ಎಸ್.ಎಸ್.ಭಟ್
ನಂಜನಗೂಡು: ಮಾಜಿ ಸಂಸದ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ತಮ್ಮ ಅಪಾರವಾದ ಅಭಿವೃದ್ಧಿ ಕೆಲಸಗಳ ಮೂಲಕವೇ ಅಪರೂಪದ ರಾಜಕಾರಣಿ ಎಂದೇ ಪರಿಚಿತರಾಗಿದ್ದ ಧ್ರುವ ನಾರಾಯಣ ಅಸ್ತಂಗತರಾಗಿ ೨ ವರ್ಷ ಕಳೆದಿದೆ.
ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಇದ್ದಾಗ ಜನಾನುರಾಗಿ ಎನಿಸಿಕೊಂಡರೂ ಅಧಿಕಾರ ಹೋದ ನಂತರ ಅದೂ ಭೌತಿಕವಾಗಿ ದೂರವಾಗಿಯೂ ಆ ಜನಮನ್ನಣೆ ಉಳಿಸಿಕೊಂಡವರು ವಿರಳ. ಆದರೆ ಇದಕ್ಕೆ ಅಪವಾದವಾಗಿ ಜನಮಾನಸದಲ್ಲಿ ಸಜ್ಜನ ರಾಜಕಾರಣಿಯಾಗಿ ಸ್ಥಾನ ಪಡೆದವರು ಧ್ರುವನಾರಾಯಣ ಮಾತ್ರ.
ದೈಹಿಕವಾಗಿ ಎಲ್ಲರಿಂದ ದೂರವಾದರೂ ಪಕ್ಷಾತೀತವಾಗಿ ಇಂದಿಗೂ ಜನಮನ್ನಣೆ ಉಳಿಸಿ, ಬೆಳೆಸಿ ಕೊಂಡು ಅಜರಾಮರರಾದ ತಂದೆಯ ಹೆಸರನ್ನು ಅವರ ಕನಸಿನ ಜನಸೇವೇಯ ಮೂಲಕವೇ ಶಾಶ್ವತವಾಗಿಸಲು ಯೋಚಿಸಿದ ಅವರ ಪುತ್ರ ಶಾಸಕ ದರ್ಶನ್ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರು ಯೋಜನೆಯನ್ನು ರೂಪಿಸಿ ಅದನ್ನು ಇದೀಗ ಕಾರ್ಯಗತಗೊಳಿಸುವತ್ತ ತಮ್ಮ ಚಿತ್ತ ಹರಿಸಿದ್ದರ ಫಲವೇ ಬೃಹತ್ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬಾಲಕಿಯರ ಕಾಲೇಜಿನಲ್ಲಿ ಉಚಿತವಾಗಿ ನಡೆಯುತ್ತಿರುವ ಸಿಇಟಿ, ನೀಟ್ ತರಬೇತಿ.
ನಂಜನಗೂಡಿನ ಅರ್ಧ ಭಾಗದ ಶಾಸಕರಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮ ಸೇವಾ ಮನೋಭಾವನೆಯಿಂದಲೇ ಸರ್ವ ಜನಾಂಗದ ನಾಯಕರಾಗಿ ಜನಮನ್ನಣೆ ಗಳಿಸಿದವರು ಧ್ರುವ ನಾರಾಯಣ.
೨೮ ತಿಂಗಳುಗಳ ಹಿಂದೆ ಅಕಾಲಿಕವಾಗಿ ನಮ್ಮಿಂದ ದೂರವಾದ ಮಾಜಿ ಸಂಸದ ಧ್ರುವನಾರಾಯಣ ಶತ್ರುಗಳೇ ಇಲ್ಲದೆ ಅಜಾತಶತ್ರು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲದೆ ಬೇರೆಡೆಗೂ ಸ್ವಪಕ್ಷೀಯರಿರಲಿ, ವಿರೋಧ ಪಕ್ಷದ ಕಾರ್ಯಕರ್ತರು, ನಾಯಕರವರೆಗೆ ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡ ರಾಜಕಾರಣಿಯಾಗಿದ್ದರು.
ಇಂಥ ಅಪರೂಪದ ವ್ಯಕ್ತಿತ್ವದ ರಾಜಕಾರಣಿಯ ನೆನಪಿನಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಸ್ಥಳೀಯ ಕೈಗಾರಿಕೆಗಳಾದ ಜುಬಿಲಿಯಂಟ್ಸ್, ರಿಷಿ ಫ್ಯಾಬ್ರಿಕ್, ಲುನಾರಸ್, ಐಟಿಸಿ ನೆಸ್ಲೆ ಇಂಡಿಯಾ , ಅಟೋಲೀವ್, ಸುಪ್ರೀಂ ಫಾರ‍್ಮಸ್ ಸೇರಿದಂತೆ ನೂರಕ್ಕೂ ಹೆಚ್ಚು ಕೈಗಾರಿಕೆಗಳು ಭಾಗವಹಿಸಲಿವೆ. ತಂದೆಧ್ರುವನಾರಾಯಣರ ಜನ್ಮದಿನದ ನಿಮಿತ್ತ ಏರ್ಪಡಿಸಿರುವ ಉದ್ಯೋಗ ಮೇಳದಲ್ಲಿ೧,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಿಸುವ ಸಂಕಲ್ಪಕ್ಕೆ ದರ್ಶನ್ ಸಿದ್ಧವಾಗಿದ್ದು, ಆ ಮೂಲಕವೇ ತಂದೆ ಧ್ರುವ ಅವರ ಹೆಸರನ್ನು ಈ ಪ್ರದೇಶದ ಸಾವಿರಾರು ಕುಟುಂಬಗಳಲ್ಲಿ ಚಿರಸ್ಥಾಯಿ ಯಾಗಿಸುವತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ.
೨೦೦೪ರಲ್ಲಿ ಸಂತೇಮರಹಳ್ಳಿಯಲ್ಲಿ ಸ್ಪರ್ಧಿಸಿ ೧ ಮತದಿಂದ ಗೆಲುವು ಸಾಽಸಿ, ಪ್ರಜಾಪ್ರಭುತ್ವದಲ್ಲಿ ೧ ಮತದ ಮಹತ್ವವನ್ನು ವಿಶ್ವಕ್ಕೇ ತೋರಿಸಿಕೊಟ್ಟ ಕೀರ್ತಿ ಧ್ರುವ ಅವರದ್ದು. ನಂಜನಗೂಡಲ್ಲಿ ಇದೀಗ ಸದ್ದಿಲ್ಲದೆ ಲೋಕಾರ್ಪಣೆಯಾಗಿ ವಾಹನಗಳು ಸಂಚರಿಸುತ್ತಿರುವ ನಂಜನಗೂಡು- ಚಾಮರಾಜನಗರ ರಸ್ತೆಯ ರೈಲ್ವೆ ಮೇಲ್ಸೇತುವೆ ಸೇರಿದಂತೆ ೫ ರೈಲ್ವೆ ಮೇಲ್ಸೇತುವೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿದ ಹೆಗ್ಗಳಿಕೆ ಅವರದ್ದು. ಹಾಗಂತ ಧ್ರುವ ಅವರ ರಾಜಕೀಯ ಜೀವನದ ಹಾದಿ ಬೇರೆಯವರಂತೆ ಹೂವಿನ ಸುಪ್ಪತ್ತಿಗೆಯಿಂದ ಕೂಡಿರಲಿಲ್ಲ.
ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯ ಸಾಮಾನ್ಯ ಕೃಷಿ ಕುಟುಂಬದಲ್ಲಿ ಸಿ.ರಂಗಸ್ವಾಮಿ ಮತ್ತು ಸಿದ್ದಮ್ಮ ದಂಪತಿಯ ಪುತ್ರರಾಗಿ ೧೯೬೧ರ ಜುಲೈ ೩೧ರಂದು ಜನಿಸಿದ ಧ್ರುವ ಅವರು ಬಿ.ಎಸ್ಸಿ, ಎಂ.ಎಸ್ಸಿ ಕೃಷಿ ಪದವಿಯ ವ್ಯಾಸಂಗದ ಸಮಯದಲ್ಲೇ ೧೯೮೪ರಲ್ಲಿ ಹೆಬ್ಬಾಳದ ಕೃಷಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
ವಿದ್ಯಾರ್ಥಿಯಾಗಿ ಕಾಲೇಜಿನ ದಿನಗಳಲ್ಲಿ ಕಾಂಗ್ರೆಸ್ ಯುವ ಸಂಘಟನೆಯ ಮೂಲಕ ರಾಜಕಾರಣಕ್ಕೆ ಬಂದ ಧ್ರುವ ಅಂದಿನ ಮೇರು ರಾಜಕಾರಣಿ ರಾಜಶೇಖರಮೂರ್ತಿ ಅವರ ರಾಜಕೀಯ ಗರಡಿಯಲ್ಲಿ ಪಳಗುತ್ತಲೇ ಅವರಿಂದ ರಾಜಕೀಯದ ಮರ್ಮಗಳನ್ನು ಮೈಗೂಡಿಸಿಕೊಂಡು ಸ್ವಶಕ್ತಿಯಿಂದ ಬೆಳೆದು ನಿಂತರು.
ನಿಷ್ಠುರವಾದಿ, ಸ್ವಾಭಿಮಾನಿ, ಪ್ರಾಮಾಣಿಕ ರಾಜಕಾರಣಿ ಎನಿಸಿಕೊಂಡ ಮಾಜಿ ಸಚಿವ, ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರೊಡನೆ ತಮ್ಮ ರಾಜಕೀಯದ ಹೆಜ್ಜೆ ಹಾಕಿದ ಧ್ರುವ ಈ ಭಾಗದ ಚುನಾವಣೆಯ ಪ್ರಚಾರದ ಹಾಗೂ ಸೋಲು ಗೆಲುವಿನ ಒಳಗುಟ್ಟನ್ನು ಕಲಿತಿದ್ದಲ್ಲದೆ ಪ್ರಸಾದ್ ಅವರ ಬಾಯಲ್ಲೇ ಇವರೇ ನನ್ನ ಉತ್ತರಾಧಿಕಾರಿ ಎಂದು ಕರೆಸಿಕೊಂಡರು.
ಯಾರೇ ಕರೆ ಮಾಡಿದರೂ ರಾತ್ರಿ ಹಗಲೆನ್ನದೆ ಪ್ರತಿ ಕರೆ ಮಾಡಿ ಅವರ ಸಮಸ್ಯೆಗಳನ್ನು ವಿಚಾರಿಸಿ ನಂತರ ಅದರ ಪರಿಹಾರ ಯಾವ ಹಂತದಲ್ಲಿದೆ ಎಂಬ ಮಾಹಿತಿ ಯನ್ನೂ ಆಗಾಗ ರವಾನಿಸುತ್ತಿದ್ದ ಸಜ್ಜನ ರಾಜಕಾರಣಿ ಅವರಾಗಿ ದ್ದರು. ಇಂತಹ ಅಪರೂಪದ, ಮುಂದಿನ ಅನೇಕ ತಲೆಮಾರು ಗಳಿಗೆ ಮಾದರಿಯಾದ ರಾಜಕಾರಣಿ ಅಕಾಲಿಕವಾಗಿ ದೂರವಾಗಿದ್ದರೂ ಸಾರ್ವಜನಿಕರ ಮನದಲ್ಲಿ ತಮ್ಮ ಸಜ್ಜನ ವ್ಯಕ್ತಿತ್ವದಿಂದ ಚಿರಸ್ಥಾಯಿಯಾಗಿದ್ದಾರೆ.
ಜನಾನುರಾಗಿಯಾಗಿದ್ದ ಧ್ರುವ ನಾರಾಯಣ ಅವರ ಮಗನಾಗಿ ನಂಜನಗೂಡು ಶಾಸಕರಾಗಿ ಅಭಿವೃದ್ಧಿಯಲ್ಲಿ ತಂದೆಯ ದಾರಿಯಲ್ಲೇ ಮುನ್ನಡೆಯುತ್ತಿರುವ ಪುತ್ರ ದರ್ಶನ್ ತಂದೆಯ ಹೆಸರನ್ನು ಉದ್ಯೋಗ ಹಾಗೂ ಶಿಕ್ಷಣದ ಮೂಲಕ ಚಿರಸ್ಥಾಯಿಯಾಗಿಸುವ ಗುರಿಯೊಂದಿಗೆ ಹೆಜ್ಜೆ ಹಾಕಲಾರಂಭಿಸಿದ್ದರ ಫಲವೇ ಬೃಹತ್ ಉದ್ಯೋಗ ಮೇಳ ಹಾಗೂ ಶೈಕ್ಷಣಿಕ ತರಬೇತಿ. ಜು.೩೧ರಂದು ಧ್ರುವ ಅವರ ಜನ್ಮದಿನವಾಗಿದ್ದು, ಅಂದು ನಂಜನಗೂಡಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳ ನಡೆಸಿ ಅದೇ ಕಾಲೇಜಿನ ಬಹಳಷ್ಟು ವಿದ್ಯಾಥಿಗಳಿಗೆ ಉದ್ಯೋಗ ದೊರಕಿಸುವ ಆಶಯ ಅವರದ್ದಾಗಿದೆ.
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ…
ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು…
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನವಾಗಿಸಬೇಕೆಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ…
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…