Andolana originals

ಜೀವ ಉಳಿಸುವ ಆಶಾಗಳಿಗೆ ʼಡಿಜಿಟಲ್‌ʼ ತಲೆನೋವು

– ರಶ್ಮಿ ಕೋಟಿ

ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇಲ್ಲ, ಹಳ್ಳಿಯಲ್ಲಿ ಡೇಟಾ ಸಿಗಲ್ಲ

ಎಚ್.ಡಿ. ಕೋಟೆ ಹತ್ತಿರದ ಬಿ.ಮಟಕೆರೆ ಗ್ರಾಮ. ಈ ಹಳ್ಳಿಗೆ ಪ್ರತಿದಿನ 10 ಕಿ.ಮೀ.ಗಳಷ್ಟು ದೂರ ಕಾಲ್ನಡಿಗೆಯಲ್ಲಿ ನಡೆದು, ಸೋಲಿಗ ಜನಾಂಗದವರ ಮನೆಗಳಿಗೆ ಹೋಗಿ ಅವರಿಗೆ ಸಮಯಕ್ಕೆ ಸರಿಯಾಗಿ
ಚಿಕಿತ್ಸೆ ನೀಡುತ್ತಾ ಆಶಾ ಕಾರ್ಯಕರ್ತೆಯಾದ ಗಂಗಾ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಕಾಡಂಚಿನ
ಆದಿವಾಸಿ ಹಾಡಿಗಳಲ್ಲಿ ಆರೋಗ್ಯದ ಅರಿವು ಮೂಡಿಸುತ್ತಿರುವ ಇವರ ಪ್ರತಿದಿನದ ಕಾರ್ಯವೇ ಒಂದು ಸಾಹಸಮಯ ಗಾಥೆ.

ಗಂಗಾ ಪ್ರತಿದಿನ ತಮ್ಮ ಮನೆಯ ಕೆಲಸ ಮುಗಿಸಿ ಹಾಡಿಗಳಲ್ಲಿ ಆರೋಗ್ಯ ತಪಾಸಣೆಗಾಗಿ ತೆರಳುತ್ತಾರೆ. ಅವರು
ಹೋಗುವ ದಾರಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮೈ ನಡುಕ ಹುಟ್ಟಿಸಿದರೂ ಅವರ ಹೆಜ್ಜೆಗಳು ಮಾತ್ರ
ನಿಲ್ಲುವುದಿಲ್ಲ. “ನಾನು ಪ್ರತಿದಿನ ನನ್ನ ಹೃದಯವನ್ನು ಕೈಯಲ್ಲಿ ಹಿಡಿದುಕೊಂಡು ನಡೆದು ಹೋಗುತ್ತೇನೆ.
ನಾನು ಈ ಕೆಲಸ ಮಾಡುವುದರಿಂದ ಆದಿವಾಸಿಗಳಲ್ಲಿ ಜಾಗೃತಿ ಮೂಡುತ್ತದೆ, ಜೀವಗಳು ಉಳಿಯುತ್ತವೆ”
ಎಂದು ಗಂಗಾ ಹೇಳುತ್ತಾರೆ. ಎದುರಾಗುವ ಕಾಡುಪ್ರಾಣಿಗಳನ್ನು ಎದುರಿಸಲು ತಮ್ಮ ರಕ್ಷಣೆಗಾಗಿ ಅವರು ಕೈಯಲ್ಲಿ ಹಿಡಿದು ನಡೆಯುವ ಆಯುಧ ಕೇವಲ ಒಂದು ಕಡ್ಡಿ..!

ಇನ್ನು ಹಾಡಿಯಲ್ಲಿ ಇವರ ಕೆಲಸವೇನೂ ಸುಲಭದ್ದಲ್ಲ. ಸೋಲಿಗರು, ತಮ್ಮ ಜೀವನವನ್ನು ಅರಣ್ಯದೊಂದಿಗೆ
ಬೆಸೆದುಕೊಂಡು ಬಾಳುವ ಜನ. ಹಾಗಾಗಿ ಔಷಧಿ, ಆಸ್ಪತ್ರೆ ಅಥವಾ ಆಧುನಿಕ ವೈದ್ಯಕೀಯ ಸೇವೆಗಳನ್ನು
ಬಳಸುವಲ್ಲಿ ಅವರು ಹಿಂದೇಟು ಹಾಕುತ್ತಾರೆ. ಆದರೆ, ತಮ್ಮ ಸಹನೆ, ಆತ್ಮೀಯ ಮಾತುಗಳಿಂದ ಅವರ
ವಿಶ್ವಾಸವನ್ನು ಗೆದ್ದು, ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಹೋಗುವುದಕ್ಕೆ ಗಂಗಾ
ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಗಂಗಾ ಅವರ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಕಾಡಂಚಿನ ಹಾಡಿಗಳಲ್ಲಿರುವ ಬಾಣಂತಿ, ಮಕ್ಕಳು
ಅಥವಾ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಇಲ್ಲಿ ಬಸ್ ಅಥವಾ ವಾಹನಗಳ
ಅನುಕೂಲವಿಲ್ಲ. ಹಾಗಾಗಿ ಗಂಗಾ ತಾವೇ ಒಂದು ಜೀಪ್ ಮಾಡಿಕೊಂಡು ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ
ಕರೆದೊಯ್ದು ಚಿಕಿತ್ಸೆ ಕೊಡಿಸಿ ಮರಳಿ ಅವರ ಹಾಡಿಗಳಿಗೆ ಕರೆದೊಯ್ಯಬೇಕು. ಆದರೆ, ಅವರ ಶ್ರಮಕ್ಕೆ ಸಿಗುವ
ಪ್ರತಿಫಲ ಮಾತ್ರ ನಗಣ್ಯ. ಇದರೊಂದಿಗೆ ಆನ್ ಲೈನ್ನಲ್ಲಿ ತಮ್ಮ ಕೆಲಸವನ್ನು ಅಪ್ ಡೇಟ್ ಮಾಡಲು
ಪರದಾಟ ಬೇರೆ.

ಇದು ಕೇವಲ ಗಂಗಾ ಒಬ್ಬರ ಕಥೆಯಲ್ಲ. ರಾಜ್ಯದಲ್ಲಿರುವ ಒಟ್ಟು 42,000 ಆಶಾ ಕಾರ್ಯಕರ್ತೆಯರ ಪೈಕಿ 38,679 ಮಂದಿ ಗ್ರಾಮಾಂತರ ಪ್ರದೇಶ ಗಳಲ್ಲಿ ಕೆಲಸ ಮಾಡುತ್ತಾರೆ. ಇವರಲ್ಲಿ ಕೇವಲ ಪ್ರಾಥಮಿಕ ಅಥವಾ ಹೆಚ್ಚೆಂದರೆ ಹೈಸ್ಕೂಲ್ ಶಿಕ್ಷಣವನ್ನು ಮಾತ್ರ ಪಡೆದಿರುವ ಆಶಾಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಅಧಿಕ ಮಂದಿ ಬಡತನದಲ್ಲೇ ಬದುಕುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಆಶಾಗಳ ಬಳಿ ಇರುವುದು ಕೇವಲ ಬೇಸಿಕ್ ಮೊಬೈಲ್ ಫೋನ್. ಆದರೆ, ಆರೋಗ್ಯ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಎಲ್ಲ ಕೆಲಸಗಳನ್ನೂ ಮೊಬೈಲ್ ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲಿಸಬೇಕು. ಆದರೆ ಹಳ್ಳಿಗಳಲ್ಲಿ ಇಂತಹ ಡಿಜಿಟಲ್ ಕೆಲಸ ಮಾಡಲು ಇಂಟರ್ ನೆಟ್ ಡೇಟಾ ಸಿಗುವುದಿಲ್ಲ. ಹಾಗಾಗಿ ಈ ಭಾಗದಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರು 5,000 ರೂ. ಪ್ರೋತ್ಸಾಹಧನಕ್ಕಾಗಿ ಹತ್ತಿರದ ಊರುಗಳಿಗೆ ಹೋಗಿ ದುಡ್ಡು ಕೊಟ್ಟು ತಮ್ಮ ದಿನದ ಕೆಲಸಗಳನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿಸಬೇಕು. ಇದು ಅವರ ಜೀವನಕ್ಕೆ ಹೆಚ್ಚುವರಿ ಹೊರೆಯಾಗಿದೆ.

ಹಾಗಾಗಿ ಮೊಬೈಲ್ ಇಲ್ಲದ ಅಥವಾ ಡೇಟಾ ಬಳಕೆ ಮಾಡಲು ತಿಳಿದಿಲ್ಲದ ಆಶಾ ಕಾರ್ಯಕರ್ತೆಯರಿಗೆ,
ಸರ್ಕಾರವೇ ಸಹಾಯ ಮಾಡಬೇಕು ಎಂಬುದು ಆಶಾಗಳ ಬೇಡಿಕೆಯಾಗಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು, ಅಗತ್ಯವೆನ್ನಿಸಿರುವ ಸ್ಮಾರ್ಟ್ ಫೋನ್, ಡೇಟಾ ಸೌಲಭ್ಯವನ್ನು ಒದಗಿಸಬೇಕು. ಇದರೊಂದಿಗೆ ಆಶಾ ಕಾರ್ಯಕರ್ತೆಯರು ತಮ್ಮ ಸೇವೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಅನುವು ಮಾಡಿಕೊಡಬೇಕು.

ಕಾಡಂಚಿನ ಹಾಡಿಗಳಲ್ಲಿರುವ ಬಾಣಂತಿ, ಮಕ್ಕಳು ಅಥವಾ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಇಲ್ಲಿ ಬಸ್ ಅಥವಾ ವಾಹನಗಳ ಅನುಕೂಲವಿಲ್ಲ. ಹಾಗಾಗಿ ಗಂಗಾ ತಾವೇ ಒಂದು ಜೀಪ್ ಮಾಡಿಕೊಂಡು ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮರಳಿ ಅವರ ಹಾಡಿಗಳಿಗೆ ಕರೆದೊಯ್ಯಬೇಕು. ಆದರೆ, ಅವರ ಶ್ರಮಕ್ಕೆ ಸಿಗುವ ಪ್ರತಿಫಲ ಮಾತ್ರ ನಗಣ್ಯ. ಇದರೊಂದಿಗೆ ಆನ್‌ಲೈನ್‌ನಲ್ಲಿ ತಮ್ಮ ಕೆಲಸವನ್ನು ಅಪ್ ಡೇಟ್ ಮಾಡಲು ಪರದಾಟ ಬೇರೆ.

. ಪೋರ್ಟಲ್ನಲ್ಲಿ ಕೆಲಸ ಅಪ್‌ಡೇಟ್‌ ಕಡ್ಡಾಯದಿಂದ ಸಮಸ್ಯೆ.
.ರಾಜ್ಯದಲ್ಲಿರುವ ಒಟ್ಟು 42 ಸಾವಿರ ಆಶಾ ಕಾರ್ಯಕರ್ತರಲ್ಲಿ38,769 ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ನಿರ್ವಹಣೆ.
. ಡೇಟಾ ಸಮಸ್ಯೆಯಿಂದ ಹತ್ತಿರದ ಊರುಗಳಿಗೆ ಹೋಗಿ ಸ್ವಂತ ಖರ್ಚಿನಲ್ಲಿ ತಮ್ಮ ಕೆಲಸಗಳನ್ನು ಅಪ್‌ಡೇಟ್‌
ಮಾಡಿಸಬೇಕಾದ ಪರಿಸ್ಥಿತಿ.

ʼಡಿ ಗ್ರೂಪ್ ನೌಕರರಾಗಿ ನಿಯೋಜಿಸಬೇಕು’

ನಮಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಈಗಿರುವ ಬೆಲೆ ಏರಿಕೆಯಲ್ಲಿ ನಮ್ಮ ಜೀವನ ಬಹಳ ಕಷ್ಟವಾಗಿದೆ. ಸರ್ಕಾರ ನಮ್ಮನ್ನು ಡಿ ಗ್ರೂಪ್ ನೌಕರರಾಗಿ ನಿಯೋಜಿಸಬೇಕು. ಹಾಗಾದಾಗ ಮಾತ್ರ ನಾವು ಪಡುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಹಾಗಾಗುತ್ತದೆ ಹಾಗೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

– ಭಾಗ್ಯ, ಆಶಾ ಕಾರ್ಯಕರ್ತೆ, ಸರಗೂರು.

ಆಂದೋಲನ ಡೆಸ್ಕ್

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

6 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

6 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

7 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

8 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

8 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

9 hours ago