ನಗರಸಭೆ ಅಧ್ಯಕ್ಷರಾಗಿ ಶ್ರೀಕಂಠ, ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆ
ನಂಜನಗೂಡು: ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಅಧ್ಯಕ್ಷರಾಗಿ ಶ್ರೀಕಂಠ ಹಾಗೂ ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆಯಾಗಿದ್ದಾರೆ.
31 ಸ್ಥಾನ ಬಲದ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದರೊಂದಿಗೆ ಕೈ ತಂತ್ರಕ್ಕೆ 15 ಸದಸ್ಯರ ಬಲದ ಬಿಜೆಪಿ ತತ್ತರಿಸಿದೆ.
ಎಸ್‌ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಪವಿಭಾಗಾಧಿಕಾರಿ ರಕ್ಷಿತ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶ್ರೀಕಂಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಏಪ್ ನೀಡಿದ್ದ ಜಾ.ದಳ ಸದಸ್ಯೆ ರೆಹನಾ ಬಾನು ನಾಮಪತ್ರ ಸಲ್ಲಿಸಿದರು.
ಇವರಿಬ್ಬರೂ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿಯ ದೇವ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾ ಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದರು.
ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವ್ ಹಾಗೂ ಮಂಜುಳಾ ಅವರಿಗೆ 12 ಮತಗಳು ಬಂದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠ ಹಾಗೂ ರೆಹನಾಬಾನು ಅವರು 16 ಮತಗಳನ್ನು ಪಡೆದಾಗ ಚುನಾವಣಾಧಿಕಾರಿ ರಕ್ಷಿತ್ ಅವರು ಶ್ರೀಕಂಠ ಹಾಗೂ ರೆಹನಾ ಬಾನು ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸು ವುದರೊಂದಿಗೆ ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಂತಾಯಿತು.
10 ಸದಸ್ಯ ಬಲ ಹೊಂದಿದ ಕಾಂಗ್ರೆಸ್ ಆರಂಭದಲ್ಲೇ ಪಕ್ಷೇತರರನ್ನು ಒಲಿಸಿಕೊಂಡು ಶಾಸಕ, ಸಂಸದರೊಡಗೂಡಿ ತನ್ನ ಬಲವನ್ನು 15ಕ್ಕೇರಿಸಿಕೊಂಡು ಜಾ.ದಳ ಹಾಗೂ ಕೆಲ ಬಿಜೆಪಿ ಸದಸ್ಯರೊಡನೆ ಗುಪ್ತ ಮಾತುಕತೆ ನಡೆಸಿ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದರೆ ಬಿಜೆಪಿ ತನ್ನ 15 ಸದಸ್ಯರೊಡನೆ ಜಾ.ದಳದ ಮೂವರು ಸದಸ್ಯರ ಬಲ ನಂಬಿ ಬಹುಮತದ ಆತ್ಮವಿಶ್ವಾಸ ದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.
ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಸದಸ್ಯರು ಗೈರಾಗಿದ್ದರೆ, ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಸರಿಸಿ ಎಪ್ ನೀಡಿದ್ದ ಜಾ.ದಳದ ರೆಹನಾ ಬಾನು ಕಾಂಗ್ರೆಸ್ ಸದಸ್ಯರೊಡಗೂಡಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಕೊನೆಗೆ ಕಾಂಗ್ರೆಸ್‌ನ ಶ್ರೀಕಂಠ ಮತ್ತು ಜಾ.ದಳದ ರೆಹನಾಬಾನು ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಸಂಸದಸುನಿಲ್ ಬೋಸ್ ಅವರೊಡಗೂಡಿ ಮೂವರು ಬಲ ಪಡೆದು 16 ಮತ ಗಳಿಸಿ ವಿಜಯದ ನಗೆ ಬೀರಿದರು.
ಬಿಜೆಪಿಯ 15 ಸದಸ್ಯರಲ್ಲಿ ನಾಲ್ವರು ಚುನಾವಣೆಯಲ್ಲಿ ಭಾಗಿಯಾಗದೆ ದೂರ ಉಳಿದ ಪರಿಣಾಮ ಆ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ 11 ಮತಗಳು ಮತ್ತು ಜಾ.ದಳದ ಗಿರೀಶ್ (ಸಣ್ಣಕ್ಕಿ) ಬಾಬು ಅವರ ಮತದೊಂದಿಗೆ 12 ಮತಗಳನ್ನು ಗಳಿಸಿ ಪರಾಭವಗೊಂಡರು.
ಜಾ.ದಳ ಸದಸ್ಯ ಖಾಲೀದ್ ಚುನಾವಣೆಯಲ್ಲಿ ಭಾಗಿಯಾದರೂ ಯಾರಿಗೂ ಮತ ನೀಡದೆ ತಟಸ್ಥ ನಿಲುವು ತಳೆದಿದ್ದು ಗಮನ ಸೆಳೆಯಿತು.
ಬಿಜೆಪಿಯಿಂದ ಆಯ್ಕೆಯಾಗಿ ಮನೆ ಬಾಗಿಲಿಗೆ ಎಪ್ ಅಂಟಿಸಿಕೊಂಡರೂ ಚುನಾವಣಾ ಪ್ರಕ್ರಿಯೆ ಯಿಂದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ಹಾಗೂ ವಿಜಯಲಕ್ಷ್ಮಿ ದೂರ ಉಳಿದರು.
ಮೂರು ಪಾಲಾದ ಜಾ.ದಳ: ಜಾ.ದಳದ ಗಿರೀಶ ಬಾಬು ಮೈತ್ರಿಗೆ ಸಹಕರಿಸಿ ಬಿಜೆಪಿಗೆ ಮತ ನೀಡಿದರೆ ರೆಹನಾ ಬಾನು ಬಿಜೆಪಿಯಿಂದ ವಿಪ್ ಪಡೆದರೂ ಕಾಂಗ್ರೆಸ್ ಜತೆ ಸೇರಿ ಉಪಾಧ್ಯಕ್ಷ ಸ್ಥಾನವನ್ನೇರಿದರು. ಮತ್ತೊಬ್ಬ ಸದಸ್ಯ ಖಾಲಿದ್ ಬಿಜೆಪಿಯನ್ನೂ ಬೆಂಬಲಿಸದೆ, ಕಾಂಗ್ರೆಸ್‌ಗೂ ಮತ ನೀಡದೇ ತಟಸ್ಥ ಧೋರಣೆ ತಾಳಿದರು. ಹೀಗೆ ಮೂವರು ಸದಸ್ಯರೂ ಮೂರು ದಿಕ್ಕಿಗೆ ಮುಖ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಹಾಗೂ ತಾವು ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿಯವರ ತಂಡದ ಎರಡು ತಿಂಗಳ ಶ್ರಮದ ಫಲ ನಗರಸಭೆ ವರಿಷ್ಠರ ಚುನಾವಣೆಯ ವಿಜಯ.
-ದರ್ಶನ್ ಧ್ರುವನಾರಾಯಣ, ಶಾಸಕ
ಈ ಸೋಲು ನಮಗೆ ಆಘಾತವಲ್ಲ, ಇದು ಆಡಳಿತ ಪಕ್ಷದ ಅಧಿಕಾರ ದುರುಪಯೋಗದ ವಿಜಯ. ಇಂದು ನಂಜನಗೂಡು, ನಾಳೆ ಗುಂಡ್ಲುಪೇಟೆ ಎಲ್ಲೆಡೆ ಇದೇ ನಡೆಯುತ್ತದೆ. ಇನ್ನು 15 ತಿಂಗಳುಗಳ ನಂತರ ಇದೇ ಮತದಾರರೇ ಕಾಂಗ್ರೆಸ್‌ನ ಅಧಿಕಾರ ದಾಹಕ್ಕೆ ಉತ್ತರ ನೀಡಲಿದ್ದಾರೆ.
-ಬಿ.ಹರ್ಷವರ್ಧನ್, ಮಾಜಿ ಶಾಸಕ
ಕಾಂಗ್ರೆಸ್ ಆಮಿಷಕ್ಕೆ ನಮ್ಮ ಸದಸ್ಯರಾದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ವಿಜಯಲಕ್ಷ್ಮಿ ಅವರು ಬಲಿಯಾಗಿ ಪಕ್ಷಕ್ಕೆ ಮತ್ತು ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಇವರ ವಿರುದ್ಧ ಪಕ್ಷ ಕಾನೂನು ಕ್ರಮ ಜರುಗಿಸಲಿದೆ.
-ಸಿದ್ದರಾಜು, ಬಿಜೆಪಿ ನಗರಾಧ್ಯಕ್ಷ
ನಮ್ಮ ತಂತ್ರಗಾರಿಕೆಗೆ ಸಿಕ್ಕ ಜಯ ಇದಾಗಿದೆ. ಚುನಾವಣೆ ಮುಗಿದಿದೆ, ಇನ್ನೇನಿದ್ದರೂ ಎಲ್ಲರೂ ಒಂದಾಗಿ ನಂಜನಗೂಡು ನಗರಸಭೆಯ 31 ವಾರ್ಡುಗಳನ್ನೂ ಅಭಿವೃದ್ಧಿಪಡಿಸುವತ್ತ ಹೆಜ್ಜೆ ಹಾಕೋಣ.
-ಸುನಿಲ್ ಬೋಸ್, ಸಂಸದ
ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…
ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…
ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…
‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…
ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…