• ಪ್ರೊ.ಆರ್.ಎಂ.ಚಿಂತಾಮಣಿ
6 ಜನ ಪತ್ನಿ ಸಂಶಯಾತೀತವಾಗಿರಬೇಕು’ ಎನ್ನುವುದೊಂದು ಮಾತಿದೆ ದಾನಮ್ಮ, ಈಗ ನಾವು ಇದನ್ನು ಅಧಿಕಾರ ಸ್ಥಾನಗಳಲ್ಲಿರುವವರ ಮತ್ತು ಅವರ ನೇರ ರಕ್ತಸಂಬಂಧಿಗಳೂ ಸೇರಿದಂತೆ ಆಸ್ಥಾನಗಳ ಸಮೀಪವಿದ್ದು, ಅವರ ನಿರ್ಧಾರಗಳ ಮೇಲೆ ಪ್ರಭಾವ ಬೀರಬಲ್ಲವರ ನಡೆನುಡಿಗಳು ಸಂಶಯಾತೀತವಾಗಿರಬೇಕು’ ಎಂದು ಅರ್ಥೈಸಬಹುದು. ಉನ್ನತ ಸ್ಥಾನಗಳಲ್ಲಿರುವವರಿಗಂತೂ ಇದು ಇನ್ನೂ ಕಟ್ಟುನಿಟ್ಟಾಗಿ ಅನ್ವಯಿಸುತ್ತದೆ. ಅಧಿಕಾರ ಸ್ಥಾನಗಳಲ್ಲಿರುವವರ ಖಾಸಗಿ ವ್ಯವಹಾರಗಳೂ ಪಾರದರ್ಶಕವಾಗಿ ಇರಬೇಕೆಂದೂ ಅರ್ಥ.
ಭಾರತದ ಬಂಡವಾಳ ಪೇಟೆಯ ಅಭಿವೃದ್ಧಿ ಮತ್ತು ನಿಯಂತ್ರಣದ ಜವಾ ಬ್ದಾರಿ ಹೊಂದಿರುವ ಉನ್ನತ ಅಧಿಕಾರವುಳ್ಳ ಸೆಕ್ಯೂರಿಟಿಸ್ ಅಂಡ್ ಎಕ್ಸ್ ಚೇಂಜಸ್ ಬೋರ್ಡ್ ಆಫ್ (Securitiesand Exchan ges Board of India- ಸೆಬಿ) 2017ರಿಂದ ಮಾಧಬಿ ಪುರಿ ಬುಚ್ ರವರು ಸದಸ್ಯರಾಗಿದ್ದು, 2022ರಿಂದ ಅದರ ಅಧ್ಯಕ್ಷರಾಗಿದ್ದಾರೆ. ಇವರ ನಾಯಕತ್ವದಲ್ಲಿಯೇ ಗೌತಮ ಆದಾನಿಯವರು ಅದಾನಿ ಕೈಗಾರಿಕಾ ಗುಂಪಿನಲ್ಲಿ ನಡೆದಿದೆ ಎನ್ನಲಾದ ಷೇರು ಬೆಲೆ ಕೃತಕವಾಗಿ ಏರುವಂತೆ ಮಾಡಿದ್ದೂ ಸೇರಿ ಹಣಕಾಸು ಅವ್ಯವಹಾರಗಳ ಆಪಾದನೆಗಳ ತನಿಖೆ ಮುಂದುವರಿದಿದ್ದು, ಅಂತಿಮ ವರದಿ ಹೊರಬರಬೇಕಾಗಿದೆ. ಅದು ವರ್ಷಗಳ ಹಿಂದಿನ ಪ್ರಕರಣ.
2023ರ ಫೆಬ್ರವರಿಯಲ್ಲಿ ಅಮೆರಿಕದ ಷೇರುಪೇಟೆಯಲ್ಲಿ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ಸಂಶೋಧನಾ ವರದಿಯಲ್ಲಿ ಅದಾನಿ ಗುಂಪು ವಿದೇಶಗಳಲ್ಲಿ ನೋಂದಾಯಿತ ಹೂಡಿಕೆ ಕಂಪೆನಿಗಳೆಂದು ಹೇಳಿಕೊಳ್ಳುವ ತನ್ನದೇ ಶೇಲ್ ಕಂಪೆನಿಗಳ ಮುಖಾಂತರ ತನ್ನ ಕಂಪೆನಿಗಳ ಷೇರು ಬೆಲೆಗಳು ಕೃತಕವಾಗಿ ಹೆಚ್ಚುವಂತೆ ಮಾಡುತ್ತಿದೆ ಎಂದು ಹೇಳಿಕೊಂಡಿತ್ತು. ಇದು ನಮ್ಮ ಷೇರುಪೇಟೆಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತು. ಸಮಸ್ಯೆ ಸರ್ವೋಚ್ಚ ನ್ಯಾಯಾಲಯದವರೆಗೂ ಹೋಗಿ ಅದು ವಿಚಾರಣೆ ನಡೆಸಿ ತನಿಖೆ ಮಾಡಿ ವರದಿ ಸಲ್ಲಿಸಬೇಕೆಂದು ‘ಸೆಬಿ’ಗೆ ಆದೇಶಿಸಿತ್ತು.
ಈಗ ಅಧ್ಯಕ್ಷರ ಮೇಲೆ ಆಪಾದನೆಗಳು: ಅದೇ ಹಿಂಡೆನ್‌ಬರ್ಗ್ ರಿಸರ್ಚ್ ಈ ತಿಂಗಳ ಆರಂಭದಲ್ಲಿ ಇನ್ನೊಂದು ಸಂಶೋಧನಾ ವರದಿ ಪ್ರಕಟಿಸಿ ನಮ್ಮ ಸೆಬಿ ಚೇರ್ಮನ್ ಮಾಧಬಿ ಪುರಿ ಬುಚ್ ರವರು ತಮ್ಮ ಪತಿ ಧಾವಲ್ ಬುಚ್ ರವರೊಡನೆ ಸೇರಿ ಮಾರಿಷಸ್ ದೇಶದಲ್ಲಿ ನೋಂದಾಯಿತ ಹೂಡಿಕೆ ನಿಧಿಯೊಂದರಲ್ಲಿ (ಐಪಿಇ-ಪ್ಲಸ್ ಫಂಡ್‌ರಲ್ಲಿ) ಹೂಡಿಕೆ ಮಾಡಿದ್ದು, ಆ ಹೂಡಿಕೆ ಅದಾನಿ ಷೇರುಗಳ ಬೆಲೆ ಹೆಚ್ಚಿಸಲು ಉಪಯೋಗವಾಗಿದೆ ಎಂದು ಬರೆದಿತ್ತು.
ವರದಿ ಪ್ರಕಟವಾದ ಮರುದಿನವೇ ಮಾಧಬಿಯವರು ಆಪಾದನೆಯನ್ನು ಅಲ್ಲಗಳೆದು ಒಂದು ಪ್ರಕಟಣೆ ಹೊರಡಿಸಿ, ಇದು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಮರು ಆಪಾದಿಸಿದರು. ಇದರ ವಿವರಣೆ ನೀಡುತ್ತಾ ತಮ್ಮ ಪತಿಯ ಬಾಲ್ಯ ಸ್ನೇಹಿತ ಮತ್ತು ಹೂಡಿಕೆಗಳ ವಿಷಯದಲ್ಲಿ ಅವರಂತೆ ತಜ್ಞರಾಗಿದ್ದ ಅನಿಲ್ ಅಹುಜಾರವರು ಮೇಲೆ ಹೇಳಿದ ಫಂಡಿನಲ್ಲಿ ಅವರ ಸಲಹೆಯಂತೆ ಹೂಡಿಕೆ ಮಾಡಲಾಗಿತ್ತು. ನಂತರ ಅವರು ಅಲ್ಲಿಂದ 2018ರಲ್ಲಿ ಹೊರಹೋದ ಮೇಲೆ ಹಿಂಪಡೆಯಲಾಯಿತು ಎಂದು ಹೇಳಿದ್ದರು. ಈ ಹೂಡಿಕೆ ನೇರವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಅದಾನಿ ಗುಂಪಿಗಾಗಿ ಉಪಯೋಗವಾಗಿಲ್ಲವೆಂದು ಹೇಳಿಕೊಂಡಿದ್ದಾರೆ. ಅಷ್ಟಾಗಿಯೂ ಅದು ಸಾಲ ಕೊಡುವ ನಿಧಿಯಾಗಿದ್ದು, ಷೇರುಗಳಲ್ಲಿ ಹಾಕುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ.
ಆದರೆ ಮರುವರ್ಷವೇ (2019) ಅಹುಜಾರವರು ಅದಾನಿ ಗುಂಪಿನಲ್ಲಿ ನಾಮಕರಣ ನಿರ್ದೇಶಕರಾಗಿಯೂ ನಂತರ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿಯೂ ಕೆಲಸಮಾಡಿರುವುದು ಸಂಶಯ ಮುಂದುವರಿಯಲು ಕಾರಣವಾಗಿದೆ.
ಸಂಶಯಕ್ಕೆ ಇನ್ನೊಂದು ಕಾರಣವೆಂದರೆ ಇವರ ಪತಿ ಧಾವಲ್ ಬುಚ್ ರವರು ಸಿಂಗಾಪುರ ಪ್ರಜೆಯಾಗಿದ್ದು, ದಂಪತಿ ಸೇರಿ ಸಿಂಗಾಪುರದಲ್ಲಿ ಆಗೊರಾ ಪಾರ್ಟ್ನಸ್್ರ ಮತ್ತು ಭಾರತದಲ್ಲಿ ಅಗೊರಾ ಅಡ್ವಜರಿ ಎಂಬ ಎರಡು ಹೂಡಿಕೆ ಸಲಹಾ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಎರಡರಲ್ಲಿಯೂ ಶೇ.99ರಷ್ಟು ಷೇರು ಬಂಡವಾಳ ಇವರಿಬ್ಬರದ್ದೇ. 2022ರಲ್ಲಿ ಸೆಬಿ ಅಧ್ಯಕ್ಷರಾಗಿ ತಮ್ಮ ನೇಮಕ ಆದ ನಂತರ ಸಿಂಗಾಪುರ ಸಂಸ್ಥೆಯ ತಮ್ಮ ಷೇರುಗಳನ್ನು ಪತಿಗೆ ವರ್ಗಾಯಿಸಿರುವುದಾಗಿ ಮಾಧಬಿರವರು ಘೋಷಿಸಿದ್ದಾರೆ. ಬೋರ್ಡ್ ಸದಸ್ಯರಾಗಿರುವವರೆಗೆ ಇದು ಮುಂದುವರಿಯುತ್ತಿತ್ತೆಂದು ಇದರ ಅರ್ಥವಲ್ಲವೆ? ಆದರೆ 2023-24ನೇ ವರ್ಷದವರೆಗೆ ಎಲ್ಲ ಲಾಭಗಳನ್ನೂ ಪಡೆಯುತ್ತಿದ್ದರು ಎಂದು ದಾಖಲೆಗಳನ್ನು ಪರಿಶೀಲಿಸಿದ ರಾಯಟರ್ ಮಾಧ್ಯಮ ಸಂಸ್ಥೆ ಹೇಳುತ್ತದೆ.
ಹಿತಾಸಕ್ತಿಗಳ ಘರ್ಷಣೆ: ಅಧಿಕಾರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಕಾಯ್ದೆಬದ್ದ, ನೈತಿಕ ಜವಾಬ್ದಾರಿಗಳು ಹಾಗೂ ವೈಯಕ್ತಿಕ, ಆರ್ಥಿಕ ಮತ್ತು ಸಾಮಾಜಿಕ ಆಸಕ್ತಿಗಳ ನಡುವೆ ಘರ್ಷಣೆಗಳು ಉದ್ದವಿಸುವ ಸಾಧ್ಯತೆ ಇರುತ್ತದೆ. ತನ್ನ ಮತ್ತು ಸಮಷ್ಟಿಯ ಹಿತಾಸಕ್ತಿಗಳ ನಡುವೆ ಸಂಘರ್ಷ ಉಂಟಾಗಬಾರದು. ಅಧಿಕಾರ ಸ್ಥಾನದಲ್ಲಿರುವವರೆಗೆ ಸಮಷ್ಟಿಯ ಹಿತ ಕಾಯುವುದೇ ಗುರಿಯಾಗಿರಬೇಕು. ಸಮಷ್ಟಿಯ ಹಿತದಲ್ಲಿಯೇ : ತನ್ನ ಹಿತವು ಅಡಗಿದೆ ಎಂಬುದನ್ನು ಯಾವಾಗಲೂ ಎಚ್ಚರಿಕೆಯಿಂದ ನೆನಪಿಟ್ಟಿರಬೇಕು. ಅಧಿಕಾರ ಸ್ಥಾನದಲ್ಲಿರುವಾಗ ದೊಡ್ಡ ಸಂಬಳ ಮತ್ತು ಭತ್ಯೆಗಳನ್ನು ಪಡೆಯುತ್ತಿರುತ್ತಾರೆ. ಈ ಅವಧಿಯಲ್ಲಿ ಬೇರೆ ಮೂಲಗಳಿಂದ ಲಾಭವಾಗಲಿ ಇತರೆ ಆದಾಯವಾಗಲಿ ಪಡೆಯುವುದು ನೈತಿಕ ಅಪರಾಧವಾಗುತ್ತದೆ.
ಇಲ್ಲಿ ಮಾಧಬಿ ಪುರಿ ಬುಚ್‌ರವರು ತಾವೇ ನಿಯಂತ್ರಿಸಬೇಕಾಗಿರುವ ಹೂಡಿಕೆ ಸಲಹಾಕಂಪೆನಿಯೊಂದರಲ್ಲಿ ದೊಡ್ಡಗಾತ್ರದ ಷೇರು ಹೊಂದಿರುತ್ತಾರೆ. ತಾವು ಸೆಬಿಗೆ ನೇಮಕವಾದ ನಂತರ ಈ ಕಂಪೆನಿ ಸ್ಥಗಿತಗೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅದು ಕೆಲಸ ಮಾಡುತ್ತಿದ್ದು, ಲಾಭವನ್ನು ಗಳಿಸುತ್ತಿರುವುದು ವಿರೋಧಭಾಸವಲ್ಲವೇ? ಪರಿಶೀಲನೆಯಿಂದ ಗೊತ್ತಾಗಿದೆ. ಇದು
ಹಿಂದೆ ಸರ್ಕಾರದ ಹಿರಿಯ ಕಾರ್ಯದರ್ಶಿಯಾಗಿದ್ದ, ಹಿರಿಯ ಐಎಎಸ್ ಅಧಿಕಾರಿ ಎಸ್.ಸಿ.ಗಾರ್ಗ್‌ರವರು ಇವರ ಅವಧಿಯಲ್ಲಿಯೇ ಸೆಬಿ ಸದಸ್ಯರಾಗಿದ್ದವರು. ‘ಮಾಧಬಿ ಪುರಿ ಬುಚ್ ರವರು ಸೆಬಿ ಸದಸ್ಯರಾದ ಮೇಲೆ ಯಾವುದೇ ಕಾರಣಕ್ಕೂ ಅವರು ಒಂದು ಕಂಪೆನಿ ಮಾಲೀಕರಾಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದು ಕಾಯ್ದೆ ಬಾಹಿರ’ ಎಂದು ಹೇಳಿದ್ದಾರೆ. ಹೀಗಾಗಿ ಅನೇಕ ತಜ್ಞರು ಅವರು ಆ ಸ್ಥಾನದಲ್ಲಿ ಮುಂದುವರಿಯು ತ್ತಿರುವುದನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ ಹಲವು ಸಂಶಯಗಳ ನಡುವೆ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಇಲ್ಲಿ ರಾಜಕೀಯ ಪಕ್ಷಗಳ ಸಮರ್ಥನೆ ಅಥವಾ ವಿರೋಧಗಳು ಅಪ್ರಸ್ತುತ. ಸೆಬಿ ಆಡಳಿತದ ಬಗ್ಗೆ ವಿವರವಾದ ನಿಯಮಗಳನ್ನು ಅದು ಸಂವಿಧಾನಬದ್ದ
ಸಂಸ್ಥೆಯಾಗಿ 1992ರಲ್ಲಿ ರೂಪುಗೊಂಡಾಗಲೇ ರೂಪಿಸಲಾಗಿದೆ. ಕಾಲಕಾಲಕ್ಕೆ ತಿದ್ದುಪಡಿಗಳೂ ಆಗಿವೆ. ಈಗ ಕೇಂದ್ರ ಸರ್ಕಾರವಾಗಲಿ, ಸರ್ವೋಚ್ಚ ನ್ಯಾಯಾಲಯವಾಗಲಿ ನಿವೃತ್ತ ಹಿರಿಯ ನ್ಯಾಯಾಧೀಶರು ಮತ್ತು ಸೆಬಿಯ ಹಿಂದಿನ ಕಳಂಕರಹಿತ ಅಧ್ಯಕ್ಷರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಿ ಅವರಿಂದ ವಿವರವಾದ ತನಿಖಾ ವರದಿಯನ್ನು ಪಡೆದು ಅದರಂತೆ ಸೂಕ್ತ ಕ್ರಮಕೈಗೊಳ್ಳುವುದು ಅನಿವಾರ್ಯವೆಂಬುದು ತಜ್ಞರ ಅಭಿಪ್ರಾಯ.
ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…
ನವದೆಹಲಿ: ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…
ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…
ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…
ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…