Andolana originals

ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ

ಸಂತ ಫಿಲೋಮಿನಾ ಚರ್ಚ್‌ಗೆ ವಿಶೇಷ ಅಲಂಕಾರ; ದೀಪಾಲಂಕಾರ, ನಕ್ಷತ್ರಗಳಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

ಮೈಸೂರು: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧೆಡೆ ಇರುವ ಚರ್ಚ್‌ಗಳು ದೀಪಾಲಂಕಾರ, ನಕ್ಷತ್ರಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ತಡ ರಾತ್ರಿಯಿಂದಲೇ ಕ್ರಿಸ್‌ಮಸ್ ಆಚರಣೆ ಆರಂಭವಾಗಿದೆ.

ಕ್ರಿಸ್‌ಮಸ್ ಮರಕ್ಕೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ- ಚರ್ಚ್ ಆವರಣದಲ್ಲಿ ಯೇಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ, ಯೇಸು ಜನಿಸಿದ ಚಿತ್ರಣವನ್ನು ಕಟ್ಟಿ ಕೊಡ ಲಾಗಿದೆ.

ಬೆಂಗಳೂರು-ನೀಲಗಿರಿ ರಸ್ತೆಯ ವೆಸ್ಲಿ ಕ್ಯಾಥೆಡ್ರಲ್, ಸೇಂಟ್ ಬಾರ್ಥ ಲೋಮಿಯಸ್ ಕ್ಯಾಥೆಡ್ರಲ್, ವಿಜಯನಗರದ ೪ನೇ ಹಂತದ ಇನ್‌ಫ್ಯಾಂಟ್ ಜೀಸಸ್ ಚರ್ಚ್, ಹಾರ್ಡ್ವಿಕ್ ಚರ್ಚ್ ಗಳಲ್ಲಿ ಕ್ರಿಸ್‌ಮಸ್ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆತ್ಲೆಹೆಮ್, ಜೆರುಸಲೇಮ್ ನಗರಗಳನ್ನು ಬಿಂಬಿಸುವ ಗೋದಲಿ ನಿರ್ಮಾಣದಿಂದ ಆಕರ್ಷಿಸುತ್ತಿರುವ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ವಿಶೇಷ ತಯಾರಿ ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಗರದ ಎಲ್ಲ ಚರ್ಚ್ ಗಳಲ್ಲಿಯೂ ವಿಶೇಷ ಪ್ರಾರ್ಥನೆ ನಡೆಯಿತು. ಚರ್ಚ್‌ಗಳಿಗೆ ಆಗಮಿಸುವ ಜನರು ಯೇಸು ವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷವಾಗಿ ಕ್ರಿಸ್‌ಮಸ್ ಆಚರಣೆ ನಡೆಯಲಿದ್ದು, ಈಗಾಗಲೇ ಚರ್ಚ್‌ನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದೆ. ಚರ್ಚ್‌ನ ಒಳ ಆವರಣವೂ ಪ್ರಾರ್ಥನೆಗೆ ವಿಶೇಷವಾಗಿ ಸಿದ್ಧವಾಗಿದೆ. ಚರ್ಚ್‌ನ ಒಳಾವರಣದಲ್ಲಿ ಸಾವಿರ ಮಂದಿ ಕೂರಲು ಅವಕಾಶವಿದ್ದು, ಹೊರ ಆವ ರಣದಲ್ಲೂ ಪ್ರಾರ್ಥನೆ ವೀಕ್ಷಣೆಗೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಭರ್ಜರಿ ವ್ಯಾಪಾರ: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಮಂಗಳವಾರ ಖರೀದಿಸಿದರು. ಇದರಿಂದ ನಗರದ ಶಿವರಾಂಪೇಟೆಯ ಮನ್ನಾರ‍್ಸ್ ಮಾರುಕಟ್ಟೆ, ದೇವರಾಜ ಮಾರುಕಟ್ಟೆ, ಅರಸು ರಸ್ತೆ ಸೇರಿದಂತೆ ವಿವಿಧೆಡೆ ಭರ್ಜರಿ ವ್ಯಾಪಾರ ನಡೆಯಿತು. ಬೊಂಬೆ ಗಳು, ಜಿಂಗಲ್ ಬೆಲ್ಸ್, ಸಂತ ಕ್ಲಾಸ್ ಕಟೌಟ್ ಗಳು, ನಕ್ಷತ್ರಗಳು, ದೀಪಗಳು, ಕ್ಯಾಂಡಲ್, ತಮ್ಮ ಪ್ರೀತಿ ಪಾತ್ರರಿಗೆ ನೀಡಲು ಉಡುಗೊರೆ, ಕೇಕ್‌ಗಳನ್ನು ಖರೀದಿ ಮಾಡಿದರು.

ರಂಗೋಲಿಯಲ್ಲಿ ಅರಳಿದ ಯೇಸು: ಕ್ರಿಸ್‌ಮಸ್ ಪ್ರಯುಕ್ತ ನಗರದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ರಂಗೋಲಿಯಲ್ಲಿ ಬಿಡಿಸಿರುವ ಯೇಸು ಕ್ರಿಸ್ತನ ಬೃಹತ್ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಕಲಾವಿದ ಪುನೀತ್ ಬಳಗ ಹಾಗೂ ಖ್ಯಾತ ರಂಗೋಲಿ ಕಲಾವಿದೆ ಸಿ. ಲಕ್ಷ್ಮಿಮತ್ತು ಕೆಥಡ್ರೆಲ್ ಪ್ಯಾರಿಸ್‌ನ ಉಸ್ತುವಾರಿ ಸ್ಟೇನಿ ಡಿ. ಅಲ್ಮೇಡಾ ಅವರ ಸಹಯೋಗದೊಂದಿಗೆ ಸುಮಾರು ೪,೫೦೦ ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಚಿತ್ರ ಬಿಡಿಸಲಾಗಿದೆ. ವಿವಿಧ ಬಣ್ಣಗಳಲ್ಲಿ ರಚಿಸಿರುವ ಯೇಸು ಚಿತ್ರ ಚರ್ಚ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

ಗೋದಲಿ ನಿರ್ಮಿಸಿ ಪೂಜೆ: ಕ್ಯಾಥೋಲಿಕ್ ಪ್ರಧಾನ ಚರ್ಚ್ ಸಂತ ಫಿಲೋಮಿನಾದಲ್ಲಿ ಮಂಗಳವಾರ ರಾತ್ರಿ ೧೦. ೩೦ಕ್ಕೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ೧೧. ೩೦ರಿಂದ ಜಾಗರಣೆ ಕ್ರಿಸ್‌ಮಸ್ ಬಲಿಪೂಜೆ ನಡೆಯಿತು. ಸರಿಯಾಗಿ ೧೨ ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮೈಸೂರು ಧರ್ಮಕ್ಷೇತ್ರ ಆಡಳಿತಾಽಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜಾ ವಿಽ-ವಿಧಾನಗಳು ನೆರವೇರಿದವು. ಡಿ. ೨೫ರಂದು ಬೆಳಿಗ್ಗೆ ೫ರಿಂದ ೯ರವರೆಗೆ ಪ್ರಮುಖ ಪ್ರಾರ್ಥನೆ ತಮಿಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದೆ. ಬಳಿಕ ಸಾರ್ವಜನಿಕರಿಗೆ ಚರ್ಚ್ ಪ್ರವೇಶ ನೀಡಲಾಗುತ್ತದೆ. ಮತ್ತೆ ಸಂಜೆ ೬ ಗಂಟೆಗೆ ಪೂಜೆ ನಡೆಯಲಿದೆ ಎಂದು ಚರ್ಚ್‌ನ ಫಾ. ಪೀಟರ್ ತಿಳಿಸಿದ್ದಾರೆ. ಪ್ರಾಟೆಸ್ಟೆಂಟ್ ಚರ್ಚ್‌ಗಳಲ್ಲಿ ಡಿ. ೨೫ರಂದು ಬೆಳಿಗ್ಗೆ ೮ರಿಂದ ೧೦. ೩೦ರವರೆಗೆ ಪೂಜಾ ಕಾರ್ಯಕ್ರಮ ನಡೆಯಲಿದೆ.

 

ಆಂದೋಲನ ಡೆಸ್ಕ್

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

8 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

8 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

9 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

9 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

9 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

9 hours ago