Andolana originals

‘ಪ್ರಾದೇಶಿಕ ಪಕ್ಷಗಳಿಂದಷ್ಟೇ ರಾಜ್ಯಗಳ ಅಭಿವೃದ್ಧಿ ಸಾಧ್ಯ’

‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ

ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವಂತಾದರೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.

ನಗರದ ಬೋಗಾದಿ-ಗದ್ದಿಗೆ ಮುಖ್ಯರಸ್ತೆಯಲ್ಲಿರುವ ಬನವಾಸಿ ತೋಟದ ಅರಿವಿನ ಚಾವಡಿಯಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿವಿಧ ವಿಷಯಗಳ ಸಂವಾದದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಪ್ರಸ್ತುತ ರಾಜಕೀಯ ನಿಲುವುಗಳು’ ಎಂಬ ವಿಷಯ ಕುರಿತು ಮಾತನಾಡಿದರು.

ದೇಶ ಅಭಿವೃದ್ಧಿ ಹೊಂದಬೇಕಾದರೆ ಅದು ಪ್ರಾದೇಶಿಕ ಪಕ್ಷಗಳಿಂದಲೇ ಹೊರತು, ರಾಷ್ಟ್ರೀಯ ಪಕ್ಷಗಳಿಂದಲ್ಲ. ರಾಷ್ಟ್ರೀಯ ಪಕ್ಷಗಳು ತಮ್ಮ ಬೆಳವಣಿಗೆಗೆ ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಳ್ಳುತ್ತವೆಯೇ ಹೊರತು ಅಭಿವೃದ್ಧಿ ಗಾಗಿ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸಬೇಕು ಎಂದರು.

ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಂತೆ ಇತರೆ ರಾಜ್ಯಗಳಲ್ಲೂ ಆಡಳಿತ ನಡೆಸಬೇಕು. ದೇಶದ ಹಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಆಡಳಿತ ನಡೆಸುತ್ತಿವೆ. ಕ್ರಮೇಣ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ‘ಟು ಪಾರ್ಟಿ ಸಿಸ್ಟಂ’ ಜಾರಿಗೆ ಬರುವಂತೆ ಮಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪರ್ಯಾಯವಾಗಿ ಪ್ರಾದೇಶಿಕ ಪಕ್ಷವನ್ನು ಕಟ್ಟಲು ಗೋಕಾಕ್ ಚಳವಳಿ ನಂತರ ವರನಟ ಡಾ.ರಾಜ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರಿಗೆ ಮಾತ್ರ ಅವಕಾಶವಿತ್ತು. ಆದರೆ, ಡಾ.ರಾಜ್ ಕುಮಾರ್ ರಾಜಕೀಯಕ್ಕೆ ಬರಲು ಮನಸ್ಸು ಮಾಡಲಿಲ್ಲ, ಅವರನ್ನು ಹೊರತುಪಡಿಸಿ ಅನೇಕರು ರಾಜ್ಯದಲ್ಲಿ ಪಕ್ಷ ಕಟ್ಟಲು ಹೋಗಿ ವಿಫಲರಾದರು ಎಂದು ನುಡಿದರು.

ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅಂಥವರು ರಾಷ್ಟ್ರೀಯ ಪಕ್ಷಗಳ ಮೇಲಿನ ವೈಯಕ್ತಿಕ ಸಿಟ್ಟಿಗೆ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾದರೂ ಯಶಸ್ಸುಗಳಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ರಾಜಕೀಯ ಚರ್ಚೆಯಲ್ಲಿ ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್‌ನಿಂದ ದೂರ ಸರಿದು ಬೇರೆ ಪ್ರಾದೇಶಿಕ ಪಕ್ಷ ಕಟ್ಟುವುದಾದರೆ ಅವರೂ ಕೂಡ ನಾಲ್ಕೈದು ಶಾಸಕ ಸ್ಥಾನ ಪಡೆಯುದಕ್ಕಷ್ಟೇ ಸೀಮಿತರಾಗಿ ರಾಜ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬಹುದಾದ ಅನುದಾನದಲ್ಲಿ ಅನ್ಯಾಯವಾಗಿರುವ ಬಗ್ಗೆ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ ಅದರ ಫಲವಾಗಿ ಪ್ರಾದೇಶಿಕ ಪಕ್ಷ ಕಟ್ಟಬಹುದಾದ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದರು.

‘ರೈತಸಂಘ ನಡೆದು ಬಂದ ಹಾದಿ’ ಕುರಿತು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ದಲಿತ ಚಳವಳಿಯ ಜೊತೆ ಜೊತೆಗೆ ರೈತ ಚಳವಳಿ ಪ್ರಾರಂಭಗೊಂಡು ರೈತ ವಿರೋಽ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ವಿರುದ್ಧ ಹೋರಾಟಕ್ಕಿಳಿದು ಬಹುದೊಡ್ಡ ಹೋರಾಟ ಸೃಷ್ಟಿ ಮಾಡಿ ಹಲವು ಬದಲಾವಣೆಗೆ ಕಾರಣವಾಗಿದೆ. ರೈತರ ಕುಟುಂಬದ ಮೇಲೆ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ರೈತ ಚಳವಳಿ ಸಿಡಿದೆದ್ದು, ಅಧಿಕಾರಿಗಳ ದರ್ಪವನ್ನು ಮೆಟ್ಟಿ ನಿಲ್ಲಲಾಯಿತು ಎಂದರು.

ಸಾಮಾಜಿಕ ಬದಲಾವಣೆಯ ಕಾರ್ಯವನ್ನು ರೈತ ಚಳವಳಿ ಮಾಡಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆ ಮಾಡಿಸಿದ್ದೇವೆ. ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಸುವ ಮೂಲಕ ಜಾತಿ ಹಾಗೂ ಮೌಢ್ಯಗಳ ವಿರುದ್ಧ ರೈತ ಚಳವಳಿ ನಡೆದಿದೆ. ಈ ನಡುವೆ ರೈತ ಚಳವಳಿಯಲ್ಲಿ ಒಡಕು ಉಂಟಾಗಿರಬಹುದು. ಆದರೆ ಸೈದ್ಧಾಂತಿಕವಾಗಿ ಬದಲಾಗದೆ ಗಟ್ಟಿಯಾಗಿ ನಿಂತಿದೆ. ರಾಜ್ಯದಲ್ಲಿ ರೈತರು, ಕಾರ್ಮಿಕರು ಹಾಗೂ ದಲಿತರು ಒಗ್ಗಟ್ಟಾಗಿದ್ದಾರೆ ಎಂದು ತಿಳಿಸಿದರು.

‘ರೈತಸಂಘ ನಡೆದು ಬಂದ ಹಾದಿ’ ಕುರಿತು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ದಲಿತ ಚಳವಳಿಯ ಜೊತೆ ಜೊತೆಗೆ ರೈತ ಚಳವಳಿ ಪ್ರಾರಂಭಗೊಂಡು ರೈತ ವಿರೋಧಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ವಿರುದ್ಧ ಹೋರಾಟಕ್ಕಿಳಿದು ಬಹುದೊಡ್ಡ ಹೋರಾಟ ಸೃಷ್ಟಿ ಮಾಡಿ ಹಲವು ಬದಲಾವಣೆಗೆ ಕಾರಣವಾಗಿದೆ. ರೈತರ ಕುಟುಂಬದ ಮೇಲೆ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ರೈತ ಚಳವಳಿ ಸಿಡಿದೆದ್ದು, ಅಧಿಕಾರಿಗಳ ದರ್ಪವನ್ನು ಮೆಟ್ಟಿ ನಿಲ್ಲಲಾಯಿತು ಎಂದರು.

ಸಾಮಾಜಿಕ ಬದಲಾವಣೆಯ ಕಾರ್ಯವನ್ನು ರೈತ ಚಳವಳಿ ಮಾಡಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆ ಮಾಡಿಸಿದ್ದೇವೆ. ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಸುವ ಮೂಲಕ ಜಾತಿ ಹಾಗೂ ಮೌಢ್ಯಗಳ ವಿರುದ್ಧ ರೈತ ಚಳವಳಿ ನಡೆದಿದೆ. ಈ ನಡುವೆ ರೈತ ಚಳವಳಿಯಲ್ಲಿ ಒಡಕು ಉಂಟಾಗಿರಬಹುದು. ಆದರೆ ಸೈದ್ಧಾಂತಿಕವಾಗಿ ಬದಲಾಗದೆ ಗಟ್ಟಿಯಾಗಿ ನಿಂತಿದೆ. ರಾಜ್ಯದಲ್ಲಿ ರೈತರು, ಕಾರ್ಮಿಕರು ಹಾಗೂ ದಲಿತರು ಒಗ್ಗಟ್ಟಾಗಿದ್ದಾರೆ ಎಂದು ತಿಳಿಸಿದರು.

‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ತಮಿಳುನಾಡಿನಲ್ಲಿ ಯಾವುದೇ ಪಕ್ಷ ಬಂದರೂ ಪೆರಿಯಾರ್ ಹೆಸರೇಳಲೇಬೇಕು. ಹಾಗೆಯೇ ಕೇರಳದಲ್ಲಿ ನಾರಾಯಣಗುರು ಹೆಸರೇಳುತ್ತಾರೆ. ನಮ್ಮ ರಾಜ್ಯದಲ್ಲಿ ಬಸವಣ್ಣನವರೇ ಐಕಾನ್ ಆಗಬೇಕಿತ್ತು. ಆದರೆ, ಬಸವಣ್ಣನವರ ಅನುಯಾಯಿಗಳು ಅವರನ್ನೇ ಮರೆತು ಬಿಟ್ಟರು. ಜನಪರ ರಾಜಕಾರಣ ಬರುವುದು ಚಳವಳಿಗಳ ಉತ್ಪನ್ನವಾಗಿ ಬರುವ ಪ್ರಾದೇಶಿಕ ಪಕ್ಷಗಳಿಂದ ಮಾತ್ರ.”

-ದಿನೇಶ್ ಅಮಿನ್‌ಮಟ್ಟು, ಹಿರಿಯ ಪತ್ರಕರ್ತ

” ಓದುವ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅರಿವಿರಬೇಕು. ಆ ಮೂಲಕ ದೊಡ್ಡ ಹುದ್ದೆಗಳನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಸದಾ ಉತ್ಸಾಹದಿಂದಿರಬೇಕು. ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು, ಆಸಕ್ತಿ ಇರುವಂತಹ ಸಮೂಹದ ಜೊತೆ ಗುರುತಿಸಿಕೊಂಡು ನಿಗದಿತ ವೇಳಾಪಟ್ಟಿಯೊಂದಿಗೆ ಓದಬೇಕು.

-ಮಂಜುನಾಥ್ ಸೋಸಲೆ, ಅಧಿಕಾರಿ

” ಜಾಗತೀಕರಣವೋ? ಮರು ವಸಾಹತುಕರಣವೋ? ಎಂಬ ವಿಚಾರದ ಬಗ್ಗೆ ಚಿಂತಕ ಎಚ್.ಎಸ್.ಶಿವಸುಂದರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರೈತರು ತಮ್ಮ ಭೂಮಿಯಲ್ಲಿ ತಮಗಿಷ್ಟದ ಬೆಳೆ ಬೆಳೆಯಲು ಸ್ವಾತಂತ್ರ್ಯವಿರಲಿಲ್ಲ . ಸಂಪೂರ್ಣ ನಿಯಂತ್ರಣ ಬ್ರಿಟಿಷ್ ಏಜೆಂಟರ ಕೈಯಲ್ಲಿತ್ತು. ಅದಕ್ಕಾಗಿ ರೈತರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಹಾಗೆಯೇ, ಕಾರ್ಮಿಕರು ತಮ್ಮ ಸ್ವಾತಂತ್ರ್ಯ ಕಳೆದುಕೊಂಡಿದ್ದರು ಅದಕ್ಕಾಗಿ ಹೋರಾಟ ನಡೆಸಿದರು ಎಂದು ಹೇಳಿದರು. ದೇಶದ ಸಂಪತ್ತು ಕೇವಲ ಉಳ್ಳವರಿಗೆ, ಶ್ರೀಮಂತರಿಗೆ ಹಾಗೂ ಕೆಲವರಿಗೆ ಮಾತ್ರ ಹಂಚಿಕೆಯಾಗದೆ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗುವುದನ್ನು ಸಮಾಜವಾದ ಎನ್ನುತ್ತೇವೆ. ೧೯೫೦ರ ಸಂವಿಧಾನ ಜಾರಿ ನಂತರ ಬಾಹ್ಯ ವಸಾಹತೀಕರಣದಿಂದ ಮುಕ್ತಿ ಸಿಕ್ಕಿದೆ. ಆದರೆ ಆಂತರಿಕ ವಸಾಹತೀಕರಣದಿಂದ ಮುಕ್ತಿ ಸಿಕ್ಕಿಲ್ಲ ಎಂದರು. ಹೆಣ್ಣಿನ ಶ್ರಮಕ್ಕೆ ಬೆಲೆಯೇ ಇಲ್ಲದ ಪುರುಷ ಪ್ರಧಾನ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ದಲಿತ ಮಹಿಳೆಗೆ ಅಡುಗೆ ಮಾಡುವ ಪ್ರತಿಭೆ ಇದ್ದರೂ ಬಿಸಿಯೂಟ ಮಾಡಿದರೆ ಅದನ್ನು ನಿರಾಕರಿಸುವ ವ್ಯವಸ್ಥೆ ಇದೆ ಎಂದು ಬೇಸರಿಸಿದರು.”

 

 

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

6 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

6 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

6 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

6 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

6 hours ago

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

1 day ago