ಮೈಸೂರು: ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಕಾತರದಿಂದ ಕಾಯುವುದು ಸರ್ವೇ ಸಾಮಾನ್ಯ. ಅದರಲ್ಲೂ ಹಳ್ಳಿಗಳಿಂದ ಆಗಮಿಸಿ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾದು ಕೂರುವ ಮಂದಿಗೆ ಜಂಬೂಸವಾರಿ ಯಾವಾಗ ಹೊರಡುತ್ತದೆ ಎನ್ನುವುದನ್ನು ಯಾರೂ ತಲುಪಿಸಲ್ಲ.
ಆದರೆ, ಜಂಬೂ ಸವಾರಿ ದಿನ ೨೧ ಬಾರಿ ಸಿಡಿಸುವ ಸಿಡಿಮದ್ದಿನ ಸದ್ದು ಮಾತ್ರ ಮುಟ್ಟಿಸುತ್ತದೆ. ತಮ್ಮ ಕಣ್ಣೆದುರು ಬಂದಾಗ ಕಣ್ತುಂಬಿ ವೀಕ್ಷಿಸಿ ಆನಂದಿಸುವ ತನಕ ಗಂಟೆಗಟ್ಟಲೇ ಕಾಯುವ ಮನದಲ್ಲಿ ಫಿರಂಗಿ ಸದ್ದು ಕೇಳಿದೊಡನೆ ಎಲ್ಲಿಲ್ಲದ ಸಂತಸ. ಈ ಫಿರಂಗಿ ಸದ್ದು ಹೊರ ಬೀಳುತ್ತಿದ್ದಂತೆ ಕೊನೆಗೂ ಜಂಬೂಸವಾರಿ ಶುರುವಾಯ್ತು ಅನ್ನುತ್ತಲೇ ಮನಸ್ಸಿನಲ್ಲಿ ತಿಳಿದು ನೋಡುತ್ತಾರೆ. ಅಂತಹ ವಿಶೇಷತೆ ಇರುವ ಫಿರಂಗಿಗೆ ನೂರಾರು ವರ್ಷಗಳ ಇತಿಹಾಸವಿದೆ. ಸುದೀರ್ಘ ಇತಿಹಾಸ: ಫಿರಂಗಿಗಳಿಗೆ ೨೦೦ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವಿದೆ.
ಭಾರತದಲ್ಲಿ ಈ ಮೊದಲು ಯುದ್ಧದ ಸಂದರ್ಭದಲ್ಲಿ ಕತ್ತಿ, ಗುರಾಣಿ, ಈಟಿ ಇತ್ಯಾದಿ ಸ್ವದೇಶಿ ನಿರ್ಮಿತ ಆಯುಧಗಳ ಬಳಕೆಯಾಗುತ್ತಿತ್ತು. ಬ್ರಿಟಿಷರ ಆಗಮನದ ನಂತರ ಅವರೊಂದಿಗೆ ಈ ಫಿರಂಗಿಯೂ ಬಂದಿತು. ನಂತರದ ದಿನಗಳಲ್ಲಿ ಮೈಸೂರು ಪ್ರಾಂತ್ಯವನ್ನಾಳುತ್ತಿದ್ದ ಟಿಪ್ಪು ಸುಲ್ತಾನ್ ಅವರು ಫ್ರೆಂಚರ ನೆರವಿನಿಂದ ಮೈಸೂರಿಗೆ ಫಿರಂಗಿಗಳನ್ನು ತರಿಸಿಕೊಂಡಿ ದ್ದರು. ನಂತರ ೧೭೯೨ರಲ್ಲಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ನಡೆದ ಮೂರನೇ ಮೈಸೂರು- ಆಂಗ್ಲೋ ಯುದ್ಧದಲ್ಲಿ ಇದೇ ಫಿರಂಗಿಗಳು ಬಳಕೆಯಾಗಿದ್ದವು.
ಬಳಿಕ ೧೭೯೯ರಲ್ಲಿ ನಡೆದ ನಾಲ್ಕನೇ ಯುದ್ಧದಲ್ಲಿಯೂ ಫಿರಂಗಿಗಳನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲಾಗಿತ್ತು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದರು. ಇದಾದ ನಂತರ ಮತ್ತೇ ಫಿರಂಗಿಗಳನ್ನು ಬಳಸುವ ಸಂದರ್ಭ ಎದುರಾಗಲಿಲ್ಲ. ಇದೀಗ ಫಿರಂಗಿಗಳನ್ನು ದಸರಾ ಸಂದರ್ಭದಲ್ಲಿ ಬಳಸಲಾಗುತ್ತದೆ. ದಸರಾ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವ ವೇಳೆ ಫಿರಂಗಿ ಮೂಲಕ ೨೧ ಕುಶಾಲುತೋಪುಗಳನ್ನು ಹಾರಿಸಲಾಗುತ್ತದೆ. ನಂತರ ಮತ್ತೆ ಪೊಲೀಸ್ ಇಲಾಖೆ ಅವುಗಳನ್ನು ಅರಮನೆ ಮಂಡಳಿಯ ವಶಕ್ಕೆ ನೀಡುತ್ತದೆ.
೫೩ ಸೆಕೆಂಡುಗಳಲ್ಲಿ ಕೆಲಸ ಪೂರ್ಣ: ಫಿರಂಗಿ ಸಿಡಿಸುವುದು ಅಷ್ಟು ಸುಲಭವಲ್ಲ. ನಿಜಕ್ಕೂ ಅತ್ಯಂತ ರೋಮಾಂಚನ ಮತ್ತು ಅಪಾಯಕಾರಿ ಕೆಲಸ. ರಾಷ್ಟ್ರಗೀತೆಯನ್ನು ನುಡಿಸುವ ಅವಽ ೫೩ ಸೆಕೆಂಡುಗಳು ಮಾತ್ರ. ಇಷ್ಟು ಕಡಿಮೆ ಅವಽಯಲ್ಲಿ ಪೊಲೀಸರು ೨೧ ಸುತ್ತು ಕುಶಾಲು ತೋಪುಗಳನ್ನು ಹಾರಿಸಬೇಕಿದೆ. ಪೊಟಾಷಿಯಂ ಹಾಗೂ ಮದ್ದು ಪುಡಿಯ ಮಿಶ್ರಣವನ್ನು ಒಬ್ಬರು ತುಂಬಿದರೆ, ಮತ್ತೊಬ್ಬರು ಅದಕ್ಕೆ ಬೆಂಕಿಯನ್ನು ತಗುಲಿಸುವ ಕೆಲಸ ಮಾಡಬೇಕು. ಭಾರೀ ಶಬ್ದದೊಂದಿಗೆ ಕುಶಾಲು ತೋಪು ಹಾರಿದ ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಅದನ್ನು ಕ್ಷಣ ಮಾತ್ರದಲ್ಲಿ ಸ್ವಚ್ಛಗೊಳಿಸಬೇಕು. ಈ ಪ್ರಕ್ರಿಯೆ ೨೧ ಸುತ್ತು ಕುಶಾಲು ತೋಪು ಹಾರಿಸುವಾಗಲೂ ನಡೆಯಬೇಕು. ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸ್ಥಳದಲ್ಲಿರುವ ಸಿಬ್ಬಂದಿ ಅಪಾಯಕ್ಕೆ ಸಿಲುಕಬೇಕಾಗುತ್ತದೆ.
ಶುಕ್ರವಾರದಿಂದ ಕುಶಾಲು ತೋಪು ತಾಲೀಮು
ಕುಶಾಲತೋಪು ಹಾರಿಸುವ ಸಲುವಾಗಿ ಸಿಎಆರ್ ಎಸಿಪಿ, ಎಎಸ್‌ಐ ನೇತೃತ್ವದಲ್ಲಿ ೩೦ ಮಂದಿ ಪೊಲೀಸರ ತಂಡ ಶುಕ್ರವಾರದಿಂದ ತಾಲೀಮು ಶುರು ಮಾಡಿದೆ. ಪ್ರತಿದಿನ ಬೆಳಿಗ್ಗೆ ೭ ಗಂಟೆಯಿಂದ ೧೦ ಗಂಟೆಯವರೆಗೆ ಮದ್ದು ಮಿಶ್ರಣವನ್ನು ಬಳಸದೆ ಅಭ್ಯಾಸ ನಡೆಸಲಿದೆ. ಮುಂದಿನ ದಿನಗಳಲ್ಲಿ ಆನೆಗಳು, ಅಶ್ವಾರೋಹಿ ಪಡೆಯನ್ನು ನಿಲ್ಲಿಸಿಕೊಂಡು ಕುಶಾಲು ತೋಪು ಸಿಡಿಸುವ ತಾಲೀಮು ನಡೆಯಲಿದೆ.
ಕುಶಾಲುತೋಪು ಸಿಡಿಸಲು 35 ಮಂದಿ ಬಳಕೆ: ಕುಶಾಲು ತೋಪು ಹಾರಿಸುವುದೆಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಅದಕ್ಕೆ ನುರಿತ ಸಿಬ್ಬಂದಿ ಬೇಕು. ಕುಶಾಲು ತೋಪು ಸಿಡಿಸುವ ವೇಳೆ ಸ್ವಲ್ಪ ಏರುಪೇರಾದರೂ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ. ಹೀಗಾಗಿ ಫಿರಂಗಿ ಬಳಕೆಯ ಅನುಭವವಿರುವ ೩೫ ಮಂದಿ ಸಿಬ್ಬಂದಿಯನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ.
ಫಿರಂಗಿ ಬಳಕೆ ತಂಡಕ್ಕೂ ಜೀವ ವಿಮೆ: ಕುಶಾಲು ತೋಪು ಸಿಡಿಸುವಾಗ ಈ ಹಿಂದೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದು ಪೊಲೀಸರು ಗಾಯಗೊಂಡಿದ್ದು ಉಂಟು. ಹಾಗಾಗಿ, ಕಳೆದ ಮೂರು ವರ್ಷಗಳಿಂದ ಫಿರಂಗಿ ಬಳಕೆಯ ತಂಡಕ್ಕೂ ಜೀವ ವಿಮೆ ಮಾಡಿಸಲಾಗಿದೆ.
ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…
ತುಮಕೂರು: 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…
ಹೈದರಾಬಾದ್: ಟಾಲಿವುಡ್ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತಂತೆ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೇಹಿಬಾಗ್…
ಮಡಿಕೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಹಾರಂಗಿ ಜ್ಞಾನಗಂಗಾ ಶಾಲೆಯ…