Ambedkar Bhavan in Virajpet
ಮಳೆಗಾಲದಲ್ಲಿ ಮತ್ತಷ್ಟು ಕುಸಿಯುವ ಭೀತಿ ; ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಕಾಂಗೀರ ಬೋಪಣ್ಣ
ವಿರಾಜಪೇಟೆ: ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಭವನದ ತಡೆಗೋಡೆ ಅಲ್ಪ ಮಳೆಗೇ ಕುಸಿದಿದ್ದು, ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.
ಹಿಂದಿನ ಸಂಸದರು ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಅಂಬೇಡ್ಕರ್ ಭವನ ಕಾರ್ಯನಿರ್ಹಣಾ ಸಮಿತಿ ನೇತೃತ್ವದಲ್ಲಿ ಅಂಬೇಡ್ಕರ್ ಭವನದ ಪಕ್ಕದ ಖಾಲಿ ಜಾಗಕ್ಕೆ ತಡೆಗೋಡೆ, ಇಂಟರ್ ಲಾಕ್ ಹಾಕಿ ಆಗತ್ಯ ಬಳಕೆಗೆ ಸಿದ್ಧಪಡಿಸಲಾಗಿತ್ತು. ಆದರೆ ಮುಂಗಾರು ಆರಂಭಕ್ಕೂ ಮುನ್ನವೇ ಸುರಿದ ಅಲ್ಪ ಮಳೆಗೆ ತಡೆಗೋಡೆ ಕುಸಿದಿದೆ. ಇದರಿಂದ ಇತರ ಕಾಮಗಾರಿಯೂ ಕಳಪೆ ಆಗಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಏ. ೧೪ರಂದು ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ನೆರವೇರಿಸಿದ್ದರು. ೨೦೦೫ರಿಂದ ಈ ಭವನದ ಕಾಮಗಾರಿ ಒಂದಲ್ಲ ಒಂದು ವಿಳಂಬವಾಗಿ ಮಂದಗತಿಯಿಂದ ನಡೆಯುತ್ತಿತ್ತು. ೧. ೮೦ ಕೋಟಿ ರೂ. ಗೂ ಅಽಕ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಭವನ ನಿರ್ಮಾಣ ಮಾಡಲಾಗಿತ್ತಾದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗೆ ನಿರ್ಮಾಣಗೊಂಡಿದ್ದ ಕಟ್ಟಡ ಅಽಕಾರಿ ವರ್ಗದ ನಿರ್ಲಕ್ಷ ದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಪತ್ರಿಕೆಗಳಲ್ಲಿ ಈ ಬಗ್ಗೆ ಬಂದ ನಿರಂತರ ವರದಿಗಳಿಂದ ಇದಕ್ಕೆ ಬೀಗ ಹಾಕುವ ಕೆಲಸ ಆಗಿತ್ತು. ನಂತರ ಈಗಿನ ಶಾಸಕರ ಅವಽಯಲ್ಲಿ ಅಪೂರ್ಣಗೊಂಡಿರುವ ಕೆಲಸ ಮಾಡಲು ಹೆಚ್ಚುವರಿಯಾಗಿ ೨೫ ಲಕ್ಷ ರೂ. ಗಳ ವೆಚ್ಚದಲ್ಲಿ ಕಾಮಗಾರಿ ನಡೆದು ಉದ್ಘಾಟನೆಯೂ ಆಯಿತು.
ಇದೇ ಸಂದರ್ಭದಲ್ಲಿ ಇದಕ್ಕೆ ಹೊಂದಿಕೊಂಡಿದ್ದ ಖಾಲಿ ಜಾಗವನ್ನು ಭವನದ ಕೆಲವು ಉದ್ದೇಶಗಳಿಗೆ ಬಳಸಲು ನಿರ್ಧರಿಸಿ ಅದಕ್ಕೆ ಈ ಹಿಂದಿನ ಸಂಸದರ ೫ ಲಕ್ಷ ರೂ. ಮತ್ತು ವಿಧಾನಪರಿಷತ್ ಸದಸ್ಯರ ೫ ಲಕ್ಷ ರೂ. ಅನುದಾನದಲ್ಲಿ ಭೂ ತಡೆಗೋಡೆ ಮತ್ತಿತರ ಕಾಮಗಾರಿ ನಡೆಸಲಾಯಿತು. ಆದರೆ, ಇದೀಗ ಈ ಕಾಮಗಾರಿಯ ಭಾಗವಾದ ತಡೆಗೋಡೆ ಜನಬಳಕೆಗೂ ಮುಂಚೆಯೇ ಮಳೆಗೆ ಕುಸಿದಿದೆ.
ಮೇ ೧೯ರಂದು ಸಂಜೆ ಸುರಿದ ಮಳೆಗೆ ತಡೆಗೋಡೆ ಕುಸಿದಿದ್ದು, ಈ ಗೋಡೆಯ ಅವಶೇಷಗಳನ್ನು ಅಂದು ರಾತ್ರಿಯೇ ತರಾತುರಿಯಲ್ಲಿ ತೆಗೆದು ಟಾರ್ಪಾಲ್‌ನಿಂದ ಮುಚ್ಚಲಾಗಿತ್ತು. ಆದರೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಹರಡಿ ಚರ್ಚೆಗೆ ಗ್ರಾಸವಾಗಿತ್ತು. ಇದು ಕಾಮಗಾರಿಯ ಗುಣಮಟ್ಟವನ್ನು ಸಾರಿ ಹೇಳುತ್ತಿದ್ದು, ಇದಕ್ಕೆ ನಿರ್ವಾಹಣಾ ಸಮಿತಿಯೇ ಹೊಣೆ ಎಂದು ಸ್ಥಳೀಯರು ದೂರಿದ್ದಾರೆ.
ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೆ. ಕಾಮಗಾರಿ ಮಾಡುವವರು, ಮಾಡಿಸುವವರು, ಮೇಲುಸ್ತುವಾರಿ ನೋಡಿಕೊಳ್ಳುವವರು ಎಲ್ಲರೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಆದರೆ ಇಲ್ಲಿ ಬಳಕೆಗೂ ಮುನ್ನವೇ ತಡೆಗೋಡೆ ಕುಸಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯವಿದೆ.
ಇದು ಈ ಹಿಂದೆಯೇ ನಿರ್ಮಿಸಿದ ತಡೆಗೋಡೆಯಾಗಿತ್ತು. ಇದರ ಮೇಲಿನ ಖಾಲಿ ಜಾಗಕ್ಕೆ ನಾವು ಇಂಟರ್‌ಲಾಕ್ ಹಾಕುವ ಕೆಲಸ ಉದ್ಘಾಟನೆಗೂ ಮುಂಚೆ ಮಾಡಿದ್ದೆವು. ಇದು ಬೇರೆಡೆಯಿಂದ ತಂದು ಹಾಕಿದ ಮಣ್ಣಾಗಿರುವುದರಿಂದ
ಒತ್ತಡ ತಡೆಯದೆ ತಡೆಗೋಡೆ ಕುಸಿದಿದೆ. ಇಂದಿನಿಂದ ಮತ್ತೆ ಆ ತಡೆಗೋಡೆಯ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸೂಕ್ತ ರೀತಿಯ ಕಾಮಗಾರಿ ನಡೆಸಲಾಗುತ್ತದೆ.
-ವಿ.ಕೆ.ಸತೀಶ್, ಅಂಬೇಡ್ಕರ್ ಭವನ ಕಾರ್ಯನಿರ್ವಹಣಾ ಸಮಿತಿ ಸದಸ್ಯರು
ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಈ…
ಬೆಳಗಾವಿ: 532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ…
ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…
ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್…