Andolana originals

‘ನಾಡಿನ ಪರಂಪರೆಯ ಕಲಾ ಪ್ರಕಾರಗಳ ಉತ್ತೇಜನಕ್ಕೆ ಬದ್ಧ’

ಚಿರಂಜೀವಿ ಸಿ ಹುಲ್ಲಹಳ್ಳಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ; ‘ಆಂದೋಲನ’ ಸಂದರ್ಶನದಲ್ಲಿ ಇಲಾಖೆಯ ಯೋಜನೆಗಳ ಬಗ್ಗೆ ವಿವರಣೆ 

ಮೈಸೂರು: ನಾಡು – ನುಡಿ, ಕಲಾ ಪರಂಪರೆಯ ಶ್ರೀಮಂತಿಕೆಯನ್ನು ಬಿಂಬಿಸುವ ಕಲಾ ಪ್ರಕಾರಗಳನ್ನು ಉಳಿಸುವ ಹಾಗೂ ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟಿ ಬದ್ಧವಾಗಿದ್ದು, ಹಲವಾರು ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಹೇಳಿದ್ದಾರೆ.

ಹಾಡಿರಿ ರಾಗಗಳ… ತೂಗಿರಿ ದೀಪಗಳ…, ಕಲಾ ಪ್ರತಿಭೋತ್ಸವ, ಕಾಲೇಜು ರಂಗೋತ್ಸವ, ಚಿಗುರು, ಕಲಾ ಸೌರಭ, ಸಾಂಸ್ಕೃತಿಕ ಸೌರಭ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಇಂದಿನ ಪೀಳಿಗೆಗೆ ಕಲಾ ಪ್ರಕಾರದಲ್ಲಿ ತೊಡಗಿಕೊಳ್ಳುವಂತೆ ಉತ್ತೇಜನ ನೀಡ ಲಾಗುತ್ತಿದೆ ಎಂದು ಅವರು ವಿವರಿಸಿದರು.

‘ಆಂದೋಲನ’ ದಿನ ಪತ್ರಿಕೆ ನಡೆಸಿದ ಕಿರು ಸಂದರ್ಶನದಲ್ಲಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರು ಇಲಾಖೆಯ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಹಂಚಿ ಕೊಂಡಿದ್ದಾರೆ.

ಆಂದೋಲನ: ಇಲಾಖೆಯಿಂದ ಕಲಾವಿದರಿಗೆ ಮಾಸಾಶನ ಹೆಚ್ಚಿಸಲಾಗಿದೆಯೇ?

ಮಲ್ಲಿಕಾರ್ಜು ನಸ್ವಾಮಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರಿಗೆ ಇದುವರೆಗೆ ೨ ಸಾವಿರ ರೂ. ಮಾಸಾಶನ ನೀಡಲಾಗುತ್ತಿತ್ತು. ಮಾಸಾಶನ ಹೆಚ್ಚಿಸಬೇಕು ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ೫೦೦ ರೂ. ಹೆಚ್ಚಳ ಮಾಡಿ ಒಟ್ಟು ೨,೫೦೦ ರೂ. ನಿಗದಿಪಡಿಸಲಾಗಿದೆ. ಇದು ಏಪ್ರಿಲ್ ನಿಂದಲೇ ಜಾರಿಯಾಗಿದ್ದು, ಕಲಾವಿದರಿಗೆ ಪಾವತಿಯಾಗುತ್ತಿದೆ.

ಆಂದೋಲನ: ನಾಡು, ನುಡಿ ಸಂಸ್ಕೃತಿಯ ಉಳಿವಿಗೆ ಹೊಸ ಯೋಜನೆಗಳು ಏನು?

ವಿಎನ್‌ಎಂ: ಕಾಲಕಾಲಕ್ಕೆ ಹೊಸ ಹೊಸ ಯೋಜನೆ ಗಳನ್ನು ರೂಪಿಸಲಾಗುತ್ತಿದೆ. ಇದರ ಒಂದು ಭಾಗವಾಗಿ ‘ಹಾಡಿರಿ ರಾಗಗಳ…ತೂಗಿರಿ ದೀಪಗಳ’ ವಿಶೇಷ ಕಾರ್ಯಕ್ರಮ ನಡೆಸ ಲಾಗುತ್ತಿದೆ. ೧೦ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕಲಾ ಪ್ರತಿಭೋತ್ಸವವನ್ನು ಈ ಸಾಲಿನಿಂದ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಮಕ್ಕಳಿಗೆ, ಯುವಕರಿಗೆ ಸ್ಪರ್ಧಾತ್ಮಕ ಸ್ಥೈರ್ಯ ತುಂಬಲು ಮತ್ತು ಸಾಂಸ್ಕೃತಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ವರ್ಷದಿಂದ ಪುನಾರಂಭಿಸಲಾಗುತ್ತಿದೆ. ಜಿಲ್ಲಾ ಮಟ್ಟ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಆಂದೋಲನ: ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುತ್ತಿದ್ದೀರಾ?

ಮಲ್ಲಿಕಾರ್ಜುನಸ್ವಾಮಿ: ನಶಿಸುವ ಹಂತದಲ್ಲಿರುವ ಜಾನಪದ ಕಲೆಗಳನ್ನು ಗುರುತಿಸಿ, ಅವಕ್ಕೆ ಸಂಬಂಽಸಿದ ಕಲಾವಿದರನ್ನು ಬಳಸಿಕೊಂಡು ಯುವ ಸಮೂಹಕ್ಕೆ ತರಬೇತಿ ಕೊಡಿಸುವ ನಿಟ್ಟಿನಲ್ಲಿ ‘ಹಾಡಿರಿ ರಾಗಗಳ… ತೂಗಿರಿ ದೀಪಗಳ’ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಶೇಷವಾಗಿ ಇದು ದಲಿತ ಸಮುದಾಯಗಳ ಕಲೆಯಾಗಿದ್ದು, ಪುನರುಜ್ಜೀವನಗೊಳಿಸಲಾಗುತ್ತಿದೆ. ಗೊರವರ ಕುಣಿತ, ಅಂಟಿಕೆ-ಪಂಟಿಕೆ, ತೊಗಲು ಗೊಂಬೆಯಾಟ, ಕೋಲಾಟ, ವೀರಮಕ್ಕಳ ಕುಣಿತದಂತಹ ಅಪರೂಪದ ಕಲೆಗಳ ಪುನಶ್ಚೇತನಕ್ಕೆ ಕ್ರಮವಹಿಸಲಾಗಿದೆ. ಈ ಕಲೆಯ ಪರಿಣತರಿಂದ ತರಬೇತಿ ಕೊಡಿಸಲಾಗುತ್ತಿದೆ. ೧೮ರಿಂದ ೩೦ ವರ್ಷದೊಳಗಿನ ಯುವಜನರು ಈ ಕಲಾ ಪ್ರಕಾರಗಳ ಕಲಿಕೆಯಲ್ಲಿ ನಿರತರಾಗಿದ್ದಾರೆ.

ಆಂದೋಲನ: ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಹೊಸ ಕಾರ್ಯಕ್ರಮ ರೂಪಿಸಲಾಗಿದೆಯೇ? ಮಲ್ಲಿಕಾರ್ಜುನಸ್ವಾಮಿ: ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಕಾಲೇಜು ರಂಗೋತ್ಸವವನ್ನು ಆಯೋಜಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯೂ ನವರಾತ್ರಿಯಲ್ಲಿ ರಂಗೋತ್ಸವ ಯಶಸ್ವಿಯಾಗಿ ನಡೆದಿದೆ. ಇದರೊಂದಿಗೆ ೭ರಿಂದ ೧೪ ವರ್ಷದೊಳಗಿನ ಮಕ್ಕಳಿಗಾಗಿ ಚಿಗುರು, ೧೫ ರಿಂದ ೩೦ ವರ್ಷ ದೊಳಗಿನವರಿಗೆ ಯುವ ಸೌರಭ, ೩೦ ವರ್ಷ ಮೇಲ್ಪಟ್ಟವರಿಗೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆ ಮೂಲಕ ಯುವ ಸಮೂಹವನ್ನು ಕಲಾ ರಂಗದತ್ತ ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ

ಆಂದೋಲನ: ದಸರಾ ಯಶಸ್ವಿಯಾಗಿದೆ. ಎಷ್ಟು ರಂಗತಂಡಗಳಿಗೆ ಈ ಬಾರಿ ಅವಕಾಶ ಸಿಕ್ಕಿತ್ತು? ಮಲ್ಲಿಕಾರ್ಜುನಸ್ವಾಮಿ: ದಸರಾ ಮಹೋತ್ಸವದ ಅಂಗವಾಗಿ ೧೦ ವೇದಿಕೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳು, ಜಾನಪದ ಕಲಾ ತಂಡಗಳೂ ಸೇರಿದಂತೆ ೫೦೦ಕ್ಕೂ ಹೆಚ್ಚು ತಂಡಗಳು ಕಾರ್ಯಕ್ರಮ ನೀಡಿವೆ. ಎಲ್ಲ ತಂಡಗಳಿಗೂ ಗೌರವಧನ ಪಾವತಿಸಲಾಗಿದೆ.

ಆಂದೋಲನ: ಇಲಾಖೆಯು ಆಯೋಜಿಸುವ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಅನುದಾನದ ಲಭ್ಯತೆ ಹೇಗಿದೆ?

ಮಲ್ಲಿಕಾರ್ಜುನಸ್ವಾಮಿ: ಈ ಪ್ರಶ್ನೆಗೆ ನಾವು ಉತ್ತರಿಸುವುದು ಅಷ್ಟು ಸೂಕ್ತವಲ್ಲ. ಇದು ಬಹಳ ಮುಖ್ಯವಾದ ಇಲಾಖೆಯೂ ಆಗಿದೆ. ಹೀಗಾಗಿ ಕಲಾ ಪ್ರಕಾರಗಳ ಚಟುವಟಿಕೆಗಳಿಗೆ ಅನುದಾನ ಕಡಿಮೆ ಇದೆ. ಈಗ ಇಲಾಖೆಗೆ ಬರುತ್ತಿರುವ ಅನುದಾನದಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಆದರೆ, ಇನ್ನೂ ಹೆಚ್ಚಿನ ಅನುದಾನ ಬೇಡಿಕೆ ಕಲಾ ವಿದರಿಂದಲೇ ಇದೆ. ಕಳೆದ ೧೦ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕಲಾವಿದರ ಸಂಖ್ಯೆ ಸುಮಾರು ಒಂದು ಸಾವಿರ ಇತ್ತು. ಆದರೆ, ಈಗ ಅಂದಾಜು ೧೦ ಸಾವಿರದಷ್ಟು ಕಲಾವಿದರು ಇದ್ದಾರೆ. ಈ ಸಂಖ್ಯೆಗೆ ತಕ್ಕಂತೆ ಅನುದಾನ ಕೂಡ ಹೆಚ್ಚಳವಾಗಬೇಕು

ಆಂದೋಲನ: ಮಾಸಾಶನದ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಕಡಿತಗೊಳಿಸುವ ಚಿಂತನೆ ಇದೆಯೇ?

ಮಲ್ಲಿಕಾರ್ಜುನಸ್ವಾಮಿ: ಕಲಾವಿದರ ಮಾಸಾಶನಕ್ಕೆ ಸಂಬಂಧಿಸಿದಂತೆ ವಯೋಮಿತಿ ಏರಿಕೆ ಮತ್ತು ಇಳಿಕೆ ಕುರಿತು ಚರ್ಚೆಗಳು ನಡೆದಿಲ್ಲ. ಪ್ರಸ್ತುತ ೫೮ ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ವಯೋಮಿತಿಯನ್ನು ಕಡಿಮೆಗೊಳಿಸಿದರೆ ಕಲಾವಿದರಿಗೆ ನಿವೃತ್ತಿ ಘೋಷಣೆ ಮಾಡಿದಂತೆ. ಪರೋಕ್ಷವಾಗಿ ನಿಮಗೆ ಮಾಸಾಶನ ಕೊಡುತ್ತೇವೆ ಮನೆಯಲ್ಲಿರಿ ಎನ್ನುವಂತಾಗಲಿದೆ. ಆದ್ದರಿಂದ ೫೮ ವರ್ಷ ವಯೋಮಿತಿ ಸರಿಯಾಗಿದೆ. ಈ ವಯೋಮಿತಿಯೊಳಗೆ ನಿಧನರಾದ ಕಲಾವಿದರ ಕುಟುಂಬಕ್ಕೆ ಅರ್ಧದಷ್ಟು ಮಾಶಾಸನವನ್ನು ನೀಡಲಾಗುತ್ತಿದೆ. ವಿಶೇಷ ಚೇತನರಿಗೆ ೫೫ ವರ್ಷ ವಯೋಮಿತಿ ಇದೆ.

ಆಂದೋಲನ ಡೆಸ್ಕ್

Recent Posts

ವಾಹನ ಸವಾರರು ಹೆಲ್ಮೆಟ್‌ ಬಳಸುತ್ತಿದ್ದಾರೇ? : ಜಾಗೃತಿ ಮೂಡಿಸಲು ಬಂದ ಯಮಧರ್ಮ

ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…

1 hour ago

ಬಳ್ಳಾರಿ ಗಲಭೆ | ಪಾದಯಾತ್ರೆಗೆ ಬಿಜೆಪಿಯಲ್ಲಿ ಭಿನ್ನಮತ

ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…

2 hours ago

ವರ್ಕ್ ಫ್ರಮ್ ಹೋಮ್ ಕೆಲಸ | ಮಹಿಳೆಗೆ 9.7 ಲಕ್ಷ ರೂ. ವಂಚನೆ

ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…

2 hours ago

ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…

2 hours ago

ಸಂಕ್ರಾಂತಿಗೆ ಸಾಂಸ್ಕೃತಿಕ ನಗರಿ ಸಜ್ಜು : ಎಲ್ಲೆಲ್ಲೂ ಶಾಪಿಂಗ್ ಸಡಗರ

ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…

3 hours ago

ಬೆಳೆಗೆ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ : ರೈತ ಗಂಭೀರ

ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…

4 hours ago