Andolana originals

ದುಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ

ಮಹೇಶ್ ಕಿಕ್ಕೇರಿ

ನಿರ್ವಹಣೆಯಿಲ್ಲದೆ ಸೊರಗಿದ ಹೊಯ್ಸಳ ಶಿಲ್ಪಕಲೆಯ ಸ್ಮಾರಕ

ಕಿಕ್ಕೇರಿ: ಗ್ರಾಮದಲ್ಲಿರುವ ಹೊಯ್ಸಳರ ಶಿಲ್ಪಕಲಾ ವೈಭವದ ಪುರಾತನ ಬ್ರಹ್ಮೇಶ್ವರ ದೇವಾಲಯ ಇಂದಿಗೂ ಶಿಲ್ಪಕಲಾಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈ ದೇವಾಲಯ ಅಳಿವಿನ ಅಂಚಿನತ್ತ ಸಾಗುತ್ತಿರುವುದು ನೋವಿನ ಸಂಗತಿ.

ಬೆಲೆ ಕಟ್ಟಲಾಗದ ಈ ಶಿಲ್ಪಕಲಾವೈಭವದ ದೇಗುಲದ ಮೇಲೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಅರಳಿ, ಆಲದ ಗಿಡಗಳ ಬೇರುಗಳು ಹರಡಿಕೊಂಡಿದ್ದು, ದೇವಾಲಯದ ಸೌಂದರ್ಯವೇ ಮಾಸಲಿದೆ ಎಂಬ ಆತಂಕ ಶಿಲ್ಪಕಲಾಪ್ರಿಯರದಾಗಿದೆ.

ಶಿಲ್ಪಕಲೆಯ ಅದ್ಭುತ ಕೌತುಕವನ್ನು ಹೊಂದಿರುವ ಈ ದೇವಾಲಯವು ಹೊಯ್ಸಳರ ಕೆತ್ತನೆಯ ಕಲಾಕುಸುರಿಗೆ ಹಿಡಿದ ಕನ್ನಡಿಯಂತಿದೆ. ದೇವಾಲಯದ ಗೋಡೆಗಳಲ್ಲಿ ಪುರಾಣ ಕಥೆಗಳು, ದೇವತೆಗಳು, ನರಸಿಂಹ, ವಿಷ್ಣು, ಶಿವ, ಗಜಸಂಹಾರ ಮುಂತಾದ ಶಿಲ್ಪಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಶಿಲಾ ಬಾಲಿಕೆಯರು, ಗಜಪಡೆ ಮುಂತಾದ ಮೂರ್ತಿಗಳು ಇಲ್ಲಿ ಜೀವವೆತ್ತಂತೆ ರೂಪುತಾಳಿವೆ.

ಇದನ್ನೂ ಓದಿ:-ದಸರಾ ದಶಮಂಟಪ ಬಹುಮಾನ ಆಯ್ಕೆ ಬಗ್ಗೆ ಅಸಮಾಧಾನ

ಗರ್ಭಗುಡಿಯ ಶಿಖರ ಹಾಗೂ ಸುತ್ತಲಿನ ಗೋಪುರಗಳು ಹೊಯ್ಸಳ ಶೈಲಿಯ ಕೌಶಲವನ್ನು ಸಾರುತ್ತಿವೆ. ಉಪ ದೇವಾಲಯಗಳಲ್ಲಿ ಗಣೇಶ, ಭದ್ರಕಾಳಿ, ಹನುಮ, ವಿಷ್ಣು ಸೇರಿದಂತೆ ಅನೇಕ ದೇವರುಗಳ ವಿಗ್ರಹಗಳಿವೆ. ಕ್ರಿಸ್ತಶಕ ೧೧೭೧ರಲ್ಲಿ ಹೊಯ್ಸಳ ರಾಜ ನರಸಿಂಹ ಪ್ರಥಮರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೂ ಮುನ್ನ ಗಂಗ ವಂಶದ ಕಾಲದಲ್ಲಿಯೇ ಇಲ್ಲೊಂದು ದೇವಾಲಯ ಇತ್ತು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ದೇವಾಲಯದ ಗರ್ಭಗುಡಿಯಲ್ಲಿ ಬೃಹ್ಮನ ವಿಗ್ರಹವಿರುವುದರಿಂದ ಇದನ್ನು ಬ್ರಹ್ಮೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಸರಿಯಾದ ಸಂರಕ್ಷಣೆ ಇಲ್ಲದಿದ್ದರೆ ಹೊಯ್ಸಳರ ಕಲಾವೈಭವವನ್ನು ಪ್ರತಿಬಿಂಬಿಸುವ ಈ ಸ್ಮಾರಕ ಮುಂದಿನ ಪೀಳಿಗೆ ನೋಡಲು ದುಸ್ತರವಾಗುವ ಅಪಾಯ ಎದುರಾಗಿದೆ.

ಗ್ರಾಮಸ್ಥರ ಕಳಕಳಿ: ಕಿಕ್ಕೇರಿ ಗ್ರಾಮಸ್ಥರು ಹಾಗೂ ಇತಿಹಾಸ ಪ್ರೇಮಿಗಳು, ಪುರಾತತ್ವ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ದೇವಾಲಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಮಾತ್ರವಲ್ಲ, ಸುತ್ತಲಿನ ಪರಿಸರವೂ ನಿರ್ವಹಣೆಯಿಲ್ಲದೆ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ಆದ್ದರಿಂದ ಅಳಿವಿನ ಅಂಚಿಗೆ ಹೋಗುವ ಮುನ್ನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ಜಾಗೃತ ಮನಸ್ಸುಗಳ ಆಗ್ರಹವಾಗಿದೆ

ಆಂದೋಲನ ಡೆಸ್ಕ್

Recent Posts

ಬಂಡೀಪುರ: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ

ಗುಂಡ್ಲುಪೇಟೆ: ಸೋಮವಾರ ಬೆಳಗ್ಗೆ ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಏಕಕಾಲದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಕಿರುಬನ ಕೊಳಚಿ ಕೆರೆಯಲ್ಲಿ ಒಂದು…

45 mins ago

ಹನೂರು: ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ…

54 mins ago

ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ನಡೆದ ತಂಪುಜ್ಯೋತಿ ಹಾಗೂ ರಥೋತ್ಸವ

ಮಹಾದೇಶ್ ಎಂ.ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಎರಡನೇ ದಿನ…

1 hour ago

ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ: ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆ ನೌಕರರು ನಾಳೆಯಿಂದ ಮುಷ್ಕರ ಕೈಗೊಂಡಿದ್ದಾರೆ. ನಾಳೆಯಿಂದ ಆರೋಗ್ಯ ಇಲಾಖೆ…

2 hours ago

ಮಧ್ಯಪ್ರಾಚ್ಯ ಬಿಕ್ಕಟ್ಟು: ಕನ್ನಡಿಗರ ರಕ್ಷಣೆಗೆ ಕೇಂದ್ರ ಸಚಿವ ಜೈಶಂಕರ್‌ಗೆ ಮನವಿ

ನವದೆಹಲಿ: ಇಸ್ರೇಲ್-ಇರಾನ್‌ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸಂಪೂರ್ಣವಾಗಿ ಬಂದ್‌ ಆಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ…

3 hours ago

ಮುಂದುವರಿದ ಇರಾನ್‌-ಇಸ್ರೇಲ್‌ ಸಂಘರ್ಷ: ಬೆಂಗಳೂರಿನಲ್ಲಿ 17 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಮತ್ತೆ ತೀವ್ರಗೊಂಡ ಪರಿಣಾಮ ಬೆಂಗಳೂರಿಗೆ ಆಗಮಿಸಬೇಕಿದ್ದ 8 ಮತ್ತು ನಿರ್ಗಮಿಸಬೇಕಿದ್ದ 9 ವಿಮಾನಗಳ ಹಾರಾಟ ರದ್ದಾಗಿದೆ.…

4 hours ago