ದಿಢೀರ್ ಕುಸಿತ ಕಂಡ ಸೇವಂತಿಗೆ; ಹಾಕಿದ ಖರ್ಚು ಕೈ ಸೇರದೆ ರೈತರು ಕಂಗಾಲು
ಎಚ್.ಎಸ್.ದಿನೇಶ್ ಕುಮಾರ್
ಮೈಸೂರು: ಹಬ್ಬ ಹರಿದಿನಗಳು ಹಾಗೂ ವಿಶೇಷ ದಿನಗಳಂದು ಮಾರಿಗೆ ೨೦೦ ರೂ.ಗಳಿಗೆ ಮಾರಾಟವಾಗುವ ಮೂಲಕ ದಾಖಲೆಯನ್ನು ಹುಟ್ಟು ಹಾಕುತ್ತಿದ್ದ ಸೇವಂತಿಗೆ ಹೂವಿನ ಧಾರಣೆ ದಿಢೀರ್ ಕುಸಿತ ಕಂಡಿದ್ದು, ರಸ್ತೆ ಬದಿಯಲ್ಲಿ ಮಾರು ಸೇವಂತಿಗೆ ಹೂವು ೧೦ ರೂ.ನಿಂದ ೩೦ ರೂ. ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಹೂವನ್ನು ಬೆಳೆದ ರೈತ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಸೇವಂತಿಗೆ ಹೂವು ಇಲ್ಲವೆಂದರೆ ಯಾವುದೇ ಹಬ್ಬ, ಹರಿದಿನಗಳು, ಕಾರ್ಯ ಕ್ರಮಗಳು ಕಳೆಗಟ್ಟುವುದೇ ಇಲ್ಲ ಎಂಬ ಸ್ಥಿತಿ ಇದೆ. ತನ್ನ ಹಳದಿ ಬಣ್ಣದಿಂದಲೇ ಎಲ್ಲರನ್ನೂ ಸೆಳೆಯುವ ಸೇವಂತಿಗೆ ಹೂವು ಇಂದು ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ವಿಶೇಷ ದಿನಗಳಲ್ಲಿ ೨೦೦ ರೂ. ವರೆಗೂ ಮಾರಾಟವಾಗುವ ಮೂಲಕ ಗ್ರಾಹಕರ ಕೈ ಸುಡುವಂತೆ ಮಾಡುತ್ತಿದ್ದ ಸೇವಂತಿಗೆ ಹೂವನ್ನು ಕೊಳ್ಳುವ ಗ್ರಾಹಕರು ಇಂದು ರೈತರ ಸ್ಥಿತಿಯನ್ನು ನೆನೆದು ಅಯ್ಯೋ ಪಾಪ ಎಂದು ಹೇಳಿಕೊಂಡೇ ಖರೀದಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ, ಕೆ.ಆರ್.ಪೇಟೆ, ಮೈಸೂರು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ರೈತರು ಸೇವಂತಿಗೆ ಹೂವನ್ನು ಬೆಳೆಯುತ್ತಾರೆ. ಡಿಸೆಂಬರ್ ಹಾಗೂ ಜನವರಿ ೧೪ರ ವರೆಗೆ ಯಾವುದೇ ಹಬ್ಬಗಳು ಅಥವಾ ವಿಶೇಷ ದಿನಗಳು ಇಲ್ಲದ ಕಾರಣ ಬೇಡಿಕೆಯೂ ಕಡಿಮೆಯಾಗಿ ಹೂವಿನ ಧಾರಣೆ ಕುಸಿತ ಕಂಡಿದೆ. ಸಂಕ್ರಾಂತಿ ವೇಳೆಗೆ ಹೂವಿನ ಬೆಲೆ ಮತ್ತೆ ಹೆಚ್ಚಳವಾಗಲಿದೆ ಎನ್ನುತ್ತಾರೆ ರೈತರು.
ಡಿಸೆಂಬರ್ ತಿಂಗಳಿನಲ್ಲಿ ಹಿಮಸುರಿಯುವುದರಿಂದ ಹೂವಿನ ಇಳುವರಿಯೂ ಹೆಚ್ಚಾಗುತ್ತದೆ. ಇದೀಗ ಬೆಲೆ ಕುಸಿತ ಕಂಡಿರುವು ದರಿಂದ ರೈತರು ಜಮೀನಿನಲ್ಲಿ ಹೂವು ಕೀಳುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಇ ದರಿಂದ ರೈತರು ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಬೆಳೆಗಾರರು ಹೇಳುತ್ತಾರೆ.
ಬೆಲೆ ಹೆಚ್ಚಿಸಿಕೊಂಡ ಮಲ್ಲಿಗೆ: ಇದೇ ವೇಳೆ ಮಲ್ಲಿಗೆ ಹೂವು ಕೆಜಿ ಗೆ ೧,೨೦೦ ರೂ. ಗಳಿಗೆ ಮಾರಾಟವಾದ ರೆ, ಮರ್ಲೆ ಹೂವು ಕೆಜಿಗೆ ೬೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ಒಂದು ಕೆಜಿಗೆ ಸಾವಿರ ರೂ.ಗೆ ಮಾರಾಟ ವಾಗುತ್ತಿದ್ದ ಕನಕಾಂಬರ ಹೂವಿನ ದರ ಹ ಇಂದು ೪೦೦ ರೂ.ಗೆ ಇಳಿಕೆ ಕಂಡಿದೆ. ಉಳಿದಂತೆ ಸುಗಂಧರಾಜ ೫೦ ರೂ.ನಂತೆ ಮಾರಾಟವಾಗುತ್ತಿದ್ದರೆ, ಗುಲಾಬಿ ಹೂವು ೧೬೦ ರಿಂದ ೧೮೦ ರೂ. ವರೆಗೆ ಮಾರಾಟ ವಾಗುತ್ತಿದೆ. ಸೇವಂತಿಗೆ ಬಿಡಿಯಾಗಿ ೫೦ ರೂ.ಗೆ ಮಾರಾಟ ವಾಗುತ್ತಿದೆ. ಊಟಿ ಮಲ್ಲಿಗೆ ಮಾತ್ರ ೧೦೦ ರೂ.ಗಳಿಗೆ ಬಿಕರಿಯಾಗುತ್ತಿದೆ.
” ದರ ಹೆಚ್ಚು ಇರುವಾಗ ಜನರು ಹೂವು ಖರೀದಿಗೆ ಮುಗಿಬೀಳುತ್ತಾರೆ. ಇದೀಗ ಒಂದು ಮಾರು ೨೦ ರೂ.ಗೆ ಕೊಟ್ಟರೂ ಖರೀದಿಗೆ ಮುಂದಾಗುತ್ತಿಲ್ಲ. ಹೂವು ಬೆಳೆದವರಿಗೆ ಹೂ ಕಿತ್ತು ಮಾರುಕಟ್ಟುವ ಕೂಲಿಯೂ ಸಿಗುತ್ತಿಲ್ಲ.”
-ಲೋಕೇಶ್, ನಂಜನಗೂಡು.
” ಮೂರು ದಿನಗಳ ಹಿಂದೆ ಒಂದು ಮಾರು ಸೇವಂತಿಗೆ ಹೂವಿಗೆ ೬೦ ರೂ.ನಿಂದ ೭೦ ರೂ. ಇತ್ತು. ಆದರೆ, ಭಾನುವಾರ ಹೂವಿನ ಬೆಲೆಯಲ್ಲಿ ಕುಸಿತ ಕಂಡಿದೆ. ಅತ್ಯುತ್ತಮ ಗುಣಮಟ್ಟದ ಹೂವು ಮಾರಿಗೆ ೩೦ ರೂ.ಗೆ ಮಾರಾಟವಾಗುತ್ತಿದೆ.”
-ಸಂತೋಷ್, ಹೂವಿನ ವ್ಯಾಪಾರಿ, ಸಾಲುಂಡಿ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ…
ಟೆಹರಾನ್: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್‌ನಲ್ಲಿನ ಬೃಹತ್ ಕಟ್ಟಡಗಳು…
ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…
ಜಮ್ಮು-ಕಾಶ್ಮೀರ: ಇಸ್ರೇಲ್ ಮತ್ತು ಅಮೇರಿಕಾ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…