ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯದ ಮೇಲೆ ಕಣ್ಣಿಡಲು ಇನ್ನುಮುಂದೆ ಜಿಪಿಎಸ್ ಆಧಾರಿತ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು ಸಜ್ಜಾಗಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಮುಖ ಸಮಾರಂಭ, ಪ್ರತಿಭಟನೆಗಳ ವೇಳೆ ಬಳಕೆಯಾಗುತ್ತಿದ್ದ ಡ್ರೋನ್ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಎನ್ ಡಿಪಿಎಸ್ ಸೇರಿದಂತೆ ಇನ್ನಿತರ ಕೃತ್ಯಗಳನ್ನು ತಡೆಗಟ್ಟಲು ಪ್ರಯೋಗಿಸಲಾಗುತ್ತದೆ. ಇದರಿಂದಾಗಿ ನಗರದ ಯಾವುದೇ ಮೂಲೆಗಳು, ಗಲ್ಲಿಗಳಲ್ಲಿ ಸದ್ದಿಲ್ಲದೆ ಕೃತ್ಯಗಳನ್ನು ಎಸಗುವ ವ್ಯಕ್ತಿಗಳು ಪೊಲೀಸರ ಕಣ್ತಪ್ಪಿಸಿ ನುಣುಚಿಕೊಳ್ಳದಂತೆ ನೋಡಿ ಕೊಳ್ಳಬಹುದಾದ ನಡೆ ಅನುಸರಿಸುತ್ತಿರುವುದು ವಿಶೇಷವಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರು ಪ್ರಶಾಂತ ವಾತಾವರಣಕ್ಕೆ ಹೆಸರಾಗಿತ್ತು. ಅದರಲ್ಲೂ ದೇಶ-ವಿದೇಶಗಳ ಪ್ರವಾಸಿಗರುಹೆಚ್ಚಿನ ಮಟ್ಟದಲ್ಲಿ ಮೈಸೂರಿನ ಕಡೆಗೆ ಮುಖ ಮಾಡುತ್ತಿರುವುದರಿಂದ ಮೈಸೂರಿನ ಹೆಸರು ಹದಗೆಡದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಮಹಾರಾಷ್ಟ್ರ ಪೊಲೀಸರು ಕಳೆದ ಎರಡು, ಮೂರು ತಿಂಗಳಲ್ಲಿ ದಾಳಿ ನಡೆಸಿ ಡ್ರಗ್ಸ್ ತಯಾರಿಕೆ ಮಾಡುತ್ತಿದ್ದ -ಕ್ಟರಿಯನ್ನು ಪತ್ತೆ ಹಚ್ಚಿದ್ದರು. ಇದಲ್ಲದೆ, ಮೈಸೂರಿನಿಂದಲೇ ಕೆಲವು ಕಡೆಗೆ ಡ್ರಗ್ಸ್ ಸರಬರಾಜು ಆಗುತ್ತಿರುವುದರ ಬಗ್ಗೆ ಶಂಕೆಯಿಂದ ತನಿಖೆ ನಡೆಸುತ್ತಿದ್ದಾರೆ.

ಹೀಗಾಗಿ, ಮೈಸೂರು ನಗರ ಪೊಲೀಸರು ಎಚ್ಚೆತ್ತುಕೊಂಡು ಮೈಸೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಡ್ರಗ್ಸ್ ವಿಮುಕ್ತಿ ಅಭಿಯಾನ ಶುರು ಮಾಡಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಸಮಾಜ ಘಾತುಕ ಕೃತ್ಯಗಳನ್ನು ತಡೆಯಲು ವಿನೂತನ ತಂತ್ರಗಾರಿಕೆ ಮೊರೆ ಹೋಗಿದ್ದಾರೆ.

ಡ್ರೋನ್ ಕಾರ್ಯಾಚರಣೆ: ಡ್ರಗ್ಸ್, ಗಾಂಜಾ ಮಾರಾಟ, ಸೇವನೆ ಪ್ರಕರಣಗಳು ಹೆಚ್ಚಾಗಿ ನಡೆಯುವ ಸ್ಥಳಗಳು, ಬಡಾವಣೆಗಳನ್ನು ಆಯ್ಕೆ ಮಾಡಿಕೊಂಡು ಡ್ರೋನ್ ಕಾರ್ಯಾಚರಣೆ ನಡೆಸಿ ಹದ್ದಿನ ಕಣ್ಣಿಡಲು ಪೊಲೀಸರು ಮುಂದಾಗಿದ್ದಾರೆ. ಕಾರಾಗೃಹದ ಹಿಂಭಾಗದಲ್ಲಿರುವ ಖಬರ್‌ಸ್ತಾನದ ಕಾಂಪೌಂಡ್‌ನಿಂದ ಜೈಲಿನ ಒಳಗೆ ಗಾಂಜಾ, ಡ್ರಗ್ಸ್ಪೊಟ್ಟಣಗಳನ್ನು ಎಸೆಯುತ್ತಿರುವುದರ ಬಗ್ಗೆ ದೂರು ಬಂದಿರುವುದರಿಂದ ಗಸ್ತು ಮಾಡುವುದರ ಜತೆಗೆ, ೭೦ ಎಕರೆ ಪ್ರದೇಶವಿರುವ ಖಬರ್‌ಸ್ತಾನದಲ್ಲಿ ಓಡಾಡುವ ಯುವಕರನ್ನು ಸೆರೆ ಹಿಡಿಯುವಂತೆ ಸೂಚನೆ ನೀಡಲಾಗಿದೆ.

ಮಂಡಿ ಠಾಣೆ ವ್ಯಾಪ್ತಿಯ ಕೆಎಂಡಿಕೆ ರಸ್ತೆ, ಸುನ್ನಿಚೌಕ, ಕೈಲಾಸಪುರಂ ಮೊದಲಾದ ಕಡೆಗಳಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಕಾರ್ಯಾ ಚರಣೆ ಪರೀಕ್ಷೆ ನಡೆಸಲಾಯಿತು. ನರಸಿಂಹರಾಜ ವಿಭಾಗದ ಎಸಿಪಿ ಮ್ಯಾಥ್ಯೂ ಥಾಮಸ್, ಇನ್‌ಸ್ಪೆಕ್ಟರ್ ಆರ್.ದಿವಾಕರ್ ಅವರ ನೇತೃತ್ವದಲ್ಲಿ ವಿವಿಧ ಪ್ರದೇಶಗಳಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಯಿತು.

ಏನೆಲ್ಲ ಸಹಕಾರಿ? ನಗರದ ಕೆಲವು ಪ್ರದೇಶಗಳಲ್ಲಿ ಪೊಲೀಸರ ವಾಹನಗಳು ಓಡಾಡಲು ಸಾಧ್ಯವಾಗದ ರಸ್ತೆಗಳು, ಗಲ್ಲಿಗಳು ಇದ್ದರೆ, ಕೆಲವು ಕಡೆಗಳಲ್ಲಿ ಪೊಲೀಸರು ಸಿವಿಲ್ ಡ್ರೆಸ್ ಹಾಕಿಕೊಂಡು ಕಾರ್ಯಾಚರಣೆ ಮಾಡಲಾಗದ ಸನ್ನಿವೇಶ ಇದೆ. ಅಂತಹ ಸಂದರ್ಭದಲ್ಲಿ ಡ್ರೋನ್  ಕಾರ್ಯಾ ಚರಣೆ ನಡೆಸಲಾಗುತ್ತದೆ.

ಡ್ರೋನ್‌ನಿಂದ ೫೦೦ ಮೀಟರ್ ಕಾರ್ಯಾಚರಣೆ ನಡೆಸಿ ಎಲ್ಲವನ್ನು ಸೆರೆ ಹಿಡಿಯಲಾಗುತ್ತದೆ. ೫೦೦ ಮೀಟರ್ ದೂರ ಮತ್ತು ೩೦೦ ಮೀಟರ್ ಎತ್ತರದಿಂದ ಸೆರೆ ಹಿಡಿಯಬಹುದಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಓಡಾಡುವುದು, ಬ್ಯಾಗ್, ಪೊಟ್ಟಣಗಳನ್ನು ಹಿಡಿದುಕೊಂಡು ಬೈಕ್‌ನಲ್ಲಿ ನಿಂತಿರುವುದು ಕಂಡು ಬಂದರೆ ತಕ್ಷಣವೇ ಮಾಹಿತಿಯನ್ನು ಮಫ್ತಿ ಪೊಲೀಸರಿಗೆ ಕಳುಹಿಸಲಾಗುತ್ತದೆ. ಅಲ್ಲಿಯೇ ಕಾರ್ಯನಿರ್ವಹಿಸುವ ಪೊಲೀಸರು ಅಂತಹವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸುಲಭವಾಗಲಿದೆ. ಕೆಲವು ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿ ಪರಿಶೀಲಿಸಲು ಸಾಧ್ಯವಾಗದೆ ಇರುವಂತಹ ಸನ್ನಿವೇಶದಲ್ಲಿ ಇದರ ಮೂಲಕ -ಟೋ ತೆಗೆದುಕೊಂಡು ಅದನ್ನು ಜೂಮ್ ಮಾಡಿ ನೋಡಲಾಗುತ್ತದೆ. ಇದನ್ನು ಪರಿ ಶೀಲಿಸುವುದಕ್ಕೂ ಮುನ್ನ ಹದ್ದಿನ ಕಣ್ಣಿಡಲು ಸಹಕಾರಿಯಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

” ಡ್ರೋನ್ ಕಾರ್ಯಾಚರಣೆ ಮೂಲಕ ಸಮಾಜಘಾತುಕ ಶಕ್ತಿಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತದೆ. ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗ ಳಲ್ಲಿ ದಿನಕ್ಕೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ರೀತಿ ನಡೆಯಲಿದೆ. ಯಾವುದೇ ವ್ಯಕ್ತಿ ದೂರು ನೀಡಿದ ತಕ್ಷಣ ಅಂತಹ ಸ್ಥಳದಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಲಾಗುತ್ತದೆ. ನಂತರ, ಅಂತಹ ಸ್ಥಳದಲ್ಲಿ ಸಿಗುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು.”

-ಸೀಮಾ ಲಾಟ್ಕರ್, ಆಯುಕ್ತರು, ಮೈಸೂರು ನಗರ ಪೊಲೀಸ್

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

19 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

19 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

19 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

19 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

19 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

22 hours ago