Andolana originals

ಜನನ, ಮರಣ ಪ್ರ ಮಾಣ ಪತ್ರವೂ ದುಬಾರಿ

ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು: ಬಸ್ ದರ, ಪೆಟ್ರೋಲ್, ಹಾಲು ಹಾಗೂ ಇನ್ನಿತರ ವಸ್ತುಗಳ ದರ ಏರಿಕೆಯಿಂದ ತೊಂದರೆಗೊಳಗಾಗಿರುವ ಜನರಿಗೆ ಸರ್ಕಾರ ಮತ್ತೊಂದು ಬರೆ ಎಳೆದಿದ್ದು, ೫ ರೂ. ಗೆ ದೊರಕುತ್ತಿದ್ದ ಜನನ, ಮರಣ ಪ್ರಮಾಣಪತ್ರಗಳಿಗೆ ಇನ್ನು ಮುಂದೆ ಬರೋಬ್ಬರಿ ೫೦ ರೂ. ಶುಲ್ಕ ತೆರಬೇಕಿದೆ.

ಇಂದು ಜನರಿಗೆ ಬೇಕಾದ ಅತ್ಯವಶ್ಯಕ ದಾಖಲೆಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ಕೂಡ ಒಂದು. ಹುಟ್ಟಿದ ಮಗುವನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಲು, ಆಧಾರ್ ಕಾರ್ಡ್ ಮಾಡಿಸಲು ಹಾಗೂ ಇನ್ನಿತರ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಬೇಕೇಬೇಕು. ಇನ್ನು ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಆತನ ಆಸ್ತಿ ಹಂಚಿಕೆ, ಸ್ವತ್ತುಗಳ ವಿಲೇವಾರಿ, ಬ್ಯಾಂಕ್ ವಹಿವಾಟು, ನ್ಯಾಯಾಲಯದಲ್ಲಿ ನಡೆಯುವ ವ್ಯಾಜ್ಯಗಳಿಗೆ ಮರಣ ಪತ್ರಗಳು ಅಗತ್ಯ ದಾಖಲೆಗಳಲ್ಲಿ ಪ್ರಮುಖವಾದುದು.

ಹೀಗಾಗಿ ಜನರು ನಗರಪಾಲಿಕೆ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೂಲಕ ಜನನ, ಮರಣ ಪ್ರಮಾಣ ಪತ್ರಗಳನ್ನು ತೆಗೆದು ಕೊಳ್ಳುತ್ತಾರೆ. ಇಷ್ಟು ದಿನಗಳು ಸಾರ್ವಜ ನಿಕರು ಈ ಪ್ರಮಾಣ ಪತ್ರಗಳನ್ನು ೫ ರೂ. ಶುಲ್ಕ ಪಾವತಿಸಿ ಪಡೆದುಕೊಳ್ಳುತ್ತಿದ್ದರು.

ಆದರೀಗ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಇನ್ನು ಮುಂದೆ ಅಂದರೆ ಫೆ. ೪ ರಿಂದಲೇ ಜನನ ಹಾಗೂ ಮರಣ ಪ್ರಮಾಣ ಪತ್ರಗಳ ಶುಲ್ಕ ಏರಿಕೆಯಾಗಿದ್ದು, ೫ ರೂ. ಗೆ ಬದಲಾಗಿ ೫೦ ರೂ. ಪಾವತಿಸಿ ಪ್ರಮಾಣ ಪತ್ರ ಪಡೆಯಬೇಕಾಗಿದೆ.

ಸ್ಥಳೀಯ ಸಂಸ್ಥೆಗಳ ಮೂಲಕ ೨೫ ರೂ. ಪಾವತಿಸಿ ಐದು ಜನನ ಅಥವಾ ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದವರು ಇನ್ನು ಮುಂದೆ ೨೫೦ ರೂ. ಶುಲ್ಕ ಪಾವತಿಸ ಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಶುಲ್ಕ ವನ್ನು ಹತ್ತು ಪಟ್ಟು ಏರಿಕೆ ಮಾಡಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಆದರೀಗ ೨೦ ರೂ. ಪಾವತಿಸಬೇಕಿದೆ. ೩೦ ದಿಗಳಿಂದ ಒಂದು ವರ್ಷದ ಒಳಗೆ ಪ್ರಮಾಣ ಪತ್ರ ಪಡೆಯಬೇಕಾದಲ್ಲಿ ೫ ರೂ. ದಂಡ ಪಾವತಿಸಬೇಕಿತ್ತು. ಇದೀಗ ೫೦ ರೂ. ಪಾವತಿಸಬೇಕಿದೆ.

ದಂಡದ ಮೊತ್ತ ಕೂಡ ಹೆಚ್ಚಳ: ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ಘಟನೆ ಘಟಿಸಿದ ೨೧ ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ ಪಡೆಯಬೇಕು. ಹಾಗಾದಾಗ ಒಂದು ಪ್ರತಿ ಉಚಿತವಾಗಿ ನೀಡಲಾಗುತ್ತದೆ. ೨೧ ದಿನಗಳು ದಾಟಿದಲ್ಲಿ ೩೦ ದಿನಗಳ ಒಳಗಾಗಿ ಜನನ ಅಥವಾ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಇಷ್ಟು ದಿನ ೨ ರೂ. ದಂಡ ಪಾವತಿಸಬೇಕಿತ್ತು.

ನಗರಾಭಿವೃದ್ಧಿ ಇಲಾಖೆ ವತಿಯಿಂದ ಜನನ, ಮರಣ ಪ್ರಮಾಣಪತ್ರಗಳ ಶುಲ್ಕ ಹೆಚ್ಚಳವಾಗಿದೆ. ಬಹುದಿನಗಳ ಹಿಂದೆಯೇ ಹೆಚ್ಚಳವಾಗುವ ನಿರೀಕ್ಷೆ ಇತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಸರ್ಕಾರ ನಿಗದಿಪಡಿಸಿರುವ ಹೊಸ ಶುಲ್ಕ ಕಡಿಮೆ ಇದೆ. ಸಾರ್ವಜನಿಕರು ಸಹಕರಿಸಬೇಕು. -ಎನ್. ಜಿ. ನಾಗರತ್ನ, ಸಹಾಯಕ ಸಾಂಖ್ಯಿಕ ನಿರ್ದೇಶಕರು.

ಅಧಿಕಾರಿಗಳ ಗಮನಕ್ಕೇ ಬಂದಿರಲಿಲ್ಲ ಮಂಗಳವಾರ ಬೆಳಿಗ್ಗೆ ಎಂದಿನಂತೆ ಜನನ, ಮರಣ ವಿಭಾಗದಲ್ಲಿ ಅಽಕಾರಿಗಳು ಹಾಗೂ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದರು. ಮ. ೧೨ ಗಂಟೆ ವೇಳೆಗೆ ದಿಢೀರನೆ ಅವರ ಮುಂದಿರುವ ಕಂಪ್ಯೂಟರ್‌ಗಳಲ್ಲಿ ಶುಲ್ಕಗಳು ಬದಲಾದ . ಇದರಿಂದ ಅಽಕಾರಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾದರು. ನಂತರ ನಗರಾಭಿವೃದ್ಧಿ ಇಲಾಖೆಯಿಂದ ಅಽಕೃತ ಆದೇಶ ಹೊರಬಿತ್ತು. ಮ. ೧೨ ಗಂಟೆ ನಂತರ ಜನರು ಪರಿಷ್ಕೃತ ಶುಲ್ಕ ಪಾವತಿಸುವಂತಾಯಿತು.

ಆಂದೋಲನ ಡೆಸ್ಕ್

Recent Posts

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

2 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

2 hours ago

ಓದುಗರ ಪತ್ರ: ಬರ ಅಧ್ಯಯನ: ನೈಜ ಮೌಲ್ಯಮಾಪನ ನಡೆಯಲಿ

ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ…

2 hours ago

ಓದುಗರ ಪತ್ರ: ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಸಿ

ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ…

2 hours ago

ಓದುಗರ ಪತ್ರ: ಅಂತರ್ಜಲ ಮರುಪೂರಣಕ್ಕೆ ನೈಜ ಯೋಜನೆ ಅಗತ್ಯ

ರಾಜ್ಯದಲ್ಲಿ ಬಳಕೆಯಲ್ಲಿರುವ ಒಟ್ಟು ೩೦ ಸಾವಿರ ಜಲಮೂಲಗಳಲ್ಲಿ ಕೇವಲ ಶೇ.೨೦ರಷ್ಟು ಮಾತ್ರ ಅಂತರ್ಜಲ ಮರುಪೂರಣಕ್ಕಾಗಿ ಬಳಕೆಯಾಗುತ್ತಿರುವುದು ಸರ್ಕಾರ ಹಾಗೂ ಸಾರ್ವಜನಿಕರ…

3 hours ago

ದಸರಾ ಸಂಭ್ರಮಕ್ಕೆ ಸುಗಮ ಸಂಚಾರದ ಸಾಥ್

ಟಿ. ಕೆ.ಹರೀಶ್, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಭ್ರಮದ ಜೊತೆಗೆ ಸ್ವಚ್ಛತೆ, ಸುರಕ್ಷತೆ ಮತ್ತು…

3 hours ago