ನಿತ್ಯ ನೂತನ ಕಾರ್ಯಕ್ರಮ ರೂಪಿಸಲು ಚಿಂತನೆ; ಪುಸ್ತಕ ಮೇಳ ಪರಿಚಯಿಸಲು ಪ್ರಚಾರ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸುವ ಪುಸ್ತಕ ಮೇಳಕ್ಕೆ ಜನರನ್ನು ಸೆಳೆಯಲು ಉಪ ಸಮಿತಿ ಈ ಬಾರಿ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಹತ್ತು ದಿನಗಳ ದಸರೆಯ ಎಲ್ಲ ಕಾರ್ಯಕ್ರಮಗಳೂ ಜನರಿಂದ ತುಂಬಿ ತುಳುಕಿದರೂ ಪುಸ್ತಕ ಪ್ರದರ್ಶನ ಮಾತ್ರ ಓದುಗರಿಲ್ಲದೇ ಭಣಗುಟ್ಟುವುದು ಸಾಮಾನ್ಯ. ಇದು ಸಾಹಿತಿಗಳು, ಲೇಖಕರು, ಪ್ರಕಾಶಕರಲ್ಲಿ ಬೇಸರ ಮೂಡಿಸುತ್ತಿದೆ. ಆದರೆ, ಈ ವರ್ಷ ಪುಸ್ತಕ ಮೇಳ ಉಪ ಸಮಿತಿಯವರು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಪುಸ್ತಕ ಮೇಳವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಮುಂದಾಗಿದ್ದು, ನಿತ್ಯ ನೂತನ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಿದ್ದಾರೆ.
ಈ ಹಿಂದೆ ಅರಮನೆ ಬಳಿ ಇರುವ ಕಾಡಾ ಕಚೇರಿ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಿದರೂ ಜನರು ಅಷ್ಟಾಗಿ ಭೇಟಿ ನೀಡುತ್ತಿರಲಿಲ್ಲ. ಹೀಗಾಗಿ ಪ್ರಕಾಶಕರು, ಸಾಹಿತಿಗಳ ಒತ್ತಾಯದ ಮೇರೆಗೆ ಜಿಲ್ಲಾಽಕಾರಿ ಹಳೇ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕೆಲ ವರ್ಷಗಳಿಂದ ವ್ಯವಸ್ಥಿತವಾದ ಪುಸ್ತಕ ಮೇಳವನ್ನು ಆಯೋಜಿಸಿ ಸಾಹಿತಿಗಳನ್ನು ಆಹ್ವಾನಿಸಿ ಅವರೊಂದಿಗೆ ಸೆಲ್ಫಿ, ಸಂವಾದ ಹಾಗೂ ಮಾತುಕತೆ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ.
ಇದನ್ನು ಓದಿ:ಚಾಮುಂಡಿ ಬೆಟ್ಟ ಯಾರದು?
ಸಾಹಿತಿಗಳೊಂದಿಗೆ ಸೆಲ್ಪೀ: ಹಿಂದಿನ ವರ್ಷದಂತೆ ಪುಸ್ತಕ ಮೇಳದಲ್ಲಿ ಸಾಹಿತಿ ಜತೆ ಸೆಲ್ಛಿ ಈ ಬಾರಿಯೂ ಇರಲಿದೆ. ಪ್ರತಿನಿತ್ಯ ಒಬ್ಬೊಬ್ಬರು ಗಣ್ಯ ಸಾಹಿತಿಗಳನ್ನು ಪುಸ್ತಕ ಮೇಳಕ್ಕೆ ಆಹ್ವಾನಿಸಲಾಗುತ್ತದೆ. ಅವರು ವೇದಿಕೆ ಕಾರ್ಯಕ್ರಮವನ್ನು ವೀಕ್ಷಿಸಿ, ಪುಸ್ತಕ ಮಾರಾಟ ಮಳಿಗೆಗಳ ಬಳಿ ಸುತ್ತಾಡುತ್ತಾರೆ. ಈ ಸಂದರ್ಭದಲ್ಲಿ ಮಳಿಗೆಗಳನ್ನು ಇಟ್ಟಿರುವವರು, ಪ್ರಕಾಶನ ಸಂಸ್ಥೆಯವರು, ಸಾರ್ವಜನಿಕರು ಅವರ ಜೊತೆ ಸೆಲ್ಛಿ ತೆಗೆದುಕೊಳ್ಳಬಹುದು.
ದಸರಾ ಪುಸ್ತಕ ಮೇಳ ಕುರಿತು ಪ್ರಚಾರ ಓದುಗರನ್ನು ಆಕರ್ಷಿಸಲು ರಥಕ್ಕೆ ಹೊಸ ವಿನ್ಯಾಸ
ಮೈಸೂರು: ನಗರದ ಬಡಾವಣೆ, ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮಗಳಲ್ಲಿ ದಸರಾ ಪುಸ್ತಕ ಮೇಳ ಮತ್ತು ಅಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಪ್ರಚಾರ ರಥ ಸಂಚಾರಕ್ಕೆ ಉದ್ದೇಶಿಸಲಾಗಿದೆ. ಈ ರಥವು ಹೊಸತನದಿಂದ ಕೂಡಿದ್ದು, ಜನರನ್ನು ಸೆಳೆಯುವಂತೆ ವಿನ್ಯಾಸಗೊಳಿಸ ಲಾಗುತ್ತಿದೆ. ಬುಕರ್ ಪ್ರಶಸ್ತಿ ಪುರಸ್ಕೃತರು, ದಸರಾ ಉದ್ಘಾಟಕರೂ ಆಗಿರುವ ಬಾನು ಮುಷ್ತಾಕ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ಕವಿಗಳು-ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಲಾಗುವ ರಥದಲ್ಲಿ ಪುಸ್ತಕಗಳ ಮಹತ್ವ ಕುರಿತ ಕಿರು ಸಂದೇಶಗಳು ಇರುತ್ತವೆ. ವಿವಿಧ ಬಡಾವಣೆಗಳು, ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜೊತೆಗೆ ಶಾಲಾ- ಕಾಲೇಜುಗಳಿಗೂ ತೆರಳಿ ಮಾಹಿತಿ ತಿಳಿಸಿಕೊಡುವ ಕೆಲಸ ಮಾಡಲಾಗುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ಇಂದಿನ ಪೀಳಿಗೆಯವರಲ್ಲಿ ಸಾಹಿತ್ಯಾಭಿ ರುಚಿಯನ್ನು ಬೆಳೆಸುವುದಕ್ಕಾಗಿ, ಅವರು ಸಾಹಿತ್ಯ ಕುರಿತು ತಮ್ಮ ಅನಿಸಿಕೆ ಅಭಿವ್ಯಕ್ತ ಗೊಳಿಸಲು ವೇದಿಕೆ ನೀಡಿ ಅವರ ನೆಚ್ಚಿನ ಪುಸ್ತಕ, ಸಾಹಿತಿಯ ಕುರಿತು ಮಾತನಾಡಲು ಅವಕಾಶ ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ.
ಇದನ್ನು ಓದಿ:ಗೊಂದಲದ ಗೂಡಾಗಿರುವ ಬಿಹಾರದ ಸ್ಥಿತಿ
” ‘ಬಾನು ಬದುಕು-ಬರಹ’ ಕುರಿತ ಸಮಗ್ರ ಕೃತಿ ಲೋಕಾರ್ಪಣೆ ಈ ಬಾರಿ ದಸರಾ ಉದ್ಘಾಟಿಸಲಿರುವ ಕನ್ನಡ ಸಾಹಿತ್ಯಕ್ಕೆ ಬುಕರ್ ಪ್ರಶಸ್ತಿ ತಂದು ಕೊಟ್ಟ ಲೇಖಕಿ ಬಾನು ಮುಷ್ತಾಕ್ ಅವರ ಬದುಕು- ಬರಹಗಳನ್ನು ಒಳಗೊಂಡಿರುವ ಸಮಗ್ರಕೃತಿಯನ್ನು ಪುಸ್ತಕ ಮೇಳದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಇದೇ ಪ್ರಥಮವಾಗಿ ಲೇಖಕಿಯೊಬ್ಬರ ಬದುಕು- ಬರಹ ಕುರಿತ ಕೃತಿ ರಚಿಸಲಾಗುತ್ತಿದೆ. ಈ ಮೂಲಕ ಮುಷ್ತಾಕ್ ಅವರನ್ನು ಕುರಿತ ಸಮಗ್ರ ಕೃತಿ ಪ್ರಕಟವಾದಂತಾಗುತ್ತದೆ.”
ಮಾರಾಟಕ್ಕೆ ಮಳಿಗೆಗಳು ಉಚಿತ: ಪುಸ್ತಕ ಮೇಳದಲ್ಲಿ ಮಳಿಗೆಗಳನ್ನು ಹಾಕಿಕೊಳ್ಳಲು ಮಾರಾಟಗಾರರಿಗೆ ಹಾಗೂ ಪ್ರಕಾಶನ ಸಂಸ್ಥೆಗಳಿಗೆ ಉಚಿತವಾಗಿ ಜಾಗವನ್ನು ನೀಡಲಾಗುತ್ತದೆ. ಅಲ್ಲದೇ ಊಟ, ಕಾಫಿ-ತಿಂಡಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಕಳೆದ ಬಾರಿ ೭೦ ಮಳಿಗೆಗಳು ಇದ್ದವು. ಈ ಬಾರಿ ಮಳಿಗೆಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅರ್ಥಪೂರ್ಣ ಪ್ರದರ್ಶನವಾಗಲಿದೆ ಪುಸ್ತಕ ಪ್ರದರ್ಶನ, ಮಾರಾಟ ಮಾತ್ರ ಮೇಳದ ಉದ್ದೇಶವಾಗಿರದೆ ಅದಕ್ಕೂ ಮೀರಿದ ಆಯಾಮಗಳಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ, ಸಾಹಿತಿಗಳ ಜತೆ ಸಂವಾದ, ಯುವ ಜನಾಂಗದಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಪುಸ್ತಕ ಅಭಿರುಚಿ ಹೆಚ್ಚಿಸಲಾಗುವುದು.
–ಕೆ.ಪಿ.ಮದನ್
-ಮಾನಸ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಚೆನ್ನೈ : ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ…
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ…
ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.…
ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…