ರಾಜ್ಯದ ಅನೇಕ ಧೀಮಂತ ನಾಯಕರಂತೆ ಉತ್ತಮ ವ್ಯಕ್ತಿತ್ವದ, ಸರಳತೆಯ ರಾಜಕಾರಣಿಯಾಗಿ, ಯಾವಾಗಲೂ ಜನರ ಮಧ್ಯೆ ಒಡನಾಡುವ ಹಾಗೂ ರಾಜಕೀಯ ಚತುರರಲ್ಲಿ ಒಬ್ಬರಾಗಿದ್ದಾರೆ ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಐಟಿ ಬಿಟಿ ಸಚಿವರು ಹಾಗೂ ಹಾಲಿ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್.
ವಿಲಾಸಿ ಬದುಕಿಗೆ ಎಂದೂ ಮಾರುಹೋಗದೆ, ರಾಜಕಾರಣ, ಅಧಿಕಾರವನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳದೆ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಕಂಡುಕೊಂಡವರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್, ಸೆನೆಟ್ ಸದಸ್ಯರು ಮತ್ತು ಬೆಂಗಳೂರು ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ನೌಕರರ ಸಂಘದ ಮುಖಂಡರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಅಶ್ವಥ್ ನಾರಾಯಣ್ ಅವರದು ಮೃದು ಸ್ವಭಾವದ, ಯಾವಾಗಲೂ ಹಸನ್ಮುಖಿಯಾದ ಸರಳ ಸಜ್ಜನಿಕೆಯ ವ್ಯಕ್ತಿತ್ವ. ಹಾಗೆಯೇ ಅವರನಿಲುವುಗಳು ಅಷ್ಟೇ ಗಟ್ಟಿತನದಿಂದ ಕೂಡಿರುತ್ತವೆ. ಎಂಬಿಬಿಎಸ್ ಪದವಿಯನ್ನು ಮುಗಿಸಿದ ನಂತರ ಅವರು ಪದ್ಮಶ್ರೀ ಚಾರಿಟಬಲ್ ಟ್ರಸ್ಟ್ ಮತ್ತು ಸುಶ್ರುತ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಪ್ರಾರಂಭಿಸಿದರು. ಪ್ಯಾರಾ ಮೆಡಿಕಲ್ ಮ್ಯಾನೇಜ್ಮೆಂಟ್, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಆಯುರ್ವೇದದ ವೈದ್ಯಕೀಯ ವಿಜ್ಞಾನದಲ್ಲಿ ವಿವಿಧ ಕೋರ್ಸುಗಳನ್ನು ನಡೆಸುತ್ತಾ ಬಂದಿದ್ದಾರೆ.
೧೯೬೯ರ -ಬ್ರವರಿ ೨ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕ ಕಲ್ಯ ಗ್ರಾಮದ ಟಿ.ಕೆ.ನಾರಾಯಣಪ್ಪ ಮತ್ತು ಎ.ಎಲ್.ಪದ್ಮಮ್ಮ ದಂಪತಿಯ ಪುತ್ರರಾಗಿ ಜನಿಸಿದ ಅಶ್ವಥ್ ನಾರಾಯಣ್ ಅವರು ಕೂಡು ಕುಟುಂಬದಿಂದ ಬಂದವರು. ಪತ್ನಿ ಎಚ್.ಎಸ್.ಶ್ರುತಿ, ಇಬ್ಬರು ಮಕ್ಕಳೊಂದಿಗೆ ತುಂಬುಜೀವನ ನಡೆಸುತ್ತಿದ್ದಾರೆ.
ಡಾ.ಅಶ್ವಥ್ ನಾರಾಯಣ್ ಅವರು ಉತ್ತಮ ವಿದ್ಯಾಭ್ಯಾಸದೊಂದಿಗೆ ಅತ್ಯಧಿಕ ಅಂಕಗಳನ್ನು ಪಡೆದು ಮಂಗಳೂರಿನ ಕಸ್ತೂರ ಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ೧೯೯೫ರಲ್ಲಿ ಮುಗಿಸಿದರು. ಬಾಲ್ಯದಿಂದಲೂ ತನ್ನದೇ ಆದ ಸರಳತೆಯ ಚಿಂತನೆಗಳಿಂದ ಬದುಕು ಕಟ್ಟಿಕೊಂಡವರು. ಸಾಮಾಜಿಕ ಮೌಲ್ಯವನ್ನು ಬೆಳೆಸಿಕೊಂಡವರು. ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ತಮ್ಮ ರಾಜಕೀಯ ವೃತ್ತಿಯನ್ನು ಆರಂಭಿಸಿದ ಡಾ.ಅಶ್ವಥ್ ನಾರಾಯಣ್ ಅವರು, ೨೦೦೪ರಲ್ಲಿ ಬಿಜೆಪಿ ಪಕ್ಷವನ್ನು ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.
೨೦೦೮ರಲ್ಲಿ ಅವರು ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಭಾರಿ ಶಾಸಕರಾಗಿದ್ದ ಎಂ.ಆರ್.ಸೀತಾರಾಮ್ ವಿರುದ್ಧ ಭಾರೀ ಅಂತರದಿಂದ ಗೆದ್ದು ವಿಧಾನಸಭೆಗೆ ಪ್ರವೇಶ ಮಾಡಿದರು. ನಂತರ ಅವರನ್ನು ಬೆಂಗಳೂರು ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ೨೦೦೮, ೨೦೧೩, ೨೦೧೮, ೨೦೨೩ ಸತತ ನಾಲ್ಕು ಬಾರಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸುತ್ತ ಬಂದಿರುವ ಇವರು ರಾಜ್ಯದ ಧಿಮಂತ ನಾಯಕರಾದ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ, ಐಟಿ ಮತ್ತು ಬಿಟಿ ಸಚಿವರಾಗಿ, ಕೌಶಲ ಅಭಿವೃದ್ಧಿ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ರಾಜಕೀಯ ಸೇವೆ ಸಲ್ಲಿಸಿದ್ದಾರೆ.
ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ವಿಧಾನಸಭೆಯಲ್ಲಿ ಜನಪರ ಕಾರ್ಯಕ್ರಮಗಳ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ, ವಿಜ್ಞಾನ ತಂತ್ರಜ್ಞಾನದ ಬಗ್ಗೆ, ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚಿಂತಿಸುತ್ತಾ ಸಾಕಷ್ಟು ಚರ್ಚೆಗಳಲ್ಲಿ ಭಾಗವಹಿಸಿ ಮನ್ನಣೆ ಪಡೆದಿದ್ದಾರೆ. ಅಶ್ವಥ್ ನಾರಾಯಣ್ ಅವರು ತಾನು ಬೆಳೆದು ತನ್ನವರನ್ನೂ ಬೆಳೆಸುವ ಗುಣವನ್ನು ಹೊಂದಿರುವವರು. ಯುವ ಸಮುದಾಯವನ್ನು ಕಟ್ಟುವ, ಅವರನ್ನು ಜಾಗೃತಗೊಳಿಸುವ ಸ್ವಾಮಿ ವಿವೇಕಾನಂದರ ಗುಣವನ್ನು ಹೊಂದಿರುವವರು ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂಬ ಕನಸನ್ನು ಹೊತ್ತವರು.
ಅಶ್ವಥ್ ನಾರಾಯಣ್ ಅವರು ರೂಪಿಸಿದ ಅನೇಕ ಜನಪ್ರಿಯ ನೀತಿಗಳನ್ನು ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಮೆಚ್ಚಿ ಹೊಗಳಿರುವುದೂ ಉಂಟು. ಯಾವಾಗಲೂ ಅಭಿವೃದ್ಧಿ ಚಿಂತನೆ ಮಾಡುವ ಇವರು ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಮಾದರಿ ಶಿಕ್ಷಣ, ಅಭಿವೃದ್ಧಿ, ಮೂಲಭೂತ ಸೌಲಭ್ಯಗಳು, ತಂತ್ರಜ್ಞಾನ ಎಲ್ಲರಿಗೂ ದೊರಕಬೇಕೆಂಬ ಛಲ ಇವರದ್ದು. ಹಣ ಹಾಗೂ ಅಧಿಕಾರಕ್ಕಿಂತ ಜನರ ಅಭ್ಯುದಯವೇ ಮುಖ್ಯ ಎಂದು ಜನರಪರ ಕೆಲಸಗಳನ್ನು ಮಾಡುತ್ತಾ ಪಾರದರ್ಶಕ ಆಡಳಿತದೊಂದಿಗೆ ಮುನ್ನಡೆಯುತ್ತಿದ್ದಾರೆ.
ಅಶ್ವಥ್ ನಾರಾಯಣ್ ಅವರು ಬುದ್ಧ, ಬಸವ, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪು, ವಾಲ್ಮೀಕಿ ಹಾಗೂ ಆರ್‌ಎಸ್ ಎಸ್ ತತ್ವಗಳನ್ನು ಚಿಕ್ಕ ವಯಸ್ಸಿನಿಂದಲೂ ಮೈಗೂಡಿಸಿಕೊಂಡು ಬಂದ ಅಹಿಂದ ನಾಯಕರಲ್ಲಿ ಒಬ್ಬರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಪಣ ತೊಟ್ಟು ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮಾಯಿಯವರಿಂದ ಅನುದಾನ ಬಿಡುಗಡೆ ಮಾಡುವಂತೆ ನೋಡಿಕೊಂಡರು. ಅದರಂತೆ ೨೦೨೨ರ ನವೆಂಬರ್ ೧೧ರಂದು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಂದ ೧೦೮ ಅಡಿಯ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿಸಿದ ಕೀರ್ತಿ ಡಾ.ಅಶ್ವಥ್ ನಾರಾಯಣ್ ಅವರಿಗೆ ಸಲ್ಲುತ್ತದೆ. ಅಲ್ಲದೆ ನಗರದ ಸ್ಥಾಪಕರ ಮತ್ತು ಅತಿ ಎತ್ತರದ ಕಂಚಿನ ಪ್ರತಿಮೆ ಎಂದು ಪ್ರತಿಷ್ಠಿತ ಲಂಡನ್‌ನ ‘world
record’ ಪುಸ್ತಕದಲ್ಲಿ ಉಲ್ಲೇಕವಾಗಿದೆ.
ಅಶ್ವಥ್ ನಾರಾಯಣ್ ಅವರು ಹೀಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಆದರ್ಶಗಳನ್ನು ಮೈಗೂಡಿಸಿಕೊಂಡು ಹೊಸತನಗಳೊಂದಿಗೆ ಸ್ನೇಹ ಪಡೆಯನ್ನು ಕಟ್ಟಿಕೊಂಡು ‘ಕೆಂಪೇಗೌಡ ಪ್ರತಿಷ್ಠಾನ’ ರಚಿಸಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎಲ್ಲ ಸಮುದಾಯಗಳನ್ನೂ ಒಟ್ಟುಗೂಡಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಸಾಮಾಜಿಕ ಸೇವೆ, ಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಮಾದರಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಅಶ್ವಥ್ ನಾರಾಯಣ್ ಹಾಗೂ ಅವರ ಎಲ್ಲ ಸ್ನೇಹ ವರ್ಗದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಪ್ರಪಂಚದಾದ್ಯಂತ ಪಸರಿಸುವ ಆಕಾಂಕ್ಷೆ ಹೊತ್ತಿರುವ ಡಾ.ಅಶ್ವಥ್ ನಾರಾಯಣ್ ಅವರು ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡು, ಹೊಸತನಗಳೊಂದಿಗೆ ಕರ್ನಾಟಕದ ಅಭಿವೃದ್ಧಿಗೆ ಅನೇಕ ಚಿಂತನೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯವೇ ಸರಿ. ಒಟ್ಟಾರೆಯಾಗಿ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಂದ ಸದಾಕಾಲ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ, ರಾಜ್ಯ ರಾಜಕಾರಣದಲ್ಲಿ ಇತರರಿಗೆ ಮಾದರಿಯಾಗಿ ಅನೇಕ ಅಭಿವೃದ್ಧಿಯ ಚಿಂತನೆಗಳನ್ನು, ಅನೇಕ ಆದರ್ಶಗಳನ್ನು, ಅನೇಕ ರೈತ ಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ, ತಮ್ಮ ಮಾತಿನ ಧಾಟಿಯಲ್ಲೇ ಸದನದಲ್ಲಿ ವಿರೋಧಿಗಳ ಜೊತೆ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಉತ್ತಮ ಸಾಮಾಜಿಕ ಮತ್ತು ರಾಜಕೀಯ ಸೇವೆ ಮಾಡುತ್ತಾ ಬಂದಿರುವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಭವಿಷ್ಯದಲ್ಲಿ ಮುಖ್ಯ ಮಂತ್ರಿಯಾಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ.
ಡಾ.ಮನು ಶಿವರಾಮ್, ವಿಶ್ಲೇಷಕರು ಮತ್ತು ಆರ್ಥಿಕ ಚಿಂತಕರು, ಮೈಸೂರು ವಿವಿ
” ಅಶ್ವಥ್ ನಾರಾಯಣ್ ಅವರು ಬುದ್ಧ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಕುವೆಂಪು, ವಾಲ್ಮೀಕಿ ಹಾಗೂ ಆರ್‌ಎಸ್‌ಎಸ್ ತತ್ವಗಳನ್ನು ಚಿಕ್ಕ ವಯಸ್ಸಿನಿಂದಲೂ ಮೈಗೂಡಿಸಿ ಕೊಂಡು ಬಂದ ಅಹಿಂದ ನಾಯಕರಲ್ಲಿ ಒಬ್ಬರು. ಮಾದರಿ ಶಿಕ್ಷಣ, ಅಭಿವೃದ್ಧಿ, ಮೂಲಭೂತ ಸೌಲಭ್ಯಗಳು, ತಂತ್ರಜ್ಞಾನ ಎಲ್ಲರಿಗೂ ದೊರಕಬೇಕೆಂಬ ಛಲ ಇವರದ್ದು. ಹಣ ಹಾಗೂ ಅಧಿಕಾರಕ್ಕಿಂತ ಜನರ ಅಭ್ಯುದಯವೇ ಮುಖ್ಯ ಎಂದು ಜನರಪರ ಕೆಲಸಗಳನ್ನು ಮಾಡುತ್ತಾ ಪಾರದರ್ಶಕ ಆಡಳಿತದೊಂದಿಗೆ ಮುನ್ನಡೆಯುತ್ತಿದ್ದಾರೆ.”
” ಜನರೊಂದಿಗೆ ಒಡನಾಡುವ ರಾಜಕೀಯ ಚತುರರಾದ ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಮಲ್ಲೇಶ್ವರಂ ಶಾಸಕ”
ಲಕ್ಕುಂಡಿ : ಅದೊಂದು ಐತಿಹಾಸಿಕ ಗ್ರಾಮ. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು..... ಅದ್ಭುತ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ…
ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…
ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…
ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…