Andolana originals

ಸಾಲುಂಡಿ ನೆಮ್ಮದಿ ಕೆಡಿಸಿದ ಕಲುಷಿತ ನೀರು

ಮೈಸೂರು: ಆ ಹಳ್ಳಿಯ ಜನರ ಕಂಗಳಲ್ಲಿ ಆತಂಕ ಮನೆಮಾಡಿತ್ತು. ಯಾವುದೋ ನಲ್ಲಿಯಲ್ಲಿ ನೀರು ಬೀಳುತ್ತಿದ್ದರೆ ಅಥವಾ ಮಿನಿ ಟ್ಯಾಂಕ್‌ನಿಂದ ಬರಬಹುದಾದ ನೀರಿನ ಬಗ್ಗೆ ಅನುಮಾನ, ಭಯದಿಂದ ನೋಡುವಂತಹ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.

ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಮಂಗಳವಾರ ಈ ಮೇಲಿನ ದೃಶ್ಯ ಕಂಡಬಂದಿತು. ಅದಕ್ಕೆ ಕಾರಣ ಕಲುಷಿತ ನೀರು, ಇಂತಹ ನೀರಿನ ಸೇವನೆಯಿಂದ ಊರಿನ ಯುವಕರೊಬ್ಬರು ಅಸುನೀಗಿದ್ದರೆ, ಬಹಳಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದ ಕನಕರಾಜು ಎಂಬವರು ಕಲುಷಿತ ನೀರು ಸೇವಿಸಿದ್ದರಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿಧನರಾದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಧಾವಿಸಿ, ಅಲ್ಲಿನ ಜನರಿಗೆ ಧೈಯ್ಯ ತುಂಬುತ್ತಿದ್ದುದು ಕಂಡುಬಂತು.

ಕನಕರಾಜು ಕುಟುಂಬಸ್ಥರು ಅಕ್ಷರಶಃ ಕುಗ್ಗಿ ಹೋಗಿದ್ದು, ನಮ್ಮ ಬಳಿ ಹಣವಿದ್ದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ಮಗ ಬದುಕುತ್ತಿದ್ದ. ಸಾಲಸೋಲ ಮಾಡಿಯಾದರೂ ಹಣ ಹೊಂದಿಸಬಹುದಾಗಿತ್ತು. ಆದರೀಗ ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಹಾಕುತ್ತಿದ್ದ ಸನ್ನಿವೇಶ ಕರುಳು ಕಿವಿಚುವಂತೆ ಇತ್ತು. ನಮ್ಮ ಗ್ರಾಮದಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ. ಇದು ಇಲ್ಲಿಗೆ ನಿಂತರೆ ಸಾಕು. ಗ್ರಾಮ ದೇವತೆಗೆ ಪೂಜೆ ಮಾಡಿ ಬೇಡಿಕೊಳ್ಳುತ್ತೇವೆ ಎಂದು ಅಮಾಯಕರಂತೆ ಮಾತನಾಡುವವರು ಕೂಡ ಅಲ್ಲಿದ್ದರು.

ಕೆ.ಸಾಲುಂಡಿ ಗ್ರಾಮ ನಗರ ಪ್ರದೇಶದಿಂದ ಕೂಗಳತೆಯಲ್ಲಿಯೇ ಇದೆ. ಗ್ರಾಮದಲ್ಲಿ ಹಲವಾರು ಪ್ರತಿಷ್ಠಿತರ ಮನೆಗಳಿವೆ. ಜೊತೆಗೆ ಸಾಕಷ್ಟು ಮಂದಿ ಬಡವರೂ ಅಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಬೋರ್‌ವೆಲ್ ನೀರೇ ಗ್ರಾಮಕ್ಕೆ ಆಧಾರ. ಕೆಲ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಕುಡಿಯಲು ಬಳಸುತ್ತಾರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಿಯ ಮೋರಿ ಹಾಗೂ ಒಳ ಚರಂಡಿ ನೀರು ಉಕ್ತಿ ಹರಿದಿದೆ. ಗ್ರಾಮದ ಒಳ ಚರಂಡಿ ನೀರನ್ನು ಯುಜಿಡಿಗೆ ಲಿಂಕ್ ಮಾಡದ ಕಾರಣ ಗಲೀಜು ನೀರು ಮಳೆ ನೀರಿನೊಂದಿಗೆ ಮೋರಿಯಲ್ಲಿಯೇ ಹರಿಯುತ್ತಿದೆ. ಇದರಿಂದಾಗಿ ಬೋರ್ ವೆಲ್ ನೀರಿಗೆ ಇದೇ ಗಲೀಜು ನೀರು ಸೇರಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಗಾಮದ ಬೋರ್‌ವೆಲ್ ನೀರು ಕಲುಷಿತಗೊಂಡಿದೆ. ಇದನ್ನು ಅರಿಯದ ಜನರು ನೀರನ್ನು ಎಂದಿನಂತೆ ಸೇವಿಸಿದ್ದಾರೆ.

ಇದರಿಂದಾಗಿ ಸಾಕಷ್ಟು ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಸುಮಾರು 60 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಲ್ಲಿ ಗ್ರಾಮದ ಜವರೇಗೌಡ ಪಡೆದುಕೊಂಡಿದ್ದಾರೆ. ಅವರಲ್ಲಿ ಗ್ರಾಮದ ಜವರೇಗೌಡ ಅವರ ಮಗ ಕನಕರಾಜು ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

3 ತಿಂಗಳ ಹಿಂದೆ ತಂದೆ ಸಾವು: ಮೃತ ಕನಕರಾಜು ಅವರ ತಂದೆ ಜವರೇಗೌಡ ಅವರು ಮೂರು ತಿಂಗಳ ಹಿಂದೆ ಕೆಲ ಕಾರಣಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಕನಕರಾಜು ಹಾಗೂ ಆತನ ಸಹೋದರ ರವಿ ಅವರು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು.

ಹಣವಿರಲಿಲ್ಲ: ತೀವ್ರ ಅಸ್ವಸ್ಥಗೊಂಡಿದ್ದ ಕನಕರಾಜು ಅವರನ್ನು ಭಾನುವಾರ ರಾತ್ರಿ ನಗರದ ಸರಸ್ವತಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ಸಿಬ್ಬಂದಿ 30 ಸಾವಿರ ರೂ. ಪಾವತಿಸಲು ತಿಳಿಸಿದ್ದರು. ಆದರೆ, ಅಷ್ಟು ಹಣವಿಲ್ಲದ ಕಾರಣ ಕನ ರಾಜು ಅವರ ಕುಟುಂಬದವರು ಕೇವಲ ಇಂಜೆಕ್ಷನ್ ಮಾಡಿಸಿಕೊಂಡು ವಾಪಸ್ ಮನೆಗೆ ಕರೆತಂದಿದ್ದರು.

ಎಚ್ಚೆತ್ತ ಆರೋಗ್ಯ ಇಲಾಖೆ: ಘಟನೆ ಅರಿವಿಗೆ ಬರುತ್ತಿದ್ದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಜಿಲ್ಲಾ ವೈದ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರು ಸೋಮವಾರ ಸಂಜೆಯೇ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರತೀ ಮನೆಗೂ ತಮ್ಮ ಸಿಬ್ಬಂದಿ ಹಾಗೂ ದಾದಿಯರನ್ನು ಕಳುಹಿಸಿ ಸರ್ವೇ ಮಾಡಿಸಿದ್ದಾರೆ. ನಂತರ ಪ್ರತೀ ಮನೆಗೂ ಓಆರ್‌ಎಸ್ ಪೊಟ್ಟಣ ಹಾಗೂ ಮಾತ್ರೆಗಳನ್ನು ವಿತರಿಸಲಾಗಿದೆ. ಭೇದಿ ಅಥವಾ ವಾಂತಿ ಕಾಣಿಸಿಕೊಂಡಲ್ಲಿ ಮಾತ್ರೆಗಳನ್ನು ಸೇವಿಸಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಮನೆಯಲ್ಲಿ ಕಾಯಿಸಿ ಆರಿಸಿದ ನೀರನ್ನು ಮಾತ್ರ ಸೇವಿಸುವಂತೆ ತಿಳಿಹೇಳಲಾಗಿದೆ.

ಕ್ಯಾಂಪ್ ಆರಂಭ: ಇದೇ ವೇಳೆ ಗ್ರಾಮದಲ್ಲಿ ವೈದ್ಯರು ಹಾಗೂ ದಾದಿಯರನ್ನೊಳಗೊಂಡ ಕ್ಯಾಂಪ್ ಆರಂಭಿಸಲಾಗಿದೆ. ಇಲ್ಲಿ ದಿನದ 24 ಗಂಟೆಗಳ ಕಾಲ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ವೇಳೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಮೂರು ಆಂಬ್ಯುಲೆನ್ಸ್‌ಗಳನ್ನು ಸಿದ್ಧವಿರಿಸಲಾಗಿದೆ.

ನೀರುಬಂದ್: ಒಳಚರಂಡಿ ನೀರು ಬೋರ್‌ವೆಲ್‌ಗೆ ಸೇರಿರುವಕಾರಣ ಸೋಮವಾರ ಮಧ್ಯಾಹ್ನದಿಂದಲೇ ಬೋರ್‌ವೆಲ್ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಐದಕ್ಕೂ ಹೆಚ್ಚು ನೀರಿನ ಟ್ಯಾಂಕರ್‌ಗಳ ಮೂಲಕ ಅಲ್ಲಿನ ಮನೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಗ್ರಾಮದಲ್ಲಿ ಸ್ವಚ್ಛತೆ: ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಹೂಟಗಳ್ಳಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಎಲ್ಲಾ ಮೋರಿಗಳನ್ನು ಸ್ವಚ್ಛಗೊಳಿಸಿ ಔಷಧವನ್ನು ಸಿಂಪಡಿಸಿದ್ದಾರೆ. ಗ್ರಾಮದ ಸುತ್ತಲಿದ್ದ ಕಸವನ್ನು ತೆರವುಗೊಳಿಸಿದ್ದಾರೆ.

 

ಹೆಚ್. ಎಸ್.‌ ದಿನೇಶ್‌ ಕುಮಾರ್

ಮೈಸೂರಿನವನಾದ ನಾನು, 1994ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಸಂಕ್ರಾಂತಿʼಯಿಂದ ಪ್ರಾರಂಭಿಸಿ, ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರ, ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಪರಾಧ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸ.

Recent Posts

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

30 mins ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

1 hour ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

2 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

2 hours ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

2 hours ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

3 hours ago