Andolana originals

ಮೆಕ್ಕೆ ಜೋಳ ದರ ಕುಸಿತ; ಕೃಷಿಕರಿಗೆ ಬರೆ

ದಾ. ರಾ. ಮಹೇಶ್

ವೀರನಹೊಸಹಳ್ಳಿ: ಮೆಕ್ಕೆಜೋಳಕ್ಕೆ ದರ ಕುಸಿತವಾಗಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜನವರಿ ಪೂರ್ವದಲ್ಲಿ ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ೨,೫೦೦ ರೂ. ನಿಂದ ೩,೦೦೦ ರೂ. ವರೆಗೆ ಬೆಲೆ ಇತ್ತು. ಕಳೆದ ಮಾರ್ಚ್‌ನಲ್ಲಿ ೨,೮೦೦ ರೂ. ಇದ್ದ ಬೆಲೆ ಸದ್ಯ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ೧,೪೦೦ರಿಂದ ೧,೫೦೦ ರೂ. ಗೆ ಕುಸಿದಿದೆ.

ಜೋಳದ ಶುಷ್ಕತೆ, ತೂಕ, ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ. ಹೆಚ್ಚು ದಿನ ಸಂಗ್ರಹಿಸಿಟ್ಟರೆ ಬೇಡಿಕೆ ಕಡಿಮೆ ಆಗ ಬಹುದು. ಇದೇ ರೀತಿ ದರ ಕಡಿಮೆಯಾಗುತ್ತಿದ್ದರೆ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ. ಕನಿಷ್ಠ ೧,೮೦೦ರಿಂದ ೨,೦೦೦ ರೂ. ದೊರೆತರೆ ಮಾತ್ರ ಬೆಳೆಗಾರರಿಗೆ ಸ್ವಲ್ಪ ಆದಾಯ ಬರುತ್ತದೆ ಎಂದು ವಡಗೆರೆಯ ಕೃಷಿಕರು ಹೇಳುತ್ತಾರೆ. ಮಳೆಗೂ ಮೊದಲು ಧಾನ್ಯ ಕಟಾವು ಮಾಡಬೇಕು. ಮಳೆ ಹೆಚ್ಚಾದರೆ, ನಿರ್ವಹಣೆಯ ವೆಚ್ಚ ಏರುತ್ತದೆ. ಸಂಗ್ರಹಕ್ಕೂ ಹಿನ್ನಡೆಯಾಗು ತ್ತದೆ. ಇದನ್ನು ಅರಿತಿರುವ ಬೆಳೆಗಾರರು ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿ ತೆನೆ ಕತ್ತರಿಸದೆ ಬಿಟ್ಟಿದ್ದಾರೆ.

ಮತ್ತೆ ಕೆಲವರು ಕೊಯ್ಲೋತ್ತರ ಕೆಲಸದಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನಲ್ಲಿ ಶೇ. ೨೫ರಷ್ಟು ಕೃಷಿಕರು ಜೋಳ ಮಾರಾಟ ಮಾಡಿದ್ದಾರೆ. ಶೇ. ೭೫ರಷ್ಟು ರೈತರು ಮಾರಾಟವನ್ನು ಮುಂದೂಡಿದ್ದಾರೆ. ನೆರೆ ರಾಜ್ಯದ ವ್ಯಾಪಾರಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಆದರೆ, ಬಿಹಾರವು ತಮಿಳುನಾಡಿಗೆ ಕಡಿಮೆ ಬೆಲೆಗೆ ಜೋಳ ಪೂರೈಸುತ್ತಿದೆ. ಈ ಎಲ್ಲ ಕಾರಣಗಳಿಂದ ಮೆಕ್ಕೆಜೋಳ ಬೆಳೆಗಾರರು ಸ್ವಲ್ಪದಿನಗಳ ತನಕ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಸ್ಥಳೀಯ ಫಾರಂಗಳಿಗೆ ಮಾರಾಟ: ಕುಕ್ಕುಟೋದ್ಯಮಕ್ಕೆ ಪೂರೈಕೆ ಆಗುತ್ತಿದ್ದ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೆಲೆ ಮಾತ್ರ ಹೆಚ್ಚುತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೋಳಿ ಸಾಕಣೆದಾರರು ಮೆಕ್ಕೆಜೋಳ ಕೊಳ್ಳಲು ಸ್ಥಳೀಯ ದಲ್ಲಾಳಿಗಳು ಬಿಡುತ್ತಿಲ್ಲ ಎಂದು ಸ್ಥಳಿಯ ರೈತರು ದೂರುತ್ತಾರೆ. ಹೀಗಾಗಿ ಯಾರೂ ಕೂಡ ಮೆಕ್ಕೆಜೋಳವನ್ನು ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯ ಫಾರಂಗಳಿಗೆ ಧಾನ್ಯ ಮಾರಾಟ ಮಾಡಬೇಕಿದೆ ಎಂದು ರೈತ ಕೃಷ್ಣೇಗೌಡ ಹೇಳಿದರು.

ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಠ ೨,೫೦೦ ರೂ. ಬೆಂಬಲ ಬೆಲೆ ಘೋಷಿಸಬೇಕು. ಇದರಿಂದ ರೈತರ ಬದುಕು ಹಸನಾಗುತ್ತದೆ. -ರಾಜೇಗೌಡ (ಅಜ್ಜ), ರೈತರು

ನಮ್ಮ ಜಿಲ್ಲೆಯಲ್ಲಿ ಭತ್ತ, ರಾಗಿ ಹಾಗೂ ಹೆಸರುಕಾಳು ಗಳಿಗೆ ಮಾತ್ರ ಬೆಂಬಲ ಬೆಲೆಗೆ ಅವಕಾಶವಿದ್ದು, ಹುಣಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಮೆಕ್ಕೆ ಜೋಳ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೆಕ್ಕೆಜೋಳಕ್ಕೂ ಸಹ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂಬ ಒತ್ತಾಯವಿದೆ. ಇದಕ್ಕೆ ಸಂಬಂಽಸಿದಂತೆ ಹಿರಿಯ ಅಽಕಾರಿಗಳ ಗಮನಕ್ಕೆ ತರಲಾಗುವುದು. -ಹಂಪಣ್ಣ, ಕಾರ್ಯದರ್ಶಿ, ಎಪಿಎಂಸಿ, ಹುಣಸೂರು

andolana

Recent Posts

ಕಾಡುಹಂದಿ ಬೇಟೆಗಾಗಿ ಮನೆಯಲ್ಲಿ ಸಂಗ್ರಹಿಸಿದ್ದ ಸಿಡಿಮದ್ದು ಸಿಡಿದು ವ್ಯಕ್ತಿಗೆ ಗಂಭೀರ ಗಾಯ

ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಡಿಮದ್ದು ಸಿಡಿದು ಪೆದ್ದಿ ಅಲಿಯಾಸ್‌…

20 mins ago

ಓದುಗರ ಪತ್ರ:  ತಡೆಗೋಡೆ ನಿರ್ಮಿಸಿ

ಎಚ್.ಡಿ.ಕೋಟೆ -ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಪೈಲ್ವಾನ್ ಕಾಲೋನಿ ಗ್ರಾಮದಲ್ಲಿರುವ ನೀರು ಕಾಲುವೆಗೆ ತಡೆಗೋಡೆ ಇಲ್ಲಿದೇ ತೀವ್ರ ತೊಂದರೆಯಾಗಿದೆ. ಎಚ್.ಡಿ.ಕೋಟೆ ಮತ್ತು…

32 mins ago

ಓದುಗರ ಪತ್ರ:  ಗಂಗೋತ್ರಿ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಬೇಕಿದೆ

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧಕರ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬಿಸಿನೀರಿನ…

34 mins ago

ಓದುಗರ ಪತ್ರ: ಪ್ರೇಕ್ಷಣೀಯ ಸ್ಥಳಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರಲಿ

ಮೈಸೂರಿನ ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಸಾವನ್ನಪ್ಪಿದ್ದಾರೆ. ಅರಮನೆ ವೀಕ್ಷಣೆಗೆ ಹೆಚ್ಚಿನ ಜನರು ಸೇರುತ್ತಾರೆ. ಕ್ರಿಸ್‌ಮಸ್…

36 mins ago

ಓದುಗರ ಪತ್ರ: ಕುವೆಂಪುನಗರ ಮಾರ್ಗಕ್ಕೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಕುವೆಂಪುನಗರ ‘ಎಂ ಬ್ಲಾಕ್’ನಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ನಗರ ಸಾರಿಗೆ ಬಸ್ಸುಗಳು ಬೆಳಗಿನ ಸಮಯ ಸರಿಯಾಗಿ…

37 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ನಿತಿನ್ ನೇಮಕ: ಬಿಜೆಪಿ ಹಿಡಿತ ಮೋದಿ, ಶಾ ಕೈಯಲ್ಲೇ

ಯಶಸ್ವಿ ರಾಜಕೀಯ ನಾಯಕತ್ವಕ್ಕೆ ಈಗ ಬೇಕಾಗಿರುವುದು ವರ್ಚಸ್ಸು ಮತ್ತು ಜನಪ್ರಿಯತೆ. ಈ ಗುಣಗಳಿದ್ದರೆ ಸರ್ಕಾರ ಮತ್ತು ಪಕ್ಷದಲ್ಲಿ ಏನು ಬೇಕಾದರೂ…

52 mins ago