Andolana originals

ಸ್ವಚ್ಛ ಸರ್ವೇಕ್ಷಣೆ ಅಂಕ ಪರಿಷ್ಕರಿಸಿದ ಕೇಂದ್ರ ಸರ್ಕಾರ

೯,೫೦೦ರಿಂದ ೧೨,೫೦೦ಕ್ಕೆ ಏರಿಕೆ; ಸ್ವಚ್ಛತಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ 

ಕೆ.ಬಿ.ರಮೇಶ್ ನಾಯಕ

ರೆಡ್ಯೂಸ್(ಕಡಿಮೆ ಮಾಡು), ರೀ ಯೂಸ್(ಮರು ಬಳಕೆ),

ರೀ ಸೈಕಲ್(ಪುನರ್ ಬಳಕೆ)ಶೀರ್ಷಿಕೆಯಡಿ ಈ ಬಾರಿ ಸ್ವಚ್ಛ ಸರ್ವೇಕ್ಷಣೆ

ಕಳೆದ ಬಾರಿ ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಡಿ ನಡೆದಿದ್ದ ಸ್ವಚ್ಛ ಸರ್ವೇಕ್ಷಣೆ

ಮೈಸೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿರುವ ಹೊತ್ತಿನಲ್ಲಿ ಇದೀಗ ಹೊಸದಾಗಿ ಸರ್ವೇಕ್ಷಣೆಯ ಅಂಕಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಅಂಕಗಳನ್ನು ೯,೫೦೦ದಿಂದ ೧೨,೫೦೦ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಮೊದಲ ಸ್ಥಾನಕ್ಕೇರಬೇಕಾದರೆ ಅಂಕಗಳನ್ನು ಹೆಚ್ಚು ಪಡೆಯುವಂತಾಗಿದೆ.

ಈ ಬಾರಿ ರೆಡ್ಯೂಸ್(ಕಡಿಮೆ ಮಾಡು), ರೀ ಯೂಸ್ (ಮರು ಬಳಕೆ) ಮತ್ತು ರೀ ಸೈಕಲ್(ಪುನರ್ ಬಳಕೆ) ಥೀಮ್ನಡಿ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದೆ. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯು ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ನಡೆದಿತ್ತು. ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ರೆಡ್ಯೂಸ್, ರೀ ಯೂಸ್ ಹಾಗೂ ರೀ ಸೈಕಲ್ ಮಾಡಿದರೆ ಪರಿಸರ ಮಾಲಿನ್ಯದ ಪ್ರಮಾಣ ತಗ್ಗಿಸಬಹುದು ಎಂಬುದು ಈ ಬಾರಿಯ ಪರಿಕಲ್ಪನೆಯಾಗಿದೆ.

ಸ್ವಚ್ಛ ಸರ್ವೇಕ್ಷಣೆಗೆ ಪ್ರಥಮ ಬಾರಿಗೆ ಬಿಡುಗಡೆಯಾದ ಟೂಲ್ ಕಿಟ್‌ನಲ್ಲಿ ಒಟ್ಟು ೯,೫೦೦ ಅಂಕಗಳನ್ನು ನಿಗದಿಪಡಿಸಲಾಗಿತ್ತು (ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ೫,೭೦೫ ಅಂಕಗಳು, ಸರ್ಟಿಫಿಕೇಷನ್‌ಗೆ ೨,೫೦೦ ಅಂಕಗಳು, ಸಿಟಿಜನ್ ವಾಯ್ಸ್‌ಗೆ ೧,೨೯೫ ಅಂಕಗಳು). ಆದರೆ, ಇದೀಗ ಈ ಅಂಕಗಳನ್ನು ಪರಿಷ್ಕರಣೆ ಮಾಡಿ ೧೨,೫೦೦ಕ್ಕೆ ಏರಿಸಲಾಗಿದೆ. ಪರಿಷ್ಕೃತ ಅಂಕಗಳಿಗೆ ಪೂರಕವಾಗಿ ಸರ್ವೇಕ್ಷಣೆಗೆ ನಗರ ಸಜ್ಜಾಗಬೇಕಾಗಿದೆ.

೨೦೨೩ರ ಹಾಗೂ ಅದಕ್ಕಿಂತ ಹಿಂದೆ ನಡೆದ ಸರ್ವೇಕ್ಷಣೆಯಲ್ಲಿ ಸಿಟಿಜನ್ ಫೀಡ್‌ಬ್ಯಾಕ್‌ಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಕಳೆದ ಬಾರಿ ಈ ವಿಭಾಗಕ್ಕೆ ೨,೨೫೦ ಅಂಕಗಳನ್ನು ನೀಡಲಾಗಿತ್ತು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಚ್ಚಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಈ ಬಾರಿ ಈ ವಿಭಾಗಕ್ಕೆ ನಿಗದಿಪಡಿಸಿರುವುದು ೫೦೦ ಅಂಕಗಳು ಮಾತ್ರ. ಈ ಬಾರಿ ಜನರ ಅಭಿಪ್ರಾಯಕ್ಕಿಂತ ಪ್ರತಿಯೊಂದು ನಗರವೂ ಸ್ವಚ್ಛತೆಯಲ್ಲಿ ತೋರಿರುವ ಸಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿಯಾಗಿದೆ.

ಸ್ವಚ್ಛತೆಯಲ್ಲಿ ಮೈಸೂರು ನಗರದ ಸಾಧನೆ: ೨೦೧೫, ೨೦೧೬ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.೧ ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ೨೦೧೭ರಲ್ಲಿ ೫ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ೨೦೧೮ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (೩ರಿಂದ ೧೦ ಲಕ್ಷ ಜನಸಂಖ್ಯೆ) ದೇಶದ ನಂ.೧ ಸ್ವಚ್ಛನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ ೮ನೇ ಸ್ಥಾನಕ್ಕೆ ಕುಸಿತ ಕಂಡಿತು. ೨೦೧೯ರಲ್ಲಿ ಸಮಗ್ರ ವಿಭಾಗದಲ್ಲಿ ೩ನೇ ಸ್ಥಾನಕ್ಕೆ ಜಿಗಿಯಿತು. ೨೦೨೦ರಲ್ಲಿ ಸಮಗ್ರ ವಿಭಾಗದಲ್ಲಿ ೫ನೇ ಸ್ಥಾನ ಪಡೆಯಿತು. ೨೦೨೦ರಲ್ಲಿ ಪ್ರಥಮ ಬಾರಿಗೆ ರ‍್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು.

ಮಧ್ಯಮ ನಗರ ವಿಭಾಗದಲ್ಲಿ(೩ರಿಂದ ೧೦ ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.೧ ಸ್ವಚ್ಛನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‍್ಯಾಂಕಿಂಗ್‌ನಲ್ಲಿ ೨ನೇ ಸ್ಥಾನ ಪಡೆಯಿತು. ೨೦೨೧ರಲ್ಲಿ ಮೈಸೂರು ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ ೧೧ನೇ ಸ್ಥಾನಕ್ಕೆ, ಮಧ್ಯಮ ನಗರ ವಿಭಾಗದಲ್ಲಿ ೭ನೇ ಸ್ಥಾನಕ್ಕೆ ಕುಸಿಯಿತು. ೧ರಿಂದ ೧೦ ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.೧ ‘ಸ್ವಯಂ ಸುಸ್ಥಿರ ನಗರ’ (ಸೆಲ್ಛ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ ಯಲ್ಲಿ ೫ನೇ ರ‍್ಯಾಂಕ್ ಪಡೆದುಕೊಂಡಿತು.  ಪೌರ ಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತ್ತು.

೨೦೨೨ರಲ್ಲಿ ಸಮಗ್ರ ವಿಭಾಗದಲ್ಲಿ ಮೈಸೂರು ೮ನೇ ಸ್ಥಾನ ಪಡೆದು ಕೊಂಡಿದೆ. ೩ರಿಂದ ೧೦ ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ (ಮಧ್ಯಮ ನಗರ) ದೇಶದ ನಂ.೧ ಸ್ವಚ್ಛನಗರ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡಿತ್ತು. ೧ರಿಂದ ೧೦ ಲಕ್ಷ ಜನಸಂಖ್ಯೆ ಯೊಳಗಿನ ನಗರದಲ್ಲಿ ೨ನೇ ರ‍್ಯಾಂಕ್ ಪಡೆದುಕೊಂಡಿತ್ತು. ೨೦೨೩ರಲ್ಲಿ ಸಮಗ್ರ ವಿಭಾಗದಲ್ಲಿ ೨೭ನೇ ಸ್ಥಾನಕ್ಕೆ ಕುಸಿಯಿತು. ನಗರವು ೨೦೧೯ರಿಂದ ನಿರಂತರವಾಗಿ ಫೈವ್ ಸ್ಟಾರ್ ರ‍್ಯಾಂಕಿಂಗ್‌ನೊಂದಿಗೆ ತ್ಯಾಜ್ಯಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿಯನ್ನು ಪಡೆಯುತ್ತಿದೆ.

” ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಟೂಲ್‌ಕಿಟ್‌ಗೆ ಅನುಸಾರವಾಗಿ ನಗರದಲ್ಲಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದೀಗ ಹೊಸದಾಗಿ ಪರಿಷ್ಕರಣೆ ಮಾಡಲಾಗಿದ್ದು, ಈ ಕುರಿತು ನಗರಪಾಲಿಕೆ ಅಧಿಕಾರಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಮಾಹಿತಿ ನೀಡಿ ಸ್ವಚ್ಛ ಸರ್ವೇಕ್ಷಣೆಗೆ ಸಜ್ಜುಗೊಳಿಸಲಾಗುತ್ತಿದೆ.”

-ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರಪಾಲಿಕೆ

ಆಂದೋಲನ ಡೆಸ್ಕ್

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

3 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

4 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

4 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

5 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

6 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

7 hours ago