ಚಿಕಿತ್ಸೆಗಾಗಿ ಸುತ್ತಮುತ್ತಲ ಗ್ರಾಮಗಳ ಜನರ ಪರದಾಟ; ಬೈಕ್, ಕಾರು ಪಾರ್ಕಿಂಗ್ ತಾಣವಾಗಿರುವ ಆಸ್ಪತ್ರೆ ಆವರಣ
ಅಣ್ಣೂರು ಸತೀಶ್
ಭಾರತೀನಗರ: ಆಸ್ಪತ್ರೆ ಇದೆ. ಆದರೆ, ಸರಿಯಾದ ವೈದ್ಯರಿಲ್ಲ, ಮಾಹಿತಿಯ ಫಲಕಗಳಿವೆ. ಆದರೆ ಸೌಭ್ಯಗಳು ಲಭ್ಯವಿಲ್ಲ. ನೌಕರರು ಇದ್ದಾರೆ. ಆದರೆ ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ. . ! ಇದು ಭಾರತೀನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಸ್ಥಿತಿ.
ಭಾರತೀನಗರ ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ ಕೇಂದ್ರ ಸ್ಥಾನವಾಗಿದ್ದು, ಹಳ್ಳಿಗಳಲ್ಲಿನ ಜನರು ಜ್ವರ, ಅಪಘಾತ ಹಾಗೂ ಆರೋಗ್ಯಕ್ಕೆ ಸಂಬಂಽಸಿದ ಇತರ ಅವಶ್ಯಕತೆಗಳಿಗಾಗಿ ಈ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ, ಈ ಆಸ್ಪತ್ರೆಯಲ್ಲಿ ತಲೆ ನೋವು, ಮೈಕೈನೋವು, ಕೆಮ್ಮು, ನೆಗಡಿ, ಭೇದಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಗತ್ಯವಾದ ಯಾವ ಸೌಲಭ್ಯಗಳೂ ಇಲ್ಲಿಲ್ಲ.
೧೯೭೦ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಆರಂಭಗೊಂಡ ಈ ಆಸ್ಪತ್ರೆ ಯನ್ನು ೨೦೦೫ರಲ್ಲಿ ಉನ್ನತ ದರ್ಜೆಗೇರಿಸಿ ಸಮುದಾಯ ಆರೋಗ್ಯಕೇಂದ್ರವನ್ನಾಗಿ ಪರಿವರ್ತಿಸಲಾಯಿತು.
ರಾತ್ರಿ ಪಾಳಿಯಲ್ಲಿ ವೈದ್ಯರ ಕೊರತೆ ಇದೆ. ವಿಶಾಲ ಕಟ್ಟಡದೊಂದಿಗೆ ೩೦ ಹಾಸಿಗೆಗಳ ಸೌಲಭ್ಯ ಒಳಗೊಂಡ ಈ ಆಸ್ಪತ್ರೆಯಲ್ಲಿ ಆರಂಭದಲ್ಲಿ ಅತ್ಯುತ್ತಮ ವೈದ್ಯರನ್ನು ನಿಯೋಜಿಸಿ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ನಂತರ ೬೦ ಹಾಸಿಗೆಗಳಿಗೆ ವಿಸ್ತರಿಸಲಾಯಿತು. ಇದಕ್ಕೆ ತಕ್ಕಂತೆ ವೈದ್ಯರನ್ನು ನಿಯೋಜಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲಗೊಂಡಿವೆ.
ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೇತ್ರ ತಜ್ಞರು ಇದ್ದರೂ ಬೇರೆ ಬೇರೆ ಕಡೆಗೆ ನಿಯೋಜನೆ ಮಾಡಿರುವುದರಿಂದ ಸುಮಾರು ೫೦ ರಿಂದ ೬೦ ಹಳ್ಳಿಗಳಿಂದ ಬರುವ ಜನರಿಗೆ ನೇತ್ರ ವೈದ್ಯರ ಕೊರತೆ ಕಾಡುತ್ತಿದೆ. ರಕ್ತಪರೀಕ್ಷಾ ಕೇಂದ್ರದಲ್ಲೂ ತಂತ್ರಜ್ಞರು ಇಲ್ಲ. ಸ್ಟಾಫ್‌ನರ್ಸ್‌ಗಳ ಕೊರತೆ ಇದೆ. ಸಿಬ್ಬಂದಿ ಕೊರತೆ ಯಿಂದಾಗಿ ಸಾರ್ವಜನಿಕರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗದೆ ಪ್ರತಿದಿನ ಗಲಾಟೆಗಳು ನಡೆಯುತ್ತಿವೆ. ಆಸ್ಪತ್ರೆಯ ಮುಂಭಾಗ ಗುಂಡಿಬಿದ್ದು ನೀರು ನಿಂತಿದ್ದರೂ ಯಾರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಆಸ್ಪತ್ರೆ ಮುಂಭಾಗ ಕಲುಷಿತ ನೀರು ತೆರವುಗೊಳಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಡಿ. ಗ್ರೂಪ್ ನೌಕರರ ಪೈಕಿ ೧೨ ಮಂದಿ ಕೆಲಸ ನಿರ್ವಹಿಸುತ್ತಿದ್ದರೂ ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ. ಫಾರ್ಮಸಿ ವಿಭಾಗದಲ್ಲಿ ೪ ಮಂದಿ ನೌಕರರಲ್ಲಿ ಇಬ್ಬರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಈ ಆಸ್ಪತ್ರೆಯಲ್ಲಿ ಎಲ್ಲ ವಿಭಾಗದಲ್ಲೂ ಕೊರತೆ ಇದೆ. ಇಲ್ಲಿರುವ ಕೊರತೆಯನ್ನು ನೀಗಿಸಲು ಶಾಸಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಭದ್ರತೆ ಒದಗಿಸಲು ಮನವಿ
ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವಾಗ ಗಲಾಟೆಗಳು ಆಗಿಂದಾಗೆ ನಡೆಯುತ್ತಲೇ ಬರುತ್ತಿವೆ. ಇದರಿಂದ ಇಲ್ಲಿಗೆ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಬೇಕೆಂಬುದು ವೈದ್ಯರ ಕೋರಿಕೆಯಾಗಿದೆ.
ಆಸ್ಪತ್ರೆ ಆವರಣದಲ್ಲಿ ಖಾಸಗಿ ವಾಹನಗಳ ಕಾರು ಬಾರು ಹೆಚ್ಚಿದೆ. ಹೊರಗಿನಿಂದ ಬಂದವರು ಬೈಕ್ ಮತ್ತು ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ತಮ್ಮ ಕೆಲಸಗಳಿಗೆ ತೆರಳಿ ಮತ್ತೆ ರಾತ್ರಿ ಬಂದು ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಅಶುಚಿತ್ವ ತಾಂಡವ:
ಆಸ್ಪತ್ರೆಯ ಶುಚಿತ್ವ ಕಾಪಾಡಲು ಟೆಂಡರ್ ಪಡೆದಿರುವವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಇದರಿಂದ ಮಾರಕ ರೋಗಗಳು ಉಲ್ಬಣಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಎಚ್ಚರಗೊಳ್ಳಬೇಕಿದೆ.
ಸರ್ಕಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಲಕ್ಷಾಂತರ ರೂ. ಒದಗಿಸುತ್ತಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಂತಿಲ್ಲ. ಒಟ್ಟಾರೆ ಇಲ್ಲಿಯ ಸಮು ದಾಯ ಆರೋಗ್ಯ ಕೇಂದ್ರ ರೋಗಗ್ರಸ್ತವಾಗಿದೆ.
ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಹಿರಿಯ ವೈದ್ಯಾಽಕಾರಿ ಡಾ. ಜಗದೀಶ್, ಆಯುಷ್ ವೈದ್ಯರಾದ ಡಾ. ಸೌಮ್ಯ, ಡಾ. ರವೀಶ್, ಮಕ್ಕಳ ತಜ್ಞೆ ಡಾ. ಮಧುರವಾಣಿ, ಅರಿವಳಿಕೆ ತಜ್ಞ ಡಾ. ಆನಂದ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಅರ್ಜುನ್ ಮತ್ತು ದಂತ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಸಮಸ್ಯೆಗಳ ಬಗ್ಗೆ ತಾಲ್ಲೂಕು ಆರೋಗ್ಯಾಽಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ. ರಾತ್ರಿ ಪಾಳಿಯಲ್ಲಿ ಒಬ್ಬರು ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು.
-ಡಾ. ಮೋಹನ್, ಡಿಎಚ್‌ಒ, ಮಂಡ್ಯ.
ಆಸ್ಪತ್ರೆಯ ಶುಚಿತ್ವ ಕೈಗೊಳ್ಳಲು ಒಂದುವಾರ ಗಡುವು ನೀಡಲಾಗಿತ್ತು. ಶುಚಿತ್ವ ಕಾಪಾಡದ ಹಿನ್ನೆಲೆಯಲ್ಲಿ ಸಂಬಂಽಸಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.
-ಡಾ. ರವೀಂದ್ರ ಬಿ. ಗೌಡ, ಟಿಎಚ್‌ಒ
ಆಸ್ಪತ್ರೆಯ ಮುಂಭಾಗ ಅಶುಚಿತ್ವ ಕಾಡುತ್ತಿದೆ. ಇದರಿಂದ ಮಾರಕ ರೋಗಗಳು ಬಾಽಸುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ಆಸ್ಪತ್ರೆ ಆಡಳಿತ ವಿಫಲವಾಗಿದೆ.
-ಸಂತೋಷ್, ಡಿ. ಎ. ಕೆರೆ.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…