ಓದುಗರ ಪತ್ರ
ಅಸ್ಸಾಂನ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಹಿಂದಿ ಐಟಂ ಹಾಡಿಗೆ ನೃತ್ಯ ಮಾಡಿಸಿರುವುದಾಗಿ ವರದಿಯಾಗಿದ್ದು, ವಿದ್ಯೆ, ವಿನಯ್, ಸಂಸ್ಕೃತಿ ಬೋಧಿಸಬೇಕಿದ್ದ ಶಿಕ್ಷಕರು ಇಂತಹ ಹಾಡುಗಳಿಗೆ ನೃತ್ಯ ಕಲಿಸುವುದು ಎಷ್ಟು ಸರಿ?
ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಈ ನೆಲದ ಸಂಸ್ಕೃತಿಯನ್ನೂ ಬೋಧಿಸುವುದು ಶಿಕ್ಷಕರ ಕರ್ತವ್ಯ. ಆದರೆ ಈ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳಿಂದ ಐಟಂ ಹಾಡಿಗೆ ನೃತ್ಯ ಮಾಡಿಸಿರುವುದು ಮಕ್ಕಳು ಹಾದಿ ತಪ್ಪಲು ಬುನಾದಿ ಹಾಕಿದಂತಾಗಿದೆ.
ಮಕ್ಕಳಿಗೆ ಅವರು ಶಾಲೆಯಲ್ಲಿ ಕಲಿಯುವಾಗಲೇ ಯಾವುದೇ ಸರಿ, ಯಾವುದು ತಪ್ಪು, ಸಮಾಜದಲ್ಲಿ ಸನ್ನಡತೆಯಿಂದ ಉತ್ತಮ ನಾಗರಿಕರಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಸುವುದು ಪೋಷಕರ ಜತೆಗೆ ಶಿಕ್ಷಕರ ಜವಾಬ್ದಾರಿಯೂ ಹೌದು. ಆದ್ದರಿಂದ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಈ ನೆಲದ ಸಂಸ್ಕೃತಿಯನ್ನೂ ಕಲಿಸುವ ಬಗ್ಗೆ ಗಮನಹರಿಸಲಿ.
-ಪುಂಡಲಿಕ ಲಮಾಣಿ, ಮೈಸೂರು.
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…
ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…