Andolana originals

ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಜ್ಜು: ಊಟಿ, ಪೂನಾದಿಂದಲೂ ಬಂದಿವೆ ಬಗೆ ಬಗೆಯ ಹೂ ಗಿಡಗಳು

• ಕೆ.ಬಿ.ರಮೇಶನಾಯಕ

1 ರಿಂದ 1.10 ಲಕ್ಷ ಹೂವಿನ ಗಿಡಗಳ ಪ್ರದರ್ಶನ
60 ರಿಂದ 70 ಸಾವಿರ ಹೂವಿನ ಕುಂಡ ಗಳಲ್ಲಿ ಸಸಿಗಳ ಪೋಷಣೆ
40,000 ಹೂವಿನ ಗಿಡಗಳನ್ನು ಅನ್ಯ ರಾಜ್ಯಗಳಿಂದ ಆಮದು
ವಾರದೊಳಗೆ ಫಲಪುಷ್ಪ ಪ್ರದರ್ಶನದ ಥೀಮ್ ಅಂತಿಮ

ಮೈಸೂರು: ಈ ಬಾರಿಯ ಮೈಸೂರು ದಸರಾವನ್ನು ವೈಭವದಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿಯೂ ವಿಭಿನ್ನ ಥೀಮ್‌ನೊಂದಿಗೆ ತೆರೆದಿಡಲು ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಯುಕ್ತವಾಗಿ ಸಿದ್ಧತೆ ನಡೆಸಿವೆ.

ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರು, ಫಲಪುಷ್ಪ ಪ್ರದರ್ಶನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸ್ಥಳೀಯರು ಕೂಡ ಬಗೆ ಬಗೆಯ ಹೂಗಳ ಅಂದ ಚಂದವನ್ನು ಸವಿಯಲು ಮುಗಿಬೀಳುವುದು ಸಹಜ. ಈ ವರ್ಷವೂ ಹಾರ್ಡಿಂಜ್ ವೃತ್ತದ ಬಳಿ ಇರುವ ನಿಶಾದ್ ಭಾಗ್‌- ಕುಪ್ಪಣ್ಣ ಅತ್ಯಾಕರ್ಷಕವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಈ ವರ್ಷ ಸುಮಾರು 1ರಿಂದ 1.10 ಲಕ್ಷ ಹೂವಿನ ಗಿಡಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಮೈಸೂರಿನಲ್ಲೇ ಈ ವರ್ಷ ತೋಟಗಾರಿಕೆ ಇಲಾಖೆ ವತಿಯಿಂದ 60ರಿಂದ 70 ಸಾವಿರ ಹೂವಿನ ಕುಂಡಗಳಲ್ಲಿ ಸಸಿಗಳನ್ನು ಬೆಳೆಯಲಾಗುತ್ತಿದೆ. 40,000 ಹೂವಿನ ಗಿಡಗಳನ್ನು ಅನ್ಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಊಟಿ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯದ ಪುಣೆ ಯಿಂದಲೂ ಆಕರ್ಷಕ ಹೈಬ್ರಿಡ್ ಗಿಡಗಳಾದಪಾಯಿಂಟ್ ಸಿಟಿಯಾ, ಕರ್‌ಕ್ಯುಮ, ಕೆಲೆಂಚೊ, ಪೆಂಟಾಕ್ ಕಾರ್ಮಿಯಾ, ಲಿಲ್ಲಿ, ಆರ್ಕಿಡ್, ಆಂತೋಣಿಯಮ್ಸ್, ಡಿಸ್‌ ಬಡ್ಸ್ ಸೇರಿದಂತೆ ತರಹೇವಾರಿಗಿಡಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ನಗರದ ಕುಪ್ಪಣ್ಣ ಉದ್ಯಾನ, ಗಾರ್ಡನ್ ಪಾರ್ಕ್, ಜಲದರ್ಶಿನಿ ಅತಿಥಿ ಗೃಹ, ಸರ್ಕಾರಿ ಅತಿಥಿ ಗೃಹ, ದಸರಾ ವಸ್ತುಪ್ರದರ್ಶನ ಮೈದಾನ ಮತ್ತು ಕರ್ಜನ್ ಪಾರ್ಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಹೂವಿನ ಗಿಡಗಳನ್ನು ಕುಂಡಗಳಲ್ಲಿ ಹಾಕಿ ಪೋಷಿಸಲಾಗುತ್ತಿದೆ.

ಇದಲ್ಲದೆ 35,000ಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಪುಣೆ, ಕೊಲ್ಕತ್ತಾ ಮತ್ತು ಊಟಿಯ ಖಾಸಗಿ ನರ್ಸರಿಗಳಿಂದ ಖರೀದಿಸಲಾಗುತ್ತದೆ. ನುರಿತ ಕುಶಲಕರ್ಮಿಗಳು ಮತ್ತು ತೋಟಗಾರಿಕೆ ತಜ್ಞರು ಸಾವಿರಾರು ವರ್ಣರಂಜಿತ ಹೂವುಗಳನ್ನು ಬಳಸಿಕೊಂಡು ಫಲಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡಲಿದ್ದಾರೆ.

ಪ್ರದರ್ಶನದಲ್ಲಿ ವೈವಿಧ್ಯಮಯ ಹೂವುಗಳಲ್ಲಿ ಆಫ್ರಿಕನ್ ಮಾರಿಗೋಲ್ಡ್… ಹಳದಿ, ಆರ್ಕಿಡ್‌ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೋರಿಯಂ, ಗರ್ಬೆರಾ, ರೋಸಸ್, ಕಾಡೊಸ್, ಬ್ಲೂಡೈಸಿ, ಕೈಸಾಂಥೆಮಮ…, ಕಾಕ್ಸ್-ಬಾಂಬ…, ಕೊಚಿಯಾ, ಕೈಸಾನೆಮ…, ಪಿಂಗ್ ಪಾಂಗ್, ಪೆಟುನಿಯಾ, ಟೊರನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ. ಮುಂತಾದ ಹೂವುಗಳನ್ನು ಹೇರಳವಾಗಿ ಬಳಸಲಾಗುತ್ತದೆ.

ಥೀಮ್ ಶೀಘ್ರ ಆಯ್ಕೆ: 2022ರಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನದ ಪ್ರತಿರೂಪವನ್ನು ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗಿತ್ತು

ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿಗೆ ಹೂಗಳಿಂದ ಸುಮಾರು 20 ಅಡಿ ಎತ್ತರದ ಪ್ರತಿಕೃತಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗಿತ್ತು. ಜತೆಗೆ ದಿ. ನಟ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಅವರ ಸಾಧನೆಯ ವಿವರದೊಂದಿಗೆ ಪುತ್ತಳಿ ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಿದ್ದು ವಿಶೇಷವಾಗಿತ್ತು. 2023ថ ಚಂದ್ರಯಾನ-3, ವಿವೇಕಾನಂದ ಪ್ರತಿಮೆ, ವಿಧಾನಸೌಧ, ಮೈಸೂರು ಅರಮನೆ ಪ್ರತಿ ರೂಪ ರಚಿಸಿ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು.

ಈ ಬಾರಿ ಫಲಪುಷ್ಪ ಪ್ರದರ್ಶನದ ಪ್ರಮುಖ ಥೀಮ್ ಯಾವುದು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಈ ವಾರದೊಳಗೆ ಥೀಮ್ ಗಳನ್ನು ನಿರ್ಧರಿಸಲಾಗುವುದು. ಈ ಬಾರಿಯೂ ದಸರಾ ಫಲಪುಷ್ಪ ಪ್ರದರ್ಶನವನ್ನು ಅತ್ಯಾಕರ್ಷಕವಾಗಿ ಆಯೋಜಿಸಲು ಕೈಗೊಳ್ಳಲಾಗಿದೆ.

ಅದಕ್ಕೆ ತಕ್ಕಂತೆ ಹೂವಿನ ಸಸಿಗಳನ್ನು ಪೋಷಿಸಲಾಗುತ್ತಿದೆ. ಈ ವಾರದೊಳಗೆ ಎಲ್ಲವೂ ಅಂತಿಮಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ತಂಗಡಗಿ ತಿಳಿಸಿದರು.

ಹೈಬ್ರಿಡ್ ಗಿಡಗಳ ಆಮದು: ಊಟಿ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯದ ಪುಣೆಯಿಂದಲೂ ಆಕರ್ಷಕ ಹೈಬ್ರಿಡ್ ಗಿಡಗಳಾದ ಪಾಯಿಂಟ್ ಸಿಟಿಯಾ, ಕರ್ ಕ್ಯುಮ, ಕೆಲೆಂಬೊ, ಪೆಂಟಾಕ್ ಕಾರ್ಮಿಯಾ, ಲಿಲ್ಲಿ, ಆರ್ಕಿಡ್, ಆಂತೋಣಿಯಮ್ಸ್, ಡಿಸ್ ಬಡ್ಸ್ ಹಾಗೂ ತರಹೇವಾರಿ ಗಿಡಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ

ತೋಟಗಾರಿಕೆ ಇಲಾಖೆಯಿಂದ ಹೂವಿನ ಸಸಿಗಳ ಪೋಷಣೆ: ತೋಟಗಾರಿಕೆ ಇಲಾಖೆಯು ಹೂವಿನ ಸಸಿಗಳನ್ನು ಅತ್ಯಂತ ಜೋಪಾನವಾಗಿ ಪೋಷಿಸುತ್ತಿದೆ. ಹೂ ಬಿಡುವ ದಿನಗಳ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಲಾಗುತ್ತಿದೆ. 40, 60 ಹಾಗೂ 120 ದಿನಗಳಿಗೆ ಗಿಡಗಳು ಹೂ ಬಿಡಲಿದ್ದು, ಅದಕ್ಕೆ ತಕ್ಕಂತೆ ಫಲಪುಷ್ಪ ಪ್ರದರ್ಶನದಲ್ಲಿ ಅಲಂಕಾರ ಮಾಡಲು ಯೋಜಿಸಲಾಗಿದೆ.

ಆಂದೋಲನ ಡೆಸ್ಕ್

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

1 hour ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

2 hours ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

3 hours ago