Andolana originals

ಮಾರ್ಗಸೂಚಿ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆಗೆ ಆಗ್ರಹ

ಮೈಸೂರು: ನಾಡಹಬ್ಬ ದಸರೆಯಲ್ಲಿ ಹೊಸದಾಗಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳಲ್ಲಿ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದ ಕನ್ನಡ ಪರ ಹೋರಾಟಗಾರರು, ಹಲವೆಡೆ ‘ಕನ್ನಡ ಮೊದಲು’ ಎಂಬುದಾಗಿ ಕಪ್ಪು ಬಣ್ಣದಲ್ಲಿ ಬರೆಯುವ ಮೂಲಕ ಪ್ರತಿಭಟಿಸಿದರು.

ಸೋಮವಾರದವರೆಗೂ ಕನ್ನಡ ಭಾಷೆಯುಳ್ಳ ಮಾರ್ಗ ಸೂಚಿ ಫಲಕಗಳನ್ನು ಹಾಕಿದ್ದ ಪೊಲೀಸರು, ದಿಢೀರ್ ‘ನೋ ಪಾರ್ಕಿಂಗ್’ ಎಂಬ ಇಂಗ್ಲಿಷ್ ಪ್ರಧಾನವಾದ ನೂರಾರು ಫಲಕ ಗಳನ್ನು ಹಾಕಿರುವುದು ಖಂಡನೀಯ ಎಂದು ಕನ್ನಡ ಪರ ಹೋರಾಟಗಾರರಾದ ಸ. ರ. ಸುದರ್ಶನ ಮತ್ತು ಅರವಿಂದ ಶರ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ಆಹಾರಮೇಳದಲ್ಲಿ ಮಳಿಗೆದಾರರು ತಮ್ಮ ನಾಮಫಲಕಗಳನ್ನು ಕೋಕಾ ಕೋಲಾ ಮತ್ತು ಹ್ಯಾಂಗ್ಯೋ ಸಂಸ್ಥೆಗಳಿಗೆ ಪ್ರಾಯೋಜಿಸಲು ಅವಕಾಶಕೊಟ್ಟು, ಅವು ತಮ್ಮ ಲಾಂಛನಗಳನ್ನು ನಾಮಫಲಕದ ಪ್ರಾರಂಭ ದಲ್ಲೇ ಇಂಗ್ಲಿಷ್‌ನಲ್ಲಿ ಬರೆಯಲು ಸಮ್ಮತಿಸಿರುವುದು ವಿಷಾದನೀಯ ಎಂದು ಕಿಡಿಕಾರಿದ ಅವರು, ಆಹಾರ ಮೇಳದಲ್ಲಿ ಇಂಗ್ಲಿಷ್ ಮೆರೆಸಿದ್ದ ಕೋಕಾ ಕೋಲಾ, ಹ್ಯಾಂಗ್ಯೋ, ಕ್ವಾಲಿಟಿ ಮುಂತಾದ ಕಂಪೆನಿಗಳ ಫಲಕ ಗಳಿಗೂ ಕಪ್ಪು ಬಣ್ಣ ಬಳಿದರು. ಪೊಲೀಸರು ಪ್ರದರ್ಶಿಸಲು ಹಾಕಿ ಕೊಂಡಿರುವ ಗುರುತಿನ ಚೀಟಿಯಲ್ಲೂ ಕನ್ನಡ ಕಾಣೆಯಾಗಿದೆ. ಪೊಲೀಸ್ ಇಲಾಖೆಯು ಸರ್ಕಾರದ ಒಂದು ಭಾಗವಾಗಿದ್ದರೂ ಇಂಗ್ಲಿಷ್ ಆದ್ಯ ತೆಗೆ ಅವಕಾಶ ಕಲ್ಪಿಸಿರುವುದು ನಿಯಮ ಉಲ್ಲಂಘನೆಯಾಗಿದೆ. ಈ ಲೋಪಕ್ಕೆ ಕಾರಣರಾದ ಅಽಕಾರಿಗಳ ಮೇಲೆ ಕ್ರಮಕೈಗೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಽಕಾರವು ಶಿಫಾರಸ್ಸು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜಂಬೂಸವಾರಿಯಂದು ಶೇ. ೬೦ ಕನ್ನಡ ಕಾಣಲೇಬೇಕು: ವಿಜಯದಶಮಿಯ ದಿನ ಜಂಬೂಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಪ್ರಾಯೋಜಕರು ಶೇ. ೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯ ಕೊಟ್ಟು ತಮ್ಮ ಪ್ರಚಾರ ಫಲಕಗಳನ್ನು ಹಾಕಬೇಕು. ಇಲ್ಲದಿದ್ದರೆ. ‘ನಮ್ಮನ್ನು ಬಂಽಸಿದರೂ ಸರಿಯೇ’ ನಾವು ಮಸಿ ಬೆಳೆಯುತ್ತೇವೆ ಎಂದು ಸ. ರ. ಸುದರ್ಶನ ಮತ್ತು ಅರವಿಂದ ಶರ್ಮ ಹೇಳಿದರು.

 

 

andolana

Recent Posts

ಕುರಟ್ಟಿ ಹೊಸೂರಲ್ಲಿ ಪ್ರಕೃತಿ ವಿಸ್ಮಯ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ ಕಂಡು ಜನರು ಅಚ್ಚರಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು  ಹನೂರು: ಕಡು ಕಹಿ ಎಲೆ, ಕಾಂಡ, ಕಾಯಿ ನೀಡುವ ಬೇವಿನ ಮರದಲ್ಲಿ…

3 hours ago

ಕನ್ನಡದಲ್ಲಿ ರೈಲ್ವೆ ಪರೀಕ್ಷೆ ನಡೆಸದಿದ್ದರೆ ಉಗ್ರ ಹೋರಾಟ: ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು: ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲೇ ಕಡ್ಡಾಯವಾಗಿ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ…

3 hours ago

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳಿಗೆ ಸಿಇಓ ಭೇಟಿ

ಮಂಡ್ಯ: ಜನವರಿ.27ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಹಿನ್ನೆಲೆಯಲ್ಲಿ ಇಂದು ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ…

3 hours ago

ಲೋಕಸಭೆಯಲ್ಲಿ ಸ್ಪೀಕರ್‌ ಮೇಲೆ ಪೇಪರ್‌ ತೂರಿದ್ದ 8 ಮಂದಿ ಸಂಸದರು ಅಮಾನತು

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಉಂಟಾದ ಭಾರೀ ಗದ್ದಲ ಮತ್ತು ಸ್ಪೀಕರ್‌ ಪೀಠದ ಕಡೆಗೆ ಪೇಪರ್‌ ಹರಿದು…

3 hours ago

ನರೇಗಾ ಮರುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಪಟ್ಟು: ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಉದ್ಯೋಗ ಯೋಜನೆಯನ್ನು ವಿರೋಧಿಸಿ ಹಾಗೂ ಹಳೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ…

4 hours ago

ಹನೂರು| ಆಂದೋಲನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಗ್ರಾಮಗಳಿಗೆ ಭೇಟಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ಟಳ್ಳಿ ಹಾಗೂ ಸುಳ್ವಾಡಿ…

4 hours ago