ಮೈಸೂರು ನಗರ, ಗ್ರಾಮಾಂತರ ಗ್ರಂಥಾಲಯಗಳ ದುಸ್ಥಿತಿ
ಸಾಲೋಮನ್
ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗದ ಬಹುತೇಕ ಗ್ರಂಥಾಲಯಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಬೀಳುವ ಸ್ಥತಿಯಲ್ಲಿವೆ. ಕಟ್ಟಡಗಳು ಮಹಾನಗರ ಪಾಲಿಕೆ ಒಡೆತನದಲ್ಲಿರುವುದರಿಂದ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಗಳ ಕೊರತೆಯೂ ಇರುವುದರಿಂದ ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ನಡೆಯದೇ ತಮ್ಮ ಮೌಲ್ಯ ಕಳೆದು ಕೊಳ್ಳುತ್ತಿರುವ ದುಸ್ಥಿತಿ ತಲುಪಿದೆ.
ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಒಟ್ಟು ೩೫ ಗ್ರಂಥಾಲಯಗಳಿದ್ದು ಇವುಗಳ ನಿರ್ವಹಣೆಗಾಗಿ ಕೇವಲ ೧೫ ಖಾಯಂ ಸಿಬ್ಬಂದಿಗಳಿದ್ದು ೩೦ ಮಂದಿ ತಾತ್ಕಾಲಿಕ ಸಿಬ್ಬಂದಿಗಳಿದ್ದಾರೆ. ತಾತ್ಕಾಲಿಕ ಸಿಬ್ಬಂದಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಆಗದೆ ಒಬ್ಬೊಬ್ಬರಿಗೆ ಎರಡು ಮೂರು ಗ್ರಂಥಾಲಯಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಸಿಬ್ಬಂದಿ ಕೊರತೆ
ಮೈಸೂರು ನಗರ ಮತ್ತು ಗ್ರಾಮಾಂತರ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿಗಳ ಕೊರತೆ ಗಂಭೀರವಾಗಿ ಕಾಡುತ್ತಿದೆ. ಈ ವ್ಯಾಪ್ತಿಯಲ್ಲಿ ೩೫ ಗ್ರಂಥಾಲಯಗಳಿವೆ. ಇವುಗಳಲ್ಲಿ ೨೦ ದೊಡ್ಡ ಗ್ರಂಥಾಲಯಗಳಿದ್ದು, ಇವುಗಳನ್ನು ನೋಡಿಕೊಳ್ಳಲು ೫ ಮಂದಿ ಸಿಬ್ಬಂದಿಗಳ ಅಗತ್ಯವಿದೆ. ಚಿಕ್ಕ ಗ್ರಂಥಾಲಯ ಗಳಿಗೆ ೩ ಮಂದಿ ಸಾಕು. ಆದರೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಆರ್ಥಿಕ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪವೂ ಇದೆ.
ಗ್ರಂಥಾಲಯ ಇಲಾಖೆಯಿಂದ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲದ ಕಾರಣ ಹೊಸ ನೇಮಕಾತಿಗಳಿಗೆ ಒಪ್ಪಿಗೆ ನೀಡದೆ ಇರುವುದರಿಂದ ರಾಜ್ಯದ ಎಲ್ಲ ಜಿಗಳಲ್ಲೂ ಸಿಬ್ಬಂದಿ ಕೊರತೆ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಸಿಬ್ಬಂದಿಗಳು ಅನಿವಾರ್ಯವಾಗಿ ಹೆಚ್ಚುವರಿ ಜವಾಬ್ದಾರಿ ಹೊರಲೇ ಬೇಕಾಗಿದೆ.
ಗ್ರಂಥಾಲಯಗಳನ್ನು ತೆರೆಯಲು ಒತ್ತಡ ಗ್ರಂಥಾಲಯಗಳ ಕಟ್ಟಡ ಶಿಥಿಲಗೊಂಡು, ಸಿಬ್ಬಂದಿಗಳಿಲ್ಲದೆ ನಗರ ಹಾಗೂ ಗ್ರಾಮಾಂತರ ಭಾಗಗಳಾದ ಹೂಟಗಳ್ಳಿ, ಕೇರ್ಗಳ್ಳಿ, ಜಯಪುರ, ಇಲವಾಲ ಈ ಭಾಗಗಳ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪ್ರತೀ ದಿನ ತೆರೆ ಯಲು ಸ್ಥಳೀಯರು ಒತ್ತಾಯಿಸುತ್ತಾರೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ಜಿ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕ ವಿ. ಮಂಜುನಾಥ್ ಹೇಳಿದರು.
ಜಂಟಿ ನಿರ್ದೇಶಕರ ಕಚೇರಿ
ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಗ್ರಂಥಾಲಯಗಳಲ್ಲಿ ಪ್ರಮುಖವಾದ ಕಟ್ಟಡ, ಸಿಬ್ಬಂದಿ ಕೊರತೆ ಹಾಗೂ ಪೀಠೋಪಕರಣಗಳೂ ಸೇರಿದಂತೆ ಯಾವುದೇ ಸವಲತ್ತುಗಳಿಲ್ಲದಿದ್ದರೂ ಇಲ್ಲಿ ಜಂಟಿ ನಿರ್ದೇಶಕರ ಕಚೇರಿ ಆರಂಭಿಸುವ ಆಲೋಚನೆಯೂ ಸರ್ಕಾರಕ್ಕೆ ಇದೆ ಎನ್ನಲಾಗುತ್ತಿದೆ.
ಮೈಸೂರಿಗೆ ಯಾರೂ ಬರುತ್ತಿಲ್ಲ ಮೈಸೂರು ಹೈ ಪ್ರೊ-ಲ್ ನಗರ ಎಂಬುದಾಗಿ ಪರಿಗಣಿಸಿದ್ದು, ಇಲ್ಲಿ ಕೆಲಸದ ಒತ್ತಡಗಳೂ ಹೆಚ್ಚಾಗಿ ಇರುತ್ತದೆ ಎನ್ನಲಾಗಿದೆ. ಮುಖ್ಯವಾಗಿ ಈ ನಗರ ಮುಖ್ಯಮಂತ್ರಿಗಳ ತವರೂರಾಗಿದ್ದು, ದಸರಾ ಕಾರ್ಯಕ್ರಮಗಳು ಹಾಗೂ ಸಚಿವರುಗಳು ಈ ನಗರಕ್ಕೆ ಹೆಚ್ಚಾಗಿ ಬಂದು ಹೋಗುವುದರಿಂದ ಅಧಿಕಾರಿಗಳಿಗೆ ಪ್ರೋಟೋಕಾಲ್‌ಗಳೂ ಇರುತ್ತದೆ. ಹಾಗಾಗಿ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗಳು ಇಲ್ಲಿ ಬರುವುದಕ್ಕೆ ಇಷ್ಟಪಡುತ್ತಿಲ್ಲ ಎನ್ನಲಾಗುತ್ತಿದೆ.
ಗ್ರಂಥಾಲಯಕ್ಕೆ ನಾಲ್ಕೆ ಸ್ವಂತ ಕಟ್ಟಡ
ಮೈಸೂರು: ಪೀಪಲ್ಸ್ ಪಾರ್ಕ್, ಸಯ್ಯಾಜಿರಾವ್‌ರಸ್ತೆ, ಕುವೆಂಪುನಗರ ಹಾಗೂ ಹೆಬ್ಬಾಳ ಬಡಾವಣೆಯಲ್ಲಿರುವ ಗ್ರಂಥಾಲಯಗಳು ಮಾತ್ರ ನಮ್ಮ ಸ್ವಂತ ಕಟ್ಟಗಳು ಉಳಿದವು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿವೆ ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ವಿ. ಮಂಜುನಾಥ್. ನಗರ ಪಾಲಿಕೆ ವ್ಯಾಪ್ತಿಯ ಕಟ್ಟಡಗಳು ಶಿಥಿಲವಾಗಿದ್ದು, ನಾವು ದುರಸ್ತಿ ಮಾಡಲು ಬರುವುದಿಲ್ಲ. ಕಟ್ಟಡಗಳನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲು ಹಿಂದೆ ಇದ್ದ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾಗ ಅವರು ಒಪ್ಪಿದ್ದರು. ಈಗ ಅವರು ವರ್ಗಾವಣೆಯಾಗಿರುವ ಕಾರಣ ಈಗಿನ ಆಯುಕ್ತರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಅವರು ಹಸ್ತಾಂತರಿಸಿದ ನಂತರ ದುರಸ್ಥಿ ಮಾಡಲು ಸಾಧ್ಯ. ನಗರ ಪಾಲಿಕೆ ಸದಸ್ಯರ ಮೂಲಕವಾದರೂ ಸಮಸ್ಯೆ ಪರಿಹರಿಸಬಹುದಾಗಿತ್ತು. ಆದರೆ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷವಾಗಿರುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಿಬ್ಬಂದಿಗಳ ಕೊರತೆಯಿಂದಾಗಿ ಗ್ರಂಥಾಲಯಗಳನ್ನು ಸರಿಯಾಗಿ ತೆರೆಯಲು ಆಗುತ್ತಿಲ್ಲ ಎಂದು ಹೇಳಿದರು.
ಬೆಂಗಳೂರು : ಎಸ್‍ಎಸ್‍ಎಲ್‍ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು,…
ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ…
ನಂಜನಗೂಡು : ʻಹತ್ತೂರು ಜಾತ್ರೆಗೆ ಸುತ್ತೂರು ಜಾತ್ರೆʼ ಸಮ ಎಂಬ ಗಾದೆ ಹೊಂದಿರುವ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ…
ಕಿಕ್ಕೇರಿ : ಗ್ರಾಮೀಣ ಬದುಕಿನ ಸವಾಲುಗಳ ನಡುವೆ ಬೆಳೆದ ರೈತನ ಮಗಳು ತನ್ನ ಅಕ್ಷರಾಸಕ್ತಿಯಿಂದ ಇಡೀ ತಾಲ್ಲೂಕಿನ ಹೆಮ್ಮೆಯ ಮಗಳಾಗಿ…
ಚಿಕ್ಕಾಡೆ ಗ್ರಾಮದಲ್ಲಿ ಘಟನೆ; ಮೂವರ ಬಂಧನ ಪಾಂಡವಪುರ : ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆಯುತ್ತಿದ್ದ ಕಲಹ ಕೊಲೆಯಲ್ಲಿ ಅಂತ್ಯ…
ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು…