ಸಂಚಾರ ನಿಯಮ ಉಲ್ಲಂಸಿದವರ ವಿರುದ್ಧ ೮೧ ಪ್ರಕರಣ ದಾಖಲು!
ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಹೊಸ ವರ್ಷಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಒಟ್ಟು ೮೧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ನೂತನ ವರ್ಷಾಚರಣೆಯಲ್ಲಿ ಬೇಕಾಬಿಟ್ಟಿ ಓಡಾಟದ ಮೂಲಕ ಸಂಚಾರ ನಿಯಮ ಉಲ್ಲಂಘನೆ, ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಇನ್ನಿತರ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ ವಾಹನ ಸವಾರರ ವಿರುದ್ಧ ಒಟ್ಟು ೮೧ ಪ್ರಕರಣಗಳನ್ನು ದಾಖಲಿಸಿ ೯೦,೫೦೦ ರೂ. ದಂಡ ವಿಧಿಸಿದ್ದಾರೆ.
ಅಂತೆಯೇ ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಹಾಗೂ ಮಹಾತ್ಮ ಗಾಂಧಿಜಿ ವೃತದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈ ಕ್ಯಾಮೆರಾಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಸುವ ಸವಾರರ ಫೋಟೋಗಳನ್ನು ವಾಹನಗಳ ನಂಬರ್ ಸಹಿತ ಸೆರೆ ಹಿಡಿಯುತ್ತಿವೆ. ಈ ಮೂಲಕ ಠಾಣೆಯಲ್ಲಿಯೇ ಕುಳಿತು ಪೊಲೀಸರು ಮೊಕದ್ದಮೆ ದಾಖಲಿಸಿ ಕೊಳ್ಳುತ್ತಿದ್ದಾರೆ.
ಈವರೆಗೆ ಪೊಲೀಸರ ಕಣ್ತಪ್ಪಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದವರು, ಪೊಲೀಸರು ಈ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರೆ ಬೇರೊಂದು ರಸ್ತೆಯ ಮೂಲಕ ಎಸ್ಕೇಪ್ ಆಗುತ್ತಿದ್ದರು. ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಇನ್ನು ಮುಂದೆ ಸಂಚಾರ ನಿಯಮ ಪಾಲನೆಯಿಂದ ತಪ್ಪಿಸಿ ಕೊಳ್ಳಲು ಕಷ್ಟಸಾಧ್ಯವಾಗಿದೆ. ಇದನ್ನೂ ಮೀರಿದರೆ ಅನಿವಾರ್ಯವಾಗಿ ದಂಡ ತೆರಬೇಕಾಗುತ್ತದೆ. ಈವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಹಲವು ಪ್ರಕರಣಗಳಲ್ಲಿ ಪೊಲೀಸರು ಹಿಡಿದರೆ, ಅವರೊಂದಿಗೆ ವಾಗ್ವಾದ ನಡೆಸುವುದು, ರಾಜಕೀಯ ನಾಯಕರುಗಳು, ಪ್ರಭಾವಿಗಳ ಮುಖಾಂತರ ಶಿಫಾರಸು ಮಾಡಿಸುವ ಪ್ರಯತ್ನ ಕೆಲವು ಸಲ ನಡೆಯುತ್ತಿತ್ತು.
ಇದು ಪೊಲೀಸರು ಮತ್ತು ಪ್ರಭಾವಿಗಳು, ರಾಜಕೀಯ ಮುಖಂಡರಿಗೂ ಇರಿಸು- ಮುರಿಸು ಆಗುತ್ತಿತ್ತು. ಅತ್ತ ಕೇಸ್ ಮಾಡಲೂ ಆಗದೇ ಇತ್ತ ಬಿಟ್ಟು ಕಳುಹಿಸಲೂ ಆಗದ ಸನ್ನಿವೇಶಗಳಿಗೆ ಪೊಲೀಸರು ಸಿಲುಕುತ್ತಿದ್ದರು. ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಗಳನ್ನು ಸಿ.ಸಿ. ಕ್ಯಾಮೆರಾ ಗಳೇ ಸೆರೆ ಹಿಡಿದು ಠಾಣೆಗೆ ರವಾನಿಸುವುದರಿಂದ ಇಂತಹ ಇರಿಸು ಮುರಿಸಿನಿಂದ ಪೊಲೀಸರು ತಪ್ಪಿಸಿಕೊಳ್ಳುವಂತಾಗಿದೆ. ಠಾಣೆಯಲ್ಲಿಯೇ ಕುಳಿತು ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮಾಲೀಕರಿಗೆ ನೋಟಿಸ್ ಜಾರಿಯಾಗುತ್ತದೆ. ಅವರು ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟಲೇಬೇಕಾಗುತ್ತದೆ.
” ಸೋಮವಾರಪೇಟೆ ಪಟ್ಟಣದ ಕಕ್ಕೆ ಹೊಳೆ ಹಾಗೂ ಗಾಂಽ ವೃತ್ತದಲ್ಲಿ ಎಎನ್‌ಪಿಆರ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಸುವ ಸವಾರರ ಫೋಟೋಗಳನ್ನು ವಾಹನಗಳ ನಂಬರ್ ಸಮೇತ ಸೆರೆ ಹಿಡಿಯಲಿವೆ. ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು.”
-ಮುದ್ದು ಮಾದೇವ, ವೃತ್ತ ನಿರೀಕ್ಷರು, ಸೋಮವಾರಪೇಟೆ
ನಮ್ಮ ಜೀವದೊಂದಿಗೆ ಇತರರ ಜೀವ ಉಳಿಸಿ: ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿರುವ ಸೋಮವಾರಪೇಟೆ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಮುದ್ದು ಮಾದೇವ ಅವರು, ಸಂಚಾರ ನಿಯಮ ಪಾಲನೆಯಿಂದ ಬೇರೊಬ್ಬರ ಜೀವ ಉಳಿಸುವುದರೊಂದಿಗೆ ನಮ್ಮ ಜೀವ-ಜೀವನವನ್ನೂ ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ…
ನಂಜನಗೂಡು : ʻಹತ್ತೂರು ಜಾತ್ರೆಗೆ ಸುತ್ತೂರು ಜಾತ್ರೆʼ ಸಮ ಎಂಬ ಗಾದೆ ಹೊಂದಿರುವ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ…
ಕಿಕ್ಕೇರಿ : ಗ್ರಾಮೀಣ ಬದುಕಿನ ಸವಾಲುಗಳ ನಡುವೆ ಬೆಳೆದ ರೈತನ ಮಗಳು ತನ್ನ ಅಕ್ಷರಾಸಕ್ತಿಯಿಂದ ಇಡೀ ತಾಲ್ಲೂಕಿನ ಹೆಮ್ಮೆಯ ಮಗಳಾಗಿ…
ಚಿಕ್ಕಾಡೆ ಗ್ರಾಮದಲ್ಲಿ ಘಟನೆ; ಮೂವರ ಬಂಧನ ಪಾಂಡವಪುರ : ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆಯುತ್ತಿದ್ದ ಕಲಹ ಕೊಲೆಯಲ್ಲಿ ಅಂತ್ಯ…
ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು…
ಮೈಸೂರು : ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ…