ಓದುಗರ ಪತ್ರ
ಆಗಸ್ಟ್ ೨೦, ೨೦೨೫ರಂದು ‘ಆಂದೋಲನ’ದಿನ ಪತ್ರಿಕೆಯ ಓದುಗರ ಪತ್ರಗಳು ವಿಭಾಗದಲ್ಲಿ ಕನಕದಾಸನಗರ ಜೆ. ಬ್ಲಾಕ್‌ನಲ್ಲಿ ನಿತ್ಯ ಕಸ ಸಂಗ್ರಹಣೆ ಮಾಡದೆ ಇರುವ ಬಗ್ಗೆ ನಾನು ಬರೆದಿದ್ದ ಪತ್ರ ಪ್ರಕಟವಾಗಿತ್ತು.ಜೊತೆಗೆ ನಗರ ಪಾಲಿಕೆ ದೂರು ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಒಮ್ಮೊಮ್ಮೆ ಸ್ವೀಕರಿಸಿದರೂ ದೂರು ನೋಂದಣಿ ಮಾಡಿಕೊಳ್ಳುವುದಿಲ್ಲ. ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕೂಡ ಬರೆದಿದ್ದೆ.
ಇದೀಗ ನಮ್ಮ ಬಡಾವಣೆಯಲ್ಲಿ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ತಲೆದೋರಿದೆ. ಈ ಸಂಬಂಧ ವಾಣಿವಿಲಾಸ ನೀರು ಸರಬರಾಜು ಕಚೇರಿಗೆ ದೂರು ನೀಡಲು, ನೀರಿನ ಬಿಲ್ಲಿನ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ದೂರವಾಣಿ ಸಂಖ್ಯೆ ೦೮೨೧-೨೪೧೧೩೬೬ ಎಂದಿತ್ತು. ಅದಕ್ಕೆ ಕರೆ ಮಾಡಿದಾಗ ಇದು ಅಸ್ತಿತ್ವದಲ್ಲಿ ಇಲ್ಲ ಎಂದು ತಿಳಿಸಿತು. ಗೂಗಲ್‌ನಲ್ಲಿ ಹುಡುಕಿದಾಗ ಇನ್ನೊಂದು ಸಂಖ್ಯೆ ಇತ್ತು ಅದಕ್ಕೆ ಕರೆ ಮಾಡಿದಾಗ ಅದು ಮಹಾನಗರ ಪಾಲಿಕೆಯ ದೂರು ಕೋಶದ ಸಂಖ್ಯೆಯೇ ಆಗಿದ್ದು, ಅವರು ತಕ್ಷಣ ಕರೆ ಸ್ವೀಕರಿಸಿದರು. ನಾನು ವಾಣಿವಿಲಾಸ ನೀರು ಸರಬರಾಜು ಕಚೇರಿಯೇ ಎಂದು ಕೇಳಿದಾಗ, ಇಲ್ಲ ಇದು ಪಾಲಿಕೆ ಕಚೇರಿ, ನಿಮ್ಮ ಸಮಸ್ಯೆ ಏನು ಹೇಳಿ ಎಂದರು.
ನಾನು ಒಂದು ತಿಂಗಳಿಂದ ನೀರು ಸರಿಯಾಗಿ ಬರದ ಬಗ್ಗೆ ಹೇಳಿದೆ. ಅವರು, ಸರಿ ನಿಮ್ಮ ಸಮಸ್ಯೆಯನ್ನು ಸಂಬಽಸಿದವರಿಗೆ ತಿಳಿಸುತ್ತೇವೆ ಎಂದು ಹೇಳಿ ನನ್ನ ಪೂರ್ಣ ವಿಳಾಸವನ್ನು ಕೇಳಿ ಪಡೆದು, ನಿಮ್ಮ ಕಂಪ್ಲೆಂಟ್ ನಂಬರ್ ೪೬೪೫೯ ಎಂದು ತಿಳಿಸಿದರು. ನನಗೆ ಆಶ್ಚರ್ಯವಾಯಿತು.
ಇದುವರೆಗೆ ಕರೆಯನ್ನೇ ಸ್ವೀಕರಿಸದಿದ್ದವರು, ಸಹಾಯವಾಣಿ ನಂಬರ್ ಅನ್ನೂ ನೀಡದಿದ್ದವರು ಈಗ ಕರೆ ಸ್ವೀಕರಿಸಿ ನೋಂದಣಿ ಸಂಖ್ಯೆ ನೀಡುತ್ತಿದ್ದಾರೆ ಎಂದರೆ ಈ ಹಿಂದಿನ ಪತ್ರದಲ್ಲಿ ನಾನು ಕರೆ ಸ್ವೀಕರಿಸದಿರುವ ಬಗ್ಗೆ ಬರೆದಿದ್ದು! ಬಹುಶಃ ಈಗ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿರುವ ಪರಿಣಾಮವಾಗಿ ದೂರು ಕೋಶ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರ ಪ್ರಕಟಿಸಿದ ‘ಆಂದೋಲನ’ ಪತ್ರಿಕೆಗೆ ಹಾಗೂ ಕ್ರಮ ಕೈಗೊಂಡ ಅಧಿಕಾರಿಗಳಿಗೆ ಧನ್ಯವಾದಗಳು.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…