Andolana originals

ಡೋರ್ನಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿತ್ಯ ಸವಾರರಿಗೆ ಕಿರಿಕಿರಿ

ಭೇರ್ಯ ಮಹೇಶ್

ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಬೇಡಿಕೆ  

ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿ ರೈಲ್ವೆ ಅಂಡರ್ ಪಾಸ್ ಬಳಿ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ಎದುರಿಸುತ್ತಿರುವ ತೊಂದರೆಗಳು ಅತ್ಯಂತ ಗಂಭೀರವಾಗಿದ್ದು, ದೈನಂದಿನ ಸಂಚಾರಕ್ಕೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ.

ಕಾವೇರಿ ಹಿನ್ನೀರಿನ ಸಾಗರಕಟ್ಟೆಯಲ್ಲಿ ಸೇತುವೆ ನಿರ್ಮಾಣ ಮಾಡಿದ ನಂತರ ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಲಾಳಂದೇವನಹಳ್ಳಿ ಮೂಲಕ ಹಂಪಾಪುರ ಮೂಲಕ ಹಾಸನ- ಮೈಸೂರು ಹೆದ್ದಾರಿ ಸಂಪರ್ಕಿಸಬಹುದು ಹಾಗೂ ಕೆ.ಆರ್.ನಗರ ಪಟ್ಟಣಕ್ಕೆ ಬರಬಹುದು. ಹಾಗಾಗಿ ಏಳೆಂಟು ಕಿ.ಮೀ. ಅಂತರ ಕಡಿಮೆ ಆಗುತ್ತದೆ. ಆದ್ದರಿಂದ ಬೈಕ್ ಹಾಗೂ ವಾಹನ ಸವಾರರು ತಮ್ಮ ದೈನಂದಿನ ಕೆಲಸ ನಿಮಿತ್ತ ಮೈಸೂರಿಗೆ ತೆರಳುವವರು ಈ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ. ಆದ್ದರಿಂದ ಈ ರಸ್ತೆಯ ಅವಶ್ಯ ಸವಾರರಿಗೆ ಹೆಚ್ಚಾಗಿದೆ.

ಇನ್ನು ಹಾಸನ, ಕೋಣನೂರು, ರಾಮನಾಥಪುರ, ಅರಕಲಗೂಡು, ಸಾಲಿಗ್ರಾಮ, ಚುಂಚನಕಟ್ಟೆ ಕಡೆಗಳಿಂದ ವಾಹನ ಮತ್ತು ಬೈಕ್‌ಗಳಲ್ಲಿ ಬರುವವರು ಇದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಹಾಗಾಗಿ ವಾಹನದ ದಟ್ಟಣೆ ಹೆಚ್ಚಾಗುತ್ತಿದ್ದು, ಈ ರೈಲ್ವೆ ಅಂಡರ್ ಪಾಸ್‌ನಲ್ಲಿ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ.

ಮಳೆಗಾಲದಲ್ಲಿ ಅಥವಾ ಸಾಮಾನ್ಯ ಮಳೆಯಾದರೂ ಅಂಡರ್ ಪಾಸ್‌ನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ನೀರಿನ ಆಳ ತಿಳಿಯದೆ ಇಳಿಯುವ ವಾಹನಗಳು ಕೆಟ್ಟು ನಿಲ್ಲುತ್ತವೆ. ಈ ಅಂಡರ್ ಪಾಸ್ ಸಾಕಷ್ಟು ಕಿರಿದಾಗಿದ್ದು, ಏಕಕಾಲದಲ್ಲಿ ದೊಡ್ಡ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಸಂಚರಿಸುವಾಗ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಂಡರ್ ಪಾಸ್ ಬದಲಿಗೆ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ದೀರ್ಘಕಾಲದ ಬೇಡಿಕೆಯಾಗಿದೆ.

ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯುದ್ದಕ್ಕೂ ಕೆಸರು ಮತ್ತು ಆಳವಾದ ಗುಂಡಿಗಳು ನಿರ್ಮಾಣವಾಗಿ ಬೈಕ್ ಸವಾರರು ಸ್ಕಿಡ್ ಆಗಿ ಬೀಳುವ ಅಪಾಯ ಇದೆ. ರಾತ್ರಿಯ ಸಮಯದಲ್ಲಿ ಅಂಡರ್ ಪಾಸ್ ಒಳಗಡೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಸವಾರರ ಸುರಕ್ಷತೆಗೆ ಧಕ್ಕೆ ತಂದಿದೆ.

ಒಂದು ಕಾರನ್ನು ತಿರುಗಿಸಲೂ ಆಗದೆ ಪರದಾಡುವ ಪರಿಸ್ಥಿತಿ ಅಂಡರ್ ಪಾಸ್‌ನಲ್ಲಿದೆ. ಈ ಮಧ್ಯೆ ಮತ್ತೆ ಕಾಮಗಾರಿ ನೆರವೇರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ೨೦೦೪ ರ ಸಾಲಿನಲ್ಲಿ ಪರಿಶೀಲನೆ ವೇಳೆ ತಿಳಿಸಿದ್ದರು. ಆದರೆ ಇದುವರೆಗೂ ಆ ಕೆಲಸ ಮಾಡಿಲ್ಲ ಎಂದು ಲಾಳಂದೇವನಹಳ್ಳಿ ಗ್ರಾಮದ ಗಣೇಶ್ ಪತ್ರಿಕೆಗೆ ತಿಳಿಸಿದರು.

” ಸಾಗರಕಟ್ಟೆಯಲ್ಲಿ ಸೇತುವೆ ನಿರ್ಮಿಸಿ ವಾಹನ ಸಂಚಾರಕ್ಕೆ ಮುಕ್ತ ಮಾಡಿದ ಮೇಲೆ ಕೆ.ಆರ್.ನಗರ ಹಾಗೂ ಹಾಸನ ಕಡೆ ವಾಹನ, ಬೈಕ್ ಸವಾರರು ಈ ಮಾರ್ಗದಲ್ಲಿ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಡೋರ್ನಹಳ್ಳಿ ರೈಲ್ವೆಅಂಡರ್ ಪಾಸ್‌ನಲ್ಲಿ ಎದುರುನಿಂದ ಮತ್ತೊಂದು ವಾಹನ ಬಂದಾಗ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಅಂಡರ್ ಪಾಸ್ ಬದಲುಮೇಲ್ಸೇತುವೆ (-ಓವರ್ ) ನಿರ್ಮಿಸುವಂತೆ ಕ್ಷೇತ್ರದ ಸಂಸದರಾದ ಕೇಂದ್ರದ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಮೂಲಕ ಮನವಿ ಮಾಡಲಾಗಿತ್ತು, ಮೇಲ್ಸೇತುವೆ ನಿರ್ಮಾಣ ಸಂಬಂಧ ಸರ್ವೆ ಕಾರ್ಯ ನಡೆಯುತ್ತಿದೆ.”

ಬಾಲಾಜಿ ಗಣೇಶ್, ಗ್ರಾ.ಪಂ.ಮಾಜಿ ಸದಸ್ಯ, ಲಾಳಂದೇವನಹಳ್ಳಿ

” ೧೯೯೬ರಲ್ಲಿ ಬ್ರಾಡ್ ಗೇಜ್ ಪರಿವರ್ತನೆ ಮಾಡುವ ವೇಳೆ ಡೋರ್ನಹಳ್ಳಿ ರೈಲ್ವೆ ನಿಲ್ದಾಣದ  ರೈಲ್ವೆ ಗೇಟ್ ನಿಂದ ಕಗ್ಗರೆ, ಸಾತಿಗ್ರಾಮ, ಸೌತನಹಳ್ಳಿ, ತಿಪ್ಪೂರು ಗ್ರಾಮಗಳಿಗೆ ತೆರಳಬೇಕು. ಹಾಗಾಗಿ ಮೇಲ್ಸೇತುವೆಯನ್ನು ನಿರ್ಮಿಸುವಂತೆ ಮನವಿ ಮಾಡಲಾಗಿತ್ತು. ರೈಲ್ವೆ ಅಧಿಕಾರಿಗಳು ಬೇಜವಾಬ್ದಾರಿಯಿಂದಮೇಲ್ಸೇತುವೆ ನಿರ್ಮಾಣ ಮಾಡದೇ ಅಂಡರ್ ಪಾಸ್ ನಿರ್ಮಾಣ ಮಾಡಿದರು. ಸಾಗರಕಟ್ಟೆ ಸೇತುವೆ ನಿರ್ಮಾಣ ಮಾಡಿದ ನಂತರ ವಾಹನ ಸವಾರರ ಸಂಖ್ಯೆ ಹೆಚ್ಚಾಗಿದೆ.”

ನಾಗಣ್ಣ, ಮುಖಂಡರು , ಸಾತಿ ಗ್ರಾಮ

 

 

ಆಂದೋಲನ ಡೆಸ್ಕ್

Recent Posts

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

6 mins ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

12 mins ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

16 mins ago

21 ದಿನಗಳ ದೀಪಾಲಂಕಾರಕ್ಕೆ 2,60,920 ಯೂನಿಟ್ ಬಳಕೆ

ಕೆ.ಬಿ.ರಮೇಶನಾಯಕ ೮೦ ಆಕರ್ಷಕ ದೀಪಾಲಂಕೃತ ಪ್ರತಿಕೃತಿಗಳ ನಿರ್ಮಾಣ; ೩,೫೦೦ ಡ್ರೋನ್‌ಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧತೆ  ಮೈಸೂರು: ನಾಡಹಬ್ಬ…

31 mins ago

ಓದುಗರ ಪತ್ರ: ಪರಿಸರಪ್ರೇಮಿಯ ಕೂಗು ಕೊನೆಗೂ ಕೇಳಲೇ ಇಲ್ಲ …

ಬೋಗಾದಿ ರಸ್ತೆಯಲ್ಲಿ ವೈಟ್ ಟೈಪಿಂಗ್ ಕಾರ್ಯ ಮುಗಿದಿದೆ. ಅದನ್ನು ಪ್ರಾರಂಭಿಸಿದ ಸಂದರ್ಭದಲ್ಲಿ, ರಸ್ತೆಯ ಎರಡೂ ಬದಿಯಲ್ಲಿ ಮರ ಬೆಳೆಸಲು ಅವಕಾಶ…

57 mins ago

ಓದುಗರ ಪತ್ರ: ಆಹಾರ ಮತ್ತು ಔಷಧ ಪರೀಕ್ಷೆಗೆ ಸರ್ಕಾರಿ ಲ್ಯಾಬ್ ಸ್ಥಾಪನೆ ಚಿಂತನೆ ಉತ್ತಮ ಹೆಜ್ಜೆ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಖಾಸಗಿ ಪ್ರಯೋಗಾಲಯಗಳ ಮೇಲಿನ ಅವಲಂಬನೆ ತಗ್ಗಿಸಿ, ಸರ್ಕಾರದ ಹಂತದ ಅತ್ಯಾಧುನಿಕ ಪರೀಕ್ಷಾ…

58 mins ago