Andolana originals

30 ಹಾಡಿಗಳಿಗೂ ಅರಣ್ಯ ಹಕ್ಕು ಪತ್ರಗಳನ್ನು ನೀಡಲು ಆಗ್ರಹ

ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ

ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು ಕಾಯ್ದೆಯ ಅನ್ವಯ ವೈಯಕ್ತಿಕ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು ಹಾಗೂ ಪರಂಪರೆಯ ಅರಣ್ಯ ನೆಲಸುಗಳ ಮೇಲಿನ ಹಕ್ಕುಗಳಿಗೆ ೨೦೧೦-೧೧ನೇ ಸಾಲಿನಲ್ಲಿ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪರಿಗಣಿಸಿ ತಾಲ್ಲೂಕಿನ ಎಲ್ಲ ೩೦ ಹಾಡಿಗಳಿಗೂ ಅರಣ್ಯ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿ ಅರಣ್ಯ ಪ್ರವೇಶ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ವೀರನಹೊಸಹಳ್ಳಿ, ಭಾರತವಾಡಿ ಹಾಗೂ ಕೆರೆ ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳು ವೀರನಹೊಸಹಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಕಾಡನ್ನು ಪ್ರವೇಶಿಸಿ ಆದಿವಾಸಿ ಪರಂಪರೆಯ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಸರ್ಕಾರ ಅರಣ್ಯ ಹಕ್ಕುಗಳಿಗೆ ಹಕ್ಕುಪತ್ರ ನೀಡಬೇಕೆಂದು ದೇವರ ಸನ್ನಿಧಿಯಲ್ಲಿ ಸಭೆ ಸೇರಿ ಪೂಜೆ ಸಲ್ಲಿಸಿ ಮನವಿಗಳನ್ನು ಓದಿ ಸರ್ಕಾರಕ್ಕೆ ಸ್ಥಳೀಯ ಅರಣ್ಯ ಇಲಾಖೆಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಅರಣ್ಯಹಕ್ಕು ಸಮಿತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳಿಗೆ ೧೨ ವರ್ಷಗಳಿಂದ ಹಕ್ಕುಪತ್ರ ನೀಡದೆ ಅನ್ಯಾಯ ಮಾಡಿರುವುದನ್ನು ಸರಿಪಡಿಸಿ ಕೂಡಲೇ ಹಕ್ಕುಪತ್ರ ನೀಡಲು ಮನವಿ ಮಾಡಿದರು.

ಸಾಮೂಹಿಕ ಹಕ್ಕುಪತ್ರ ನೀಡುವ ಕಾಡಿಗೆ ಹಾಡಿ ಅರಣ್ಯ ಹಕ್ಕು ಸಮಿತಿಯ ನಾಮಫಲಕ ಅಳವಡಿಸಿ, ಪ್ರಾಣಿಗಳು ನೀರು ಕುಡಿಯಲು ಬೋರ್ ತೆಗೆಸಿ ಕಾಡೊಳಗಿನ ಖಾಲಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು. ವೀರನಹೊಸಹಳ್ಳಿ ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ ಜಯಂತಿ ಮಾತನಾಡಿ, ತಮ್ಮ ಹಾಡಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ವೀರನಹೊಸಹಳ್ಳಿ ಯಜಮಾನ ಪುಟ್ಟಯ್ಯ, ಯುವಕ ಹರೀಶ್ ಪೂಜಾ ಕಾರ್ಯ ನೆರವೇರಿಸಿದರು. ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮುಖ್ಯಮಂತ್ರಿಗಳಿಗೆ ಸಲ್ಲಿದ ಮನವಿ ಓದಿದರು. ವಿಠಲ್ ನಾಣಚ್ಚಿ ಆರಣ್ಯ ಹಕ್ಕಿನ ಕಾಯ್ದೆಯ ಮಾಹಿತಿ ನೀಡಿದರು. ಡಾ.ಎಸ್.ಶ್ರೀಕಾಂತ್ ಜಿಲ್ಲಾ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಿಗೆ ಸಾಮೂಹಿಕ ಹಾಗೂ ನೆಲಸುಗಳ ಮೇಲಿನ ಹಕ್ಕುಪತ್ರಕ್ಕೆ ಅಗ್ರಹಿಸಿ ಬರೆದಿರುವ ಮನವಿ ಓದಿದರು. ಹೆಮ್ಮಿಗೆ ಹರ್ಷ ಮಾತನಾಡಿ, ನಾಳೆ ತರಿಕಲ್ ಹಾಡಿ ಕಾಡಿಗೆ ಪ್ರವೇಶ ಮಾಡಿ ಅರಣ್ಯಪ್ರವೇಶ ಅಭಿಯಾನ ಮುಕ್ತಾಯಗೊಳಿಸಲಾಗುವುದು ಎಂದರು.

ಆದಿವಾಸಿ ಮುಖಂಡರ ತಂಡ ವಲಯ ಅರಣ್ಯ ಅಧಿಕಾರಿ ಕಚೇರಿಗೆ ತೆರಳಿ ಆರ್‌ಎಫ್‌ಒ ವಿನೋದಗೌಡರ ಪರವಾಗಿ ಹಾಜರಿದ್ದ ಸುನಿಲ್ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾ ಆರಣ್ಯ ಹಕ್ಕು ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ವಿನಂತಿಸಿತು

” ಮುಂದಿನ ವರ್ಷ ಕಾಡು ಪ್ರವೇಶಕ್ಕೂ ಮುನ್ನವೇ ಅರಣ್ಯ ಹಕ್ಕು ನೀಡಬೇಕು. ಇಲ್ಲವಾದರೆ ಸಂವಿಧಾನದ ಹೆಸರಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಅವಮಾನವಾದೀತು.”

-ಭಾರತವಾಡಿ ಲಕ್ಷ್ಮಿ, ಮಹಿಳಾ ಸಂಘದ ಅಧ್ಯಕ್ಷರು

ಆಂದೋಲನ ಡೆಸ್ಕ್

Recent Posts

ಸಚಿವ ಜಮೀರ್‌ ಅಹಮ್ಮದ್‌ ಆಪ್ತ ಕಾರ್ಯದರ್ಶಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಖಾನ್‌ ಮನೆ ಸೇರಿ 10 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು…

43 mins ago

ಕಾರ್ಮಿಕ ಸಂಹಿತೆ ವಾಪಸ್‌ಗೆ ಆಗ್ರಹಿಸಿ ಫೆ.12ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ

ನವದೆಹಲಿ: ಕೇಂದ್ರ ಸರ್ಕಾರದ ವತಿಯಿಂದ ಇತ್ತೀಚೆಗೆ ಜಾರಿಗೊಳಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ 2026ರ ಫೆಬ್ರವರಿ.12ರಂದು ದೇಶವ್ಯಾಪಿ…

47 mins ago

ಶ್ರೀಹರಿಕೋಟ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಬ್ಲೂಬರ್ಡ್‌ ಬ್ಲಾಕ್‌-2 ವಿದೇಶಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ…

1 hour ago

ರಾಜ್ಯದಲ್ಲಿ ಆಘಾತಕಾರಿ ಘಟನೆ: ಗಂಡು ಮಗುವಿಗೆ ಜನ್ಮ ನೀಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

ಹಾಸನ: ರಾಜ್ಯದಲಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಶಾಲಾ ವ್ಯಾನ್‌ ಚಾಲಕನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವ…

2 hours ago

ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ಮೇಲೆ ಎಗರಿದ ಹುಲಿಗಳು; ಚಾಲಕ ಪಾರು

ಹುಣಸೂರು: ಟ್ರಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ಚಾಲಕನ ಹುಲಿಗಳ ದಾಳಿಯಿಂದ ಬಚಾವಾಗಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದಲ್ಲಿ…

2 hours ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪಕ್ಕದ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕದಲ್ಲಿರುವ ಮೋರಿಯೊಳಗೆ ಕಸದ…

3 hours ago