ಎಚ್.ಎಸ್.ದಿನೇಶ್ ಕುಮಾರ್
ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ಸುಮಾರು ೧,೫೦೦ ಅರ್ಜಿಗಳು ಸಲ್ಲಿಕೆ
ಮೈಸೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲಕರ ವಾಹನ ಚಾಲನಾ ಪರವಾನಗಿ (ಡಿಎಲ್) ಹಾಗೂ ನವೀಕರಣ (ರಿನ್ಯೂವಲ್)ಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಸಲ್ಲಿಕೆಯಾಗಿರುವ ಸುಮಾರು ೧,೫೦೦ ಅರ್ಜಿಗಳು ವಿಲೇವಾರಿಯಾಗದೆ ನನೆಗುದಿಗೆ ಬಿದ್ದಿವೆ.
ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಡಿಎಲ್ ಪಡೆಯಲು ಜನರು ಸಾಕಷ್ಟು ಕಸರತ್ತು ನಡೆಸಬೇಕು. ಮೊದಲಿಗೆ ಎಲ್‌ಎಲ್‌ಆರ್ ಪಡೆಯಬೇಕು. ನಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಟ್ರ್ಯಾಕ್‌ನಲ್ಲಿ ವಾಹನ ಚಾಲನೆ ಮಾಡಿ ಯಶಸ್ವಿಯಾಗಬೇಕು. ಇಷ್ಟೆಲ್ಲಾ ಕಸರತ್ತು ಮಾಡುವ ಮೂಲಕ ಡಿಎಲ್ ಪಡೆಯಬೇಕು. ಆದರೆ, ಅರ್ಜಿ ಸಲ್ಲಿಸಿ ೩ ತಿಂಗಳಾದರೂ ಡಿಎಲ್ ಲಭ್ಯವಾಗದಿದ್ದರೆ ಹೇಗೆ? ಟ್ರ್ಯಾಕ್ ಪರೀಕ್ಷೆಯಲ್ಲಿ ಪಾಸಾದರೂ ನಮಗೆ ಡಿಎಲ್ ಬಂದಿಲ್ಲವಲ್ಲಾ ಎಂಬ ಬೇಸರ ದಲ್ಲಿಯೇ ಅವರು ಕಾಲ ಕಳೆಯುವಂತಾಗುತ್ತದೆ.
ಇದಕ್ಕೆ ಕಾರಣ ಕಾರ್ಡ್‌ಗಳ ಕೊರತೆ. ಡಿಎಲ್, ಡಿಎಲ್ ನವೀಕರಣ ಹಾಗೂ ವಾಹನ ನೋಂದಣಿ ಕಾರ್ಡ್‌ಗಳನ್ನು ಸರಬರಾಜು ಮಾಡುವ ಹೊಣೆ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯದ್ದು ಎಂಬುದು ಸ್ಥಳೀಯ ಅಧಿಕಾರಿಗಳ ಸಮಜಾಯಿಷಿ. ಕಾಲಕಾಲಕ್ಕೆ ಸರಿಯಾಗಿ ಕಾರ್ಡ್‌ಗಳನ್ನು ಸರಬರಾಜು ಮಾಡಿದರೆ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಕಳೆದ ಮೂರು ತಿಂಗಳುಗಳಿಂದ ಸಮರ್ಪಕವಾಗಿ ಕಾರ್ಡ್ಗಳು ಸರಬರಾಜಾಗುತ್ತಿಲ್ಲ.
ಹೀಗಾಗಿ ಡಿಎಲ್, ನವೀಕರಣ ಹಾಗೂ ವಾಹನ ನೋಂದಣಿ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿರುವ ಸುಮಾರು ೧,೫೦೦ ಮಂದಿ ಕಾಯುವುದು ಅನಿವಾರ್ಯವಾಗಿದೆ. ಪ್ರತಿದಿನ ಬರುವ ಅಂಚೆ ಅಣ್ಣನನ್ನು ಕಾರ್ಡ್ ಬಂದಿದೆಯೇ ಎಂದು ಕೇಳುವಂತಾಗಿದೆ. ಇನ್ನು ಕೆಲವರು ಕಾರ್ಡ್ ಬಂದಿಲ್ಲ ಎಂಬ ದೂರಿನೊಂದಿಗೆ ಪ್ರತಿದಿನ ಸಾರಿಗೆ ಇಲಾಖೆಕಚೇರಿಗೆ ಎಡತಾಕುತ್ತಿದ್ದಾರೆ. ಅಂತಹವರಿಗೆ ಸೂಕ್ತ ಉತ್ತರ ನೀಡಲಾಗದೆ ಆರ್‌ಟಿಒ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ.
ಇನ್ನು ಮುಂದೆ ಕೇಂದ್ರ ಕಚೇರಿಯಲ್ಲೇ ಮುದ್ರಣ: ಇದೀಗ ಸಾರಿಗೆ ಇಲಾಖೆ ಹೊಸ ನಿಯವೊಂದನ್ನು ಜಾರಿಗೊಳಿಸುತ್ತಿದೆ. ಡಿಎಲ್, ನವೀಕರಣ ಹಾಗೂ ವಾಹನ ನೋಂದಣಿ ಕಾರ್ಡ್ಗಳನ್ನು ಇನ್ನು ಮುಂದೆ ಕೇಂದ್ರ ಕಚೇರಿಯಲ್ಲೇ ಮುದ್ರಿಸಲು ತೀರ್ಮಾಸಿದೆ.
ಈ ನಿಯಮ ನವೆಂಬರ್ ಅಂತ್ಯದ ವೇಳೆಗೆ ಜಾರಿಯಾಗಲಿದೆ. ಕಾರ್ಡ್‌ಗಳು ಬರುವುದು ತಡವಾದಲ್ಲಿ ಸಾರ್ವಜನಿಕರು ಯಾರಿಗೆ ದೂರು ಹೇಳಬೇಕು ಎಂಬುದೇ ಮುಖ್ಯ ಪ್ರಶ್ನೆ.ಇಲ್ಲವಾದಲ್ಲಿ ಕಾರ್ಡ್ ಬಂದಾಗ ಬರಲಿ ಎಂದು ಸುಮ್ಮನಿರಬೇಕಷ್ಟೆ.
ಕಾರ್ಡ್‌ಗಳ ಮುದ್ರಣ ಸಂಬಂಧ ಈಗಾಗಲೇ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಡಿಎಲ್ ಅಪ್ರೂವಲ್, ಆರ್‌ಸಿ ಅಪ್ರೂವಲ್ ಹಾಗೂ ನವೀಕರಣ ಪ್ರಕ್ರಿಯೆ ಗಳೆಲ್ಲವೂ ಇಲ್ಲಿಯೇ ನಡೆಯಲಿವೆ. ಆದರೆ, ಕಾರ್ಡ್ ಪಡೆಯಲು ಮಾತ್ರ ಬೆಂಗಳೂರಿನತ್ತ ಮುಖ ಮಾಡಬೇಕಿದೆ. ಈ ನೂತನ ಯೋಜನೆಯ ಸಾಧಕ-ಬಾಧಕಗಳನ್ನು ಕಾದು ನೋಡಬೇಕಿದೆ.
” ಕಳೆದ ಆರು ತಿಂಗಳುಗಳಿಂದ ಕಾರ್ಡ್‌ಗಳ ಕೊರತೆ ಎದುರಾಗಿದೆ. ಅಗತ್ಯಕ್ಕೆ ತಕ್ಕಂತೆ ಕಾರ್ಡ್‌ಗಳನ್ನು ಸರಬರಾಜು ಮಾಡುತ್ತಿಲ್ಲ. ಆಗಾಗ್ಗೆ ನೂರು ಅಥವಾ ಇನ್ನೂರು ಕಾರ್ಡ್ಗಳು ಬರುತ್ತವೆ. ಅಂತಹ ವೇಳೆ ಆದ್ಯತೆಯ ಮೇಲೆ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಹೆಚ್ಚಿನ ಕಾರ್ಡ್‌ಗಳನ್ನು ನೀಡುವುದಾಗಿ ಮೇಲಽಕಾರಿಗಳು ಭರವಸೆ ನೀಡಿದ್ದಾರೆ.”
-ಸಾರಿಗೆ ಇಲಾಖೆ ಅಧಿಕಾರಿ
ಮೈಸೂರು : ಸರ್ಕಾರ ಸರ್ಕಾರಿ ಶಾಲೆಗಳ ಮುಚ್ಚುವ ಬದಲು, ಉನ್ನತಿಕರಣಗೊಳಿಸಿ ವೈಚಾರಿಕ ಶಿಕ್ಷಣ ನೀಡುವಂತಗಲಿ ಎಂದು ಚಿಂತಕ ಪ್ರೊ. ಕೆ…
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವ ಬಲಿಯಾಗಿದ್ದಾನೆ. ಈ ಬಗ್ಗೆ…
ರಾಮನಗರ: ರಾಜ್ಯಕ್ಕೆ ಇಷ್ಟರ ಮಟ್ಟಿಗೆ ಅನ್ಯಾಯ ಮಾಡುತ್ತಾರೆ ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎಂದು ಕೇಂದ್ರ ಬಜೆಟ್ ಬಗ್ಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ…
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ…
ಮಂಡ್ಯ: ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…