Andolana originals

ಅಧಿಕಾರ ಹಂಚಿಕೆ ಮಾತಿಗೆ ಬ್ರೇಕ್

 ಆರ್.ಟಿ.ವಿಠ್ಠಲಮೂರ್ತಿ

ಬೆಂಗಳೂರು: ಅಧಿಕಾರ ಹಂಚಿಕೆಯ ಮಾತು ಕೈ ಪಾಳೆಯದಲ್ಲಿ ತಲ್ಲಣಕ್ಕೆ ಕಾರಣವಾಗಿರುವಸಂದರ್ಭದಲ್ಲಿ ಇದಕ್ಕೆ ಮದ್ದು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ವರ್ಷ ಗಳ ಕಾಲ ನಾನೇ ಸಿಎಂ ಎಂದಿದ್ದಾರೆ.

ನಂದಿ ಬೆಟ್ಟದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ, ನಿಮಗೇಕೆ ಅನುಮಾನ? ಎಂದು ಮರು ಪ್ರಶ್ನಿಸಿದರು.

ನೀವು ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎಂದಾಗ,  ಬಿಜೆಪಿಯವರೇನು ನಮ್ಮ ಹೈಕಮಾಂಡಾ ಎಂದು ವ್ಯಂಗ್ಯವಾಡಿದರು.

ಇದರ ಬೆನ್ನಲ್ಲೇ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿಗಳು ಹೀಗೆ ಹೇಳಿದ ಮೇಲೆ ನನ್ನ ಮುಂದೆ ಬೇರೆ ಆಯ್ಕೆಗಳಿಲ್ಲ ಎಂದರು.

ನಾವು ಮುಖ್ಯಮಂತ್ರಿಗಳ ಕೈ ಬಲಪಡಿಸಬೇಕು. ನಾನು ಆ ಕೆಲಸ ಮಾಡುತ್ತೇನೆ ಎಂದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ. ಸಿಎಂ ಸ್ಥಾನ ಖಾಲಿ ಇಲ್ಲ. ಹೀಗಿರುವಾಗ ಆ ಸ್ಥಾನಕ್ಕೆ ಬೇರೆ ಹೆಸರು ಏಕೆ? ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಯಾರೂ ಹೇಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದರು.

ಹೀಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಾಡಿರುವ ಮಾತು ರಾಜಕೀಯ ವಲಯ ಕುತೂಹಲಕ್ಕೆ ಕಾರಣವಾಗಿದ್ದು, ಅಧಿಕಾರ ಹಂಚಿಕೆಯ ಮಾತಿಗೆ ಕಾಂಗ್ರೆಸ್ ವರಿಷ್ಠರು ಬ್ರೇಕ್ ಹಾಕಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಶಾಸಕರ ನೋವು ಕೇಳಲು ಕರ್ನಾಟಕಕ್ಕೆ ಬಂದಿದ್ದ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಬಹುತೇಕ ಶಾಸಕರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಬೇಕು, ಇಲ್ಲದಿದ್ದರೆ ಸರ್ಕಾರ ಉರುಳುತ್ತದೆ ಎಂದು ನೇರವಾಗಿ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಉಳಿದು, ೨೦೨೮ರಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು ನಮಗೆ ಅನಿವಾರ್ಯ. ಅಹಿಂದ ವರ್ಗಗಳು ಸಾಲಿಡ್ಡಾಗಿ ಸಿದ್ದರಾಮಯ್ಯ ಅವರ ಜತೆ ನಿಂತಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಬೇಕು.

ಹೀಗೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ನಮಗೆ ಅಹಿಂದ ಮತ ಬ್ಯಾಂಕಿನ ಬೆಂಬಲ ಇರುತ್ತದೆ. ಇಲ್ಲದಿದ್ದರೆ ನಮಗೆ ಗೆಲುವು ಕಷ್ಟವಾಗುತ್ತದೆ ಎಂದು ವಿವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಕ್ಬಾಲ್ ಹುಸೇನ್,  ಹೆಚ್.ಸಿ.ಬಾಲಕೃಷ್ಣ ಅವರಂತಹ ಕೆಲ ಶಾಸಕರು ಕಳೆದ ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರ ಹಿಡಿದಿದ್ದರಲ್ಲಿ ಡಿಕೆಶಿ ಶ್ರಮವೂ ಇದೆ. ಹೀಗಾಗಿ ಅವರಿಗೆ ಸಿಎಂ ಪಟ್ಟ ಸಿಗಬೇಕು ಎಂದಿದ್ದಾರಾ ದರೂ ಭವಿಷ್ಯದ ಬಗ್ಗೆ ಹೈಕಮಾಂಡ್ ವರಿಷ್ಠರು ಚಿಂತಿಸುವಂತೆ ಮಾಡಿದೆ. ಮೂಲಗಳ ಪ್ರಕಾರ ಅಽಕಾರ ಹಂಚಿಕೆಯ ಮಾತಿಗೆ ತತ್ಕಾಲಕ್ಕೆ ಬ್ರೇಕ್ ಹಾಕಲು ವರಿಷ್ಠರು ಬಯಸಿದ್ದಾರೆ.

ಎರಡೂವರೆ ವರ್ಷಗಳ ನಂತರ ಅಂದರೆ, ಈ ನವೆಂಬರ್ ಹೊತ್ತಿಗೆ ತಾವು ಸಿಎಂ ಆಗಬೇಕೆಂದು ಡಿಕೆಶಿ ಬಯಸಿದ್ದಾರಾದರೂ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರ ಆಡಳಿತಾವಧಿಯ ದಾಖಲೆ ಮುರಿಯುವ ಇಚ್ಛೆಯನ್ನು ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ವ್ಯಕ್ತಪಡಿಸಿದ್ದರು. ಮೂಲಗಳ ಪ್ರಕಾರ ೨೦೨೬ ರ ಜ.೭ ರಂದು ಸಿದ್ದರಾಮಯ್ಯ ಅವರು ಈ ನಾಡಿನ ದೀರ್ಘಾವಧಿ ಸಿಎಂ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ. ಹೀಗಾಗಿ ತಮ್ಮ ಆಸೆಯನ್ನು ಮೊಟಕುಗೊಳಿಸಿಕೊಂಡು ಡಿಕೆಶಿ ತತ್ಕಾಲಕ್ಕೆ ಮೌನವಾಗಿರುವುದು ಅನಿವಾರ್ಯ ಎಂಬುದು ಮೂಲಗಳ ಅಭಿಪ್ರಾಯ.

ಮೂಲಗಳ ಅಭಿಪ್ರಾಯ. ಇನ್ನೊಂದು ಮೂಲದ ಪ್ರಕಾರ, ತತ್ಕಾಲಕ್ಕೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಂತೆ ಕಾಣಿಸುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಪುನಃ ಮೇಲೇಳುವುದು ಗ್ಯಾರಂಟಿ. ಏಕೆಂದರೆ ಈ ಅವಽಯಲ್ಲೇ ಸಿಎಂ ಆಗುವ ಮಹತ್ವಾಕಾಂಕ್ಷೆ ಡಿಕೆಶಿಯಲ್ಲಿದ್ದು, ಸಂದರ್ಭದ ಅನಿವಾರ್ಯತೆಗಾಗಿ ಸಿದ್ದರಾಮಯ್ಯ ಅವರೊಂದಿಗೆ ಹೊಂದಿಕೊಂಡು ಹೋಗುವ ಮಾತನಾಡಿದ್ದಾರೆ. ಅದರೆ ಏನೇ ಅದರೂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿರುವುದು ಕೈ ಪಾಳಯದಲ್ಲಿ ತತ್ಕಾಲಕ್ಕಾದರೂ ಬಿಳಿ ಬಾವುಟ ಹಾರಿಸಿದಂತೆ ಭಾಸವಾಗುತ್ತಿದೆ.

” ತತ್ಕಾಲಕ್ಕೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್”

ಬಿದ್ದಂತೆ ಕಾಣಿಸುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಪುನಃ ಮೇಲೇಳುವುದು ಗ್ಯಾರಂಟಿ. ಏಕೆಂದರೆ ಈ ಅವಧಿಯಲ್ಲೇ ಸಿಎಂ ಆಗುವ ಮಹತ್ವಾಕಾಂಕ್ಷೆ ಡಿಕೆಶಿಯಲ್ಲಿದ್ದು, ಸಂದರ್ಭದ ಅನಿವಾರ್ಯತೆಗಾಗಿ ಸಿದ್ದರಾಮಯ್ಯ ಅವರೊಂದಿಗೆ ಹೊಂದಿಕೊಂಡು ಹೋಗುವ ಮಾತನಾಡಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ

” ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಪೂರ್ಣ ೫ ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಬಿಜೆಪಿಯವರು ಶುದ್ಧ ಸುಳ್ಳು ಹೇಳುತ್ತಾರೆ. ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ. ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿ ಇರಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ.”

-ಸಿದ್ದರಾಮಯ್ಯ, ಮುಖ್ಯಮಂತ್ರಿ

” ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ೫ ವರ್ಷಪೂರ್ಣಗೊಳಿಸಲಿದ್ದಾರೆ. ನನಗೆ ಬೇರೆ ಆಯ್ಕೆಗಳೇ ಇಲ್ಲ. ಅವರನ್ನು ನಾನು ಬೆಂಬಲಿಸಲೇ ಬೇಕು. ಅವರ ಬೆನ್ನಿಗೆ ನಿಂತು ಸಹಕಾರ ಕೊಡುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಬೆಂಬಲಿಸುತ್ತಾರೆ. ನನ್ನಂತೆ ನೂರಾರು ಜನ ಶ್ರಮ ವಹಿಸಿ ದುಡಿದಿದ್ದಾರೆ.”

-ಡಿ.ಕೆ.ಶಿವಕುಮಾರ್, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ

ಆಂದೋಲನ ಡೆಸ್ಕ್

Recent Posts

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ : ನಿಧಿ ಕಾಯ್ದೆ ಹೇಳೋದೇನು? ಪುರಾತತ್ವಜ್ಞರ ವಾದವೇನು? ಇಲ್ಲಿದೆ ಸಮಗ್ರ ಮಾಹಿತಿ

ಲಕ್ಕುಂಡಿ : ಅದೊಂದು ಐತಿಹಾಸಿಕ ಗ್ರಾಮ. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು..... ಅದ್ಭುತ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ…

23 mins ago

ಮೂಲ ಸೌಕರ್ಯ ಸಮಸ್ಯೆ : ಪಾಲಿಕೆ ಆಯುಕ್ತರಿಗೆ ಪತ್ರ ಬರೆದ ಸಂಸದ ಯದುವೀರ್‌

ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…

2 hours ago

ಮಾರ್ಚ್.‌6ರಂದು ರಾಜ್ಯ ಬಜೆಟ್‌ ಮಂಡನೆಗೆ ಚಿಂತನೆ

ಬೆಂಗಳೂರು: ಮುಂಬರುವ ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.‌6ರಂದು ಬಜೆಟ್‌ ಮಂಡಿಸುವ ಬಗ್ಗೆ ಸಿಎಂ…

3 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…

4 hours ago

ಮೈಸೂರು| ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಪೊರಕೆ ಚಳುವಳಿ

ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…

4 hours ago

ಮಲೆಮಹದೇಶ್ವರ ಬೆಟ್ಟ: ನೂತನ ಸೋಲಾರ್‌ ಘಟಕ ಉದ್ಘಾಟಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…

4 hours ago