ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು ಇದ್ದರೂ ವೈವಿಧ್ಯತೆಯಲ್ಲಿ ಏಕತೆ ಎಂಬ ಪದಕ್ಕೆ ಪರ್ಯಾಯವೇ ನಮ್ಮ ಭಾರತ ಎನ್ನುವುದು ನಿಶ್ಚಯ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ೩,೭೦೦ ಕಿಲೋ ಮೀಟರ್ ದೂರವನ್ನು ಕ್ರಮಿಸುವುದು ಸೈಕ್ಲಿಂಗ್ ಮಾಡುವ ಬಹು ಸೈಕ್ಲಿಸ್ಟ್‌ಗಳ ಕನಸು. ಅದಕ್ಕೆ ಬೇಕಾಗಿರುವುದು ದೈಹಿಕ ಸಾಮರ್ಥ್ಯ, ಆರ್ಥಿಕ ಬೆಂಬಲ, ಪ್ರತಿದಿನವೂ ಬಳಲಿಕೆಯನ್ನು ಜಯಿಸುವ ಉತ್ಸಾಹ, ಸೋಲೊಪ್ಪದಿರುವ ಮನಸ್ಸು, ಎಲ್ಲದಕ್ಕಿಂತ ಹೆಚ್ಚಾಗಿ ಮಾನಸಿಕ ದೃಢತೆ. ಇವೆಲ್ಲವೂ ಇದ್ದರೂ ಮಾರ್ಗ ಮಧ್ಯದಲ್ಲಿ ಆರೋಗ್ಯ ಕೆಡಬಹುದು, ನೈಸರ್ಗಿಕ ವಿಕೋಪವಿರಬಹುದು, ಅಪಘಾತವಾಗಬಹುದು. ಇವೆಲ್ಲವನ್ನೂ ಸರಿತೂಗಿಸಿಕೊಂಡು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ೨೨ ದಿನಗಳಲ್ಲಿ ಸೈಕಲ್ ತುಳಿದಿದ್ದಾರೆ.
ಈ ಯಾತ್ರೆ ಹೊರಡುವ ಮುನ್ನ ಆರು ತಿಂಗಳ ತರಬೇತಿ ಆರಂಭವಾಗಿತ್ತು. ಪ್ರತಿವಾರವೂ ನೂರಾರು ಕಿಲೋಮೀಟರ್ ಸೈಕಲ್ ತುಳಿಯುವುದು, ದೇಹವನ್ನು ಸದೃಢಗೊಳಿಸಲು ತರಬೇತಿ, ಪ್ರೋಟೀನ್ಯುಕ್ತ ಆಹಾರ ಸೇವನೆ… ಹೀಗೆ ಹಲವಾರು ಪೂರ್ವಸಿದ್ಧತೆಗಳೊಂದಿಗೆ ಸಹಾಯಕ ತಂಡದ ಸಿಬ್ಬಂದಿ ವರ್ಗದವರೆಲ್ಲ ಸೆಪ್ಟೆಂಬರ್ ೧೪ರಂದು ಮೈಸೂರನ್ನು ಬಿಟ್ಟು ಜಮ್ಮುವನ್ನು ಸೆಪ್ಟೆಂಬರ್ ೧೬ರಂದು ತಲುಪಿದರು. ಶ್ರೀನಗರವನ್ನು ತಲುಪಬೇಕಾಗಿದ್ದ ರಸ್ತೆಯಲ್ಲಿ ಧಾರಾಕಾರ ಮಳೆ ಮತ್ತು ಭೂಮಿ ಕುಸಿದುದರಿಂದ ಮತ್ತೆರಡು ದಿನ ಕಾದು ಎಲ್ಲರೂ ಶ್ರೀನಗರ ತಲುಪಿದ್ದು ಸೆಪ್ಟೆಂಬರ್ ೧೯ರಂದು. ತಂಡದ ನಾಯಕ ವಿಜಯ್ ಸಿಂಗ್ ನೇತೃತ್ವದ ತಂಡದಲ್ಲಿ ಐವರು ಮಹಿಳೆಯರು ಹಾಗೂ ಆರು ಮಂದಿ ಪುರುಷರು ಇದ್ದದ್ದು ವಿಶೇಷವಾಗಿತ್ತು.
ಎಲ್ಲ ಸಿದ್ಧತೆಗಳೊಂದಿಗೆ ಶ್ರೀನಗರದ ಕೆಂಪು ಚೌಕದಿಂದ ಸೆಪ್ಟೆಂಬರ್ ೨೨ರಂದು ಆರಂಭವಾದ ಸೈಕಲ್ ಯಾತ್ರೆಗೆ ಶ್ರೀನಗರದ ಸಿ ಡಿ ಸಿ ಡಾ. ಸಂದೀಪ್ ಕೌರ್ ಬಾವುಟ ತೋರಿ ಬೀಳ್ಕೊಟ್ಟರು. ೨೨ ದಿನಗಳ ಈ ಸೈಕಲ್ ಯಾತ್ರೆ ಅಕ್ಟೋಬರ್ ೧೬ರಂದು ಕನ್ಯಾಕುಮಾರಿಯಲ್ಲಿ ಅಂತ್ಯಗೊಂಡಿತು. ಯಾತ್ರೆಯನ್ನು ಪೂರೈಸಿದ ೧೧ ಮಂದಿಯ ವಿಭಿನ್ನ ಅನಿಸಿಕೆಗಳು ಇಲ್ಲಿವೆ.
ಇದನ್ನು ಓದಿ: ಅಡಕೆಗೆ ಎಲೆಚುಕ್ಕಿ, ಹಳದಿ ರೋಗ ಬಾಧೆ
” ಇನ್ನೂ ಎಷ್ಟು ದೂರ ಸೈಕಲ್ ತುಳಿತೀನೋ ಅನ್ನುವ ಪ್ರಶ್ನೆ ಮನಸ್ಸಿಗೆ ಬರುತ್ತಿದ್ದರೂ, ದಾರಿ ಯಲ್ಲಿ ಸಿಗುವ ಪ್ರತಿಯೊಬ್ಬರ ಮುಖದ ಮುಗುಳ್ನಗೆ, ದ್ದೇನೆ ಎಂಬ ಹೆಮ್ಮೆ ಆ ಕ್ಷಣ ದಲ್ಲಿ ಹೃದಯವನ್ನೇ ತುಂಬಿತು. ಮನಸ್ಸಿದ್ದಲ್ಲಿ ಗುರಿ ಮುಟ್ಟುವ ಮಾರ್ಗ ಖಂಡಿತಾ ದೊರೆಯುತ್ತಅಂಗಡಿಯಲ್ಲಿ ಕುಡಿಯುವ ಟೀಯ ನಡುವೆ ಕೇಳುವ ಕುತೂಹಲದ ಮಾತು, ‘ಒಳ್ಳೇದಾಗಲಿ’ ಎಂದು ಹಾರೈಸುವ ಅಪರಿಚಿತರ ಆಶೀರ್ವಾದ-ಈ ಎಲ್ಲವೂ ಸೈಕಲ್ ತುಳಿಯುವ ಹುರುಪನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ದಾರಿ ಚಿಕ್ಕದಾಗಿದೆ ಅನಿಸಿದ ಕ್ಷಣಗಳೂ ಇದ್ದುವು. ಅಸಾಧ್ಯವನ್ನು ಸಾಧ್ಯ ಮಾಡಿದೆ. ಇದು ನೂರಕ್ಕೆ ನೂರು ನಿಜ.”
– ಹರೀಶ್ ರಾಮನ್
” ಸುಡುವ ಬಿಸಿಲಿನಲ್ಲಿ, ಮಳೆಯಲ್ಲಿ ಮತ್ತು ಒರಟಾದ ಭೂ ಪ್ರದೇಶದಲ್ಲಿ ಸೈಕಲ್ ಸವಾರಿ ಮಾಡುತ್ತಾ ನಾನು ಸಾಹಸದ ನಿಜವಾದ ಸಾರವನ್ನು ಅನುಭವಿಸಿದೆ. ಮಳೆಯು ವಿಶೇಷವಾಗಿ ಪುನಶ್ಚೇತನ ಮತ್ತು ಸಂತೋಷದ ಭಾವವನ್ನು ತಂದಿತು. ಈ ಅನುಭವದಿಂದ ೫೪ನೇ ವಯಸ್ಸಿನ ನಾನು ಮಗುವಿನಂತೆ ಉಲ್ಲಾಸಗೊಂಡೆ. ಈ ಸಾಹಸಯಾತ್ರೆ ಜೀವನ, ಪ್ರಕೃತಿ ಮತ್ತು ಮಾನವ ಆತ್ಮದ ಅನುಬಂಧವಾಗಿತ್ತು.”
– ಅನಿತಾ ಬಾರ್ಗಿ
” ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ – ಸೈಕ್ಲಿಂಗ್ ನನ್ನ ಜೀವಮಾನದಲ್ಲೇ ಮರೆಯಲಾಗದ ಸಾಹಸಯಾತ್ರೆ. ೧೧ ರಾಜ್ಯಗಳ ನಡುವೆ ಕಡು ಚಳಿ, ಬಿಸಿಲು, ಕೆಟ್ಟ ರಸ್ತೆಗಳು, ಸ್ಯಾಡಲ್ಪೇನ್, ಕಡಿಮೆ ನಿದ್ರೆ – ಪ್ರತಿ ಕ್ಷಣವೂ ನನ್ನ ಸಹನೆ ಮತ್ತು ಶಿಸ್ತನ್ನು ಪರೀಕ್ಷಿಸಿತು. ಕೊನೆಗೆ ಕನ್ಯಾಕುಮಾರಿಯಲ್ಲಿ ನನ್ನನ್ನು ನಾನೇ ಗೆದ್ದ ಕ್ಷಣ ಅದ್ವಿತೀಯ. ಈ ಸಾಧನೆಗೆ ನನ್ನ ಪತಿ ಜಿತೇಂದ್ರ ಕುಮಾರ್ ಅವರ ತರಬೇತಿ ಮತ್ತು ಉತ್ತೇಜನ ಹಾಗೂ ತಂಡದ ಬೆಂಬಲ ಮಹತ್ತರ ಕಾರಣ. ನನ್ನ ಮಾರ್ಗದರ್ಶಕ ವಿನಯ್ ಸಿಂಗ್ ಅವರ ವಿಶ್ವಾಸ ಮತ್ತು ಪ್ರೇರಣೆ “ಅಸಾಧ್ಯ” ವನ್ನು ಸಾಧ್ಯವಾಗಿಸಿತು.”
– ಚಂದನ ಜಿತೇಂದ್ರ
” ನನ್ನ ಕೆ ೨ ಕೆ ಪ್ರಯಾಣವು ತೃಪ್ತಿ, ಶಕ್ತಿ ಮತ್ತು ಸಾಧನೆಯ ಸಂತೋಷ ದಿಂದ ತುಂಬಿತ್ತು. ನಿರಂತರ ಪ್ರಯತ್ನ ಮತ್ತು ಅಭ್ಯಾಸದಿಂದ, ಯಾವುದೇ ಗುರಿ ಸಾಧಿಸಬಹುದು ಎಂದು ಅದು ನನಗೆ ಕಲಿಸಿತು!! ೧೧ ರಾಜ್ಯಗಳಲ್ಲಿ ಸೈಕಲ್ ಸವಾರಿ ಮಾಡಿದ್ದು ಭಾರತದ ಸುಂದರ ವೈವಿಧ್ಯತೆಯನ್ನು ನನಗೆ ತೋರಿಸಿತು. ಒಟ್ಟಾಗಿ ನಾವು ಈ ಕನಸನ್ನು ಸಾಧ್ಯವಾಗಿಸಿದೆವು.”
– ಪೂಜಾ ಹರೀಶ್
” ವಿನಯ್ ಸಿಂಗ್ ಸರ್ ಈ ಯಾತ್ರೆಗೆ ಸೇರಲು ಆಹ್ವಾನಿಸಿದಾಗ, ಅದು ನನ್ನ ಜೀವನದ ಅತ್ಯಂತ ದೊಡ್ಡ ಪಾಠಗಳಲ್ಲಿ ಒಂದಾಗಲಿದೆ ಎಂದು ತಿಳಿದೇ ನಾನು ಒಪ್ಪಿಕೊಂಡೆ. ನನ್ನಲ್ಲಿ ನಂಬಿಕೆ ಇಟ್ಟು ಈ ಅದ್ಭುತ ಪ್ರಯಾಣದ ಭಾಗವಾಗಲು ಅವಕಾಶ ನೀಡಿದ ವಿನಯ್ ಸಿಂಗ್ ಸರ್ ಅವರಿಗೆ ನಾನು ಋಣಿ. ೩,೭೦೦ ಕಿ.ಮೀ. ಸೈಕ್ಲಿಂಗ್ ಪ್ರಯಾಣವು ಕಠಿಣ ಹವಾಮಾನ, ಆಯಾಸ, ಯಾಂತ್ರಿಕ ಸಮಸ್ಯೆಗಳು ಮತ್ತು ಅಸಂಖ್ಯಾತ ಅಡೆತಡೆಗಳ ಮೂಲಕ ನನ್ನ ಧೈರ್ಯ, ಶಿಸ್ತು, ಭಾವನೆಗಳು ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿತು. ಆದರೂ, ಕಾಳಜಿಯುಳ್ಳ ಸಹಾಯಕ ಸಿಬ್ಬಂದಿ ಮತ್ತು ಸಹವರ್ತಿಗಳು ನೀಡಿದ ಬೆಂಬಲದಿಂದ ಪ್ರತಿ ಸವಾಲನ್ನೂ ಎದುರಿಸಿದೆ.”
– ಲಿಕ್ಮರಣ
” ಕೆ ೨ ಕೆ ಪ್ರಯಾಣವನ್ನು ಪೂರ್ಣ ಗೊಳಿಸಿದ್ದು ನನ್ನನ್ನು ನಾನು ಎಂದಿಗೂ ಊಹಿಸದ ರೀತಿಯಲ್ಲಿ ಬದಲಾ ಯಿಸಿದೆ. ಇದು ನನ್ನ ಶಿಸ್ತು, ತಾಳ್ಮೆ ಮತ್ತು ಮಾನಸಿಕ ಸ್ಥಿತಪ್ರಜ್ಞತೆ ಯನ್ನು ಬಲಪಡಿಸಿತು. ಕೆ ೨ ಕೆ ನನ್ನ ಪ್ರಯಾಣವನ್ನು ಬದಲಾಯಿಸಲಿಲ್ಲ – ಅದು ನನ್ನನ್ನೇ ಬದಲಾಯಿಸಿತು.”
– ಸಂದೀಪ್ ಸಾಗರ
ಇದನ್ನು ಓದಿ: ಎಚ್.ಡಿ.ಕೋಟೆ ಪೊಲೀಸ್ ಕ್ಯಾಂಟೀನ್ ಬಂದ್
” ಅದು ಕೇವಲ ದೈಹಿಕ ಒತ್ತಡವಾಗಿ ರಲಿಲ್ಲ. ದಿನಕ್ಕೆ ೧೦-೧೨ ಗಂಟೆಗಳ ಕಾಲ ಸೈಕಲ್ ಮೇಲೆ ಕುಳಿತು ಸರಾ ಸರಿ ೧೮೦ ಕಿ.ಮೀ. ದೂರ ಕ್ರಮಿಸುವುದು ಮಾನಸಿಕ ಶಕ್ತಿಯ ನಿಜವಾದ ಪರೀಕ್ಷೆಯಾಗಿತ್ತು. ಆದರೆ ನಮ್ಮ ಅದ್ಭುತ ತಂಡ ಮತ್ತು ಅದರ ನಿಲ್ಲಿಸಲಾಗದ, ಎಂದಿಗೂ ಬಿಟ್ಟುಕೊಡದ ಮನೋಭಾವನೆ ಇದನ್ನು ಸಾಧ್ಯವಾಗಿಸಿತು.”
– ಡಾ.ಸುಮನ್ ಭೈರೇಗೌಡ
” ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡುವುದು ಪ್ರತಿ ಯೊಬ್ಬ ಸೈಕ್ಲಿಸ್ಟ್ ಕನಸು. ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ಸಾಧನೆಯನ್ನು ನಾವು ಗಂಡ ಹೆಂಡತಿ ಇಬ್ಬರು ಸೇರಿ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ.”
– ಜಿತೇಂದ್ರಕುಮಾರ್
” ಸೈಕಲ್ ಪ್ರಯಾಣವು ಭಾರತದ ಉದ್ದಕ್ಕೂ ಕ್ರಮಿಸುವ ಸಹಿಷ್ಣುತೆ ಮತ್ತು ನಿರ್ಧಾರದ ಒಂದು ಗಮ ನಾರ್ಹ ಸಾಧನೆಯಾಗಿದೆ. ವಿವಿಧ ಭೂ ಪ್ರದೇಶಗಳು, ಮತ್ತು ಸಂಸ್ಕ ತಿಗಳ ಮೂಲಕ ಸವಾರಿ ಮಾಡಿದ ಸೈಕಲ್ ಸವಾರರು ಅಚಲ ಧೈರ್ಯ ಮತ್ತು ಬಲವಾದ ರಾಷ್ಟ್ರೀಯ ಮನೋಭಾವವನ್ನು ಪ್ರದರ್ಶಿಸಿದ್ದಾರೆ.”
– ಡಾ. ಬೃಂದಾ ಗೋಧಿ
” ದೇಶದ ಶಾಂತಿಗಾಗಿ ಸೈಕಲ್ ಸವಾರಿ ಎನ್ನುವ ಪರಿಕಲ್ಪನೆ ಯೊಂದಿಗೆ ಆರಂಭವಾದ ಈ ಯಾತ್ರೆಯಲ್ಲಿ ೧೧ ಜನರ ಹಲವಾರು ತಿಂಗಳ ಪರಿಶ್ರಮ ಇದೆ. ಗುರಿ ತಲುಪಲೇಬೇಕೆನ್ನುವ ಅವರ ಹಂಬಲ ಮೆಚ್ಚುವಂತಹದ್ದು. ನಮ್ಮ ಯಾತ್ರೆಗೆ ಸಹಕರಿಸಿದ ೧೧ ರಾಜ್ಯದ ಎಲ್ಲ ನಾಗರಿಕರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ.”
– ವಿನಯ್ ಸಿಂಗ್
” ನಮ್ಮ ೨೨ ದಿನಗಳ ಸೈಕಲ್ ಪ್ರಯಾಣದಲ್ಲಿ ಭಾರತದ ವೈವಿಧ್ಯತೆಯನ್ನು ಅನುಭವಿಸಿದ್ದೇವೆ ಮತ್ತು ಹೆಮ್ಮೆಪಟ್ಟಿದ್ದೇವೆ. ಒಂದು ದೇಶ, ಅನೇಕ ರಾಜ್ಯಗಳು, ಅನೇಕ ಭಾಷೆಗಳು, ಅನೇಕ ಸಂಸ್ಕ ತಿಗಳು, ವೇಷ- ಭೂಷಣಗಳು ಮತ್ತು ಅನೇಕ ತಿಂಡಿ-ತಿನಿಸುಗಳು – ಇವು ನಮ್ಮ ದೇಶವನ್ನು ವಿಶಿಷ್ಟವಾಗಿಸುತ್ತವೆ. ನಮ್ಮ ತಂಡ ಮತ್ತು ನಾನು ೧೧ ರಾಜ್ಯಗಳಲ್ಲಿ ಸೈಕಲ್ ಸವಾರಿ ಮಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸೌಂದರ್ಯ ಮತ್ತು ವೈಭವವನ್ನು ವೀಕ್ಷಿಸಿದೆವು. ಇದು ಒಂದು ಅವಿಸ್ಮರಣೀಯ ಪ್ರಯಾಣವಾಗಿತ್ತು ಮತ್ತು ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ.””
– ವೀಣಾ ಅಶೋಕ
–ದಿನೇಶ್ ಬಸವಾಪಟ್ಟಣ
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…