ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು: ಬಸ್ ದರ, ಪೆಟ್ರೋಲ್, ಹಾಲು ಹಾಗೂ ಇನ್ನಿತರ ವಸ್ತುಗಳ ದರ ಏರಿಕೆಯಿಂದ ತೊಂದರೆಗೊಳಗಾಗಿರುವ ಜನರಿಗೆ ಸರ್ಕಾರ ಮತ್ತೊಂದು ಬರೆ ಎಳೆದಿದ್ದು, ೫ ರೂ. ಗೆ ದೊರಕುತ್ತಿದ್ದ ಜನನ, ಮರಣ ಪ್ರಮಾಣಪತ್ರಗಳಿಗೆ ಇನ್ನು ಮುಂದೆ ಬರೋಬ್ಬರಿ ೫೦ ರೂ. ಶುಲ್ಕ ತೆರಬೇಕಿದೆ.
ಇಂದು ಜನರಿಗೆ ಬೇಕಾದ ಅತ್ಯವಶ್ಯಕ ದಾಖಲೆಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ಕೂಡ ಒಂದು. ಹುಟ್ಟಿದ ಮಗುವನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಲು, ಆಧಾರ್ ಕಾರ್ಡ್ ಮಾಡಿಸಲು ಹಾಗೂ ಇನ್ನಿತರ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಬೇಕೇಬೇಕು. ಇನ್ನು ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಆತನ ಆಸ್ತಿ ಹಂಚಿಕೆ, ಸ್ವತ್ತುಗಳ ವಿಲೇವಾರಿ, ಬ್ಯಾಂಕ್ ವಹಿವಾಟು, ನ್ಯಾಯಾಲಯದಲ್ಲಿ ನಡೆಯುವ ವ್ಯಾಜ್ಯಗಳಿಗೆ ಮರಣ ಪತ್ರಗಳು ಅಗತ್ಯ ದಾಖಲೆಗಳಲ್ಲಿ ಪ್ರಮುಖವಾದುದು.
ಹೀಗಾಗಿ ಜನರು ನಗರಪಾಲಿಕೆ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೂಲಕ ಜನನ, ಮರಣ ಪ್ರಮಾಣ ಪತ್ರಗಳನ್ನು ತೆಗೆದು ಕೊಳ್ಳುತ್ತಾರೆ. ಇಷ್ಟು ದಿನಗಳು ಸಾರ್ವಜ ನಿಕರು ಈ ಪ್ರಮಾಣ ಪತ್ರಗಳನ್ನು ೫ ರೂ. ಶುಲ್ಕ ಪಾವತಿಸಿ ಪಡೆದುಕೊಳ್ಳುತ್ತಿದ್ದರು.
ಆದರೀಗ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಇನ್ನು ಮುಂದೆ ಅಂದರೆ ಫೆ. ೪ ರಿಂದಲೇ ಜನನ ಹಾಗೂ ಮರಣ ಪ್ರಮಾಣ ಪತ್ರಗಳ ಶುಲ್ಕ ಏರಿಕೆಯಾಗಿದ್ದು, ೫ ರೂ. ಗೆ ಬದಲಾಗಿ ೫೦ ರೂ. ಪಾವತಿಸಿ ಪ್ರಮಾಣ ಪತ್ರ ಪಡೆಯಬೇಕಾಗಿದೆ.
ಸ್ಥಳೀಯ ಸಂಸ್ಥೆಗಳ ಮೂಲಕ ೨೫ ರೂ. ಪಾವತಿಸಿ ಐದು ಜನನ ಅಥವಾ ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದವರು ಇನ್ನು ಮುಂದೆ ೨೫೦ ರೂ. ಶುಲ್ಕ ಪಾವತಿಸ ಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಶುಲ್ಕ ವನ್ನು ಹತ್ತು ಪಟ್ಟು ಏರಿಕೆ ಮಾಡಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಆದರೀಗ ೨೦ ರೂ. ಪಾವತಿಸಬೇಕಿದೆ. ೩೦ ದಿಗಳಿಂದ ಒಂದು ವರ್ಷದ ಒಳಗೆ ಪ್ರಮಾಣ ಪತ್ರ ಪಡೆಯಬೇಕಾದಲ್ಲಿ ೫ ರೂ. ದಂಡ ಪಾವತಿಸಬೇಕಿತ್ತು. ಇದೀಗ ೫೦ ರೂ. ಪಾವತಿಸಬೇಕಿದೆ.
ದಂಡದ ಮೊತ್ತ ಕೂಡ ಹೆಚ್ಚಳ: ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ಘಟನೆ ಘಟಿಸಿದ ೨೧ ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ ಪಡೆಯಬೇಕು. ಹಾಗಾದಾಗ ಒಂದು ಪ್ರತಿ ಉಚಿತವಾಗಿ ನೀಡಲಾಗುತ್ತದೆ. ೨೧ ದಿನಗಳು ದಾಟಿದಲ್ಲಿ ೩೦ ದಿನಗಳ ಒಳಗಾಗಿ ಜನನ ಅಥವಾ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಇಷ್ಟು ದಿನ ೨ ರೂ. ದಂಡ ಪಾವತಿಸಬೇಕಿತ್ತು.
ನಗರಾಭಿವೃದ್ಧಿ ಇಲಾಖೆ ವತಿಯಿಂದ ಜನನ, ಮರಣ ಪ್ರಮಾಣಪತ್ರಗಳ ಶುಲ್ಕ ಹೆಚ್ಚಳವಾಗಿದೆ. ಬಹುದಿನಗಳ ಹಿಂದೆಯೇ ಹೆಚ್ಚಳವಾಗುವ ನಿರೀಕ್ಷೆ ಇತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಸರ್ಕಾರ ನಿಗದಿಪಡಿಸಿರುವ ಹೊಸ ಶುಲ್ಕ ಕಡಿಮೆ ಇದೆ. ಸಾರ್ವಜನಿಕರು ಸಹಕರಿಸಬೇಕು. -ಎನ್. ಜಿ. ನಾಗರತ್ನ, ಸಹಾಯಕ ಸಾಂಖ್ಯಿಕ ನಿರ್ದೇಶಕರು.
ಅಧಿಕಾರಿಗಳ ಗಮನಕ್ಕೇ ಬಂದಿರಲಿಲ್ಲ ಮಂಗಳವಾರ ಬೆಳಿಗ್ಗೆ ಎಂದಿನಂತೆ ಜನನ, ಮರಣ ವಿಭಾಗದಲ್ಲಿ ಅಽಕಾರಿಗಳು ಹಾಗೂ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದರು. ಮ. ೧೨ ಗಂಟೆ ವೇಳೆಗೆ ದಿಢೀರನೆ ಅವರ ಮುಂದಿರುವ ಕಂಪ್ಯೂಟರ್‌ಗಳಲ್ಲಿ ಶುಲ್ಕಗಳು ಬದಲಾದ . ಇದರಿಂದ ಅಽಕಾರಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾದರು. ನಂತರ ನಗರಾಭಿವೃದ್ಧಿ ಇಲಾಖೆಯಿಂದ ಅಽಕೃತ ಆದೇಶ ಹೊರಬಿತ್ತು. ಮ. ೧೨ ಗಂಟೆ ನಂತರ ಜನರು ಪರಿಷ್ಕೃತ ಶುಲ್ಕ ಪಾವತಿಸುವಂತಾಯಿತು.
ಚಾಮರಾಜನಗರ : ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳ ಇರುವಿಕೆ ಡ್ರೋಣ್‌ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ…
ಮೈಸೂರು : ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೋಮವಾರ ನಗರದಲ್ಲಿ…
ಬೆಂಗಳೂರು : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು…
ವೆಲ್ಲಿಂಗ್ಟನ್ : ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ.…
ಮೈಸೂರು : ಸಂಸ್ಕೃತ ಗ್ರಂಥ, ಶಾಸ್ತ್ರ ಗ್ರಂಥ, ವೇದಾಂತ ವಿಚಾರದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಜೀವನ ಸಾರ್ಥಕಗೊಳ್ಳಲಿದೆ ಎಂದು ಶೃಂಗೇರಿ…
ಮೈಸೂರು : ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್…