Andolana originals

ಶಿಥಿಲ ಕಟ್ಟಡಗಳು, ಅಗತ್ಯ ಸಿಬ್ಬಂದಿಗಳಿಲ್ಲ

ಮೈಸೂರು ನಗರ, ಗ್ರಾಮಾಂತರ ಗ್ರಂಥಾಲಯಗಳ ದುಸ್ಥಿತಿ

ಸಾಲೋಮನ್

ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗದ ಬಹುತೇಕ ಗ್ರಂಥಾಲಯಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಬೀಳುವ ಸ್ಥತಿಯಲ್ಲಿವೆ. ಕಟ್ಟಡಗಳು ಮಹಾನಗರ ಪಾಲಿಕೆ ಒಡೆತನದಲ್ಲಿರುವುದರಿಂದ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಗಳ ಕೊರತೆಯೂ ಇರುವುದರಿಂದ ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ನಡೆಯದೇ ತಮ್ಮ ಮೌಲ್ಯ ಕಳೆದು ಕೊಳ್ಳುತ್ತಿರುವ ದುಸ್ಥಿತಿ ತಲುಪಿದೆ.

ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಒಟ್ಟು ೩೫ ಗ್ರಂಥಾಲಯಗಳಿದ್ದು ಇವುಗಳ ನಿರ್ವಹಣೆಗಾಗಿ ಕೇವಲ ೧೫ ಖಾಯಂ ಸಿಬ್ಬಂದಿಗಳಿದ್ದು ೩೦ ಮಂದಿ ತಾತ್ಕಾಲಿಕ ಸಿಬ್ಬಂದಿಗಳಿದ್ದಾರೆ. ತಾತ್ಕಾಲಿಕ ಸಿಬ್ಬಂದಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಆಗದೆ ಒಬ್ಬೊಬ್ಬರಿಗೆ ಎರಡು ಮೂರು ಗ್ರಂಥಾಲಯಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಸಿಬ್ಬಂದಿ ಕೊರತೆ
ಮೈಸೂರು ನಗರ ಮತ್ತು ಗ್ರಾಮಾಂತರ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿಗಳ ಕೊರತೆ ಗಂಭೀರವಾಗಿ ಕಾಡುತ್ತಿದೆ. ಈ ವ್ಯಾಪ್ತಿಯಲ್ಲಿ ೩೫ ಗ್ರಂಥಾಲಯಗಳಿವೆ. ಇವುಗಳಲ್ಲಿ ೨೦ ದೊಡ್ಡ ಗ್ರಂಥಾಲಯಗಳಿದ್ದು, ಇವುಗಳನ್ನು ನೋಡಿಕೊಳ್ಳಲು ೫ ಮಂದಿ ಸಿಬ್ಬಂದಿಗಳ ಅಗತ್ಯವಿದೆ. ಚಿಕ್ಕ ಗ್ರಂಥಾಲಯ ಗಳಿಗೆ ೩ ಮಂದಿ ಸಾಕು. ಆದರೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಆರ್ಥಿಕ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪವೂ ಇದೆ.

ಗ್ರಂಥಾಲಯ ಇಲಾಖೆಯಿಂದ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲದ ಕಾರಣ ಹೊಸ ನೇಮಕಾತಿಗಳಿಗೆ ಒಪ್ಪಿಗೆ ನೀಡದೆ ಇರುವುದರಿಂದ ರಾಜ್ಯದ ಎಲ್ಲ ಜಿಗಳಲ್ಲೂ ಸಿಬ್ಬಂದಿ ಕೊರತೆ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಸಿಬ್ಬಂದಿಗಳು ಅನಿವಾರ್ಯವಾಗಿ ಹೆಚ್ಚುವರಿ ಜವಾಬ್ದಾರಿ ಹೊರಲೇ ಬೇಕಾಗಿದೆ.

ಗ್ರಂಥಾಲಯಗಳನ್ನು ತೆರೆಯಲು ಒತ್ತಡ ಗ್ರಂಥಾಲಯಗಳ ಕಟ್ಟಡ ಶಿಥಿಲಗೊಂಡು, ಸಿಬ್ಬಂದಿಗಳಿಲ್ಲದೆ ನಗರ ಹಾಗೂ ಗ್ರಾಮಾಂತರ ಭಾಗಗಳಾದ ಹೂಟಗಳ್ಳಿ, ಕೇರ್ಗಳ್ಳಿ, ಜಯಪುರ, ಇಲವಾಲ ಈ ಭಾಗಗಳ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪ್ರತೀ ದಿನ ತೆರೆ ಯಲು ಸ್ಥಳೀಯರು ಒತ್ತಾಯಿಸುತ್ತಾರೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ಜಿ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕ ವಿ. ಮಂಜುನಾಥ್ ಹೇಳಿದರು.

ಜಂಟಿ ನಿರ್ದೇಶಕರ ಕಚೇರಿ
ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಗ್ರಂಥಾಲಯಗಳಲ್ಲಿ ಪ್ರಮುಖವಾದ ಕಟ್ಟಡ, ಸಿಬ್ಬಂದಿ ಕೊರತೆ ಹಾಗೂ ಪೀಠೋಪಕರಣಗಳೂ ಸೇರಿದಂತೆ ಯಾವುದೇ ಸವಲತ್ತುಗಳಿಲ್ಲದಿದ್ದರೂ ಇಲ್ಲಿ ಜಂಟಿ ನಿರ್ದೇಶಕರ ಕಚೇರಿ ಆರಂಭಿಸುವ ಆಲೋಚನೆಯೂ ಸರ್ಕಾರಕ್ಕೆ ಇದೆ ಎನ್ನಲಾಗುತ್ತಿದೆ.

ಮೈಸೂರಿಗೆ ಯಾರೂ ಬರುತ್ತಿಲ್ಲ ಮೈಸೂರು ಹೈ ಪ್ರೊ-ಲ್ ನಗರ ಎಂಬುದಾಗಿ ಪರಿಗಣಿಸಿದ್ದು, ಇಲ್ಲಿ ಕೆಲಸದ ಒತ್ತಡಗಳೂ ಹೆಚ್ಚಾಗಿ ಇರುತ್ತದೆ ಎನ್ನಲಾಗಿದೆ. ಮುಖ್ಯವಾಗಿ ಈ ನಗರ ಮುಖ್ಯಮಂತ್ರಿಗಳ ತವರೂರಾಗಿದ್ದು, ದಸರಾ ಕಾರ್ಯಕ್ರಮಗಳು ಹಾಗೂ ಸಚಿವರುಗಳು ಈ ನಗರಕ್ಕೆ ಹೆಚ್ಚಾಗಿ ಬಂದು ಹೋಗುವುದರಿಂದ ಅಧಿಕಾರಿಗಳಿಗೆ ಪ್ರೋಟೋಕಾಲ್‌ಗಳೂ ಇರುತ್ತದೆ. ಹಾಗಾಗಿ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗಳು ಇಲ್ಲಿ ಬರುವುದಕ್ಕೆ ಇಷ್ಟಪಡುತ್ತಿಲ್ಲ ಎನ್ನಲಾಗುತ್ತಿದೆ.

ಗ್ರಂಥಾಲಯಕ್ಕೆ ನಾಲ್ಕೆ ಸ್ವಂತ ಕಟ್ಟಡ

ಮೈಸೂರು: ಪೀಪಲ್ಸ್ ಪಾರ್ಕ್, ಸಯ್ಯಾಜಿರಾವ್‌ರಸ್ತೆ, ಕುವೆಂಪುನಗರ ಹಾಗೂ ಹೆಬ್ಬಾಳ ಬಡಾವಣೆಯಲ್ಲಿರುವ ಗ್ರಂಥಾಲಯಗಳು ಮಾತ್ರ ನಮ್ಮ ಸ್ವಂತ ಕಟ್ಟಗಳು ಉಳಿದವು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿವೆ ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ವಿ. ಮಂಜುನಾಥ್. ನಗರ ಪಾಲಿಕೆ ವ್ಯಾಪ್ತಿಯ ಕಟ್ಟಡಗಳು ಶಿಥಿಲವಾಗಿದ್ದು, ನಾವು ದುರಸ್ತಿ ಮಾಡಲು ಬರುವುದಿಲ್ಲ. ಕಟ್ಟಡಗಳನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲು ಹಿಂದೆ ಇದ್ದ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾಗ ಅವರು ಒಪ್ಪಿದ್ದರು. ಈಗ ಅವರು ವರ್ಗಾವಣೆಯಾಗಿರುವ ಕಾರಣ ಈಗಿನ ಆಯುಕ್ತರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಅವರು ಹಸ್ತಾಂತರಿಸಿದ ನಂತರ ದುರಸ್ಥಿ ಮಾಡಲು ಸಾಧ್ಯ. ನಗರ ಪಾಲಿಕೆ ಸದಸ್ಯರ ಮೂಲಕವಾದರೂ ಸಮಸ್ಯೆ ಪರಿಹರಿಸಬಹುದಾಗಿತ್ತು. ಆದರೆ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷವಾಗಿರುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಿಬ್ಬಂದಿಗಳ ಕೊರತೆಯಿಂದಾಗಿ ಗ್ರಂಥಾಲಯಗಳನ್ನು ಸರಿಯಾಗಿ ತೆರೆಯಲು ಆಗುತ್ತಿಲ್ಲ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

18 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

18 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

19 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

20 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

20 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

23 hours ago