ಭೇರ್ಯ ಮಹೇಶ್
ಹಳೇ ಎಡತೊರೆಯ ಅರಣ್ಯ ಸಸ್ಯ ಕ್ಷೇತ್ರದಲ್ಲಿ ವಿವಿಧ ಸಸಿಗಳು ಲಭ್ಯ; ಪ್ರೋತ್ಸಾಹಧನವೂ ಉಂಟು
ಕೆ.ಆರ್.ನಗರ: ಅರಣ್ಯೀಕರಣ ಚಟುವಟಿಕೆ ಹಾಗೂ ಕೃಷಿ ಅರಣ್ಯವನ್ನು ಪ್ರೋತ್ಸಾಹಿಸಲು ಕೆ. ಆರ್.ನಗರದ ಅರಣ್ಯ ಇಲಾಖೆ ವತಿಯಿಂದ ಲಕ್ಷಾಂತರ ಅರಣ್ಯ ಸಸಿಗಳನ್ನು ಬೆಳೆಸಲಾಗಿದೆ.
ಜೂನ್ ೫ರ ಬುಧವಾರ ನಡೆಯಲಿರುವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಜಾತಿಯ ಅರಣ್ಯ ಸಸ್ಯಗಳನ್ನು ಬೆಳೆಸಲಾಗಿದ್ದು, ಈಗಾಗಲೇ ವಿತರಣೆ ಮಾಡಲಾಗುತ್ತಿದೆ. ಕೃಷಿಕರು ಮತ್ತು ರೈತರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ, ಅವರ ದೈನಂದಿನ ಅಗತ್ಯತೆಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಮರ- ಗಿಡಗಳನ್ನು ಬೆಳೆಸುವುದು ಕೃಷಿ ಅರಣ್ಯೀಕರಣ ಪ್ರೋತ್ಸಾಹ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಸಸಿ ಬೆಳೆಸುವುದು, ಜಮೀನಿನ ಬದುಗಳ ಮೇಲೆ ಮತ್ತು ರೈತರ ಜಮೀನುಗಳ ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ. ಈ ಯೋಜನೆ ಯನ್ನು ಶೇ. ೬೦ರಷ್ಟು ಕೇಂದ್ರ ಸರ್ಕಾರದ ಪಾಲು ಹಾಗೂ ಶೇ.೪೦ರಷ್ಟು ರಾಜ್ಯದ ಪಾಲಿನ ಅನುದಾನದ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿದೆ.
ಪರಿಸರ ಸಂರಕ್ಷಣೆಗೆ ಗಿಡ ನೆಡಿ ಅಭಿಯಾನ: ಅರಣ್ಯ ಇಲಾಖೆಯು ಉತ್ತಮ ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ಬೆಳೆಸಿ ಪ್ರೋತ್ಸಾಹಿಸಲು ರಿಯಾಯಿತಿ ದರದಲ್ಲಿ ಅರಣ್ಯ ಗಿಡಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬರೂ ಪಡೆಯಬಹುದು. ಇದಕ್ಕಾಗಿ ಕೆ.ಆರ್.ನಗರ ಪಟ್ಟಣ ಸಮೀಪದ ಹಳೇ ಎಡತೊರೆಯ ಅರಣ್ಯ ಸಸ್ಯ ಕ್ಷೇತ್ರದಲ್ಲಿ ಹೊಂಗೆ, ನೆಲ್ಲಿ, ಹೊನ್ನೆ, ಬೀಟೆ, ತೇಗ, ಬಾಗೆ, ಸಿಲ್ವರ್, ಹೆಬ್ಬೇವು, ಗೋಣಿ, ಬಿದಿರು, ಮಾವು, ಹುಣಸೆ, ಮಹಾಗನಿ, ತಪಸಿ, ಬಸರಿ, ಶಿವನಿ, ಹಲಸು, ಬಿಲ್ವಪತ್ರೆ ಸೇರಿದಂತೆ ಅನೇಕ ಗಿಡಗಳನ್ನು ಬೆಳೆಸಲಾಗಿದೆ. ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಅರಣ್ಯೀಕರಣ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ರಿಯಾಯಿತಿ ದರದಲ್ಲಿ ಗಿಡಗಳನ್ನು ಪಡೆಯಬಹುದಾಗಿದೆ.
ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ೩೫ ರೂ. ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ೪೦ ರೂ. ಹಾಗೂ ೫೦ ರೂ. ಹೀಗೆ ಒಟ್ಟು ೧೨೫ ರೂ. ಗಳನ್ನು ಪ್ರೋತ್ಸಾಹ ಧನವನ್ನು ಪಾವತಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದರೆ ಗಣ ನೀಯವಾಗಿ ಪ್ರೋತ್ಸಾಹಧನವನ್ನು ಪಡೆಯಬಹುದಾಗಿದೆ. ಪ್ರೋತ್ಸಾಹಧನ ಪಡೆಯುವುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರ ಮಟ್ಟು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
” ರೈತರ ಜಮೀನಿನಲ್ಲಿ ಕೃಷಿ ಅರಣ್ಯೀಕರಣ ಪ್ರೋತ್ಸಾಹ ಯೋಜನೆ ಜಾರಿಗೆ ಬಂದಿದ್ದು, ಅರಣ್ಯ ಇಲಾಖೆ ಅರಣ್ಯ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಧನ ನೀಡುತ್ತಿದೆ. ಉತ್ತಮ ಪರಿಸರಕ್ಕಾಗಿ ಹಾಗೂ ಮುಂದಿನ ಯುವ ಪೀಳಿಗೆಗಾಗಿ ಈಗಲಾದರೂ ಎಚ್ಚೆತ್ತುಕೊಂಡು ಗಿಡಗಳನ್ನು ಹೆಚ್ಚಾಗಿ ಬೆಳೆಸಲು ಮುಂದಾಗಬೇಕು.”
-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ
” ವಿಶ್ವ ಪರಿಸರದಿನಾಚರಣೆಯನ್ನು ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಲೇಜು ಆವರಣದಲ್ಲಿ ವಿವಿಧ ಜಾತಿಗಳ ಅರಣ್ಯ ಗಿಡಗಳನ್ನು ನೆಡಲಾಗುವುದು.”
-ಹರಿಪ್ರಸಾದ್, ವಲಯ ಅರಣ್ಯಾಧಿಕಾರಿ
” ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಜಾತಿಯ ಅರಣ್ಯ ಗಿಡಗಳನ್ನು ನಮ್ಮ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾಗಿದೆ. ಕೃಷಿ ಅರಣ್ಯೀಕರಣ ಪ್ರೋತ್ಸಾಹ ಯೋಜನೆಯಡಿ ಈಗಾಗಲೇ ವಿವಿಧ ಹಂತಗಳಲ್ಲಿ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ.”
-ಕಬಿನಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ, ಸಸ್ಯ ಕ್ಷೇತ್ರ, ಹಳೇ ಎಡತೊರೆ
ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಶಾಸಕ, ಕೊಡುಗೈ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೇ 24ರಂದು ಅಖಿಲ ಭಾರತ…
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ…
ಮಂಗಳೂರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಆರು ತಿಂಗಳಿಂದ ಸರಿಯಾಗಿ ಸಂಬಳ ಆಗದ ಕಾರಣ…
ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ…
ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು. ಬಿಜೆಪಿಯವರು…
ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ…