commercial LPG cylinder
ಪ್ರಶಾಂತ್ ಮಲ್ಲಿಕ್
ಹೋಟೆಲ್ ಉದ್ಯಮದ ಕಂಗಾಲು ಸ್ಥಿತಿ ಮುಂದುವರಿಕೆ
ಮೈಸೂರಲ್ಲಿ ಶೇ.೧೦ರಷ್ಟು ಹೋಟೆಲ್‌ಗಳು ಬಂದ್
ಗ್ಯಾಸ್ ಸಿಗದ ಕಾರಣ ಸೌದೆಗೆ ಬೇಡಿಕೆ ಹೆಚ್ಚಳ
ಮೈಸೂರು: ಆಹಾರ ಮತ್ತು ಆತಿಥ್ಯ ವಲಯಕ್ಕೆ ನೆರವಾಗುವ ನಿಟ್ಟಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೋಟಾವನ್ನು ಒಟ್ಟು ಶೇ.೨೦ ಹೆಚ್ಚಳ ಮಾಡಿ, ಸೋಮ ವಾರದಿಂದ ಅನಿಲ ಪೂರೈಕೆ ಮಾಡಲಾ ಗುತ್ತದೆ ಎಂಬ ಕೇಂದ್ರ ಸರ್ಕಾರದ ಘೋಷಣೆ ಜಾರಿಯಾಗದೆ ಮೈಸೂರಿ ನಲ್ಲಿ ಹೋಟೆಲ್ ಉದ್ಯಮದ ಪರ ದಾಟ ಮುಂದುವರಿದಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಹಾಗೂ ಗ್ಯಾಸ್ ಸಿಲಿಂಡರ್ ಅವಲಂಬಿತ ವ್ಯಾಪಾರ ವ್ಯವಹಾರಗಳು ಇಸ್ರೇಲ್ – ಇರಾನ್ ಯುದ್ಧದ ನಡುವೆ ಸಂಕಷ್ಟಕ್ಕೆ ಸಿಲುಕಿದ್ದವು. ಮೈಸೂರಿನಲ್ಲಿ ಸದ್ಯಕ್ಕೆ ಹೋಟೆಲ್ ಉದ್ಯಮದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಈ ಉದ್ಯಮಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಎಲ್‌ಪಿಜಿ ಕೋಟಾವನ್ನು ಒಟ್ಟಾರೆ ಶೇ.೫೦ರಷ್ಟು ಹೆಚ್ಚಿಸುವ ಆದೇಶ ಹೊರಡಿಸಿದೆ.
ಆದರೆ ಆದೇಶದಂತೆ ಗ್ಯಾಸ್ ಸಿಲಿಂಡರ್‌ಗಳಿಗಾಗಿ ಕಾಯುತ್ತಿರುವವರಿಗೆ ಪೂರೈಕೆಯಾಗಿಲ್ಲ. ಕೇಂದ್ರ ಸರ್ಕಾರದ ಆದೇಶ ಜಾರಿಯಾಗಿದ್ದರೆ ಶೇ.೭೦ರಷ್ಟು ಸಮಸ್ಯೆಗಳು ಪರಿಹಾರವಾಗುವ ಆಶಯ ಹೋಟೆಲ್ ಉದ್ಯಮದವರದ್ದಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್‌ಗಳವರು ಊಟ, ತಿಂಡಿ ತಯಾರಿಕೆಗೆ ಅನಿವಾರ್ಯವಾಗಿ ಸೌದೆ ಒಲೆಯನ್ನು ಅವಲಂಬಿಸಿದ್ದಾರೆ. ಇದರಿಂದ ಸೌದೆಯ ಬೆಲೆ ಕೂಡ ಹೆಚ್ಚಳವಾಗಿದೆ. ಇಷ್ಟೇ ಅಲ್ಲದೆ, ಸುಮಾರು ಒಂದು ವಾರದಿಂದಲೂ ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ದರವೂ ಹೆಚ್ಚಳವಾಗಿದೆ. ಹಲವೆಡೆ ಊಟ, ತಿಂಡಿ ಮೆನುವಿನಲ್ಲಿ ಗಮನಾರ್ಹ ಬದಲಾವಣೆ ಆಗಿದೆ.
ಬಹುತೇಕ ಹೋಟೆಲ್‌ಗಳಲ್ಲಿ ಬೆಂಕಿ ಅಥವಾ ಅದರ ಕಾವಿನಲ್ಲಿ ಹೆಚ್ಚು ಬೇಯಿಸಬೇಕಾದ ಆಹಾರಗಳನ್ನು ಗ್ರಾಹಕರಿಗೆ ಪೂರೈಸುತ್ತಿಲ್ಲ. ಇಂದಿರಾ ಕ್ಯಾಂಟೀನ್‌ಗಳ ಮೆನುವಿನಲ್ಲಿ ಕೂಡ ಕೆಲ ತಿಂಡಿಗಳನ್ನು ಕಡಿತ ಮಾಡಲಾಗಿದೆ. ಕೆಲ ಕ್ಯಾಂಟೀನ್ಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಮೈಸೂರಿನಲ್ಲಿ ಶೇ.೧೦ರಷ್ಟು ಹೋಟೆಲ್‌ಗಳು ಬಾಗಿಲು ಮುಚ್ಚಿವೆ ಎಂದು ಹೇಳಲಾಗಿದೆ. ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸದ್ಯಕ್ಕೆ ಸಮಸ್ಯೆ ಇಲ್ಲ. ಆದರೆ, ಹಲವು ಶಾಲೆಗಳಿಗೆ ಬಿಸಿ ಯೂಟದ ಹೊಣೆ ಹೊತ್ತಿರುವ ನಗರದ ಅಕ್ಷಯ ಪ್ರತಿಷ್ಠಾನ ಸಂಸ್ಥೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆಯ ಬಿಸಿ ತಟ್ಟಿದೆ. ಸಂಸ್ಥೆಯವರು ಒಂದು ವಾರದ ಹಿಂದೆಯೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರವು ವಾಣಿಜ್ಯ ಸಿಲಿಂಡರ್‌ಗಳನ್ನು ಶೀಘ್ರದಲ್ಲಿ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಹೋಟೆಲ್ ಉದ್ಯಮ ನಿಸ್ತೇಜವಾಗುತ್ತದೆ. ಅದರಿಂದ ಪ್ರವಾಸೋದ್ಯಮಕ್ಕೂ ಹೊಡೆತ ಬೀಳುತ್ತದೆ. ಅಲ್ಲದೆ, ಪ್ರತಿದಿನ ಕೆಲಸಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಬರುವ ನೂರಾರು ಕೂಲಿ ಕಾರ್ಮಿಕರೂ ಹಸಿವಿನಿಂದ ಬಳಲುವಂತಾಗುತ್ತದೆ ಎಂದು ಹೋಟೆಲ್ ಉದ್ಯಮದ ಹಲವರು ‘ಆಂದೋಲನ’ ದಿನಪತ್ರಿಕೆ ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ಬಿಸಿಯೂಟಕ್ಕೆ ತೊಂದರೆಯಿಲ್ಲ: ಡಿಡಿಪಿಐ
ಮೈಸೂರು: ಶಾಲೆಗಳಲ್ಲಿ ಅಡುಗೆಗಾಗಿ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದ್ದು, ಸದ್ಯಕ್ಕೆ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯ್ ಕುಮಾರ್ ತಿಳಿಸಿದರು. ‘ಆಂದೋಲನ’ದೊಂದಿಗೆ ಮಾತನಾಡಿದ ಅವರು, ಏಪ್ರಿಲ್ ೧೦ಕ್ಕೆ ಮುಕ್ತಾಯಗೊಳ್ಳಲಿರುವ ಶೈಕ್ಷಣಿಕ ವರ್ಷದ ಇನ್ನುಳಿದ ೧೬ ಕೆಲಸದ ದಿನಗಳಿಗೆ ಅಗತ್ಯವಾದಷ್ಟು ಗೃಹ ಬಳಕೆ ಸಿಲಿಂಡರ್‌ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಸುಮಾರು ೧,೭೧,೦೦೦ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಪ್ರತಿದಿನ ಅಂದಾಜು ೨೪೨ ಸಿಲಿಂಡರ್‌ಗಳ ಅವಶ್ಯವಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
” ಅಕ್ಷಯ ಪ್ರತಿಷ್ಠಾನದ ಅಡುಗೆ ಕೇಂದ್ರಕ್ಕೆ ಪ್ರತಿದಿನ ಅಂದಾಜು ೧೫ ಕೆಜಿ ಗ್ಯಾಸ್ ಅವಶ್ಯವಿದೆ. ಗ್ಯಾಸ್ ಕೊರತೆಯನ್ನು ನೀಗಿಸಲು ಪ್ರತಿಷ್ಠಾನವು ವುಡ್ ಬಾಯ್ಲರ್ ತಂತ್ರಜ್ಞಾನವನ್ನು ಅವಲಂಬಿಸಿದೆ. ಒಂದು ವೇಳೆ ನಮ್ಮ ವ್ಯಾಪ್ತಿಯಲ್ಲಿ ಇರುವ ಶಾಲೆಗಳಲ್ಲಿ ಮಕ್ಕಳ ಆಹಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರೆ, ಆ ಮಕ್ಕಳಿಗೂ ಆಹಾರ ಪೂರೈಸುವ ವ್ಯವಸ್ಥೆ ಮಾಡಲಾಗುವುದು.”
-ಕೃಷ್ಣ ಕೇಶವ ದಾಸ್, ಉಪಾಧ್ಯಕ್ಷ, ಅಕ್ಷಯ ಪಾತ್ರೆ ಪ್ರತಿಷ್ಠಾನ, ಮೈಸೂರು
” ಗ್ಯಾಸ್ ಸಮಸ್ಯೆಯಿಂದ ಇಂದಿರಾ ಕ್ಯಾಂಟೀನ್‌ನಲ್ಲೂ ಇಡ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ದಿನ ಬಿಟ್ಟು ದಿನ ಮಾತ್ರ ಇಡ್ಲಿ ಸಿಗುವಂತಾಗಿದೆ. ಜನಪ್ರಿಯವಾಗಿದ್ದ ಮುದ್ದೆ ಊಟವನ್ನು ಸದ್ಯಕ್ಕೆ ಸಂಪೂರ್ಣ ವಾಗಿ ನಿಲ್ಲಿಸಲಾಗಿದ್ದು, ಗ್ರಾಹಕರ ಸಂಖ್ಯೆ ೨೦೦ ಕ್ಕಿಂತಲೂ ಇಳಿದಿದೆ.”
-ಕುಮಾರ್, ಸಿಬ್ಬಂದಿ, ಇಂದಿರಾ ಕ್ಯಾಂಟೀನ್, ಕಾಡಾ ಕಚೇರಿ ಆವರಣ
” ಕೇಂದ್ರ ಸರ್ಕಾರವು ಹೋಟೆಲ್ ಉದ್ದಿಮೆಗೆ ಶೇ.೨೦ರಿಂದ ೫೦ರಷ್ಟು ಗ್ಯಾಸ್ ಕೋಟಾ ನೀಡುವ ಬಗ್ಗೆ ಆದೇಶ ಹೊರಡಿಸಿದೆ. ಆದರೆ, ಈವರೆಗೂ ನಮಗೆ ಒಂದು ಸಿಲಿಂಡರ್ ಕೂಡ ದೊರೆತಿಲ್ಲ. ಸರ್ಕಾರದ ನಿರ್ಧಾರದಂತೆ ಹೋಟೆಲ್ ಉದ್ದಿಮೆಗೆ ಶೇ. ೫೦ರಷ್ಟು ಗ್ಯಾಸ್ ಪೂರೈಸಿದರೆ, ನಮ್ಮಲ್ಲಿರುವ ಶೇ. ೭೦ರಷ್ಟು ಸಮಸ್ಯೆಗಳು ನಿವಾರಣೆಯಾಗಲಿವೆ.”
-ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ
” ನಮ್ಮ ಹೋಟೆಲ್‌ನಲ್ಲಿ ಕಳೆದ ೬೦ ವರ್ಷಗಳಿಂದ ಮಧ್ಯಾಹ್ನ ಸಮಯದಲ್ಲಿ ದೋಸೆ ಮಾಡುವುದನ್ನು ನಾವು ಎಂದಿಗೂ ನಿಲ್ಲಿಸಿರಲಿಲ್ಲ. ಗುರುಪ್ರಸಾದ್’ ಹೋಟೆಲ್‌ನ ದೋಸೆ ಅಷ್ಟು ಪ್ರಸಿದ್ಧಿ ಪಡೆದಿತ್ತು. ಆದರೆ ಇಂದು ಗ್ಯಾಸ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅನಿವಾರ್ಯವಾಗಿ ದೋಸೆ ಮಾಡುವುದನ್ನೇ ನಿಲ್ಲಿಸಿದ್ದೇವೆ. ಗ್ಯಾಸ್ ಏಜೆನ್ಸಿ ಅಥವಾ ಗೋದಾಮಿಗೆ ಹೋದರೂ ಸಿಲಿಂಡರ್ ನೀಡುತ್ತಿಲ್ಲ.”
-ಗಣೇಶ್, ಮಾಲೀಕ, ಹೋಟೆಲ್ ಗುರು ಪ್ರಸಾದ್, ಮೈಸೂರು
ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ದಾಖಲೆಗಳನ್ನು ಮುರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರವು ಬಾಕ್ಸಾಫೀಸ್‌ನಲ್ಲಿ…
ವಾಷಿಂಗ್ಟನ್: ಅಮೇರಿಕಾದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.…
ಬೆಂಗಳೂರು: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಲಾಗುವುದು ಎಂದು…
ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿ ಇಷ್ಟು ಚಿಂತಾಜನಕವಾಗಿರುವಾಗ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ನೆರೆ ರಾಜ್ಯಕ್ಕೆ 10 ಕೋಟಿ…
ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು. ಕ್ರಿಶ್ಚಿಯನ್ ಧರ್ಮದಂತಹ…
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಏಪ್ರಿಲ್.1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಕುರಿತು ದಿನಗೂಲಿ…