Andolana originals

ಶ್ರೀಕಂಠನ ಸನ್ನಿಧಿಯಲ್ಲಿ ವ್ಯಾಪಾರೀಕರಣವಾದ ಶಿವರಾತ್ರಿ ಜಾಗರಣೆ

ಎಸ್.ಎಸ್.ಭಟ್

ಈ ಬಾರಿ ೫೦ ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿರುವುದಕ್ಕೆ ಭಕ್ತರ ಆಕ್ರೋಶ

ನಂಜನಗೂಡು: ಶಿವರಾತ್ರಿಯ ಮುನ್ನಾ ದಿನ ದೇವಾಲಯಕ್ಕೆ ಆಗಮಿಸಿ ಇರುಳೆಲ್ಲ ಜಾಗರಣೆ ಮಾಡಿ ಬೆಳಗಿನ ಜಾವ ಕಪಿಲೆಯಲ್ಲಿ ಮಿಂದೆದ್ದು ದೇವಾಲಯಕ್ಕೆ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದು ವಾಪಸ್ ತೆರಳುವ ಸಂಪ್ರದಾಯ ನಂಜುಂಡೇಶ್ವರನ ಸನ್ನಿಧಿಯಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿದೆ.

ಶಿವರಾತ್ರಿಯ ಮುನ್ನಾ ದಿನ ಸೇವೆಯ ರೂಪದಲ್ಲಿ ಪೌರಾಣಿಕ ನಾಟಕ, ಜಾನಪದ ಹಾಡುಗಳು ಹಾಗೂ ಹರಿಕಥೆಗಳು ಇಲ್ಲಿ ನಡೆಯುತ್ತಲೇ ಇರುತ್ತಿದ್ದವು. ಆದರೆ, ದಿನಕಳೆದಂತೆ ಮತ್ತು ಆಡಳಿತಗಾರರ ಬದಲಾವಣೆಯೊಂದಿಗೆ ಸೇವಾರೂಪದ ಈ ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಿದ ಪರಿಣಾಮ ಶಿವರಾತ್ರಿಯ ಜಾಗರಣೆ ವ್ಯಾಪಾರೀಕರಣವಾಗಿ ಶ್ರೀಕಂಠೇಶ್ವರನ ಬೊಕ್ಕಸಕ್ಕೆ ಲಕ್ಷಾಂತರ ರೂ. ಕನ್ನ ಹಾಕತೊಡಗಿದೆ.

ಶಿವರಾತ್ರಿ ಜಾಗರಣೆಯಂದು ಮಾಂಬಳ್ಳಿ ಪಾಪೇಗೌಡರು ಹಾಗೂ ಮಳವಳ್ಳಿ ಮಹದೇವಸ್ವಾಮಿಯಂತಹ ಭಕ್ತರು ತಮ್ಮದೇ ತಂಡದ ಕಲಾವಿದರು ಹಾಗೂ ಹಾಡುಗಾರರೊಂದಿಗೆ ನಂಜನಗೂಡಿಗೆ ಆಗಮಿಸಿ ರಾತ್ರಿ-ಬೆಳಗಿನವರೆಗೂ ಕಾರ್ಯಕ್ರಮ ರೂಪಿಸಿ ದೇವಾಲಯದಿಂದ ಬಿಡಿಗಾಸನ್ನೂ ಪಡೆಯದೆ ಭಕ್ತರ ಜಾಗರಣೆಗೆ ಭಕ್ತಿಯ ಲೇಪವನ್ನಿಟ್ಟು ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಸದಾಶಿವ ದೀಕ್ಷಿತರು, ಸತ್ಯನಾರಾಯಣ ದೀಕ್ಷಿತರು, ಎನ್. ಎ. ಸದಾಶಿವ (ವಳಗುಡಿ ಶಿವಣ್ಣ ), ಆಗಮಿಕ ನಾಗಚಂದ್ರ ದೀಕ್ಷಿತರು, ಮತ್ತಿತರರು ತಮ್ಮ ಸಂಪರ್ಕಗಳನ್ನು ಬಳಸಿ ಸೇವಾರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದುದು ಈಗ ಇತಿಹಾಸ. ಒಬ್ಬರು ದೇವಾಲಯದ ದೀಪಾಲಂಕಾರ ತಮ್ಮ ಸೇವೆ ಎಂದರೆ, ಮತ್ತೊಬ್ಬರು ಹೂವಿನ ಸೇವೆ ತಮ್ಮದು ಎಂದು ಸ್ಪರ್ಧೆಯೋಪಾದಿಯಲ್ಲಿ ದೇವಾಲಯವನ್ನು ಶೃಂಗರಿಸುತ್ತಿದ್ದನ್ನು ಆಗ ಕಾಣಬಹುದಿತ್ತು. ಇಂಥವರಿಂದಾಗಿ ಶಿವರಾತ್ರಿ ಜಾಗರಣೆ ದೇವಾಲಯಕ್ಕೆ ಖರ್ಚಿಲ್ಲದೆ ಮುಕ್ತಾಯವಾಗುತ್ತಿತ್ತು.

೨೦೨೦ರಲ್ಲಿ ಸೇವಾ ಕಾರ್ಯಕ್ರಮಗಳ ಬದಲಾಗಿ ವ್ಯಾಪಾರೀಕರಣದ ಕಾರ್ಯಕ್ರಮಗಳು ಆರಂಭವಾದವು. ತಮಗೆ ಬೇಕಾದ ತಂಡಗಳನ್ನು ಕರೆಸಿ ಜಾಗರಣೆಯ ಕಾರ್ಯಕ್ರಮ ಮಾಡಿಸಿ ಅದಕ್ಕೆ ಆಧುನಿಕತೆಯ ಲೇಪ ಬಳಿದ ಪರಿಣಾಮ ದೇವಾ ಲಯಕ್ಕೆ ಖರ್ಚು, ಆಯೋಜನೆ ಮಾಡಿದವರಿಗೆ, ಸಹಕರಿಸಿದವರಿಗೆ ಹಣ ಎಂಬಂತಾಯಿತು ಶಿವರಾತ್ರಿ ಜಾಗರಣಾ ಸೇವೆಯ ಸ್ಥಿತಿ. ೨೦೨೦ರಲ್ಲಿ ೮ ಲಕ್ಷ ರೂ. ಖರ್ಚಿನೊಂದಿಗೆ ಆರಂಭವಾದ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ೨೦೨೫ರ ಹೊತ್ತಿಗೆ ೪೬ ಲಕ್ಷ ರೂ. ದಾಟಿದ್ದು, ಈ ಬಾರಿ ೫೦ ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿ ಜಿಲ್ಲಾಧಿಕಾರಿಗಳ ಅಂಗೀಕಾರಕ್ಕಾಗಿ ಕಾದಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

” ಶಿವರಾತ್ರಿ ಜಾಗರಣೆಗೆ ಆಧುನಿಕ ಸಿನಿಮಾದ ಹಾಡಿನ ರಂಗು ಹಾಸ್ಯಬೇಕಿಲ್ಲ. ಭಕ್ತಿರೂಪಕವಾದ ನಾಟಕ ಹಾಡುಗಳೇ ಸಾಕು. ಅದಕ್ಕೆ ಈಗಲೂ ಸೇವಾ ಕಾರ್ಯಕರ್ತರು ಸಿದ್ಧರಿದ್ದಾರೆ. ದೇವಾಲಯದಿಂದ ೫೦ ಲಕ್ಷ ರೂ. ಖರ್ಚು ಮಾಡುವುದು ಎಂದರೆ ಹೇಗೆ? ಆ ದುರ್ಬಳಕೆ ನಿಲ್ಲಿಸಿ. ಸೇವಾದಾರರುಗಳಿಗೆ ಅವಕಾಶ ನೀಡಿ.”

-ಧನಂಜಯ, ಬೆಂಗಳೂರು

” ಸ್ವಂತ ಹಣ ಖರ್ಚು ಮಾಡಿಕೊಂಡು ಶ್ರೀಕಂಠನ ಸನ್ನಿಧಿಯಲ್ಲಿ ಬರೋಬ್ಬರಿ ೨೮ ವರ್ಷಗಳ ಕಾಲ ನಾಟಕದ ಮೂಲಕ ಲಕ್ಷಾಂತರ ಜನರಿಗೆ ಜಾಗರಣೆ ಮಾಡಿಸಿದ ತೃಪ್ತಿಯಿದೆ. ಬದಲಾದ ಸನ್ನಿವೇಶದಲ್ಲಿ ನಾನು ೨೦೨೦ರಲ್ಲಿ ಆ ಸೇವೆಯಿಂದ ವಿಮುಖನಾಗಬೇಕಾಯಿತು.”

-ಪಾಪೇಗೌಡ, ಸೇವಾಕರ್ತ, ಮಾಂಬಳ್ಳಿ

” ದೇವಾಲಯದ ಆವರಣದಲ್ಲಿ ಜಾಗರಣೆಯ ಸೇವೆ ಮಾಡಿಸಿಕೊಳ್ಳಲು ಅಧಿಕಾರಿಗಳು, ಆಡಳಿತಗಾರರು ಸಿದ್ಧರಿದ್ದರೆ ಸೇವಾದಾರರಿಗೇನೂ ಕೊರತೆಯಲ್ಲ. ಅವರನ್ನು ಆಯ್ಕೆ ಮಾಡಿ ಗೌರವದಿಂದ ಆಹ್ವಾನಿಸಿದರೆ ಸಂತೋಷವಾಗಿ ಬಂದು ಸೇವೆ ಮಾಡುವ ಸಾಕಷ್ಟು ಭಕ್ತರು ನಂಜುಂಡನಿಗೆ ಇದ್ದಾರೆ.”

-ಎನ್.ಎ.ಸದಾಶಿವು

” ಜಾಗರಣೆ ಸಾಂಸ್ಕೃತಿಕ ಕಾರ್ಯಕ್ರಮದ ಸೇವೆ ಮರುಕಳಿಸಲಿ. ಅದಕ್ಕೆ ಖರ್ಚು ಮಾಡುವ ಹಣವನ್ನು ಆಗಮಿಸುವ ಭಕ್ತರ ಮೂಲಭೂತ ಸೌಕರ‍್ಯಕ್ಕೆ ವಿನಿಯೋಗಿಸಲಿ.”

-ಶಂಕರಪುರ ಸುರೇಶ

” ಜಾಗರಣೆಯ ಸೇವೆ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ದುಂದುವೆಚ್ಚದ ಕುರಿತು ಇದೀಗ ‘ಆಂದೋಲನ’ ಪತ್ರಿಕೆ ನನ್ನ ಗಮನಕ್ಕೆ ತಂದಿದೆ. ೨೦೨೭ರ ಸಾಲಿನ ಶಿವರಾತ್ರಿಗೆ ಸೇವಾ ಕಾರ್ಯಕ್ರಮಗಳನ್ನೇ ಆಯೋಜಿಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು.”

-ದರ್ಶನ್ ಧ್ರುವನಾರಾಯಣ, ಶಾಸಕ

” ನಾನೀಗ ಇಲ್ಲಿಗೆ ಹೊಸದಾಗಿ ಬಂದಿದ್ದು, ಮುಂದಿನ ವರ್ಷದ ಶಿವರಾತ್ರಿ ಜಾಗರಣೆ ಸೇವಾ ರೂಪದ ಜಾಗರಣೆಯಾಗಲಿದೆ.”

-ಸಿ.ಜೆ.ಕೃಷ್ಣ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

6 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

6 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

7 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

7 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

7 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

7 hours ago