Andolana originals

ಬೃಹತ್‌ ಎಂಸಿಸಿ ರಚನೆ ನನೆಗುದಿಗೆ

ಕೆ.ಬಿ.ರಮೇಶನಾಯಕ

ಮೈಸೂರು : ಮೈಸೂರು ಮಹಾನಗರಪಾಲಿಕೆ ಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ ೫ ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಜನಗಣತಿ ವರದಿ ಹೊರ ಬೀಳುವ ತನಕ ಅಧಿಕೃತ ಆದೇಶ ಹೊರಡಿ ಸುವುದು ಅನುಮಾನವಾಗಿದೆ.

ಬೃಹತ್ ನಗರಪಾಲಿಕೆಯನ್ನಾಗಿ ೨೦೨೬ರ ಜನವರಿ ೮ ರಂದು ಮರು ನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿ ಆಕ್ಷೇಪಣೆಗೆ ನೀಡಿದ್ದ ಒಂದು ತಿಂಗಳ ಕಾಲಾವಕಾಶ ಮುಗಿದ ಮೇಲೆ ಈತನಕ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇದರಿಂದಾಗಿ, ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲೇ ಮೈಸೂರು ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವ ಹಣೆ ಮುಂದುವರಿದಿದೆ.

ಬೆಂಗಳೂರು ನಂತರ ರಾಜಕೀಯ, ಪ್ರವಾ ಸೋದ್ಯಮ, ಧಾರ್ಮಿಕ, ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವ ಮೈಸೂರನ್ನು ಬಿಬಿ ಎಂಪಿ ಮಾದರಿಯಲ್ಲಿ ಬೃಹತ್ ನಗರಪಾಲಿಕೆಯನ್ನಾಗಿ ಮಾಡಬೇಕೆಂಬ ಕೂಗು ಎದ್ದಿತ್ತು.

ಹೀಗಾಗಿ, ಜಿಲ್ಲೆಯವರೇ ಆಗಿರುವ ಸಿದ್ದರಾಮಯ್ಯ ಅವರು ಹಲವಾರು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ಜತೆಗೆ, ಬೃಹತ್ ನಗರಪಾಲಿಕೆಯನ್ನಾಗಿ ಮಾಡುವ ಅಭಯ ನೀಡಿದ್ದರು. ಅದಕ್ಕಾಗಿ,ಮೈಸೂರಿನಲ್ಲೇ ಸಂಸದರು, ಶಾಸಕರು ಸೇರಿದಂತೆ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದರು.

ನಂತರ ಜನವರಿ ೮ರಂದು ರಾಜ್ಯಪತ್ರ ಹೊರಡಿಸಲಾಗಿತ್ತು. ಬೃಹತ್ ಪಾಲಿಕೆ ರಚನೆ ವಿಚಾರದಲ್ಲಿ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಪೌರಾಡಳಿತ ನಿರ್ದೇಶನಾಲಯಕ್ಕೆ ೩೦ದಿನಗಳ ಒಳಗಾಗಿ ಸಲ್ಲಿಸಬಹುದೆಂದು ಪ್ರಕಟಣೆ ಹೊರಡಿಸಿತ್ತು. ಆಕ್ಷೇಪಣೆ ಅವಧಿ ಫೆ.೮ಕ್ಕೆ ಮುಗಿದ ಮೇಲೆ ಈತನಕ ಯಾವುದೇ ಬೆಳವಣಿಗೆಗಳು ನಡೆಯದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಆದೇಶದ ಪ್ರಕಾರ ಆಕ್ಷೇಪಣೆ ಗಡುವು ಮುಗಿಯುತ್ತಿದ್ದಂತೆ ರಾಜ್ಯಸರ್ಕಾರ ಅಂತಿಮ ಆದೇಶ ಹೊರಡಿಸಬೇಕಿತ್ತಾದರೂ ಆಂತರಿಕವಾಗಿ ನಡೆದಿರುವ ಕೆಲವು ವಿದ್ಯಮಾನಗಳು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಜನಗಣತಿ ವರದಿ ಅಡ್ಡಿ
ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಜನಗಣತಿ ವರದಿ ಹೊರ ಬೀಳುವ ತನಕ ಅಂತಿಮ ಅಧಿಸೂಚನೆ ಹೊರಡಿಸುವುದು ಅನುಮಾನವಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ. ೨೦೧೧ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ ೯,೨೦,೫೫೦ ಜನಸಂಖ್ಯೆ ಇದ್ದು,ಪ್ರಸ್ತುತ ೧೧,೪೬,೦೬೯ ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಘೋಷಿತವಾಗಿರುವ ಬೃಹತ್ ಮೈಸೂರು ನಗರಪಾಲಿಕೆಯಲ್ಲಿ ೧೪,೧೬,೬೭೧ ಜನಸಂಖ್ಯೆ ಇರಬಹುದು ಎಂದು ಹೇಳಲಾಗಿದೆ. ಜನಗಣತಿ ವರದಿ ಬಂದ ಮೇಲೆ ಮೈಸೂರು ನಗರದ ಜನಸಂಖ್ಯೆಯು ನಿಖರವಾಗಿ ಗೊತ್ತಾಗುವ ಕಾರಣ ಮುಂದಿನ ದಿನಗಳಲ್ಲಿ ಒಂದಿಷ್ಟು ಬದಲಾವಣೆ, ಸೇರ್ಪಡೆ, ವಾರ್ಡುಗಳ ವಿಂಗಡಣೆ ಮೊದಲಾದ ವಿಚಾರಗಳಲ್ಲಿ ನಿರ್ಧರಿಸಬೇಕಿರುವ ಕಾರಣ ಅಲ್ಲಿಯವರೆಗೆ ಅಂತಿಮ ಅಧಿಸೂಚನೆ ಹೊರಡಿವುದು ಅನುಮಾನವಾಗಿದೆ.

ಯಥಾಸ್ಥಿತಿಯಲ್ಲೇ ಸ್ಥಳೀಯ ಸಂಸ್ಥೆಗಳ ಆಡಳಿತ
ಬೃಹತ್ ನಗರಪಾಲಿಕೆಯನ್ನಾಗಿ ಸರ್ಕಾರ ಅಂತಿಮ ಅಽಸೂಚನೆ ಹೊರಡಿಸದ ಕಾರಣ ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಅಧಿಕಾರಿಗಳ ಬದಲಾವಣೆ ಸೇರಿದಂತೆ ಇನ್ನಿತರ ಕೆಲಸಗಳು ಎಂದಿನಂತೆ ನಡೆಯುತ್ತಿದೆ. ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಪಂ, ಸೇರ್ಪಡೆಗೊಂಡಿರುವ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪಪಂಗಳಿಗೆ ತಹಸಿಲ್ದಾರ್‌ಗಳನ್ನು ಆಡಳಿತಾಧಿಕಾರಿಗಳನ್ನಾಗಿ, ಗ್ರಾಪಂಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

6 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

8 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

9 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

11 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

12 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

12 hours ago