Andolana originals

ಅಪಾಯಕಾರಿ ಮರ; ಬೇಕು ಉಪಾಯಕಾರಿ ನಿರ್ಧಾರ!

ಒಣಗಿ ನಿಂತಿರುವ, ಟೊಳ್ಳಾಗಿರುವ ಮರಗಳ ತೆರವಿಗೆ ಸಾರ್ವಜನಿಕರ ಆಗ್ರ

ಮೈಸೂರು: ನಗರದ ಸರಸ್ವತಿಪುರಂನಲ್ಲಿ ಇತ್ತೀಚೆಗೆ ಮರವೊಂದು ನೆಲಕ್ಕೆ ಉರುಳಿ ಬಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಲ್ಲದೆ, ಎರಡು ಆಟೋಗಳು ಸಂಪೂರ್ಣ ಜಖಂಗೊಂಡ ಘಟನೆ ನಡೆದಿತ್ತು. ಆದರೆ, ಆ ಮರ ಅಪಾಯ ಕಾರಿಯಾಗಿದೆ, ತೆರವುಗೊಳಿಸಿ ಎಂದು ಕೆಲ ದಿನಗಳ ಹಿಂದೆ ಸಾರ್ವಜನಿಕರು ನಗರಪಾಲಿಕೆಗೆ ದೂರು ನೀಡಿದ್ದರು.

ಒಣಗಿದ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ಗಳನ್ನು ತೆರವು ಮಾಡಿ ಎಂದು ಸಾರ್ವಜನಿಕರು ಮಹಾನಗರ ಪಾಲಿಕೆಗೆ ನೀಡಿದ ದೂರನ್ನು ಆಧರಿಸಿ ಪಾಲಿಕೆ ಅಧಿಕಾರಿಗಳು ಮೈಸೂರು ವಲಯ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.  ಅನುಮತಿ ದೊರೆಯದ ಪರಿಣಾಮ ಅನಾಹುತ ಸಂಭವಿಸಿತು ಎಂಬ ಸಂಗತಿ ಇದೀಗ ಬಯಲಾಗಿದೆ. ಸಾರ್ವಜನಿಕರಿಂದ ದೂರು ಸ್ವೀಕರಿಸಿ ಕಳೆದ ಡಿ.೨೧ರಂದು ವಲಯ ಅರಣ್ಯಾಧಿಕಾರಿಗಳಿಗೆ ಸ್ವೀಕೃತಗೊಂಡ ಅರ್ಜಿಯೊಂದಿಗೆ ಮರ ತೆರವುಗೊಳಿಸಲು ಅನುಮತಿ ನೀಡಿ ಎಂದು ಪತ್ರ ಬರೆದಿದ್ದೆವು. ಆದರೂ ಅನುಮತಿ ದೊರೆಯಲಿಲ್ಲ.

ಅದೇ ಮರ ಫೆ.೨೨ರಂದು ಬಿದ್ದು ಅವಘಡ ಸಂಭವಿಸಿದೆ. ಮುಂಬರುವ ಮುಂಗಾರಿನ ಸಮಯದಲ್ಲಿ ಇಂತಹ ಪ್ರಕರಣಗಳು ಸಂಭವಿಸುವ ಅಪಾಯವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಒಣಮರ, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವುದು ಅತ್ಯವಶ್ಯವಾಗಿದೆ. ಆದ್ದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳನ್ನು ತೆರವು ಮಾಡಿಸಲು ಅನುಮತಿ ನೀಡಿದಲ್ಲಿ ಪಾಲಿಕೆಯ ಏಣಿ ವಾಹನ ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ತೆರವುಗೊಳಿಸಲು ಅರಣ್ಯ ಇಲಾಖೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಗುರುವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ

ಅಪಾಯಕಾರಿ ಮರಗಳ ತೆರವಿಗೆ ಜನರ ಒತ್ತಾಯ: 

ಮೈಸೂರು: ನಗರ ವ್ಯಾಪ್ತಿಯಲ್ಲಿ ಹಲವೆಡೆ ಮರಗಳು ಹಾಗೂ ರೆಂಬೆಗಳು ಒಣಗಿವೆ. ಕೆಲವು ಗೆದ್ದಲು ಹಿಡಿದು ಟೊಳ್ಳಾಗಿವೆ, ಹಲವು ಮರಗಳ ಕೊಂಬೆಗಳು ವಿದ್ಯುತ್ ತಂತಿಗೆ ತಗುಲುತ್ತಿವೆ… ಹೀಗೆ ವಿವಿಧ ರೀತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಇದರಿಂದ ಸಾರ್ವಜನಿಕರ ಪ್ರಾಣ, ಆಸ್ತಿ ನಷ್ಟ ಆಗುವ ಸಾಧ್ಯತೆಗಳಿವೆ. ಕೆಲವೆಡೆ ತೀರಾ ವೈಯಕ್ತಿಕ ವಿಚಾರವಾಗಿ ಅಂದರೆ ನಮಗೆ ಮೊದಲ ಅಂತಸ್ತಿನ ಮನೆಕಟ್ಟಲು ಮರದ ರೆಂಬೆಗಳು ಅಡ್ಡ ಇವೆ. ಮನೆ ಮುಂದೆ ಎಲೆ ಉದುರಿ ಕಸ ಬೀಳುತ್ತಿವೆ. ಬೇರು ದೊಡ್ಡದಾಗಿ ಬೆಳೆಯುತ್ತಿದ್ದು, ನಮ್ಮ ಕಾಂಪೌಂಡ್ ಬಿರುಕು ಬಿಟ್ಟಿದೆ.. ಮುಂತಾದ ವಿಚಾರಗಳನ್ನು ಮುಂದಿಟ್ಟು ಮರ ತೆರವು ಮಾಡಿ ಎಂದು ಸಾರ್ವಜನಿಕರು ಕೋರಿzರೆ. ಈ ಹಿನ್ನೆಲೆಯಲ್ಲಿ ಪತ್ರಿಕೆಯು ಅನೇಕ ದೂರುದಾರರನ್ನು ಸಂಪರ್ಕಿಸಿದಾಗ ಒಣಗಿದ ಮರಗಳು ಹಾಗೂ ಕೊಂಬೆಗಳಿಂದ ಎದುರಿಸುತ್ತಿರುವ ಆತಂಕದ ಬಗ್ಗೆ ವಿವರಿಸಿದರು.

ಒಣಗಿದ ರೆಂಬೆ ಬೀಳುವ ಸ್ಥಿತಿಯಲ್ಲಿ: 

” ನಮ್ಮ ಮನೆಯ ಮುಂದೆಯೇ ಬೃಹತ್ ಮರವಿದೆ. ಈ ಮರದ ಕೆಲವು ರೆಂಬೆಗಳು ಒಣಗಿವೆ. ಜೋರು ಗಾಳಿ ಬಂದರೆ ಆಗಾಗ ಮುರಿದು ಬೀಳುತ್ತವೆ. ಮನೆ ಮುಂದೆ ಮಕ್ಕಳು ಆಟ ಆಡುತ್ತಾರೆ. ವಾಹನ ಹಾಗೂ ಸಾರ್ವಜನಿಕರ ಸಂಚಾರವೂ ಹೆಚ್ಚಾಗಿದೆ. ಕೆಲವೇ ತಿಂಗಳುಗಳಲ್ಲಿ ಗಾಳಿ, ಮಳೆ ಆರಂಭವಾಗುತ್ತದೆ. ಈ ವೇಳೆ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.”

– ಎಸ್.ವಿ.ಕಾಂತರಾಜು, ಇಟ್ಟಿಗೆಗೂಡು ನಿವಾಸಿ

” ಭೂಮಿಯ ಮೇಲಕ್ಕೆ ಹಬ್ಬಿರುವ ಮರದ ಬೇರು! ಶಿವರಾತ್ರೀಶ್ವರ ನಗರದಲ್ಲಿ ಮರವೊಂದರಬೇರು ಭೂಮಿಯ ಮೇಲೆ ಹಬ್ಬಿಕೊಂಡಿದ್ದು, ಸಮೀಪದ ಕಾಂಪೌಂಡ್‌ಗಳು ಬಿರುಕು ಬಿಟ್ಟಿವೆ. ಜೋರಾಗಿ ಗಾಳಿ ಬೀಸಿದಾಗ ಮನೆಯ ಮೇಲೆ ರೆಂಬೆಗಳು ಬಾಗುವುದರಿಂದ ಆತಂಕವಾಗುತ್ತದೆ. ಮರದ ರೆಂಬೆಗಳು ವಿದ್ಯುತ್ ತಂತಿಗಳಿಗೆ ಸೋಕಿದಾಗ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತದೆ. ಮರದ ಸಮೀಪ ಸಂಜೆಯ ವೇಳೆ ಹಿರಿಯರು ಕೂರುತ್ತಾರೆ. ಅನೇಕ ಸಾರಿ ಈ ಮರದ ರೆಂಬೆಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಮರದ ರೆಂಬೆಗಳನ್ನು ತೆರವು ಮಾಡುವಂತೆ ಪಾಲಿಕೆಗೆ ಪತ್ರ ಬರೆದಿದ್ದೇನೆ.”

-ವಿ.ರಾಜು, ಶಿವರಾತ್ರೀಶ್ವರ ನಗರ

ಒಣಗಿದ ರೆಂಬೆಗಳು ತೆರವಾಗಲಿ…

” ಸರಸ್ವತಿಪುರಂನ ೧೩ನೇ ಮುಖ್ಯ ರಸ್ತೆಯಲ್ಲಿ. ಈಗಾಗಲೇ ನಮ್ಮ ಪಕ್ಕದ ರಸ್ತೆಯಲ್ಲಿ ಮರ ಬಿದ್ದು ಎರಡು ಆಟೋಗಳು ಜಖಂ ಆಗಿರುವ ಘಟನೆಯಿಂದ ನಮಗೂ ಆತಂಕವಾಗಿದೆ. ನಾನು ಮೂರು ವಾರಗಳ ಹಿಂದೆಯೇ ಪಾಲಿಕೆಗೆ ದೂರು ನೀಡಿದೆ. ಈ ಭಾಗದ ರಸ್ತೆಗಳಲ್ಲಿರುವ ಮರಗಳು ಹಳೆಯವು.ಕೆಲವು ಮರಗಳ ಕೊಂಬೆಗಳು ಒಣಗಿವೆ. ಜೋರು ಗಾಳಿ, ಮಳೆ ಬಂದಾಗ ಅವು ಮುರಿದು ಬೀಳುವ ಸಾಧ್ಯತೆ ಇದೆ. ಇನ್ನೊಂದು ಮರದ ರೆಂಬೆಯೂ ಒಣಗಿದೆ. ಅದರ ಕೆಳಗೆ ಅಂಗಡಿಗಳಿದ್ದು, ಯಾವಾಗಲೂ ಜನರ ಸಂಚಾರವಿರುತ್ತದೆ.ಅನಿರೀಕ್ಷಿತವಾಗಿ ರೆಂಬೆಗಳು ಬಿದ್ದರೆ ಪ್ರಾಣಕ್ಕೆ ಸಂಚಕಾರ ಸಂಭವಿಸಬಹುದು.”

-ಗಿರೀಶ್ ರಾಜ, ಸರಸ್ವತಿ ಪುರಂ ನಿವಾಸಿ

ಗೆದ್ದಲು ಹಿಡಿದ ಮರ….

” ನಮ್ಮ ಮನೆಯ ಮುಂದೆ ಇರುವ ಮರಕ್ಕೆ ಗೆದ್ದಲು ಹತ್ತಿದೆ. ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತಿದೆ.ಯಾವ ಗಳಿಗೆಯಲ್ಲಿ ಮುರಿದು ಬೀಳುತ್ತದೋ ಗೊತ್ತಿಲ್ಲ. ಮಕ್ಕಳು ಮನೆ ಮುಂದೆ ಆಟ ಆಡುತ್ತಾರೆ. ಸಾರ್ವಜನಿಕರು ವಾಹನ ನಿಲ್ಲಿಸುತ್ತಾರೆ. ಈ ಮರ ತೆರವು ಮಾಡಲು ಎರಡು ವಾರಗಳ ಹಿಂದೆ ನಗರಪಾಲಿಕೆಗೆ ದೂರು ನೀಡಿದ್ದೇವೆ. ಅರಣ್ಯ ಇಲಾಖೆಯವರು ಸ್ಥಳ ಪರಿಶೀಲಿಸಿ ಮಹಜರು ಮಾಡಿದ್ದಾರೆ. ವಿದ್ಯುತ್ ತಂತಿಗಳೂ ಇದಕ್ಕೆ ತಗುಲುತ್ತಿವೆ.”

-ಶಿಲ್ಪಶ್ರೀ, ರಾಮಕೃಷ್ಣ ನಗರ ನಿವಾಸಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

1 hour ago

ಓದುಗರ ಪತ್ರ: ಕೆಎಚ್‌ಬಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…

1 hour ago

ಓದುಗರ ಪತ್ರ: ಬೈಕ್ ಟ್ಯಾಕ್ಸಿ ಚಾಲಕರು ನಿಯಮ ಪಾಲಿಸಲಿ

ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…

1 hour ago

ಓದುಗರ ಪತ್ರ: ‘ಉದಯರವಿ’ಯನ್ನು ಸ್ಮಾರಕವನ್ನಾಗಿ ರೂಪಿಸಿ

ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…

1 hour ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಸಮರ್ಥ ಕಾಯ್ದೆ ಪಾಲನಾ ವ್ಯವಸ್ಥೆ ಮುಖ್ಯ

ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…

1 hour ago

ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ದರ ಕುಸಿತ

ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…

2 hours ago